ಮೊಬೈಲ್ ನಲ್ಲಿ ಫೈಲ್ ಹುಡುಕಲು ಕಷ್ಟವೇ?..ಒಮ್ಮೆ ಗೂಗಲ್ ಫೈಲ್ ಗೋ ಟ್ರೈ ಮಾಡಿ!!

ಆ್ಯಪ್ಲಿಕೇಷನ್ ಅಥವಾ ಯಾವುದೇ ಸಾಫ್ಟ್ವೇರ್ ಗಳು ನಮಗೆ ಬೇಕೆಂದೆನಿಸಿದಾಗ ನಮ್ಮ ಮನಸ್ಸು ಹುಡುಕುವ ಜಾಗವೇ ಗೂಗಲ್. ಗೂಗಲ್ ಇದೀಗ ತನ್ನ ಬಳಕೆದಾರರಿಗೆ ಮೊಬೈಲ್ ಉಪಯೋಗಿಸುವಾಗ ಉತ್ತಮ ಅನುಭವ ನೀಡುವ ಫೈಲ್ ಗೋ ಎಂಬ ಹೊಸ ಆ್ಯಪ್‌!!

By Kiran Kumar Kh
|

ಆ್ಯಪ್ಲಿಕೇಷನ್ ಅಥವಾ ಯಾವುದೇ ಸಾಫ್ಟ್ವೇರ್ ಗಳು ನಮಗೆ ಬೇಕೆಂದೆನಿಸಿದಾಗ ನಮ್ಮ ಮನಸ್ಸು ಹುಡುಕುವ ಜಾಗವೇ ಗೂಗಲ್. ಗೂಗಲ್ ಇದೀಗ ತನ್ನ ಬಳಕೆದಾರರಿಗೆ ಮೊಬೈಲ್ ಉಪಯೋಗಿಸುವಾಗ ಉತ್ತಮ ಅನುಭವ ನೀಡುವ ಉದ್ದೆಶದಿಂದ ಫೈಲ್ ಗೋ ಎಂಬ ಹೊಸ ಆ್ಯಪ್‌ ನ್ನು ಪರಿಚಯಿಸುತ್ತಿದೆ.

ಮೊಬೈಲ್ ನಲ್ಲಿ ಫೈಲ್ ಹುಡುಕಲು ಕಷ್ಟವೇ?..ಒಮ್ಮೆ ಗೂಗಲ್ ಫೈಲ್ ಗೋ ಟ್ರೈ ಮಾಡಿ!!


ಏನಿದು ಫೈಲ್ ಗೋ ?

ಫೈಲ್ ಗೋ ನಿಮ್ಮ ಮೊಬೈಲ್ ನಲ್ಲಿರುವ ಫೈಲ್ ಗಳನ್ನು ವೇಗವಾಗಿ ಹುಡುಕಲು ಮತ್ತು ಆಫ್ಲೈನ್ ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಸಹಾಯ ಮಾಡುತ್ತದೆ. ಇಂಟರ್ನೆಟ್ ನ ಸಹಾಯವಿಲ್ಲದೆಯೂ 125Mbps ವೇಗವಾಗಿ ನೀವು ಫೈಲ್ ಗಳನ್ನು ಶೇರ್ ಮಾಡಬಹುದು. ಹಾಗು ನಿಮ್ಮ ಮೊಬೈಲ್ ನಲ್ಲಿರುವ ಫೈಲ್ ಗಳಿಗೆ ಮಾಲ್ವೇರ್ ಅಥವಾ ಬ್ಲೋಟ್ವೇರ್ ವೈರಸ್ ಬರದಂತೆ ಕಾಪಾಡುತ್ತದೆ.

ಸರ್ಚ್ ಟ್ಯಾಬ್ ನಲ್ಲಿ ಸುಲಭವಾಗಿ ಮತ್ತು ವೇಗವಾಗಿ ಫೈಲ್ ಗಳನ್ನು ಹುಡುಕುವುದು ಬೀಟಾ ವರ್ಷನ್ ನ ಪ್ರಮುಖ ಅಪ್ಡೇಟ್ ಆಗಿದೆ. ಆ್ಯಪ್ ಬಳಕೆದಾರ ಸರ್ಚ್ ಆಯ್ಕೆಯಲ್ಲಿ ಪದಗಳನ್ನು ಬಳಸುವ ಅಥವಾ ಕೆಳಗಿರುವ 6 ಆಯ್ಕೆಯ ಮೂಲಕ ನೇರವಾಗಿ ಫೈಲ್ ಗಳನ್ನು ಹುಡುಕಬಹುದು. ಆ ಆಯ್ಕೆಗಳು ಯಾವುದೆಂದರೆ ಆಡಿಯೋ, ಡಾಕ್ಯುಮೆಂಟ್ಸ್, ಫೋಟೋ, ವಿಡಿಯೋಗಳು ಮತ್ತು ಲಾರ್ಜ್ ಫೈಲ್ ಗಳು. ಈ ಆಯ್ಕೆಗಳು ಮುಂದಿನ ವಾರದಿಂದ ಲಭ್ಯವಿರಲಿದೆ.

ಈ ಆ್ಯಪ್ನ ಪರೀಕ್ಷಿಸಲು ಮತ್ತು ಕಾರ್ಯಕ್ಷಮತೆಯ ಬಗ್ಗೆ ಅಭಿಪ್ರಾಯ ತಿಳಿಸಲು ಫೈಲ್ ಗೋ ತನ್ನ ಬೀಟಾ ಆವೃತ್ತಿಯನ್ನು 2017ರ ನವೆಂಬರ್ ನಲ್ಲಿಯೇ ಬಿಡುಗಡೆ ಮಾಡಿತ್ತು. ಈ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಮೊಬೈಲ್ ನ ಅಂತರಿಕ ಮೆಮೊರಿ ಮತ್ತು ಮೆಮೊರಿ ಕಾರ್ಡ್ ನ ಮ್ಯಾನೇಜ್ ಮಾಡಲು ಮತ್ತು ಮೊಬೈಲ್ ನಲ್ಲಿರುವ ಅನಾವಶ್ಯಕ ಫೈಲ್ ಗಳನ್ನು ತೆಗೆದು ಹಾಕಲು ಸಹಕಾರಿಯಾಗಿದೆ.

ಮೊಬೈಲ್ ನಲ್ಲಿ ಫೈಲ್ ಹುಡುಕಲು ಕಷ್ಟವೇ?..ಒಮ್ಮೆ ಗೂಗಲ್ ಫೈಲ್ ಗೋ ಟ್ರೈ ಮಾಡಿ!!


ಈ ಆ್ಯಪ್ಲಿಕೇಶನ್ ನ ಪ್ರಮುಖ ಅಂಶವೆಂದರೆ ಮೊಬೈಲ್ ನಲ್ಲಿ ನೀವು ಇವರೆಗೆ ಉಪಯೋಗಿಸದ ಆ್ಯಪ್ಲಿಕೇಶನ್ ಗಳ ಬಗ್ಗೆ ತಿಳಿಸುತ್ತದೆ ಮತ್ತು ಕಳೆದ 30 ದಿನಗಳಿಂದ ಉಪಯೋಗಿಸದೆ ಇರುವ ಆ್ಯಪ್ಲಿಕೇಶನ್ ಗಳನ್ನು ಅನ್ ಇನ್ಸ್ಟಾಲ್ ಮಾಡಲು ಸೂಚಿಸುತ್ತದೆ.

ಈ ಹಿಂದಿನ ವರದಿಯಿಂದ ತಿಳಿದು ಬಂದಿರುವುದೇನೆಂದರೆ ಗೂಗಲ್ ಫೈಲ್ ಗೋ ಆ್ಯಪ್ನಲ್ಲಿ ಕಾರ್ಡ್ ಆಧಾರಿತ ಮಾದರಿಯಲ್ಲಿ ಸ್ಟೋರೇಜ್ ಟ್ಯಾಬ್ ಇರಲಿದೆ. ಈ ಕಾರ್ಡ್ ನಿಮಗೆ ಲಾರ್ಜ್ ಫೈಲ್, ನಕಲು ಫೈಲ್ ಗಳು, ಡೌನ್ಲೋಡ್ ಮಾಡಿದ ಫೈಲ್ ಗಳು, ಜಂಕ್ ಫೈಲ್ ಗಳು ಮತ್ತು ಆಪ್ ಕ್ಯಾಶೆಗಳನ್ನು ತಿಳಿಯಲು ಮತ್ತು ಡಿಲೀಟ್ ಮಾಡಲು ಸಹಕರಿಸಲಿದೆ. ಸ್ಮಾರ್ಟ್ ಸಲಹೆಯೊಂದಿಗೆ ಎಲ್ಲಾ ಫೈಲ್ ಗಳನ್ನು ಮ್ಯಾನೇಜ್ ಮಾಡುವುದು ಈ ಆ್ಯಪ್ಲಿಕೇಶನ್ ನ ಮೂಲ ಪರಿಕಲ್ಪನೆ.

Best Mobiles in India

English summary
The major update in the beta version of the app is the availability of search feature inside the files tab of the app. to know more this visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X