ಮತ್ತಷ್ಟು ಅಪ್‌ಡೇಟ್ ಆಗಿದೆ ಗೂಗಲ್‌ನ "ಫೈಲ್ಸ್ ಗೋ" ಆಪ್!!

ಫೋನ್ ಮೆಮೊರಿ ಎಷ್ಟು ಖಾಲಿಬಿಡಬೇಕು, ಯಾವ ಆಪ್‌ಗಳನ್ನು ಮಾತ್ರ ಇಟ್ಟಿಕೊಳ್ಳಬೇಕು, ಯಾವ ಆಪ್‌ ಎಷ್ಟು ಜಾಗವನ್ನು ತಿನ್ನುತ್ತದೆ ಎಂದೆಲ್ಲಾ ತಿಳಿಸಿಕೊಡುತ್ತಿದ್ದ ಫೈಲ್ಸ್ ಗೋ" ಇದೀಗ ಮತ್ತಷ್ಟು ವಿಭಿನ್ನವಾಗಿದೆ.!!

|

ಸ್ಮಾರ್ಟ್‌ಫೋನ್ ಮೆಮೊರಿ ನಿರ್ವಹಣೆಗಾಗಿ ಇರುವ ಗೂಗಲ್‌ನ "ಫೈಲ್ಸ್ ಗೋ" ಆಪ್ ಮತ್ತೆ ಅಪ್‌ಡೇಟ್ ಆಗಿದೆ. ಸ್ಮಾರ್ಟ್‌ಫೋನ್ ಫೋನ್ ಮೆಮೊರಿ ಎಷ್ಟು ಖಾಲಿಬಿಡಬೇಕು, ಯಾವ ಆಪ್‌ಗಳನ್ನು ಮಾತ್ರ ಇಟ್ಟಿಕೊಳ್ಳಬೇಕು, ಯಾವ ಆಪ್‌ ಎಷ್ಟು ಜಾಗವನ್ನು ತಿನ್ನುತ್ತದೆ ಎಂದೆಲ್ಲಾ ತಿಳಿಸಿಕೊಡುತ್ತಿದ್ದ ಫೈಲ್ಸ್ ಗೋ" ಇದೀಗ ಮತ್ತಷ್ಟು ವಿಭಿನ್ನವಾಗಿದೆ.!!

ಅಪ್ಲಿಕೇಶನ್‌ನಲ್ಲಿ ತ್ವರಿತ ಫಲಿತಾಂಶಗಳನ್ನು ನೀಡುವಂತೆ ನೂತನ ಫೈಲ್ಸ್ ಗೋ ಆಪ್ ಅನ್ನು ಗೂಗಲ್ ನವೀಕರಿಸಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಬಹಳ ಸುಲಭವಾಗಿ ನಕಲಿ ಫೈಲ್‌ಗಳನ್ನು ಹುಡುಕಿ ಡಿಲೀಟ್ ಮಾಡಲು ಸಹಕಾರಿಯಾಗುವಂತೆ ಆಯ್ಕೆಯನ್ನು ಹೊರತಂದಿದೆ. ಇದಕ್ಕಾಗಿಯೇ, ಫೈಲ್ಸ್ ಗೋ" ಆಪ್‌ನಲ್ಲಿ ಸರ್ಚ್ ಬಾರ್ ಅನ್ನು ಸಹ ನೀಡಲಾಗಿದೆ.!!

ಮತ್ತಷ್ಟು ಅಪ್‌ಡೇಟ್ ಆಗಿದೆ ಗೂಗಲ್‌ನ

ನೂತನವಾಗಿ ಅಪ್‌ಡೇಟ್ ಆಗಿರುವ ಗೂಗಲ್‌ನ "ಫೈಲ್ಸ್ ಗೋ" ಆಪ್ ಇದೀಗ ಕೇವಲ 7MB ಗ್ರಾತ್ರವಿದ್ದು, ಹಾಗಾದರೆ ಗೂಗಲ್‌ನ "ಫೈಲ್ಸ್ ಗೋ" ಆಪ್ ಬಳಕೆದಾರರಿಗೆ ಹೇಗೆಲ್ಲಾ ಸಹಾಯ ಮಾಡುತ್ತದೆ? ಗೂಗಲ್‌ನ "ಫೈಲ್ಸ್ ಗೋ" ಆಪ್ ಮೂಲಕ ಯಾವ ಯಾವ ಸೇವೆಗಳನ್ನು ನಾವು ಪಡೆಯಬಹುದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸ್ಮಾರ್ಟ್‌ಫೋನ್ ಮೆಮೊರಿ ಮಾಹಿತಿ!!

ಸ್ಮಾರ್ಟ್‌ಫೋನ್ ಮೆಮೊರಿ ಮಾಹಿತಿ!!

ಸ್ಮಾರ್ಟ್‌ಫೋನ್ ಮೆಮೊರಿಯನ್ನು ಎಷ್ಟು ಬಳಸಲಾಗುತ್ತಿದೆ ಮತ್ತು ಫೋನ್ ಮೆಮೊರಿಯನ್ನು ಖಾಲಿ ಮಾಡಲು ಸಹಾಯ ಮಾಡುವ ಶಿಫಾರಸುಗಳನ್ನು ನೀಡುವ ಆಯ್ಕೆಯನ್ನು ಗೂಗಲ್‌ನ "ಫೈಲ್ಸ್ ಗೋ" ಆಪ್ ಮೂಲಕ ನೀಡಲಾಗಿದೆ.! ನಿಮ್ಮ ಫೋನ್ ಮೆಮೊರಿಯ ಬಗ್ಗೆ ಎಲ್ಲಾ ಮಾಹಿತಿಗಳನ್ನು ಈ ಆಪ್ ತಿಳಿಸಿಕೊಡುತ್ತದೆ.!!

ಅನಗತ್ಯ ಫೈಲ್‌ಗಳ ಬಗ್ಗೆ ಎಚ್ಚರಿಕೆ!!

ಅನಗತ್ಯ ಫೈಲ್‌ಗಳ ಬಗ್ಗೆ ಎಚ್ಚರಿಕೆ!!

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಅನಗತ್ಯ ಫೈಲ್‌ಗಳೇನಾದರೂ ಬೀಡುಬಿಟ್ಟಿದ್ದರೆ ಅದರ ಬಗ್ಗೆ "ಫೈಲ್ಸ್ ಗೋ" ಆಪ್ ಎಚ್ಚರಿಸುತ್ತದೆ. ನೀವು ಕಳೆದ 30 ದಿನಗಳಲ್ಲಿ ಬಳಸದಿರುವ ಅಪ್ಲಿಕೇಷನ್‌ಗಳು, ಅನಗತ್ಯ ಫೈಲ್ಗಳು, ಆಡಿಯೊ ಫೈಲ್ಗಳು ಅಥವಾ ನಕಲಿ ಫೈಲ್‌ಗಳ ಬಗ್ಗೆ "ಫೈಲ್ಸ್ ಗೋ" ಆಪ್ ನೋಟಿಫಿಕೇಷನ್‌ಗಳನ್ನು ನೀಡುತ್ತದೆ.!!

ಫೈಲ್ಸ್ ವೀವರ್!!

ಫೈಲ್ಸ್ ವೀವರ್!!

"ಫೈಲ್ಸ್ ಗೋ" ಆಪ್ ತೆರೆದರೆ ಆಪ್ ಕೆಳಗೆ ಬಲಭಾಗದಲ್ಲಿ ಫೈಲ್ಸ್ ಎಂಬ ಆಯ್ಕೆ ಕಾಣಿಸುತ್ತದೆ. ಈ ಆಯ್ಕೆಯಲ್ಲಿ ಸ್ಮಾರ್ಟ್‌ಫೋನಿನ ಪ್ರತಿಯೊಂದು ಫೈಲ್‌ಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಯಾವ ಪೈಲ್ ಎಷ್ಟು ಗಾತ್ರದಲ್ಲಿದೆ ಎಂಬುದನ್ನು ನೋಡಿ ನೇರವಾಗಿ ಆ ಫೈಲನ್ನು ಡಿಲೀಟ್ ಮಾಡಬಹುದಾಗಿದೆ.!!

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

"ಫೈಲ್ಸ್ ಗೋ" ಸೆಟ್ಟಿಂಗ್ಸ್!!

"ಫೈಲ್ಸ್ ಗೋ" ಆಪ್ ಸೆಟ್ಟಿಂಗ್ಸ್ ನಿಮಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತದೆ. ಲೋ ಸ್ಟೋರೇಜ್, ಡೌನ್‌ಲೋಡ್ ಫೈಲ್ಸ್ ಮತ್ತು ಲಾರ್ಜ್ ಸ್ಟೋರೇಜ್ ಫೋಲ್ಡರ್‌ ಹೀಗೆ ಹಲವು ಆಯ್ಕೆಗಳ ಬಗ್ಗೆ ಅಧಿಸೂಚನೆಗಳನ್ನು ಕಳುಹಿಸುವ ಸೆಟ್ಟಿಂಗ್ಸ್ ಅನ್ನು "ಫೈಲ್ಸ್ ಗೋ" ಆಪ್ ಸೆಟ್ಟಿಂಗ್ಸ್ ಮೂಲಕ ಮಾಡಬಹುದಾಗಿದೆ.!

Best Mobiles in India

English summary
The app has also made it easy for Androidusers to locate duplicate files before their removal. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X