ಗೂಗಲ್ I/O 2018 ರ ಘೋಷಣೆಗಳು: ಆಂಡ್ರಾಯ್ಡ್ ಪಿ, ಲೆನ್ಸ್, ಮ್ಯಾಪ್ಸ್, ಅಸಿಸ್ಟೆಂಟ್ !!

By Tejaswini P G
|

ಕೆಲ ಸಮಯದ ಹಿಂದಷ್ಟೆ ಗೂಗಲ್ I/O 2018 ರ ಡೆವಲಪರ್ಸ್ ಕಾನ್ಫರೆನ್ಸ್ ಪ್ರಾರಂಭವಾಗಿದ್ದು, ಈ ಮೂರು ದಿನಗಳ ಸಮಾವೇಶದಲ್ಲಿ ಗೂಗಲ್ ಸಂಸ್ಥೆಯು ಅನೇಕ ಕುತೂಹಲಕಾರಿ ಘೋಷಣೆಗಳನ್ನು ಮಾಡಲಿದೆ. ಇಲ್ಲಿ ಘೋಷಿಸಲಾಗುವ ಉತ್ಪನ್ನಗಳು ಮತ್ತು ಫೀಚರ್ಗಳು ಮುಂಬರುವ ವಾರಗಳಲ್ಲಿ ಅಥವಾ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ. ನಾವೆಣಿಸದಂತೆ ಗೂಗಲ್ ಸಂಸ್ಥೆ ಈ ಸಂದರ್ಭದಲ್ಲಿ ಹಲವು ಘೋಷಣೆಗಳನ್ನು ಮಾಡಿದ್ದು ಅವುಗಳ ಪೈಕಿ ಆಂಡ್ರಾಯ್ಡ್ ಪಿ ಇತ್ಯಾದಿ ಕೆಲ ಪ್ರಮುಖವಾದ ಅಂಶಗಳ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ.

ಗೂಗಲ್ I/O 2018 ರ ಘೋಷಣೆಗಳು: ಆಂಡ್ರಾಯ್ಡ್ ಪಿ, ಲೆನ್ಸ್, ಮ್ಯಾಪ್ಸ್, ಅಸಿಸ್ಟೆಂಟ್

ಆಂಡ್ರಾಯ್ಡ್ ಪಿ

ಗೂಗಲ್ I/O 2018ರ ಅತ್ಯಂತ ನಿರೀಕ್ಷಿತ ಅಂಶ ಇದಾಗಿದೆ. ಆಂಡ್ರಾಯ್ಡ್ ಪಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನ ಮುಂದಿನ ಆವೃತ್ತಿಯಾಗಿದೆ. ಬುದ್ಧಿವಂತಿಕೆ, ಸರಳತೆ ಮತ್ತು ಡಿಜಿಟಲ್ ಯೋಗಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಈ ಆಂಡ್ರಾಯ್ಡ್ ಪಿ. ಅಡಾಪ್ಟಿವ್ ಬ್ಯಾಟರಿ ಫೀಚರ್ ಹೊಂದಿರುವ ಆಂಡ್ರಾಯ್ಡ್ ಪಿ ಬ್ಯಾಟರಿಯ ಕಾರ್ಯಕ್ಷಮತೆ ಹೆಚ್ಚಿಸಲು ಮಶೀನ್ ಲರ್ನಿಂಗ್ ನ ಸಹಾಯ ಪಡೆಯುತ್ತದೆ. ಈ ಮೂಲಕ ಸಾಧನಗಳ CPU ನ ಕಾರ್ಯಕ್ಷಮತೆಯನ್ನೂ ಉತ್ತಮವಾಗಿಸಬಹುದು.

ಈ ಓಎಸ್ ನ ಮತ್ತೊಂದು ಪ್ರಮುಖ ಪೀಚರ್ ಅಡಾಪ್ಟಿವ್ ಬ್ರೈಟ್ನೆಸ್. ಇದು AI ನ ಆಧಾರದ ಮೇಲೆ ಬ್ರೈಟ್ನೆಸ್ ಅನ್ನು ಅಡ್ಜಸ್ಟ್ ಮಾಡುತ್ತದೆ. ಇದರ ಆಪ್ ಆಕ್ಷನ್ಸ್ ಆಂಡ್ರಾಯ್ಡ್ ಒನ್ ನಲ್ಲಿರುವ ಪ್ರೆಡಿಕ್ಟಿವ್ ಆಪ್ಗಳ ಸುಧಾರಿತ ಆವೃತ್ತಿಯಾಗಿದೆ. ಬಳಕೆದಾರರ ಬಳಕೆಯ ಆಧಾರದ ಮೇಲೆ ಆಪ್ ಆಕ್ಷನ್ಸ್ ಅನ್ನು ಪ್ರೆಡಿಕ್ಟ್ ಮಾಡಲಾಗುತ್ತದೆ. ಇಮೇಜ್ ಲೇಬಲಿಂಗ್, ಟೆಕ್ಸ್ಟ್ ರೆಕಗ್ನಿಶನ್ ಇತ್ಯಾದಿಗಳ ಮಶೀನ್ ಲರ್ನಿಂಗ್ ಹೊಂದಿರುವ ML ಕಿಟ್ ಅನ್ನು ಗೂಗಲ್ ಲಾಂಚ್ ಮಾಡಲಿದೆ. ಈ ML ಕಿಟ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡನ್ನೂ ಬೆಂಬಲಿಸುತ್ತದೆ ಮತ್ತು ಕ್ರಾಸ್-ಪ್ಲ್ಯಾಟ್ಫಾರ್ಮ್ ಸಾಮರ್ಥ್ಯ ಹೊಂದಿರುವ ರೆಡಿ-ಟು-ಯೂಸ್ ಮಾಡೆಲ್ಗಳಂತೆ ಕಾರ್ಯನಿರ್ವಹಿಸುತ್ತದೆ.

ಆಂಡ್ರಾಯ್ಡ್ ಪಿ ಸರಳ ಮಲ್ಟಿ-ಟಾಸ್ಕಿಂಗ್ ಹೊಂದಿದ್ದು ಐಫೋನ್ X ಮಾದರಿಯ ಗೆಸ್ಚರ್ಗಳನ್ನೂ ಹೊಂದಿದೆ. ಫೋನಿನ ಹೋಮ್ ಬಟನ್ ಅನ್ನು ಸ್ಲೈಡ್ ಮಾಡುವ ಮೂಲಕ ಆಪ್ಗಳನ್ನು ಸ್ವಿಚ್ ಮಾಡಬಹುದು. ಆಂಡ್ರಾಯ್ಡ್ ಸಾಧನಗಳಲ್ಲಿ ವಾಲ್ಯೂಮ್ ಬದಲಾಯಿಸುವಿಕೆಯೂ ಬದಲಾಗಲಿದೆ. ಸ್ಲೈಸಸ್ ಎಂಬ ಹೊಸ API ಸರ್ಚ್ ನಲ್ಲಿ ಕಾಣಸಿಗುವ ಇಂಟರ್ಯಾಕ್ಟಿವ್ ಸ್ನಿಪೆಟ್ಗಳಾಗಿವೆ. ಆಪ್ ಆಕ್ಷನ್ಸ್ ಮತ್ತು ಸ್ಲೈಸಸ್ ಬರುವ ತಿಂಗಳು ಲಾಂಚ್ ಆಗಲಿದೆ.

ಆಂಡ್ರಾಯ್ಡ್ ಪಿ ಸುಧಾರಿತ ಡ್ಯಾಶ್ಬೋರ್ಡ್ ಹೊಂದಿರಲಿದ್ದು ಸ್ಮಾರ್ಟ್ಫೋನ್ ನಲ್ಲಿ ಎಷ್ಟು ಸಮಯ ಕಳೆಯುತ್ತೇವೆ ಎಂಬುದನ್ನು ಇದು ತೋರಿಸಲಿದೆ. ಪ್ರತಿಯೊಂದು ಆಪ್ ನಲ್ಲಿ ವ್ಯಯಿಸಿದ ಸಮಯವನ್ನೂ ಇದು ತೋರಿಸುತ್ತದೆ ಮತ್ತು ಸಮಯದ ಮೇಲೆ ಮಿತಿಯನ್ನೂ ಸೆಟ್ ಮಾಡಬಹುದು. ಡು ನಾಟ್ ಡಿಸ್ಟರ್ಬ್ ಮೋಡ್ ನೋಟಿಫಿಕೇಶನ್ ಇತ್ಯಾದಿಗಳನ್ನು ಸುಮ್ಮನಾಗಿಸುತ್ತದೆ. ಫೋನ್ ಅನ್ನು ಫ್ಲಿಪ್ ಮಾಡುವ ಮೂಲಕ ಡು ನಾಟ್ ಡಿಸ್ಟರ್ಬ್ ಮೋಡ್ ಸಕ್ರಿಯವಾಗುತ್ತದೆ. ಫೋನ್ ಅನ್ನು ಸಂಪೂರ್ಣವಾಗಿ ನಿಶ್ಯಬ್ದವಾಗಿಸುವ ಈ ಗೆಸ್ಚರ್ ಅನ್ನು "ಶುಶ್" ಎಂದು ಕರೆಯಲಾಗಿದೆ. ಈ ಮೋಡ್ ನಲ್ಲಿದ್ದರೂ ಸ್ಟಾರ್ಡ್ ಕಾಂಟ್ಯಾಕ್ಟ್ಗಳು ನಿಮ್ಮನ್ನು ಸಂಪರ್ಕಿಸಬಹುದಾಗಿದೆ.

ಈ ಫೀಚರ್ಗಳು ಮೊದಲಿಗೆ ಪಿಕ್ಸೆಲ್ ಸಾಧನಗಳ ಮೂಲಕ ಆಂಡ್ರಾಯ್ಡ್ ಪಿ ಗೆ ಬರಲಿದೆ. ಆಂಡ್ರಾಯ್ಡ್ ಪಿ ಬೀಟಾ ಇಂದಿನಿಂದ ಪಿಕ್ಸೆಲ್ ಸಾಧನಗಳಿಗೆ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ನೋಕಿಯಾ, ಶಿಯೋಮಿ, ಒನ್ಪ್ಲಸ್ ಮತ್ತು ಸೋನಿ ಸಾಧನಗಳೂ ಬೀಟಾ ಆವೃತ್ತಿಯನ್ನು ಪಡೆಯಲಿದೆ.


AI ಗೆ ಆದ್ಯತೆ

ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ AI ಕಾರ್ಯರೂಪಕ್ಕೆ ಬರಲಿದೆ. ಗೂಗಲ್ ಮಶೀನ್ ಲರ್ನಿಂಗ್ ಹೊಂದಿರುವ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳೊಡನೆ ಕೈಜೋಡಿಸಲಿದೆ. ಅಲ್ಲದೆ ಇಂದಿನಿಂದಲೇ ಜಿಬೋರ್ಡ್ ಮತ್ತು ಮೋರ್ಸ್ ಕೋಡ್ನ ಬೀಟಾ ಆವೃತ್ತಿ ಲಭ್ಯವಾಗಲಿದೆ.

ಜಿಮೇಲ್ ಗೆ ಮಶೀನ್ ಲರ್ನಿಂಗ್ ಬಳಸುವ ಸ್ಮಾರ್ಟ್ ಕಂಪೋಸ್ ಫೀಚರ್ ದೊರೆಯಲಿದ್ದು,ಈಮೇಲ್ ಕಳುಹಿಸುವುದು ಮತ್ತಷ್ಟು ಸಲುಭವಾಗಲಿದೆ. ಈ ಫೀಚರ್ ಈ ತಿಂಗಳೊಳಗೆ ಬಿಡುಗಡೆಯಾಗಲಿದೆ.

ಗೂಗಲ್ ಫೋಟೋಸ್ ಗೆ ಇನ್ನೆರಡು ತಿಂಗಳಲ್ಲಿ AI ಆಧಾರಿತ ಸಜೆಸ್ಟೆಡ್ ಆಕ್ಷನ್ಸ್ ಫೀಚರ್ ಬರಲಿದ್ದು, ಬಳಕೆದಾರರು ಫೋಟೋದಲ್ಲಿರುವ ವ್ಯಕ್ತಿಯೊಡನೆ ಫೋಟೋ ಹಂಚಿಕೊಳ್ಳುವುದು, ಸ್ಕ್ಯಾನ್ ಮಾಡಿದ ಡಾಕ್ಯುಮೆಂಟ್ ಅನ್ನು PDF ಗೆ ಬದಲಾಯಿಸುವುದು, ಮೋನೋಕ್ರೋಮ್ ಫೋಟೋಗಳಿಗೆ ಬಣ್ಣ ತುಂಬುವುದು ಇತ್ಯಾದಿಗಳನ್ನು ಮಾಡಬಹುದು.

ಗೂಗಲ್ ಎಸಿಸ್ಟೆಂಟ್

ಗೂಗಲ್ ಎಸಿಸ್ಟೆಂಟ್ ಗೆ 6 ಹೊಸ ಧ್ವನಿಗಳು ಲಭಿಸಲಿದೆ. ವೇವ್ನೆಟ್ ತಂತ್ರಜ್ಞಾನದ ಮೂಲಕ ಗೂಗಲ್ ಅಸಿಸ್ಟೆಂಟ್ ನೈಜವಾಗಿ ಹೆಚ್ಚು ಸಂವಾದಾತ್ಮಕವಾಗಲಿದೆ. ಅಲ್ಲದೆ ಬರುವ ವಾರಗಳಲ್ಲಿ ಇದು ಕಂಟಿನ್ಯೂಡ್ ಕಾನ್ವರ್ಸೇಶನ್ ಫೀಚರ್ ಪಡೆಯಲಿದ್ದು ಗೂಗಲ್ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸಲು ಪ್ರತಿ ಬಾರಿ ಹೇ ಗೂಗಲ್ ಎಂದು ಹೇಳಬೇಕಾಗಿಲ್ಲ.

ಮಲ್ಟಿಪಲ್ ಆಕ್ಷನ್ ಫೀಚರ್ ಮೂಲಕ ಕಮಾಂಡ್ ನಲ್ಲಿ ಏಕಕಾಲಕ್ಕೆ ಹಲವು ಪ್ರಶ್ನೆಗಳನ್ನು ಕೇಳಬಹುದು. ಪರಿವಾರಗಳಿಗೆಂದೇ ಪ್ರೆಟ್ಟಿ ಪ್ಲೀಸ್ ಎಂಬ ಫೀಚರ್ ಬರಲಿದೆ. ಗೂಗಲ್ ನ ಸ್ಮಾರ್ಟ್ ಡಿಸ್ಪ್ಲೇ ಜುಲೈ ನಲ್ಲಿ ಬರಲಿದ್ದು, ಅಸಿಸ್ಟೆಂಟ್ ಗೆ ಇದು ವಿಶುವಲ್ ಅಸಿಸ್ಟೆನ್ಸ್ ನೀಡಲಿದೆ. ಈ ವರ್ಷಾಂತ್ಯದೊಳಗೆ ಗೂಗಲ್ ಅಸಿಸ್ಟೆಂಟ್ ಗೂಗಲ್ ಮ್ಯಾಪ್ಸ್ ಗೂ ಬರಲಿದೆ.

ಗೂಗಲ್ ಅಸಿಸ್ಟೆಂಟ್ ಗೂಗಲ್ ಡ್ಯುಪ್ಲೆಕ್ಸ್ ಫೀಚರ್ ಪಡೆಯಲಿದ್ದು ಇದು ನಮ್ಮ ನೈಜ ಬಾಷೆ ಮತ್ತು ಸಂವಾದದ ಸೂಕ್ಷ್ಮಗಳನ್ನು ಅರ್ಥೈಸಿಕೊಳ್ಳಲಿದೆ. ನಿಜವಾದ ವಾಯ್ಸ್ ಕರೆಗಳನ್ನು ಇದು ನಿರ್ವಹಿಸಬಲ್ಲದು. ಅಲ್ಲದೆ ಯುಎಸ್ ಮಾರುಕಟ್ಟೆಗೆ ಸೀಮಿತವಾದ ಫುಡ್ ಡೆಲಿವರಿ ಆಯ್ಕೆ ಕೂಡ ಇದರಲ್ಲಿ ಲಭಿಸಲಿದೆ.

ಡಿಜಿಟಲ್ ವೆಲ್-ಬೀಯಿಂಗ್

ಫ್ಯಾಮಿಲಿ ಲಿಂಕ್ ಫೀಚರ್ ಮಕ್ಕಳಿಗೆ ಆದ್ಯತೆ ನೀಡಲಿದ್ದು ಇಂಟರ್ನೆಟ್ ಜಗತ್ತಿನಲ್ಲಿ ಅವರ ಸುರಕ್ಷತೆಗೆ ಒತ್ತು ನೀಡಲಿದೆ. ಇದು ಇಂದೇ ಲಾಂಚ್ ಆಗಲಿದ್ದು, ಯೂಟ್ಯೂಬ್ ನಲ್ಲಿ ದೀರ್ಘ ಕಾಲ ವೀಡಿಯೋ ನೋಡುತ್ತಿದ್ದರೆ ಇದು ಎಚ್ಚರಿಕೆ ನೀಡುತ್ತದೆ. ಟೈಮ್ ವಾಚ್ಡ್ ಎಂಬ ಫೀಚರ್ ಮೂಲಕ ಬಳಕೆದಾರರು ಮೊಬೈಲ್ ಮತ್ತು ಡೆಸ್ಕ್ಟಾಪ್ಗಳಲ್ಲಿ ವೀಡಿಯೋ ನೋಡಲು ಎಷ್ಟು ಸಮಯ ವ್ಯಯಿಸಿದ್ದಾರೆ ಎಂಬುದನ್ನು ತಿಳಿಸುತ್ತದೆ.

ಗೂಗಲ್ ನ್ಯೂಸ್

AI ಸಾಮರ್ಥ್ಯದೊಂದಿಗೆ ಗೂಗಲ್ ನ್ಯೂಸ್ ಉತ್ತಮ ಅನುಭವ ನೀಡಲಿದೆ. ಹಿರಿದಾದ ಚಿತ್ರ ಮತ್ತು ವೀಡಿಯೋಗಳು, ಯೂಟ್ಯೂಬ್ ಮೊದಲಾದ ಮೂಲಗಳಿಂದ ವೀಡಿಯೋಗಳನ್ನು ಹೊಂದುವ ಮೂಲಕ ಬಳಕೆದಾರರ ಗಮನ ಸೆಳೆಯಲಿದೆ. ಈ ಆಪ್ ಮೇಟಿರಿಯಲ್ ಡಿಸೈನ್ ಆಧಾರಿಸಿದೆ. ಇದರ ನ್ಯೂಸ್ಕಾಸ್ಟ್ಸ್ ಫೀಚರ್ ಮೂಲಕ ಸುದ್ದಿಯ ಪ್ರಿವ್ಯೂ ಪಡೆಯಬಹುದು ಮತ್ತು ನಿರ್ದಿಷ್ಟ ವರದಿಯನ್ನು ತೆರೆಯದೆಯೇ ಅದರ ಸಾರಾಂಶವನ್ನು ತಿಳಿಯಬಹುದು.

ಫುಲ್ ಕವರೇಜ್ ಎಂಬ ಫೀಚರ್ ಮೂಲಕ ಒಂದು ಸುದ್ದಿಗೆ ಸಂಬಂಧಿಸಿದಂತೆ ಹಲವು ಮೂಲಗಳಿಂದ ಸುದ್ದಿ ಸಂಗ್ರಹಿಸುತ್ತದೆ ಮತ್ತು ಆ ವಾರ್ತೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ನ್ಯೂಸ್ ಸ್ಟ್ಯಾಂಡ್ ಮೂಲಕ ಹಲವು ಸುದ್ದಿ ಮೂಲಗಳನ್ನು ಫಾಲೋ ಮಾಡಬಹುದು ಮತ್ತು ನಮ್ಮ ಆಯ್ಕೆಯ ಪ್ರಕಾಶಕರನ್ನು ಸಬ್ಸ್ಕ್ರೈಬ್ ಮಾಡಬಹುದು. ಸಬ್ಸ್ಕ್ರೈಬ್ ವಿದ್ ಗೂಗಲ್ ಮೂಲಕ ಎಲ್ಲಾ ಗೂಗಲ್ ಆಪ್ ಮತ್ತು ಸಾಧನಗಳಲ್ಲಿ ಪೇಯ್ಡ್ ಕಂಟೆಂಟ್ ಅನ್ನು ಪಡೆಯಬಹುದು. ವಿಶೇಷವೆಂದರೆ ಈ ಹೊಸ ಗೂಗಲ್ ನ್ಯೂಸ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ 127 ದೇಶಗಳಲ್ಲಿ ಇಂದಿನಿಂದಲೇ ಲಭ್ಯವಾಗಲಿದೆ.

ಗೂಗಲ್ ಮ್ಯಾಪ್ಸ್

ಗೂಗಲ್ ಮ್ಯಾಪ್ಸ್ ಗೆ AI ಬುನಾದಿಯಾಗಲಿದೆ."ಫಾರ್ ಯು" ಎಂಬ ಹೊಸ ಟ್ಯಾಬ್ ಒಂದು ಮ್ಯಾಪ್ ಗೆ ಸೇರ್ಪಡೆಯಾಗಲಿದ್ದು ನಿಮ್ಮ ಸಮೀಪದ ರೆಸ್ಟೋರೆಂಟ್ ಮತ್ತು ಕೆಫೇ ಗಳನ್ನು ಇದು ಶಿಫಾರಸು ಮಾಡುತ್ತದೆ. ರಿಯಲ್-ಟೈಮ್ ನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೊಸ ಗ್ರೂಪ್-ಪ್ಲ್ಯಾನಿಂಗ್ ಫೀಚರ್ ನೀಡಲಾಗಿದೆ. ನಿಮ್ಮ ಆಸಕ್ತಿಗಳು ಮತ್ತು ಈ ಹಿಂದೆ ನೀವು ನೀಡಿರುವ ರೇಟಿಂಗ್ ಗಳ ಆಧಾರದ ಮೇಲೆ ನಿಮಗೆ ಇಷ್ಟವಾಗುವಂಥ ಸ್ಥಳಗಳನ್ನು ಸೂಚಿಸಲು "ಯು ಮ್ಯಾಚ್" ಎಂಬ ಫೀಚರ್ ಬರಲಿದೆ.


ಕ್ಯಾಮೆರಾದೊಂದಿಗೆ ನ್ಯಾವಿಗೇಶನ್

ನಿಮ್ಮ ಸಾಧನದ ಕ್ಯಾಮೆರಾದೊಂದಿಗೆ ನ್ಯಾವಿಗೇಶನ್ ಮಾಡಲು VPS(ವಿಶುವಲ್ ಪೊಸಿಶನಿಂಗ್ ಸಿಸ್ಟಮ್) ಸಹಕಾರಿಯಾಗಲಿದೆ. ನೀವೆಲ್ಲಿದ್ದೀರಿ ಮತ್ತು ಎಲ್ಲಿಗೆ ಹೋಗಬೇಕೆಂಬುದನ್ನು ತೋರಿಸಲು ಇದು ಕ್ಯಾಮೆರಾದ ಬಳಕೆ ಮಾಡುತ್ತದೆ.ಈ ಫೀಚರ್ ಬಳಸಿದರೆ ನಡೆಯುವಾಗ ನ್ಯಾವಿಗೇಶನ್ ಬಳಕೆ ಮಾಡುತ್ತಿದ್ದರೆ ನೀವು ಮ್ಯಾಪ್ಸ್ ಮೇಲಿನ ನೀಲಿ ಚುಕ್ಕೆಯ ಮೇಲೆ ಅವಲಂಬಿಸಬೇಕಾಗುವುದಿಲ್ಲ.

ಗೂಗಲ್ ಲೆನ್ಸ್

ಬರುವ ವಾರದಿಂದ ಗೂಗಲ್ ಲೆನ್ಸ್ ಕ್ಯಾಮೆರಾ ಆಪ್ ನೊಂದಿಗೆ ಇಂಟಗ್ರೇಟ್ ಆಗಲಿದೆ. ಇದು LG G7, ಪಿಕ್ಸೆಲ್ ಸಾಧನಗಳು ಮತ್ತು ಇತರ ಕೆಲವು ಸಾಧನಗಳ ಕ್ಯಾಮೆರಾಗಳಲ್ಲಿ ಲಭ್ಯವಾಗಲಿದೆ. ಇದೀಗ ಶಬ್ದಗಳನ್ನು ಗುರುತಿಸಬಲ್ಲದು ಮತ್ತು ಅರ್ಥೈಸಿಕೊಳ್ಳಬಲ್ಲದು. ಇದರ ಸ್ಮಾರ್ಟ್ ಟೆಕ್ಸ್ಟ್ ಸೆಲೆಕ್ಶನ್ ಫೀಚರ್ ಮೂಲಕ ಪಠ್ಯ ಪುಸ್ತಕದಿಂದ ನಿಮ್ಮ ಫೋನ್ ಗೆ ಟೆಕ್ಸ್ಟ್ ಅನ್ನು ಕಾಪಿ ಮಾಡಬಹುದು. ಟೆಕ್ಸ್ಟ್ ಒಂದಕ್ಕೆ ಸಂಬಂಧಿಸಿದಂತೆ ಉತ್ತರ ಪಡೆಯಬಲ್ಲಿರಿ. ಉದಾಹರಣೆಗೆ, ಮೆನುವೊಂದರ ಮೇಲೆ ಕ್ಯಾಮೆರಾ ಫೋಕಸ್ ಮಾಡಿದರೆ ಆ ನಿರ್ದಿಷ್ಟ ಖಾದ್ಯದ ಕುರಿತು ಮಾಹಿತಿ ನೀಡಬಲ್ಲದು.

Best Mobiles in India

English summary
Google I/O 2018 developer conference debuted just a few hours back. The three-day conference has many interesting announcements lined up from the company. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X