Subscribe to Gizbot

ಶೀಘ್ರವೇ ಗೂಗಲ್ ಮ್ಯಾಪ್‌ನಲ್ಲಿ ಬರಲಿದೆ 'ಬ್ಯಾಟರಿ ಲೈಫ್' ಶೇರ್ ಫೀಚರ್!!

Written By:

ಗೂಗಲ್ ಮ್ಯಾಪ್ ಬಳದಾರರಿಗೆ ಗೂಗಲ್ ಮತ್ತೊಂದು ಅದ್ಬುತ ಫೀಚರ್ ಒಂದನ್ನು ನೀಡಲು ಮುಂದಾಗಿದೆ. ಸ್ಮಾರ್ಟ್‌ಫೋನ್ ಬ್ಯಾಟರಿ ಕಡಿಮೆಯಾಗಿ ನಿಮ್ಮ ಫೋನ್ ಕೊನೆಯುಸಿರೆಳೆಯುವ ವೇಳೆಗೆ ನಿಮ್ಮ ಬ್ಯಾಟರಿ ಸ್ಟೇಟಸ್ ಅನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಅವಕಾಶವನ್ನು ಗೂಗಲ್ ನೀಡಲು ಮುಂದಾಗಿದೆ.!!

ಶೀಘ್ರವೇ ಗೂಗಲ್ ಮ್ಯಾಪ್‌ನಲ್ಲಿ ಬರಲಿದೆ 'ಬ್ಯಾಟರಿ ಲೈಫ್' ಶೇರ್ ಫೀಚರ್!!

ಹೌದು, ಪ್ರಯಾಣಿಸುವಾಗ ಅಥವಾ ಎಲ್ಲಿಯಾದರೂ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಬ್ಯಾಟರಿ ಚಾರ್ಜ್ ಕಡಿಮೆಯಾಗಿದ್ದರೆ ಆ ಬಗ್ಗೆ ಸ್ನೇಹಿತರಿಗೆ ಲೈವ್ ಆಗಿ ತಿಳಿಯುವಂತೆ ಮಾಹಿತಿ ನೀಡಬಹುದಾದ ಅದ್ಬುತ ಆಯ್ಕೆ ತರುತ್ತಿದೆ.! ಹಾಗಾದರೆ, ಗೂಗಲ್ ಮ್ಯಾಪನ್‌ಲ್ಲಿನ ನೂತನ ಫೀಚರ್ ಹೇಗಿದೆ? ಬಳಕೆದಾರರಿಗೆ ಏನು ಲಾಭ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್ ಬಳಕೆದಾರ ನಿರಾಳ!!

ಸ್ಮಾರ್ಟ್‌ಫೋನ್ ಬಳಕೆದಾರ ನಿರಾಳ!!

ನಿಮ್ಮ ಫೋನ್ ಕೊನೆಯುಸಿರೆಳೆಯುವವ ವೇಳೆಗೆ ನಿಮ್ಮ ಬ್ಯಾಟರಿ ಸ್ಟೇಟಸ್ ಅನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಅವಕಾಶವನ್ನು ಗೂಗಲ್ ಮ್ಯಾಪಿನಲ್ಲಿ ತರುತ್ತಿರುವುದು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನಿರಾಳವಾಗಿದೆ. ಸಂಕಷ್ಟದ ಸಮಯದಲ್ಲಿ ಸ್ನೇಹಿತರಿಗೆ ಅಥವಾ ಸಂಭಂದಿಕರಿಗೆ ಮಾಹಿತಿ ಹಂಚಿಕೊಳ್ಳುವ ಆಯ್ಕೆ ಸಿಗಲಿದೆ.!!

‘ಲೈವ್ ಬ್ಯಾಟರಿ ಲೈಫ್ ಸ್ಟ್ಯಾಟಿಸ್ಟಿಕ್ಸ್’

‘ಲೈವ್ ಬ್ಯಾಟರಿ ಲೈಫ್ ಸ್ಟ್ಯಾಟಿಸ್ಟಿಕ್ಸ್’

ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಬ್ಯಾಟರಿ ಚಾರ್ಜ್ ಕಡಿಮೆಯಾಗಿದ್ದರೆ ಆ ಬಗ್ಗೆ ಸ್ನೇಹಿತರಿಗೆ ಲೈವ್ ಆಗಿ ತಿಳಿಯುವಂತೆ ಮ್ಯಾಪ್ ಶೇರ್ ಮಾಡಲು ‘ಲೈವ್ ಬ್ಯಾಟರಿ ಲೈಫ್ ಸ್ಟ್ಯಾಟಿಸ್ಟಿಕ್ಸ್' ಫೀಚರ್ ಅನ್ನು ತರಲಾಗುತ್ತಿದೆ ಎನ್ನಲಾಗಿದೆ. ಈ ಆಯ್ಕೆಯಿಮದ ಲೊಕೇಶನ್ ಜತೆಗೆ ಸ್ಮಾರ್ಟ್‌ಫೋನ್ ಬ್ಯಾಟರಿ ಲೈಫ್ ಅನ್ನು ಶೇರ್ ಮಾಡಬಹುದಾಗಿದೆ.!!

ಲೈವ್ ಟ್ರ್ಯಾಕ್ ಮಾಡಬಹುದು!!

ಲೈವ್ ಟ್ರ್ಯಾಕ್ ಮಾಡಬಹುದು!!

ಗೂಗಲ್ ಮ್ಯಾಪ್ 'ಲೈವ್ ಬ್ಯಾಟರಿ ಲೈಫ್ ಸ್ಟ್ಯಾಟಿಸ್ಟಿಕ್ಸ್' ಮೂಲಕ ನೀವು ಶೇರ್ ಮಾಡಿರುವ ಮಾರ್ಗವನ್ನು ನಿಮ್ಮ ಸ್ನೇಹಿತರು ಲೈವ್ ಆಗಿಯೇ ಟ್ರ್ಯಾಕ್ ಮಾಡಬಹುದಾಗಿದೆ. ಮತ್ತು ಒಂನಿಮ್ಮ ಸ್ಮಾರ್ಟ್‌ಫೋನ್ ಸ್ವಿಚ್ ಆಫ್ ಆದರೂ ಕೂಡ ನೀವಿರುವ ಲೊಕೇಶನ್ ಜತೆಗೆ ಇಂಟರ್‌ನೆಟ್ ಕನೆಕ್ಷನ್ ಕಟ್ ಆದ ಬಗ್ಗೆ ಮಾಹಿತಿಯನ್ನು ನೀಡಲಿದೆ.!!

‘ಬ್ಯಾಟರಿ ಲೆವೆಲ್ ಅನ್‌ನೋನ್’!!

‘ಬ್ಯಾಟರಿ ಲೆವೆಲ್ ಅನ್‌ನೋನ್’!!

ಒಂದು ವೇಳೆ ಸೆಟ್ ಪರ್ಮಿಶನ್ ಸಮಸ್ಯೆ ಅಥವಾ ಇನ್ಯಾವುದೋ ಕಾರಣಕ್ಕೆ ಬ್ಯಾಟರಿ ಲೆವೆಲ್ ತಿಳಿಸಲಾಗದಿದ್ದರೆ ಗೂಗಲ್ ಮ್ಯಾಪ್ ‘ಬ್ಯಾಟರಿ ಲೆವೆಲ್ ಅನ್‌ನೋನ್' ಎಂಬ ಸಂದೇಶವನ್ನು ಕಳುಹಿಸಲಿದೆ ಎಂದು ಹೇಳಲಾಗಿದೆ. ಆದರೆ, ಇದು ಮೊಬೈಲ್ ಸ್ವಿಚ್ ಆದ ನಂತರವೇ ಎಂಬುದು ಮಾತ್ರ ಖಚಿತವಾಗಿಲ್ಲ.!!

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
ಶೀಘ್ರವೇ ಸಿಗಲಿದೆ ಫೀಚರ್!!

ಶೀಘ್ರವೇ ಸಿಗಲಿದೆ ಫೀಚರ್!!

ನಿಮ್ಮ ಬ್ಯಾಟರಿ ಲೆವೆಲ್ಲನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ನಿರಾಳರಾಗುವ ಅವಕಾಶವನ್ನು ಗೂಗಲ್ ಮ್ಯಾಪ್ ಆಪ್ ಮುಂದಿನ ಅಪ್‌ಡೇಟ್‌ನಲ್ಲಿ ನೀಡಲು ಉದ್ದೇಶಿಸಿದೆ. ತನ್ನ ಇತ್ತೀಚಿನ ಬೀಟಾ ವರ್ಸನ್‌ನಲ್ಲಿ ಗೂಗಲ್ ಇದಕ್ಕೋಸ್ಕರ ಪ್ರತ್ಯೇಕ ಕೋಡ್ ಸೇರಿಸಿದೆ ಎಂದು ಹೇಳಲಾಗಿದೆ.!!

ಓದಿರಿ:ಒಮ್ಮೆ ಚಾರ್ಜ್‌ ಮಾಡಿದರೆ 25 ದಿನ ಚಾರ್ಜ್ ನೀಡಲಿದೆಯಂತೆ 'ನೋಕಿಯಾ 8110' 4G ಪೋನ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google Maps May Soon Let You Share Your Phone’s Battery Life Status Alongside Your Locationto know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot