ಚೇಂಜ್ ಆಗಿದೆ ಜಿಮೇಲ್: ಇನ್ನು ಮೇಲ್ ಮಾಡುವ ವಿಧಾನವೂ ಬದಲಾಗಿದೆ..!

|

ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿರುವ ಗೂಗಲ್‌ ಒಡೆತನದ ಮೇಲ್ ಸೇವೆ 'ಜಿಮೇಲ್', ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ಹೊಸ ಅನುಭವವನ್ನು ನೀಡುವುದರೊಂದಿಗೆ ಮತ್ತಷ್ಟು ಸುರಕ್ಷಿತ ರೂಪದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಹೊಸ ವಿನ್ಯಾಸವು ನೋಡಲು ಸುಂದರವಾಗಿಯೂ ಇದೇ ಎನ್ನಲಾಗಿದೆ.

ಚೇಂಜ್ ಆಗಿದೆ ಜಿಮೇಲ್: ಇನ್ನು ಮೇಲ್ ಮಾಡುವ ವಿಧಾನವೂ ಬದಲಾಗಿದೆ..!

ಜಿಮೇಲ್‌ನ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆ ಆಗಿದ್ದು, ಕಳೆದ ಕೆಲವು ಹಿಂದಷ್ಟೇ ಗೂಗಲ್‌ ಜಿಮೇಲ್‌ ವಿನ್ಯಾಸವನ್ನು ಬದಲಾಯಿಸುವುದಾಗಿ ತಿಳಿಸಿತ್ತು. ಸದ್ಯ ಅಧಿಕೃತವಾಗಿ ಹೊಸ ಬದಲಾವಣೆಗಳೊಂದಿಗೆ ಬಳಕೆದಾರರ ಮಂದೆ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಹೊಸ ಜಿಮೇಲ್ ಕುರಿತ ಮಾಹಿತಿಯೂ ಇಲ್ಲಿದೆ.

ಹ್ಯಾಕ್ ಆಗುವುದಿಲ್ಲ:

ಹ್ಯಾಕ್ ಆಗುವುದಿಲ್ಲ:

ಹೊಸದಾಗಿ ಕಾಣಿಸಿಕೊಂಡಿರುವ ಜಿಮೇಲ್‌ನಲ್ಲಿ ಭದ್ರತೆಯನ್ನು ಗೂಗಲ್‌ ಹೆಚ್ಚಿಸಿದೆ ಎನ್ನಲಾಗಿದೆ. ಮೇಲ್‌ ವ್ಯವಸ್ಥೆಯಲ್ಲಿಯೂ ಬದಲಾವಣೆ ಮಾಡಲಾಗಿದೆ ಎಂದು ಕಂಪನಿಯೂ ತಿಳಿಸಿದೆ. ಸುಲಭವಾಗಿ ಹ್ಯಾಕ್ ಆಗುವುದಿಲ್ಲ ಎನ್ನಲಾಗಿದೆ.

ಬಳಕೆದಾರರ ಸ್ನೇಹಿ:

ಬಳಕೆದಾರರ ಸ್ನೇಹಿ:

ಈಗಾಗಲೇ ಜಿಮೇಲ್ ಬಳಕೆದಾರರಿಗೆ ಬಹಳ ಸುಲಭವಾಗಿದ್ದು, ಈ ಹಿನ್ನಲೆಯಲ್ಲಿ ಒಟ್ಟಾರೆ ವಿನ್ಯಾಸ ದಲ್ಲಿ ಹೆಚ್ಚಾಗಿ ಬದಲಾವಣೆಯನ್ನು ಮಾಡಲಾಗಿಲ್ಲ, ಆದರೆ ಇನ್‌ಬಾಕ್ಸ್‌ನಲ್ಲಿ ಹೆಚ್ಚಿನ ಅವಕಾಶವನ್ನು ಮಾಡಿಕೊಡಲಾಗಿದೆ. ಇನ್‌ಬಾಕ್ಸ್‌ ಅನ್ನು ಬೇಕಾದ ಮಾದರಿಯಲ್ಲಿ ಬಳಕೆದಾರರು ಬದಲಾಯಿಸಿಕೊಳ್ಳಬಹುದಾಗಿದೆ.

ಇನ್‌ಬಾಕ್ಸ್‌ನಲ್ಲಿ ಸರ್ಚ್ ಇಂಜಿನ್:

ಇನ್‌ಬಾಕ್ಸ್‌ನಲ್ಲಿ ಸರ್ಚ್ ಇಂಜಿನ್:

ಈಗಾಗಲೇ ತನ್ನ ಹಲವು ಆಪ್‌ಗಳಲ್ಲಿ ಸೇವೆಗಳಲ್ಲಿ ಸರ್ಚ್ ಇಂಜಿನ್‌ ಅನ್ನು ಅಳವಡಿಸುವ ಮಾದರಿಯಲ್ಲಿ ಜಿಮೇಲ್ ಇನ್‌ಬಾಕ್ಸ್‌ನಲ್ಲಿ ಸರ್ಚ್ ಇಂಜಿನ್ ಸೇವೆಯನ್ನು ನೀಡಲು ಗೂಗಲ್ ಮುಂದಾಗಿದೆ. ಜಿಮೇಲ್ ನಲ್ಲಿ ಬಳಕೆದಾರರು ಗೂಗಲ್ ಸರ್ಚ್ ಮಾಡಬಹುದಾಗಿದೆ.

ಹೊಸ ಆಯ್ಕೆ:

ಹೊಸ ಆಯ್ಕೆ:

ಇದಲ್ಲದೇ ಮೇಲ್ ಕಳುಹಿಸುವ ಸಂದರ್ಭದಲ್ಲಿ ಮೇಲ್‌ ಅನ್ನು ಫಾರ್ವರ್ಡ್‌, ಕಾಪಿ ಅಂಡ್ ಪೇಸ್ಟ್‌, ಡೌನ್‌ಲೋಡ್‌ ಅಥವಾ ಪ್ರಿಂಟ್‌ ಕೂಡ ತೆಗೆಯಲು ಆಗದಂತೆ ಮಾಡಲು ಸುಲಭವಾದ ಆಯ್ಕೆಯೊಂದನನ್ನು ನೀಡಲಾಗಿದೆ.

How to Send a WhatsApp Message Without Saving the Contact in Your Phone - GIZBOT KANNADA
ಸದ್ಯ ಎಲ್ರಿಗೂ ಲಭ್ಯವಿಲ್ಲ:

ಸದ್ಯ ಎಲ್ರಿಗೂ ಲಭ್ಯವಿಲ್ಲ:

ಹೊಸದಾಗಿ ಬದಲಾಗಿರುವ ಜಿಮೇಲ್ ಎಲ್ಲಾ ಬಳಕೆದಾರರಿಗೂ ಲಭ್ಯವಿಲ್ಲ ಎನ್ನಲಾಗಿದೆ. ಕೆಲವರಿಗೆ ಮಾತ್ರ ಲಭ್ಯವಿದ್ದು, ಬಳಕೆದಾರರಿಗೆ ಹೊಸ ಅಪ್‌ಡೇಟ್‌ ಸಂದೇಶದ ದೊರೆಯಲಿದ್ದು, ಇದಾದ ನಂತರದಲ್ಲಿ ಹೊಸ ವಿನ್ಯಾಸಕ್ಕೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Google just revealed a huge update to Gmail - here's everything new. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X