ದಿನಕ್ಕೆ 1GB ಡೇಟಾ ಸಾಲದಿದ್ದರೆ ಗೂಗಲ್‌ನ ಈ ಹೊಸ ಆಪ್ ಇನ್‌ಸ್ಟಾಲ್ ಮಾಡಿ!!..ಯಾಕೆ?

ಗೂಗಲ್ ಡೇಟಾಲೀ(DATALLY) ಎಂಬ ಹೊಸ ಡೇಟಾ ಸೇವ್ ಆಪ್ ಅನ್ನು ಗೂಗಲ್ ಬಿಡುಗಡೆ ಮಾಡಿದ್ದು, ಈ ಆಪ್‌ ಮೂಲಕ ಬಳಕೆದಾರರ ಡೇಟಾ ಬಳಕೆಯನ್ನು ಮತ್ತಷ್ಟು ಕಡಿಮೆ ಮಾಡಲು ಮುಂದಾಗಿದೆ

|

ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ಗೂಗಲ್ ಹೊಸ ಹೊಸ ಸೇವಗಳನ್ನು ತರುತ್ತಿರುವುದು ನಿಮಗೆಲ್ಲಾ ಗೊತ್ತಿದೆ.! ಇತ್ತೀಚಿಗಷ್ಟೆ ಕಡಿಮೆ ಡೇಟಾ ಬಳಕೆ ಮಾಡುವ ಯೂಟ್ಯೂಬ್ ಗೋ ಆಪ್‌ ಬಿಡುಗಡೆ ಮಾಡಿದ್ದ ಗೂಗಲ್ ಇದೀಗ ಮತ್ತೊಂದು ಡೌನ್‌ಲೋಡ್ ಮಾಡಲೇಬೇಕಾದ ಆಪ್ ಅನ್ನು ಬಿಡುಗಡೆ ಮಾಡಿದೆ.!!

ಹೌದು, ಗೂಗಲ್ ಡೇಟಾಲೀ(DATALLY) ಎಂಬ ಹೊಸ ಡೇಟಾ ಸೇವ್ ಆಪ್ ಅನ್ನು ಗೂಗಲ್ ಬಿಡುಗಡೆ ಮಾಡಿದ್ದು, ಈ ಆಪ್‌ ಮೂಲಕ ಬಳಕೆದಾರರ ಡೇಟಾ ಬಳಕೆಯನ್ನು ಮತ್ತಷ್ಟು ಕಡಿಮೆ ಮಾಡಲು ಮುಂದಾಗಿದೆ. ಹಾಗಾದರೆ, ಈ ಡೇಟಾಲೀ ಆಪ್‌ನ ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಗೂಗಲ್ ಡೇಟಾಲಿ ಆಪ್!!

ಗೂಗಲ್ ಡೇಟಾಲಿ ಆಪ್!!

ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ಡೇಟಾವನ್ನು ಉಳಿತಾಯ ಮಾಡಲು ಗೂಗಲ್ ಡೇಟಾಲೀ ಆಪ್ ಬಿಡುಗಡೆಯಾಗಿದೆ. ಇದೇ ಬುಧವಾರದಂದು ಗೂಗಲ್ ಈ ಆಪ್‌ ಅನ್ನು ಬಿಡುಗಡೆಗೊಳಿಸಿದ್ದು, ಮೊಬೈಲ್ ಡೇಟಾ ಉಳಿಸಲು ಈ ಆಪ್‌ ಸಹಾಯಕಾರಿ ಎಂದು ತಿಳಿಸಿದೆ.!!

ಆಪ್‌ ಕಾರ್ಯನಿರ್ವಹಣೆ ಹೇಗೆ?

ಆಪ್‌ ಕಾರ್ಯನಿರ್ವಹಣೆ ಹೇಗೆ?

ಗೂಗಲ್ ಡೇಟಾಲೀ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಿದರೆ ಈ ಆಪ್ ನಿಮ್ಮ ವಿಪಿಎನ್ ನೆಟ್‌ವರ್ಕ್ ಮಾನಿಟರ್ ಮಾಡಲು ಕೇಳಿಕೊಳ್ಳುತ್ತದೆ. ಇದಕ್ಕೆ ನೀವು ಸಮ್ಮತಿಸಿದೆರೆ ಮೊಬೈಲ್ ಡೇಟಾ ಹೆಚ್ಚು ಖಾಲಿಯಾಗದಂತೆ ಈ ಆಪ್ ನೋಡಿಕೊಳ್ಳುತ್ತದೆ.!!

How to Sharing a Mobile Data Connection with Your PC (KANNADA)
ಯಾವುದಕ್ಕೆ ಎಷ್ಟು ಡೇಟಾ ಬಳಕೆ!!

ಯಾವುದಕ್ಕೆ ಎಷ್ಟು ಡೇಟಾ ಬಳಕೆ!!

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿರುವ ಯಾವ ಯಾವ ಆಪ್‌ಗಳು, ಯಾವ ಯಾವ ಸಮಯದಲ್ಲಿ ಎಷ್ಟೆಷ್ಟು ಡೇಟಾ ಬಳಸಿಕೊಳ್ಳುತ್ತವೆ ಎಂಬೆಲ್ಲಾ ಮಾಹಿತಿಯನ್ನು ಗೂಗಲ್ ಡೇಟಾಲೀ ಆಪ್ ನೀಡುತ್ತದೆ. ಇದರಿಂದ ನೀವು ಮೊಬೈಲ್ ಡೇಟಾ ಹೇಗೆಲ್ಲಾ ಖರ್ಚಾಗಿದೆ ಎಂದು ತಿಳಿಯಬಹುದು.!!

ಆಪ್ ಬ್ಲಾಕ್ ಮಾಡಬಹುದು!!

ಆಪ್ ಬ್ಲಾಕ್ ಮಾಡಬಹುದು!!

ಯಾವುದಾದರೂ ಒಂದು ಆಪ್‌ ನಿಮಗೆ ತಿಳಿಯದಂತೆ ಹೆಚ್ಚು ಡೇಟಾವನ್ನು ಖಾಲಿ ಮಾಡುತ್ತಿದೆ ಎಂದರೆ ಅ ಆಪ್ ಯಾವುದು ಎಂಬುದನ್ನು ಗೂಗಲ್ ಡೇಟಾಲೀ ಆಪ್ ಮೂಲಕ ತಿಳಿಯಬಹುದು. ನಂತರ ಆ ಆಪ್ ಹೆಚ್ಚು ಡೇಟಾ ಬಳಕೆ ಮಾಡದಂತೆ ಆ ಆಪ್‌ ಅನ್ನು ಬ್ಲಾಕ್ ಸಹ ಮಾಡಬಹುದು.!!

ಕೇವಲ 5MB ಇದೆ.!!

ಕೇವಲ 5MB ಇದೆ.!!

ಇಷ್ಟೆಲ್ಲಾ ಉಪಯೋಗವಿರುವ ಈ ಗೂಗಲ್ ಡೇಟಾಲೀ ಆಪ್ ಕೇವಲ 5MB ಗ್ರಾತ್ರದಲ್ಲಿದ್ದು, ಗೂಗಲ್ ಪ್ಲೇ ಸ್ಟೋರ್‌ ಮೂಲಕ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುವ ಈ ಆಪ್‌ ಅನ್ನು ಡೌನ್‌ಲೋಡ್ ಮಾಡಿ ದಿನಕ್ಕೆ 1GB ಡೇಟಾ ಸಾಲೊಲ್ಲಾ ಅನ್ನೋರು ಮೊಬೈಲ್ ಡೇಟಾ ಉಳಿಸಿಕೊಳ್ಳಿ.!!

ದೇಶಿಯ ವಿಮಾನ ಪ್ರಯಾಣಿಕರಿಗೆ 4 ದಿನ ಭರ್ಜರಿ ಆಫರ್!!..ಈಗಲೇ ಟಿಕೆಟ್ ಬುಕ್ ಮಾಡಿ.!!ದೇಶಿಯ ವಿಮಾನ ಪ್ರಯಾಣಿಕರಿಗೆ 4 ದಿನ ಭರ್ಜರಿ ಆಫರ್!!..ಈಗಲೇ ಟಿಕೆಟ್ ಬುಕ್ ಮಾಡಿ.!!

Best Mobiles in India

English summary
Google introduced an app on Wednesday designed to help Android smartphone users stay under the limits of pricey mobile data packages.to know kmore visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X