ವಾಟ್ಸಪ್ ಗ್ರೂಪ್ ಚಾಟ್ ಲಿಂಕ್ ಕಳುಹಿಸಲು ಐದು ಸರಳ ಕ್ರಮಗಳು.

Written By:

  ಫೇಸ್ ಬುಕ್ ಒಡೆತನದ ವಾಟ್ಸಪ್ ಸದ್ಯಕ್ಕೆ ಲಭ್ಯವಿರುವ ಅತ್ಯುತ್ತಮ ಚಾಟ್ ತಂತ್ರಾಂಶ. ಈ ತಂತ್ರಾಂಶವನ್ನು ಒಂದು ಬಿಲಿಯನ್ನಿಗಿಂತಲೂ ಅಧಿಕ ಜನರು ಉಪಯೋಗಿಸುತ್ತಿದ್ದಾರೆ, ಕಂಪನಿಯು ತನ್ನ ಗ್ರಾಹಕರಿಗೆ ಬೇಸರ ಮೂಡದಂತೆ ನಿರಂತರವಾಗಿ ಹೊಸ ಹೊಸ ವಿಶೇಷತೆಗಳನ್ನು ಸೇರಿಸುತ್ತಿದೆ.

  ವಾಟ್ಸಪ್ ಗ್ರೂಪ್ ಚಾಟ್ ಲಿಂಕ್ ಕಳುಹಿಸಲು ಐದು ಸರಳ ಕ್ರಮಗಳು.

  ಓದಿರಿ: ವಾಟ್ಸಾಪ್‌ನಲ್ಲಿ ಆಕಸ್ಮಿಕವಾಗಿ ಯಾರಿಗೊ ಸೆಂಡ್ ಆದ ಮೆಸೇಜ್‌ ಅನ್‌ಸೆಂಡ್ ಹೇಗೆ?

  ವಾಟ್ಸಪ್ ರೀತಿಯಲ್ಲಿಯೇ ಇರುವ ಹಲವು ಕ್ಲೋನ್ ಗಳಿವೆ, ಉದಾಹರಣೆಗೆ ಜಿಬಿ ವಾಟ್ಸಪ್. ಈ ಕ್ಲೋನ್ ಗಳು ಹಲವಾರು ವಿಶೇಷತೆಗಳನ್ನು ನೀಡುತ್ತಾರೆ, ಆ ವಿಶೇಷತೆಗಳು ಅಧಿಕೃತ ವಾಟ್ಸಪ್ ನಲ್ಲಿಲ್ಲ. ಈ ಲೇಖನದಲ್ಲಿ ವಾಟ್ಸಪ್ ಗ್ರೂಪಿಗೆ ನಿಮ್ಮ ಗೆಳೆಯರನ್ನು ಸೇರಿಸಲು ಲಿಂಕ್ ಅನ್ನು ಸೃಷ್ಟಿಸುವುದು ಹೇಗೆ ಮತ್ತು ಗೆಳೆಯರನ್ನು ಆಹ್ವಾನಿಸುವುದು ಹೇಗೆ ಎಂದು ವಿವರಿಸಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಹಂತ 1: ಜಿಬಿವಾಟ್ಸಪ್ ಎಪಿಕೆ ಕಡತವನ್ನು ಡೌನ್ ಲೋಡ್ ಮಾಡಿಕೊಳ್ಳಿ.

  ಮೊದಲ ಹಂತದಲ್ಲಿ, ನೀವು ಜಿಬಿವಾಟ್ಸಪ್ ಎಪಿಕೆ ಕಡತವನ್ನು ಡೌನ್ ಲೋಡ್ ಮಾಡಿಕೊಂಡು ನಿಮ್ಮ ಫೋನಿನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ. ಇದನ್ನು ಇನ್ಸ್ಟಾಲ್ ಮಾಡಲು ಮೊದಲು ನೀವು ನಿಮ್ಮ ಫೋನಿನಲ್ಲಿರುವ ವಾಟ್ಸಪ್ ಅನ್ನು ತೆಗೆದು ಹಾಕಬೇಕು.

  ಹಂತ 2: ನಿಮ್ಮ ಗುಂಪಿಗೆ ಹೋಗಿ.

  ಈಗ, ನೀವು ಯಾವ ಗುಂಪಿನ ಆಹ್ವಾನದ ಲಿಂಕ್ ಅನ್ನು ಸೃಷ್ಟಿಸಬೇಕೆಂದಿರುವಿರೋ ಆ ಗುಂಪಿಗೆ ಹೊಗಿ. ಮೇಲಿರುವ ಸರ್ಚ್ ಬಾರ್ ನಲ್ಲಿಯೂ ಗುಂಪನ್ನು ಹುಡುಕಬಹುದು.

  ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಹಂತ 3: ಬಲ ಮೇಲ್ತುದಿಯಲ್ಲಿರುವ Plus ಬಟನ್ ಅನ್ನು ಒತ್ತಿರಿ.

  ಗ್ರೂಪಿಗೆ ಪ್ರವೇಶಿಸಿದ ನಂತರ, ಅದರ ಬಲ ಮೇಲ್ತುದಿಯಲ್ಲಿರುವ + ಬಟನ್ ಅನ್ನು ಒತ್ತಿರಿ.

  ಹಂತ 4: ಗ್ರೂಪ್ ಲಿಂಕ್ ಅನ್ನು ಸೃಷ್ಟಿಸಿ.

  ಗ್ರೂಪ್ ಸೆಟ್ಟಿಂಗ್ಸ್ ಗೆ ಹೋಗಿ, ಅಲ್ಲಿ ನಿಮಗೆ 'ಕ್ರಿಯೇಟ್ ಗ್ರೂಪ್ ಲಿಂಕ್' ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಒತ್ತಿರಿ ಮತ್ತು ಐದರಿಂದ ಹತ್ತು ಸೆಕೆಂಡುಗಳವರೆಗೆ ಕಾಯಿರಿ. ಈಗ ಗ್ರೂಪ್ ಲಿಂಕ್ ಸೃಷ್ಟಿಯಾಗುತ್ತದೆ. ಅದನ್ನು ನೀವು ನಿಮ್ಮ ಸ್ನೇಹಿತರಿಗೆ ಕಳುಹಿಸಿ ಗುಂಪಿಗೆ ಸೇರುವಂತೆ ಮಾಡಬಹುದು.

  ಸೂಚನೆ: ನೀವು ಅಡ್ಮಿನ್ ಆಗಿರಬೇಕು.

  ವಾಟ್ಸಪ್ ಗ್ರೂಪಿನ ಲಿಂಕ್ ಅನ್ನು ಸೃಷ್ಟಿಸಲು ನೀವು ಆ ಗುಂಪಿನ ಅಡ್ಮಿನ್ ಆಗಿರಬೇಕೆಂಬುದನ್ನು ನೆನಪಿಡಿ. ಇಲ್ಲವಾದರೆ ನೀವು ಗುಂಪಿನ ಲಿಂಕ್ ಅನ್ನು ಸೃಷ್ಟಿಸಲು ಸಾಧ್ಯವಿಲ್ಲ.

  ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  There are many WhatsApp tips and tricks and here's one among them with which you can create a WhatsApp group invite link easily. Read on..
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more