ಆಂಡ್ರಾಯ್ಡ್‌ ಫೋನ್‌ ಅನ್‌ಲಾಕ್‌ ಮಾಡಿ ಹಣಗಳಿಸುವುದು ಹೇಗೆ?

Written By:

ಹೆಚ್ಚು ಹಣ ಖರ್ಚು ಮಾಡುವುದು ಸುಲಭ. ಆದ್ರೆ ಸ್ವಲ್ಪ ಮಟ್ಟದ ಹಣ ಗಳಿಸುವುದು ಸಹ ಕಷ್ಟ. ಬಹುಸಂಖ್ಯಾತರಿಗೆ ಈ ಬಗ್ಗೆ ಅನುಭವವಿದೆ. ಈ ಮಾಹಿತಿ ಹೇಳಲು ಕಾರಣ ಅಂದ್ರೆ ಇಂದು ಟೆಕ್ನಾಲಜಿ ಮೂಲಕ ಸುಲಭವಾಗಿ ಹಣಗಳಿಸುವವರ ಸಂಖ್ಯೆ ಹೆಚ್ಚಾಗಿದೆ. ಉದಾಹರಣೆಗೆ ಬ್ಯಾಂಕ್‌ ಖಾತೆ ಹ್ಯಾಕ್ ಮಾಡಿ ಹಣ ದೋಚಿದ ವರದಿಗಳಿರಬಹುದು.

ಅಂದಹಾಗೆ ನಾವು ಇಂದಿನ ಲೇಖನದಲ್ಲಿ ಸುಲಭವಾಗಿ ಹಣ ಗಳಿಸುವ ಒಂದು ವಿಧಾನವನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಅದು ಕೇವಲ ನಿಮ್ಮ ಆಂಡ್ರಾಯ್ಡ್‌ ಮೊಬೈಲ್‌ ಉಪಯೋಗಿಸಿ ಹಣ ಗಳಿಸುವ ವಿಧಾನ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅಸಂಖ್ಯಾತ ಮೊಬೈಲ್‌ ಆಪ್‌ಗಳಿವೆ. ಅವುಗಳು ನಿಮಗೆ ಹಣ ಗಳಿಸಲು ಸಹಾಯ ಮಾಡಬಲ್ಲವು. ಕೆಲವು ನಿಮಗೆ ಹಣ ಗಳಿಸಲು ಸಹಾಯ ಮಾಡಬಲ್ಲವು ಇನ್ನೂ ಕೆಲವು ಆಪ್‌ಗಳು ಯಾವುದೇ ಪರಿಣಾಮ ನೀಡದೆ ಇರಬಹುದು.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಲಾಕ್‌ ಆಗಿದ್ದರೆ ಅದನ್ನು ಅನ್‌ಲಾಕ್‌ ಮಾಡುವ( ಲಾಕ್‌ ಓಪನ್‌) ಮುಖಾಂತರ ಹಣ ಗಳಿಸಬಹುದಾಗಿದೆ. ಅದು ಹೇಗೆ ಎಂದು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಡಿಲೀಟ್‌ ಮಾಡಿದ್ದಾರೆ ತಿಳಿಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಲೈಡ್‌ಜಾಯ್‌ (SlideJoy)

ಸ್ಲೈಡ್‌ಜಾಯ್‌ (SlideJoy)

ಸ್ಲೈಡ್‌ಜಾಯ್‌ ಎಂಬ ಜಾಹಿರಾತು ಕಂಪನಿ ಆಂಡ್ರಾಯ್ಡ್‌ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಟ್ರೆಂಡಿಂಗ್‌ ನ್ಯೂಸ್ ಚೆಕ್‌ ಮಾಡಿದರೆ ಹಣ ನೀಡುತ್ತದೆ. ಹೌದು ಲಾಕ್ ಆಗಿರುವ ಸ್ಕ್ರೀನ್‌ ಅನ್ನು ಅನ್‌ಲಾಕ್‌ ಮಾಡಿ ಟ್ರೆಂಡಿಂಗ್‌ ನ್ಯೂಸ್‌ ಚೆಕ್‌ ಮಾಡಿದರೆ ನಿಮಗೆ ಕ್ಯಾಶ್‌ ನೀಡುತ್ತದೆ. ಅಥವಾ ಗಿಫ್ಟ್‌ ಕಾರ್ಡ್‌ ಅನ್ನು ನೀಡುತ್ತದೆ. ಕ್ಯಾಶ್‌ ಅನ್ನು ಪೇಪಾಲ್‌ ಖಾತೆಗೆ ಅಥವಾ ಗಿಫ್ಟ್‌ ಕಾರ್ಡ್‌ ಅನ್ನು ನಿಮ್ಮ ನೆಚ್ಚಿನ ರೀಟೇಲರ್ ಅಥವಾ ಬ್ರ್ಯಾಂಡ್‌ಗೆ ನೀಡುತ್ತದೆ.

ಸ್ಲೈಡ್‌ಜಾಯ್‌(SlideJoy) ಬಳಕೆ ಹೇಗೆ?

ಸ್ಲೈಡ್‌ಜಾಯ್‌(SlideJoy) ಬಳಕೆ ಹೇಗೆ?

ಮೊದಲಿಗೆ ನೀವು ಸ್ಲೈಡ್‌ಜಾಯ್‌(SlideJoy) ಆಪ್‌ ಅನ್ನು ಆಂಡ್ರಾಯ್ಡ್‌ ಡಿವೈಸ್‌ಗೆ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು.
ಆಪ್‌ಗಾಗಿ ಕ್ಲಿಕ್ ಮಾಡಿ

ಸ್ಲೈಡ್‌ಜಾಯ್‌(SlideJoy)

ಸ್ಲೈಡ್‌ಜಾಯ್‌(SlideJoy)

ಇನ್‌ಸ್ಟಾಲ್‌ ಆದ ನಂತರ ಆಪ್‌ ಓಪನ್‌ ಮಾಡಿ. ಮೊದಲಿಗೆ ಆಪ್‌ ಮುಂದುವರೆಯಲು ಲಾಗಿನ್ ಕೇಳುತ್ತದೆ. ಲಾಗಿನ್‌ ಆಗಲು ನಿಮ್ಮ ಫೇಸ್‌ಬುಕ್‌ ಖಾತೆಯನ್ನು ಬಳಸಬಹುದು.

ಸ್ಲೈಡ್‌ಜಾಯ್‌(SlideJoy)

ಸ್ಲೈಡ್‌ಜಾಯ್‌(SlideJoy)

ಲಾಗಿನ್ ಆದ ನಂತರ ಸ್ಲೈಡ್‌ಜಾಯ್‌(SlideJoy) ಅನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಟ್ಯೂಟೋರಿಯಲ್ ಬರುತ್ತದೆ. ಅದನ್ನು ಓದಿದ ನಂತರ ರಿಜಿಸ್ಟರ್‌ ಆಗಿ ನೀವು ಯಾವಾಗಲು ನೀವು ಫೋನ್‌ ಅನ್‌ಲಾಕ್‌ ಮಾಡುತ್ತಿದ್ದರೆ ನ್ಯೂಸ್‌ ಕಾರ್ಡ್‌ ಅಥವಾ ಪ್ರೊಮೋಶನ್‌ ಅನ್ನು ಲಾಕ್‌ ಸ್ಕ್ರೀನ್‌ನಿಂದ ಪಡೆಯುತ್ತೀರಿ.

ಸ್ಲೈಡ್‌ಜಾಯ್‌(SlideJoy)

ಸ್ಲೈಡ್‌ಜಾಯ್‌(SlideJoy)

* ಹೆಚ್ಚಿನ ಸುದ್ದಿಗಳನ್ನು ನೋಡಲು ಲಾಕ್‌ ಸ್ಕ್ರೀನ್‌ನಲ್ಲಿ ಸ್ಲೈಡ್‌ ಅಪ್‌ ಮಾಡಿರಿ
* ಫೋನ್‌ ಅನ್‌ಲಾಕ್‌ ಮಾಡಲು ಬಲಕ್ಕೆ ಸ್ಲೈಡ್‌ ಮಾಡಿರಿ ಮತ್ತು ಹೋಮ್‌ ಸ್ಕ್ರೀನ್‌ಗೆ ಹೋಗಿರಿ
* ವಿಷಯಗಳ ಬಗ್ಗೆ ಹೆಚ್ಚು ಮಾಹಿತಿ ತಿಳಿಯಲು ಲಾಕ್‌ ಸ್ಕ್ರೀನ್ ಅನ್ನು ಎಡಕ್ಕೆ ಸ್ಲೈಡ್‌ ಮಾಡಿರಿ
* ಆಪ್‌ ಶಾರ್ಟ್‌ಕಟ್‌ಗಾಗಿ ಮತ್ತು ನೋಟಿಫಿಕೇಶನ್‌ ಪಡೆಯಲು ಸ್ಲೈಡ್ ಡೌನ್‌ ಮಾಡಿರಿ.

 ಸ್ಲೈಡ್‌ಜಾಯ್‌(SlideJoy)

ಸ್ಲೈಡ್‌ಜಾಯ್‌(SlideJoy)

20 ಕ್ಯಾರಟ್‌ಗಳ ಬೋನಸ್‌ ಪಡೆದ ನಂತರ ನೀವು ಆಪ್‌ನ ಹೋಮ್‌ ಸ್ಕ್ರೀನ್‌ಗೆ ಹೋಗುತ್ತೀರಿ. ಈ ರೀತಿಯಲ್ಲಿ ಸಾಧಾರಣವಾಗಿ ಫೋನ್‌ ಅನ್ನು ಬಳಸಬೇಕು. ಹೆಚ್ಚಿನ ಮಾಹಿತಿಗಾಗಿ SlideJoy ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
How To Make Money By Unlocking Your Android Phone. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot