ಗೂಗಲ್ ನಿಂದ ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆ: ಮಹಿಳೆಯರಿಗೆ ಆದ್ಯತೆ..!

By -
|

ಗೂಗಲ್ ವಿಭಿನ್ನವಾಗಿ ಈ ಬಾರಿ ಮಹಿಳಾ ದಿನಾಚರಣೆಯನ್ನು ಆಚರಿಸಲು ಮುಂದಾಗಿದೆ. ಅವರಿಗೂ ಟೆಕ್ನಾಲಜಿ ವಲಯದಲ್ಲಿ ಗೌರವ ಸಲ್ಲಬೇಕು ಎನ್ನುವ ಕಾರಣಕ್ಕಾಗಿ ಮಹಿಳೆಯರೇ ನಿರ್ಮಿಸಿರುವ ಆಪ್ ಗಳಿಗಾಗಿ ಹೆಚ್ಚಿನ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ. ಅಲ್ಲದೇ ಮಹಿಳೆಯರು ನಿರ್ಮಿಸಿರುವ ಗೇಮ್ ಗಳು, ಬುಕ್ ಗಳಿಗೆ ವಿಶೇಷ ಮಾನ್ಯತೆಯನ್ನು ನೀಡಲು ಮುಂದಾಗಿದೆ.

ಗೂಗಲ್ ನಿಂದ ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆ: ಮಹಿಳೆಯರಿಗೆ ಆದ್ಯತೆ..!


ಮಾರ್ಚ್ 8 ರಂದು ಮಹಿಳಾ ದಿನಾಚರಣೆ ಇರುವ ಕಾರಣದಿಂದಾಗಿ ಈ ವಾರದಿಂದಲೇ ಈ ಕಾರ್ಯುವನ್ನು ಮಾಡಲು ಗೂಗಲ್ ಮುಂದಾಗಿದ್ದು, ಮಹಿಳೆಯ ಮುಖ್ಯ ಪಾತ್ರವವನ್ನು ವಹಿಸಿರುವ ಆಪ್. ಗೇಮ್ ಗಳಿಗೆ ತನ್ನ ಸ್ಟೋರ್ ಗಳಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡುವ ಯೋಜನೆ ರೂಪಿಸಿದೆ. ಅಲ್ಲದೇ ಬಳಕೆದಾರರಿಗೆ ಅವುಗಳನ್ನು ಬಳಸುವಂತೆ ಪ್ರೋತ್ಸಾಹಿಸಲಿದೆ.

ಇದಲ್ಲದೇ ತನ್ನ ಪುಸ್ತಕಗಳಲ್ಲಿಯೂ ಮಹಿಳೆಯರಿಗಾಗಿಯೇ ಆದ್ಯತೆ ನೀಡಲಿದೆ. ಅದರ ಜೊತೆಯಲ್ಲಿ ಸಿನಿಮಾ, ಟಿವಿ ಶೋಗಳಲ್ಲಿ ಮಾಂತಾದವುಗಳಲ್ಲಿ ಮಹಿಳೆರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಮಹಿಳಾ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲು ಮುಂದಾಗಿದೆ.

ಗೂಗಲ್ ನಿಂದ ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆ: ಮಹಿಳೆಯರಿಗೆ ಆದ್ಯತೆ..!


ಅಲ್ಲದೇ ಮಹಿಳೆಯರು ನಿರ್ಮಿಸಿರುವ ಆಪ್, ಗೇಮ್ ಮುಂತಾದವುಗಳಿಗೆ ಆದ್ಯತೆಯನ್ನು ನೀಡುವುದಲ್ಲದೇ. ಅವುಗಳ ವಿಶೇಷತೆಗಳನ್ನು ತಿಳಿಸುವ ವೇಳೆಯಲ್ಲಿ ಅವರ ಹೆಸರನ್ನು ಪ್ರದರ್ಶಿಸಲಿದೆ ಎನ್ನಲಾಗಿದೆ. ಅಲ್ಲದೇ ಮಹಿಳೆಯರು ಟೆಕ್ ಉದ್ಯಮದಲ್ಲಿ ಚಾಪು ಮೂಡಿಸಲು ಇದು ಸಹಾಯವನ್ನು ಮಾಡಲಿದೆ.

ಗೂಗಲ್ ಎಲ್ಲಾ ಉತ್ಪನ್ನಗಳಲ್ಲಿಯೂ ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ನೀಡಲಿದೆ ಎನ್ನಲಾಗಿದ್ದು, ವಿಶೇಷವಾಗಿ ಈ ವಾರ ಸಂಪೂರ್ಣವಾಗಿ ಅವರಿಗೆ ಮೀಸಲು ಇರಿಸವ ಮಾದರಿಯಲ್ಲಿ ಯೋಜನೆಯನ್ನು ರೂಪಿಸಿಕೊಂಡಿದೆ.

Best Mobiles in India

English summary
Google Celebrating Women Behind Play Store's Best Apps, Games. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X