ವಾಟ್ಸಪ್‌ ಬಳಕೆದಾರರು ತಿಳಿದಿರಬೇಕಾದ ಐದು ಫೀಚರ್ಸ್‌ಗಳು!

|

ಫೇಸ್‌ಬುಕ್‌ ಮಾಲೀಕತ್ವದ ವಾಟ್ಸಪ್ ಅಪ್ಲಿಕೇಶನ್ ಪ್ರಸ್ತುತ ಜನಪ್ರಿಯ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ವಾಟ್ಸಪ್‌ ಬಳಕೆದಾರರ ಖಾಸಗಿ ಮಾಹಿತಿಗಳಿಗೆ ಅಗತ್ಯ ಸುರಕ್ಷತೆ ನೀಡುವ ನಿಟ್ಟಿನಲ್ಲಿ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸಾಲು ಸಾಲು ನೂತನ ಫೀಚರ್ಸ್‌ಗಳಲ್ಲಿ ಕೆಲವು ಕುತೂಹಲಕರ ವಾಟ್ಸಪ್‌ ಫೀಚರ್ಸ್‌ಗಳ ಬಗ್ಗೆ ನೀವು ತಿಳಿಯಬೇಕಿದೆ.

ವಾಟ್ಸಪ್ ಸಂಸ್ಥೆ

ಹೌದು, ವಾಟ್ಸಪ್ ಸಂಸ್ಥೆಯು ಕಳೆದ ವರ್ಷ ಅಧಿಕ ಫೀಚರ್ಸ್‌ಗಳನ್ನು ಸೇರಿಸಿದೆ. ಆಂಡ್ರಾಯ್ಡ್ ಹಾಗೂ ಐಫೋನ್ ಓಎಸ್‌ ಮಾದರಿಯಲ್ಲಿಯೂ ಸಹ ಲಭ್ಯವಾಗುವಂತೆ ಮಾಡಿದೆ. ಅವುಗಳಲ್ಲಿ ಫಿಂಗರ್‌ಪ್ರಿಂಟ್ ಲಾಕ್ ಭಾರಿ ಸದ್ದು ಮಾಡಿದ್ದು, ಜೊತೆಗೆ ಪ್ರೈವೆಸಿಯ ಹೊಸ ಫೀಚರ್ಸ್‌ಗಳು ಬಳಕೆದಾರರನ್ನು ಆಕರ್ಷಿಸಿವೆ. ಈ ವರ್ಷವು ಸಹ ಅನೇಕ ನೂತನ ಸೌಲಭ್ಯಗಳು ವಾಟ್ಸಪ್‌ ಸೇರಲಿವೆ. ಹಾಗದಾರೆ ವಾಟ್ಸಪ್‌ನ ಪ್ರಮುಖ ಐದು ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಮುಖ್ಯ ಚಾಟ್ ಪಿನ್ ಮಾಡಿ

ಮುಖ್ಯ ಚಾಟ್ ಪಿನ್ ಮಾಡಿ

ವಾಟ್ಸಪ್‌ ಚಾಟ್‌ನಲ್ಲಿ ಕೆಲವು ಮೆಸೆಜ್‌ಗಳು ಅತೀ ಮುಖ್ಯವಾಗಿರುತ್ತವೆ ಹಾಗೂ ಕೆಲವು ಮೆಸೆಜ್‌ಗಳು ಸಹ ಪ್ರಮುಖವಾಗಿರುತ್ತವೆ. ಅಂತಹ ಮೆಸೆಜ್‌ಗಳನ್ನು ಮೊದಲು ವೀಕ್ಷಿಸಬೇಕಿಂದಿದ್ದರೇ ಪಿನ್ ಆಯ್ಕೆ ಬಳಕೆ ಮಾಡಬಹುದು. ಆಂಡ್ರಾಯ್ಡ್ ಓಎಸ್‌ ಫೋನಿನಲ್ಲಿ ಚಾಟ್‌ ಅನ್ನು ಲಾಂಗ್ ಪ್ರೆಸ್‌ ಮಾಡಿ ಹಿಡಿದರೇ ಪಿನ್ ಐಕಾನ್ ಕಾಣಸುತ್ತದೆ. ಹಾಗೂ ಐಫೋನ್‌ನಲ್ಲಿ ಮೆನು ಆಯ್ಕೆಯಲ್ಲಿ ಕಾಣಿಸುತ್ತದೆ.

ಹೆಚ್ಚು ಮೆಸೆಜ್ ಮಾಡುವ ಕಾಂಟ್ಯಾಕ್‌

ಹೆಚ್ಚು ಮೆಸೆಜ್ ಮಾಡುವ ಕಾಂಟ್ಯಾಕ್‌

ಪ್ರಸ್ತುತ ಸಾಮಾಜಿಕ ತಾಣಗಳು ಹೆಚ್ಚು ಅನುಕೂಲವಾಗಿದ್ದು, ವಾಟ್ಸಪ್‌ ಬಳಕೆದಾರರಿಗೆ ಹೆಚ್ಚಿನ ಅಗತ್ಯತೆಯನ್ನು ಒದಗಿಸುತ್ತದೆ. ಆದರೆ ವಾಟ್ಸಪ್ ಚಾಟ್‌ನಲ್ಲಿ ಯಾವ ಕಾಂಟ್ಯಾಂಕ್‌ಗೆ ಹೆಚ್ಚಿನ ಮೆಸೆಜ್ ಮಾಡಿದ್ದೆವೆ ಎಂಬುದನ್ನು ತಿಳಿಯುವ ಆಯ್ಕೆ ಸಹ ಇದೆ. ತಿಳಿಯಲು ಈ ಕ್ರಮ ಅನುಸರಿಸಿ ವಾಟ್ಸಪ್‌ ಸೆಟ್ಟಿಂಗ್ > ಡಾಟಾ ಮತ್ತು ಸ್ಟೋರೇಜ್ ಬಳಕೆ > ಸ್ಟೋರೇಜ್ ಬಳಕೆ ಆಯ್ಕೆ ನೋಡಿದಾಗ ಹೆಚ್ಚು ಡಾಟಾ ಬಳಕೆ ಆದ ಕಾಂಟ್ಯಾಕ್ಟ ಕಾಣಿಸುತ್ತದೆ.

ಕಾಲ್‌ ವೇಟಿಂಗ್

ಕಾಲ್‌ ವೇಟಿಂಗ್

ಸಾಮಾನ್ಯ ಕರೆಗಳಲ್ಲಿರುವ ಕಾಲ್ ವೇಟಿಂಗ್ ಸೌಲಭ್ಯದಂತೆ ವಾಟ್ಸಪ್‌ ಕರೆಗಳಲ್ಲಿಯೂ ಸಹ ಕಾಲ ವೇಟಿಂಗ್ ಫೀಚರ್ ಪರಿಚಿತವಾಗಿದೆ. ಬಳಕೆದಾರರು ಕರೆಯಲ್ಲಿದ್ದಾಗ ಇನ್ನೊಂದು ಕರೆ ಬಂದರೇ ಕಾಲ ವೇಟಿಂಗ್ ಆಯ್ಕೆ ಕೆಲಸ ಮಾಡಲಿದೆ. ವಾಟ್ಸಪ್‌ ಅನ್ನು ಗೂಗಲ್ ಪೇ ಸ್ಟೋರ್‌ ಹಾಗೂ ಆಪಲ್ ಆಪ್‌ ಸ್ಟೋರ್‌ ನಲ್ಲಿ ಆಪ್ ಡೌನ್‌ಲೋಡ್/ಅಪ್‌ಡೇಟ್ ಮಾಡಿಕೊಳ್ಳಬೇಕು.

ಚಾಟ್‌ನಿಂದ ಫೋಟೊ ಡಿಲೀಟ್

ಚಾಟ್‌ನಿಂದ ಫೋಟೊ ಡಿಲೀಟ್

ವಾಟ್ಸಪ್‌ ಅತ್ಯುತ್ತಮ ಮೆಸೆಜ್ ಆಪ್ ಆಗಿದ್ದು, ಮೀಡಿಯಾ ಆಯ್ಕೆ ಸಹ ಒಳಗೊಂಡಿದೆ. ಚಾಟ್‌ ವೇಳೆ ಫೋಟೊ, ವಿಡಿಯೊ ಶೇರ್ ಮಾಡಿರುತ್ತೆವೆ, ಆದರೆ ಅವುಗಳನ್ನು ಡಿಲೀಟ್ ಮಾಡದೇ ಇದ್ದಾಗ ಅವುಗಳು ಫೋನ್ ಸ್ಟೋರೆಜ್ ಕಬಳಿಸುತ್ತವೆ. ವಾಟ್ಸಪ್ ಸೆಟ್ಟಿಂಗ್ > ಡಾಟಾ ಮತ್ತು ಸ್ಟೋರೇಜ್ ಬಳಕೆ ಆಯ್ಕೆಯಲ್ಲಿ ಎಷ್ಟು ಸ್ಟೋರೇಜ್ ಸ್ಥಳ ಕಬಳಿಸಿವೆ ಎನ್ನುವ ಬಗ್ಗೆ ತಿಳಿಯುತ್ತದೆ. ಅಗತ್ಯ ಇರದ ಮೀಡಿಯಾ ಫೈಲ್‌ಗಳನ್ನು ಡಿಲೀಟ್ ಮಾಡಿ.

ಪ್ರೈವೆಟ್ ಚಾಟ್

ಪ್ರೈವೆಟ್ ಚಾಟ್

ವಾಟ್ಸಪ್‌ ಗ್ರೂಪ್‌ನಲ್ಲಿರುವ ಸದಸ್ಯರೊಂದಿಗೆ ಪ್ರೈವೆಟ್‌ ಆಗಿ ಚಾಟ್ ಮಾಡುವ ಆಯ್ಕೆ ಸಹ ವಾಟ್ಪ್ ಸೇರಿಕೊಂಡಿದೆ. ಈ ಆಯ್ಕೆಯು ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಬ್ಬರಿಗೂ ಲಭ್ಯವಾಗಿದೆ. ಆಂಡ್ರಾಯ್ಡ್‌ ಫೋನಿನಲ್ಲಿ ಗ್ರೂಪ್‌ ಚಾಟ್ > ಮೂರು ಡಾಟ್‌ ಇರುವ ಮೆನು > ರೀಪ್ಲೆ ಪ್ರೈವೆಟ್ಲಿ ಆಯ್ಕೆ ಸೆಲೆಕ್ಟ್ ಮಾಡಿರಿ. ಇನ್ನು ಐಫೋನಿನಲ್ಲಿ ಗ್ರೂಪ್‌ ಚಾಟ್ > ಸೆಲೆಕ್ಟ್ ಮೋರ್ > ರೀಪ್ಲೆ ಪ್ರೈವೆಟ್ಲಿ.

Most Read Articles
Best Mobiles in India

English summary
WhatsApp has become one of the most popular messaging apps with more than one billion users across the world. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X