ಜೊಮ್ಯಾಟೋ, ಸ್ವಿಗ್ಗಿಗೆ ಉಳಿಗಾಲವಿಲ್ಲ..! ಸದ್ಯದಲ್ಲಿಯೇ ಗೂಗಲ್‌ನಿಂದ ಹೊಸ ಸೇವೆ..!

By Gizbot Bureau
|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಭಾರತೀಯ ಬಳಕೆದಾರರಿಗೆ ವೈಯಕ್ತಿಕಗೊಳಿಸಿದ ಅನುಭವ ನೀಡಲು ಗಮನ ಹರಿಸುತ್ತಿದೆ. ಜಾಗತಿಕವಾಗಿ ಆಂಡ್ರಾಯ್ಡ್‌ನ ಅತಿದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಮುಂದಿನ ದಿನಗಳಲ್ಲಿ ಕೆಲ ಜನಪ್ರಿಯ ಭಾರತೀಯ ಉದ್ಯಮಗಳಿಗೆ ನಷ್ಟವಾಗುವ ಸಾಧ್ಯತೆಯಿದೆ. ಗೂಗಲ್‌ ಸದ್ಯ ಹೈಪರ್‌ಲೋಕಲ್‌ಗೆ ಇಳಿಯುವ ಗುರಿಯನ್ನು ಹೊಂದಿದೆ. ಗೂಗಲ್ ಗಮನಹರಿಸುತ್ತಿರುವ ಪ್ರಮುಖ ಕ್ಷೇತ್ರವೆಂದರೆ ರೆಸ್ಟೋರೆಂಟ್‌ಗಳು. ಆದ್ದರಿಂದ, ಗೂಗಲ್ ಚಿಂತನೆಯು ಏನೆಂಬುದು ಇನ್ನು ಹೊರಬಿದ್ದಿಲ್ಲ. ಮತ್ತು ಜೊಮ್ಯಾಟೋ, ಸ್ವಿಗ್ಗಿಯಂತಹ ಕಂಪನಿಗಳ ಮೇಲೆ ಏನು ಪರಿಣಾಮ ಬೀರುತ್ತದೆ..? ಎಂಬುದನ್ನು ಕಾದು ನೋಡಬೇಕು.

ಗೂಗಲ್‌ ಮ್ಯಾಪ್ಸ್‌ ಸಹಾಯ

ಗೂಗಲ್‌ ಮ್ಯಾಪ್ಸ್‌ ಸಹಾಯ

ಭಾರತದಲ್ಲಿ ಗೂಗಲ್ ಮ್ಯಾಪ್ಸ್‌ ಹೆಚ್ಚು ಉಪಯುಕ್ತವಾಗಿದೆ. ಮ್ಯಾಪ್ಸ್‌ ಕೇವಲ ನ್ಯಾವಿಗೇಷನ್‌ಗೆ ಸೀಮಿತವಾಗಿಲ್ಲದೇ, ರೆಸ್ಟೋರೆಂಟ್‌ಗಳಲ್ಲಿ ಟೇಬಲ್ ಕಾಯ್ದಿರಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ನೀವು ಮುಂದಿನ ಬಾರಿ ಊಟಕ್ಕೆ ನಿರ್ದಿಷ್ಟ ರೆಸ್ಟೋರೆಂಟ್‌ಗೆ ಭೇಟಿ ನೀಡಲು ಬಯಸಿದಾಗ, ಸಲಹೆ ಹಾಗೂ ನಿರ್ದೇಶನಗಳಿಗಾಗಿ ಗೂಗಲ್ ಮ್ಯಾಪ್ಸ್‌ ನೋಡಬಹುದು. ಮತ್ತು ನೀವು ರೆಸ್ಟೋರೆಂಟ್‌ಗೆ ಹೋಗುವ ದಾರಿಯಲ್ಲಿಯೇ ಟೇಬಲ್ ಬುಕ್ ಮಾಡಬಹುದು. ಅಷ್ಟೇ ಅಲ್ಲ, ಗೂಗಲ್ ಮ್ಯಾಪ್ಸ್‌ನಲ್ಲಿ ನಿರ್ದಿಷ್ಟ ರೆಸ್ಟೋರೆಂಟ್‌ಗಳಲ್ಲಿರುವ ಇತ್ತೀಚಿನ ಕೊಡುಗೆ ಮತ್ತು ರಿಯಾಯಿತಿಗಳನ್ನು ಸಹ ನಿಮಗೆ ಕಾಣುತ್ತವೆ.

ಜೊಮ್ಯಾಟೋದಂಥ ಕಂಪನಿಗಳಿಗೆ ಉಳಿಗಾಲವಿಲ್ಲ

ಜೊಮ್ಯಾಟೋದಂಥ ಕಂಪನಿಗಳಿಗೆ ಉಳಿಗಾಲವಿಲ್ಲ

ಜೊಮ್ಯಾಟೋದಂತಹ ಕಂಪನಿಗಳಿಗೆ ಗೂಗಲ್‌ ನಿರ್ಧಾರದಿಂದ ಭಾರೀ ಸಮಸ್ಯೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಯಂತ್ರ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸುವುದಲ್ಲಿ ಗೂಗಲ್‌ನದ್ದು ಎತ್ತಿದ ಕೈ. ಗೂಗಲ್ ಮ್ಯಾಪ್‌ನಲ್ಲಿ ಬಳಕೆದಾರರಿಗೆ ಕಸ್ಟಮೈಸ್ ಮಾಡಿದ ‘ಫಾರ್‌ ಯು' ಟ್ಯಾಬ್ ಇದ್ದು, ಇದರ ಮೂಲಕ ಎಲ್ಲಿ ತಿನ್ನಬೇಕು ಮತ್ತು ಏನು ತಿನ್ನಬೇಕು ಎಂಬುದನ್ನು ಗೂಗಲ್‌ ಸೂಚಿಸುತ್ತದೆ. ರೆಸ್ಟೋರೆಂಟ್‌ಗಳಿಗಾಗಿ ಹೊಸ ‘ಯೂವರ್‌ ಮ್ಯಾಚ್‌' ಸ್ಕೋರ್‌ನ್ನು ಗೂಗಲ್‌ ಸೇರಿಸಿದೆ ಮತ್ತು ನಿಮ್ಮ ಗೂಗಲ್‌ ಖಾತೆಗಳೊಂದಿಗೆ ನೀವು ಸೈನ್ ಇನ್ ಮಾಡಿದ ನಂತರ, ನಿಮ್ಮ ಗೂಗಲ್‌ ಮ್ಯಾಪ್ಸ್‌ ಮತ್ತು ಸ್ಥಳ ಇತಿಹಾಸದೊಂದಿಗೆ ಹಂಚಿಕೊಂಡಿರುವ ಮಾಹಿತಿಯ ಆಧಾರದ ಮೇಲೆ ನಿಮಗೆ ಸೂಕ್ತವಾದ ರೆಸ್ಟೋರೆಂಟ್‌ಗಳನ್ನು ಗೂಗಲ್‌ ಶಿಫಾರಸು ಮಾಡುತ್ತದೆ.

ಸದ್ಯಕ್ಕೆ ಸಮಸ್ಯೆಯಿಲ್ಲ

ಸದ್ಯಕ್ಕೆ ಸಮಸ್ಯೆಯಿಲ್ಲ

ಜೊಮ್ಯಾಟೋದಂತಹ ಕಂಪನಿಗಳಿಗೆ ಸದ್ಯ ಸಮಸ್ಯೆಯಿಲ್ಲ. ಏಕೆಂದರೆ, ಸ್ಥಳೀಯವಾಗಿ ಗೂಗಲ್‌ ಈ ಸೇವೆಯನ್ನು ಇನ್ನು ಆರಂಭಿಸಿಲ್ಲ. ಆರಂಭಿಕವಾಗಿ ಗೂಗಲ್‌ ಮ್ಯಾಪ್ಸ್‌ ಇಜೀ ಡಿನ್ನರ್‌ ಎಂಬ ಸ್ಟಾರ್ಟ್‌ಅಪ್‌ ಜೊತೆಗೂಡಿ ರೆಸ್ಟೋರೆಂಟ್‌ಗಳಲ್ಲಿ ಟೇಬಲ್ ಬುಕಿಂಗ್ ಮತ್ತು ಕೊಡುಗೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಆದಾಗ್ಯೂ, ಟೇಬಲ್‌ ಬುಕ್‌ ಮಾಡುವಾಗ ಬಳಕೆದಾರರು ತಮ್ಮ ಆದ್ಯತೆಯ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಲು ಗೂಗಲ್ ಅನುಮತಿಸುತ್ತದೆಯೇ ಎಂದು ಕೇಳಿದಾಗ, ಗೂಗಲ್ ಮ್ಯಾಪ್ಸ್‌ ನಿರ್ದೇಶಕ ಕ್ರಿಶ್ ವಿಟಲ್ದೇವರ, ನಮ್ಮ ಬಳಕೆದಾರರು ಅನೇಕ ಸ್ಥಳಗಳಿಗೆ ಹೋಗಬೇಕಾಗಿಲ್ಲ. ಗೂಗಲ್ ಮ್ಯಾಪ್ಸ್‌ ಒಪನ್‌ ಮಾಡಿದರೆ ಸಾಕು.. ಅಲ್ಲಿ ಎಲ್ಲಾ ಸಿಗುವಂತೆ ಮಾಡುವುದೇ ನಮ್ಮ ಗುರಿ ಎಂದು ಹೇಳಿದ್ದಾರೆ.

 ಪಾಲುದಾರಿಕೆಗೆ ಗೂಗಲ್‌ ಮುಕ್ತ

ಪಾಲುದಾರಿಕೆಗೆ ಗೂಗಲ್‌ ಮುಕ್ತ

ಗೂಗಲ್‌ ಮ್ಯಾಪ್ಸ್‌ ಸದ್ಯ ತಮ್ಮ ಪಾಲುದಾರ ಇಜೀ ಡಿನ್ನರ್ ಒದಗಿಸಿದ ರಿಯಾಯಿತಿಗಳನ್ನು ತೋರಿಸುತ್ತಿದೆ. ಊಟದ ಕೊಡುಗೆಗಳನ್ನು ಬಳಕೆದಾರರಿಗೆ ತೋರಿಸಲು ಗೂಗಲ್‌ ಇತರ ಕಂಪನಿಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಮುಕ್ತವಾಗಿದೆ. ಇಷ್ಟಿದ್ದರೂ, ಭವಿಷ್ಯದಲ್ಲಿ ಇತರ ಕಂಪನಿಗಳು ಒದಗಿಸುವ ಕೊಡುಗೆಗಳನ್ನು ಗೂಗಲ್ ಮ್ಯಾಪ್ಸ್‌ ಹೇಗೆ ನೀಡುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಜೊಮ್ಯಾಟೋ ಕೂಡ ಗೂಗಲ್‌ ಸೇವೆಗೆ ಸೇರಬಹುದಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಗೂಗಲ್ ಮ್ಯಾಪ್ಸ್‌ನ ಇಂಜಿನಿಯರಿಂಗ್ ನಿರ್ದೇಶಕ ಚಂದು ಥೋಟಾ, "ನಮ್ಮ ಗಮನ ಕೇವಲ ಬಳಕೆದಾರರಿಗೆ ಮಾಹಿತಿ ಲಭ್ಯವಾಗುವಂತೆ ಮಾಡುವುದು. ಲಭ್ಯವಿರುವ ಎಲ್ಲಾ ಕೊಡುಗೆಗಳನ್ನು ತೋರಿಸುತ್ತೇವೆ ಮತ್ತು ಎಲ್ಲಾ ಆಯ್ಕೆಗಳನ್ನು ಒದಗಿಸುತ್ತೇವೆ" ಎಂದಿದ್ದಾರೆ.

ಅನೇಕ ಯೋಜನೆಗಳು..?

ಅನೇಕ ಯೋಜನೆಗಳು..?

ಸದ್ಯ ರೆಸ್ಟೋರೆಂಟ್ ಕಾಯ್ದಿರಿಸುವಿಕೆ ಮತ್ತು ಊಟದ ಕೊಡುಗೆಗಳನ್ನು ನೀಡುತ್ತಿದ್ದೇವೆ. ಭವಿಷ್ಯದಲ್ಲಿ ಗೂಗಲ್ ಮ್ಯಾಪ್ಸ್‌ನಿಂದಲೇ ನೇರವಾಗಿ ಆಹಾರ ವಿತರಣೆ ಮಾಡಬಹುದೇ..? ಎಂದು ಯೋಚಿಸುತ್ತಿದ್ದೇವೆ. "ನಾವು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಬಳಕೆದಾರರಿಗೆ ಸಮಗ್ರ ಅನುಭವ ನೀಡುವ ಮಾರ್ಗಗಳನ್ನು ನೋಡುತ್ತೇವೆ" ಎಂದು ಥೋಟಾ ಮುಂದಿನ ಯೋಜನೆಗಳ ಬಗ್ಗೆ ಹೇಳಿದ್ರು.

Best Mobiles in India

Read more about:
English summary
Google Has A Bad News For Zomato And Other Food Delivering Apps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X