ಕ್ಷಣಾರ್ಧದಲ್ಲಿ ಭಾರತದೆಲ್ಲೆಡೇ ವೈರಲ್ ಆದ ಗೂಗಲ್ ಹೊಸ ಸೇವೆ!! ಯಾವುದು ಗೊತ್ತಾ?

ವಾಟ್ಸ್‌ಆಪ್ ಡಿಜಿಟಲ್‌ ಪೇಮೆಂಟ್ ಸೇವೆಯನ್ನು ಅಳವಡಿಸಿಕೊಳ್ಳಲಿದೆ ಎನ್ನುವ ವೇಳೆಗೆ ಗೂಗಲ್ ಮತ್ತೊಂದು ಶಾಕಿಂಗ್ ಸುದ್ದಿ ನೀಡಿದೆ.!!

|

ಪೇಟಿಎಂಗೆ ಸೆಡ್ಡುಹೊಡೆಯಲು ವಾಟ್ಸ್‌ಆಪ್ ಡಿಜಿಟಲ್‌ ಪೇಮೆಂಟ್ ಸೇವೆಯನ್ನು ಅಳವಡಿಸಿಕೊಳ್ಳಲಿದೆ ಎನ್ನುವ ವೇಳೆಗೆ ಗೂಗಲ್ ಮತ್ತೊಂದು ಶಾಕಿಂಗ್ ಸುದ್ದಿ ನೀಡಿದೆ.!! ಹೌದು, ಗೂಗಲ್‌ ಡಿಜಿಟಲ್‌ ಪಾವತಿ ಸೇವೆಗೆ ತನ್ನದೇ ಆಪ್‌ ಬಿಡುಗಡೆ ಮಾಡುತ್ತಿದ್ದು, ಈ ಸುದ್ದಿ ಕ್ಷಣಾರ್ಧದಲ್ಲಿ ಭಾರತದೆಲ್ಲೆಡೇ ವೈರಲ್ ಆಗಿದೆ.!!

ಭಾರತದಲ್ಲಿ ಡಿಜಿಟಲ್‌ ಪೇಮೆಂಟ್ ವ್ಯವಸ್ಥೆ ಅಭಿವೃದ್ದಿ ದೃಷ್ಟಿಯಿಂದ ಹೊಸ ಪೇಮೆಂಟ್ ಆಪ್ ಬಿಡುಗಡೆ ಮಾಡುವುದಾಗಿ ಗೂಗಲ್ ಹೇಳಿದೆ.! ಹಾಗಾದರೆ, ಗೂಗಲ್ ಬಿಡುಗಡೆ ಮಾಡುತ್ತಿರುವ ಆಪ್ ಯಾವುದು ? ಆಪ್‌ ಬಿಡುಗಡೆ ಯಾವಾಗ? ಗೂಗಲ್ ಪೇಮೆಂಟ್ ಆಪ್ ಹೊರತಂದಿದ್ದೇಕೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಇದು ಗೂಗಲ್ 'ತೇಜ್' ಆಪ್

ಇದು ಗೂಗಲ್ 'ತೇಜ್' ಆಪ್

ಭಾರತದಲ್ಲಿ ಡಿಜಿಟಲ್‌ ಪೇಮೆಂಟ್ ವ್ಯವಸ್ಥೆ ಅಭಿವೃದ್ದಿ ದೃಷ್ಟಿಯಿಂದ 'ತೇಜ್' ಎಂಬ ಹೆಸರಿನ ಪೇಮೆಂಟ್ ಆಪ್ ಅನ್ನು ಗೂಗಲ್‌ ಬಿಡುಗಡೆ ಮಾಡುತ್ತಿದೆ.!! ತೇಜ್ ಎಂದರೆ ಹಿಂದಿ ಭಾಷೆಯಲ್ಲಿ 'ವೇಗ' ಎಂದರ್ಥ ಬರಲಿದ್ದು, ಇದೇ ಹೆಸರನ್ನು ಗೂಗಲ್ ತನ್ನ ಪೇಮೆಂಟ್ ಆಪ್‌ಗೆ ನೀಡಿದೆ.!!

'ತೇಜ್' ಆಪ್ ಬಿಡುಗಡೆ ಯಾವಾಗ?

'ತೇಜ್' ಆಪ್ ಬಿಡುಗಡೆ ಯಾವಾಗ?

ಸೆಪ್ಟೆಂಬರ್ 18 ರಂದು ದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೂಗಲ್ ತನ್ನ ಪೇಮೆಂಟ್ ಆಪ್ ಬಿಡುಗಡೆ ಮಾಡುತ್ತಿದೆ. ನಿಧಾನಕ್ಕಿಂತಲೂ ವೇಗ(ತೇಜ್) ಉತ್ತಮವಾದುದು. ಅದನ್ನು ಸೋಮವಾರ ಅದನ್ನು ನೀವೇ ನೋಡುವಿರಿ. ಎಂದು ಗೂಗಲ್‌ ಇಂಡಿಯಾ ಹೇಳಿದೆ.!!

ಹೆಚ್ಚಿನ ಆಯ್ಕೆ ಹೊಂದಿದೆ ತೇಜ್!!

ಹೆಚ್ಚಿನ ಆಯ್ಕೆ ಹೊಂದಿದೆ ತೇಜ್!!

ಭಾರತದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಪೇಮೆಂಟ್ ಆಪ್‌ಗಳ ಸೇವೆ ನಿಧಾನಗತಿಯಲ್ಲಿದ್ದು, ತನ್ನ ಹೊಸ ಆಪ್‌ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಲಿದೆ ಎಂಬರ್ಥದಲ್ಲಿ ಗೂಗಲ್ ಇಂಡಿಯಾ ತಿಳಿಸಿದೆ.!! ಈಗ ಚಾಲ್ತಿಯಲ್ಲಿರುವ ಗೂಗಲ್‌ ವ್ಯಾಲೆಟ್ ಅಥವಾ ಆಂಡ್ರಾಯ್ಡ್‌ ಪೇಗಿಂತಲೂ 'ತೇಜ್' ಹೆಚ್ಚಿನ ಆಯ್ಕೆಗಳನ್ನು ಹೊಂದಿದೆ ಎನ್ನಲಾಗಿದೆ.!!

500 ಶತಕೋಟಿ ಡಾಲರ್‌ ಅಂದಾಜು!!

500 ಶತಕೋಟಿ ಡಾಲರ್‌ ಅಂದಾಜು!!

ಭಾರತದಲ್ಲಿ ಡಿಜಿಟಲ್‌ ಪೇಮೆಂಟ್ ಮಾರುಕಟ್ಟೆಯು 2020ರ ಹೊತ್ತಿಗೆ 500 ಶತಕೋಟಿ ಡಾಲರ್‌ ಮುಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.!! ಹಾಗಾಗಿಯೇ, ಗೂಗಲ್ , ಫೇಸ್‌ಬುಕ್‌ ಮತ್ತು ಇತರ ಕಂಪೆನಿಗಳು ಆಪ್ ಪೇಮೆಂಟ್ ಅನ್ನು ಜಾರಿಗೆ ತರಲು ಮುಂದಾಗುತ್ತಿವೆ.!!

Best Mobiles in India

English summary
Local media report the mobile payment app could be in place next week.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X