ಜಿಮೇಲ್ ನಲ್ಲಿ ನಾಲ್ಕು ಹೊಸ ಫೀಚರ್ ಬಿಡುಗಡೆ- ಎಪ್ರಿಲ್ 1 ರಂದು ಲೋಕಾರ್ಪಣೆ ಮಾಡಿದ ಗೂಗಲ್

By Gizbot Bureau
|

ಎಪ್ರಿಲ್ 1ನೇ ತಾರೀಕಿಗೆ ಜಿಮೇಲ್ ಗೆ ಗೂಗಲ್ ವರ್ಷ. ಗೂಗಲ್ 2004 ಎಪ್ರಿಲ್ 1 ರಂದು ಜಗತ್ತಿನ ಪ್ರಸಿದ್ಧ ಇಮೇಲ್ ಸೇವೆ ಜಿಮೇಲ್ ನ್ನು ಮೊದಲ ಬಾರಿಗೆ ಪರಿಚಯಿಸಿತ್ತು. ಜಿ ಸ್ಯೂಟ್ ಆಪ್ ನ ಭಾಗವಾಗಿ ಇದನ್ನು ಪರಿಚಯಿಸಲಾಗಿತ್ತು. ಜಿಮೇಲ್ ಪ್ರಾರಂಭದಲ್ಲಿ ಆಮಂತ್ರಣದ ಆಧಾರದಲ್ಲಿ ಶುರು ಮಾಡಲಾಗಿತ್ತು ಮತ್ತು 1ಜಿಬಿ ಸ್ಟೋರೇಜ್ ವ್ಯವಸ್ಥೆಯನ್ನು ಆಫರ್ ಮಾಡಲಾಗಿತ್ತು. ಇದೀಗ 15 ವರ್ಷಗಳ ಸುದೀರ್ಘ ಪಯಣವನ್ನು ಜಿಮೇಲ್ ಮುಗಿಸಿದೆ. ಹಾಗಾಗಿ ಗೂಗಲ್ ಕೆಲವು ಆಕರ್ಷಕ ಫೀಚರ್ ಗಳನ್ನು ಇದರಲ್ಲಿ ಪ್ರಕಟಿಸಿದೆ. ಅವುಗಳಲ್ಲಿ ನಾಲ್ಕನ್ನು ನಾವಿಲ್ಲಿ ವಿವರಿಸುತ್ತಿದ್ದೇವೆ.

ಸ್ಮಾರ್ಟ್ ಕಂಪೋಸ್ ಗೆ ಹೊಸ ಸ್ಮಾರ್ಟರ್ :

ಸ್ಮಾರ್ಟ್ ಕಂಪೋಸ್ ಗೆ ಹೊಸ ಸ್ಮಾರ್ಟರ್ :

ಜಿಮೇಲ್ ಸ್ಮಾರ್ಟ್ ಕಂಪೋಸ್ ಫೀಚರ್ ಗೆ ಇದೀಗ ಸ್ಮಾರ್ಟರ್ ಲಭ್ಯವಾಗಿದೆ. ಉದಾಹರಣೆಗೆ ನಿಮ್ಮ ತಂಡಕ್ಕೆ ನೀವು ಗ್ರೀಟಿಂಗ್ ಕಳುಹಿಸಬೇಕಿದ್ದಲ್ಲಿ " ಹಾಯ್ ಟೀಮ್" ನಿಮ್ಮ ಧ್ವನಿಯೇ ನಿಮ್ಮ ಸಹಾಯಕವಾಗುತ್ತದೆ. ನೀವು ಟೈಪ್ ಮಾಡಿದ ವಿಷಯದ ಆಧಾರದಲ್ಲಿ ನಿಮಗೆ ಸಬ್ಜೆಕ್ಟ್ ಲೈನ್ ಕೂಡ ಏನು ಬರೆಯಬೇಕೆಂದು ಸಲಹೆ ಸಿಗುತ್ತದೆ ಎಂದು ಅಧಿಕೃತ ಬ್ಲಾಗ್ ಪೋಸ್ಟ್ ನಲ್ಲಿ ಗೂಗಲ್ ತಿಳಿಸಿದೆ.

ಇಮೇಲ್ ಡೆಲಿವರಿಯನ್ನು ನಿವೀಗ ಯಾವ ಸಮಯಕ್ಕೆಂದು ಸೆಟ್ ಮಾಡಿ ಇಡಲು ಅವಕಾಶ:

ಇಮೇಲ್ ಡೆಲಿವರಿಯನ್ನು ನಿವೀಗ ಯಾವ ಸಮಯಕ್ಕೆಂದು ಸೆಟ್ ಮಾಡಿ ಇಡಲು ಅವಕಾಶ:

ಜಿಮೇಲ್ ಇನ್ನು ಮುಂದೆ ಅವಧಿಗೂ ಮುನ್ನವೇ ಇಮೇಲ್ ಬರೆಯುವುದಕ್ಕೆ ಅವಕಾಶ ನೀಡುತ್ತದೆ ಮತ್ತು ಯಾವಾಗ ಕಳುಹಿಸಬೇಕು ಎಂಬ ಸಮಯವನ್ನು ಸೆಟ್ ಮಾಡಿ ಇಡುವುದಕ್ಕೆ ಸಾಧ್ಯವಾಗುತ್ತದೆ. ನೀವು ಸೆಟ್ ಮಾಡಿದ ಸಮಯಕ್ಕೆ ಸರಿಯಾಗಿ ನೀವು ನಮೂದಿಸಿದ ರಿಸೀಪಿಯಂಟ್ ಗೆ ಮೆಸೇಜ್ ತಲುಪುತ್ತದೆ. ಅದಕ್ಕಾಗಿ ನೀವು ಆ ಸಮಯಕ್ಕೆ ಮೇಲ್ ತೆರೆಯಬೇಕಾಗಿಲ್ಲ ಅಥವಾ ಯಾವುದೇ ಮೇಲ್ ಗೆ ಸಂಬಂಧಿಸಿದ ಕೆಲಸವನ್ನು ಮಾಡಬೇಕಾಗಿಲ್ಲ. ಡಿಜಿಟಲ್ ಆಗಿ ಪ್ರತಿಯೊಬ್ಬರು ಆರಾಮಾಗಿರಬೇಕು ಎಂಬ ನಿಟ್ಟಿನಲ್ಲಿ ಈ ಫೀಚರ್ ನ್ನು ಸೇರಿಸುತ್ತಿದ್ದೇವೆ ಎಂದು ಗೂಗಲ್ ಹೇಳಿದೆ.

ಆಕ್ಷನೇಬಲ್ ಇನ್ ಬಾಕ್ಸ್ :

ಆಕ್ಷನೇಬಲ್ ಇನ್ ಬಾಕ್ಸ್ :

ಇಮೇಲ್ ಗೆ ಸಂಬಂಧಿಸಿದ ಆಕ್ಷನ್ ನ್ನು ವೇಗವಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಉದಾಹರಣೆಗೆ ಗೂಗಲ್ ಡಾಕ್ ನಲ್ಲಿರುವ ಕಮೆಂಟ್ ಥ್ರೆಡ್ ಗೆ ವೇಗವಾಗಿ ಪ್ರತಿಕ್ರಿಯಿಸುವುದು. ಮೀಟಿಂಗ್ ನಿಗದಿಗೊಳಿಸುವುದು ಅಥವಾ ಪ್ರಶ್ನೆಗಳನ್ನು ತುಂಬಿಸುವುದು ಇತ್ಯಾದಿಗಳನ್ನು ಮೆಸೇಜ್ ನಲ್ಲಿಯೇ ಮಾಡಬಹುದು. ಈ ಫೀಚರ್ ಮೂಲಕ ಕೆಲಸವು ಸುಲಭವಾಗಿ ಹೆಚ್ಚು ಕೇಂದ್ರೀಕೃತವಾಗಿರಲು ಸಹಾಯಕ ಮತ್ತು ಕೆಲವು ಕಾರಣಗಳಿಂದ ನೀವು ಇನ್ ಬಾಕ್ಸ್ ನಿಂದ ಹೊರಹೋಗಿ ಹೊಸ ಟ್ಯಾಬ್ ತೆರೆಯುವ ಅಗತ್ಯವಿಲ್ಲ ಎಂದು ಗೂಗಲ್ ತಿಳಿಸಿದೆ.

ಸ್ಮಾರ್ಟ್ ಕಂಪೋಸ್ ನಲ್ಲಿ ಇದೀಗ ನಾಲ್ಕು ಹೊಸ ಭಾಷೆಗಳಿಗೆ ಬೆಂಬಲ :

ಸ್ಮಾರ್ಟ್ ಕಂಪೋಸ್ ನಲ್ಲಿ ಇದೀಗ ನಾಲ್ಕು ಹೊಸ ಭಾಷೆಗಳಿಗೆ ಬೆಂಬಲ :

ಸ್ಮಾರ್ಟ್ ಕಂಪೋಸ್ ಫೀಚರ್ ನ್ನು ಬಿಡುಗಡೆಗೊಳಿಸಿದ ನಂತರ ಗೂಗಲ್ ಇದೀಗ ಈ ಸ್ಮಾರ್ಟ್ ಕಂಪೋಸ್ ಫೀಚರ್ ಸ್ಪಾನಿಷ್, ಫ್ರೆಂಚ್, ಇಟಾಲಿಯನ್ ಮತ್ತು ಪೋರ್ಚುಗೀಸ್ ಭಾಷೆಗಳಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದೆ.

Best Mobiles in India

Read more about:
English summary
Google adds for 4 new features to Gmail on its 15th birthday

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X