ಗೂಗಲ್ ಮ್ಯಾಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?

By Gizbot Bureau
|

ಗೂಗಲ್ ಮ್ಯಾಪ್ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು ನಮಗೆ ಸಹಾಯ ಮಾಡುವ ಅತ್ಯಂತ ಸುಲಭದ ವಿಧಾನ.ಈ ಆಪ್ ನಲ್ಲಿ ಸಾಕಷ್ಟು ಇತರೆ ವೈಶಿಷ್ಟ್ಯತೆಗಳು ಕೂಡ ಇದ್ದು ಹತ್ತಿರದ ಪೆಟ್ರೋಲ್ ಪಂಪ್ ಗಳು, ಆಸ್ಪತ್ರೆಗಳು, ರೆಸ್ಟೋರೆಂಟ್ ಗಳು ಇತ್ಯಾದಿ ವಿವರಗಳನ್ನು ನಿರ್ಧಿಷ್ಟ ಪ್ರದೇಶದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಗೂಗಲ್ ಮ್ಯಾಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?

ಆದರೆ ಸರಿಯಾದ ಫಲಿತಾಂಶವನ್ನು ಪಡೆದುಕೊಳ್ಳುವುದಕ್ಕಾಗಿ ಆಪ್ ಗೆ ಸರಿಯಾದ ಸ್ಥಳದ ವಿವರ ಲಭ್ಯವಾಗುವುದು ಬಹಳ ಮುಖ್ಯವಾಗುತ್ತದೆ( ಅಂದರೆ ಮ್ಯಾಪ್ ನಲ್ಲಿ ಲಭ್ಯವಾಗುವ ನೀಲಿ ಚುಕ್ಕಿ).

ಹಲವಾರು ಸಂದರ್ಬಗಳಲ್ಲಿ ನಿಮ್ಮ ಸರಿಯಾದ ಸ್ಥಳವನ್ನು ಆಪ್ ಗುರುತಿಸುವುದರಲ್ಲಿ ಕಷ್ಟಪಡಬೇಕಾಗುತ್ತದೆ ಮತ್ತು ಅದೇ ಕಾರಣಕ್ಕೆ ಸರಿಯಾದ ಫಲಿತಾಂಶ ನಿಮಗೆ ಲಭ್ಯವಾಗದೇ ಇರುವ ಸಾಧ್ಯತೆಗಳಿರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು ಉದಾಹರಣೆಗೆ ವೀಕ್ ಆಗಿರುವ ಜಿಪಿಎಸ್ ಸಿಗ್ನಲ್ ಅಥಾ ಕಂಪಾಸ್ ಸರಿಯಾಗಿ ಹೊಂದಿಕೆಯಾಗದೇ ಇರುವುದು ಇತ್ಯಾದಿ.

ಒಂದು ವೇಳೆ ನೀವು ಇಂತಹದ್ದೇ ಸಮಸ್ಯೆಯನ್ನು ಗೂಗಲ್ ಮ್ಯಾಪ್ ನಲ್ಲಿ ಎದುರಿಸುತ್ತಿದ್ದಲ್ಲಿ ನಾವು ಸ್ಥಳದ ಅಕ್ಯುರೇಟ್ ಅಥವಾ ನಿಖರತೆಯನ್ನು ಮೂರು ವಿಧಾನದಲ್ಲಿ ಹೇಗೆ ಗೂಗಲ್ ಮ್ಯಾಪ್ ನಲ್ಲಿ ಬಗೆಹರಿಸಿಕೊಳ್ಳಬಹುದು ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಮುಂದೆ ಓದಿ.

ಆದರೆ ಮುಂದೆ ಸಾಗುವ ಮುನ್ನ ಗೂಗಲ್ ಮ್ಯಾಪ್ ಹೇಗೆ ಲೊಕೇಷನ್ ಅಥವಾ ಸ್ಥಳವನ್ನು ಟ್ರ್ಯಾಕ್ ಮಾಡುತ್ತದೆ ಎಂಬುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ .

- GPS: ಇದು ಸ್ಯಾಟಲೈಟ್ ಅಥವಾ ಉಪಗ್ರಹವನ್ನು ಬಳಸುತ್ತದೆ ಮತ್ತು 20 ಮೀಟರ್ ಸುತ್ತಲ ಪ್ರದೇಶವನ್ನು ಪಡೆಯಲು ಇದು ಅದನ್ನು ಬಳಸುತ್ತದೆ.

- ವೈ-ಫೈ: ಹತ್ತಿರದ ವೈಫೈ ಆಪ್ ಗೆ ಸ್ಥಳವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

- ಮೊಬೈಲ್ ನೆಟ್ ವರ್ಕ್ಸ್: ಇದು ಹೆಚ್ಚು ನಿಖರವಾಗಿರುವ ಸ್ಥಳದ ವಿವರವನ್ನು ನೀಡುತ್ತದೆ.

ಮೇಲಿನ ಯಾವುದೇ ಕೇಸ್ ನಲ್ಲಿ ಸಿಗ್ನಲ್ ವೀಕ್ ಇದ್ದಲ್ಲಿ ಗೂಗಲ್ ಮ್ಯಾಪ್ ಸರಿಯಾದ ಸ್ಥಳವನ್ನು ಗುರುತಿಸುವುದಕ್ಕೆ ಕಷ್ಟಪಡಬೇಕಾಗುತ್ತದೆ.ಇದೀಗ ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಏನು ಮಾಡಬಹುದು ಎಂಬುದನ್ನು ನೋಡೋಣ.

ವಿಧಾನ 1: ಜಿಪಿಎಸ್ ನ್ನು ಮ್ಯಾನುವಲ್ ಆಗಿ ನಿರ್ಣಯಿಸುವುದು

ವಿಧಾನ 1: ಜಿಪಿಎಸ್ ನ್ನು ಮ್ಯಾನುವಲ್ ಆಗಿ ನಿರ್ಣಯಿಸುವುದು

ಈ ವಿಧಾನವು ಯಾವಾಗ ನೀಲಿ ಚುಕ್ಕಿಯು ಅಗಲವಾಗಿರುವುದು ಅಥವಾ ತಪ್ಪಾದ ದಿಕ್ಕಿನಲ್ಲಿ ತೋರಿಸುತ್ತಿರುತ್ತದೆಯೋ ಆಗ ಸಹಾಯಕ್ಕೆ ಬರುತ್ತದೆ.

1.ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಗೂಗಲ್ ಮ್ಯಾಪ್ಸ್ ನ್ನು ತೆರೆಯಿರಿ.

2.ದಿಕ್ಸೂಚಿಯು ಹೊಂದಾಣಿಕೆ ಆಗುವ ತನಕ ಫಿಗರ್ 8 ಮಾಡುವಿಕೆಯನ್ನು ಪ್ರಾರಂಭಿಸಿ.

ವಿಧಾನ2: ಗರಿಷ್ಟ ನಿಖರತೆಯ ಮೋಡ್ ನ್ನು ಆಫ್ ಮಾಡಿ.

ವಿಧಾನ2: ಗರಿಷ್ಟ ನಿಖರತೆಯ ಮೋಡ್ ನ್ನು ಆಫ್ ಮಾಡಿ.

1.ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಸೆಟ್ಟಿಂಗ್ಸ್ ಗೆ ತೆರಳಿ.

2.ಲೊಕೇಷನ್ ಆಯ್ಕೆಗೆ ತೆರಳಿ.

3.ಮೇಲ್ಬಾಗದಲ್ಲಿರುವ ಟಾಗಲ್ ಬಳಸಿ ಲೊಕೇಷನ್ ಸರ್ವೀಸ್ ನ್ನು ಆಫ್ ಮಾಡಿ.

4.ಇದೀಗ ಮೋಡ್ ಗೆ ತೆರಳಿ ಮತ್ತು "ಹೈ-ಎಕ್ಯುರೆಸಿ" ಅಥವಾ ಗರಿಷ್ಟ ನಿಖರತೆ ಆಯ್ಕೆಯನ್ನು ಡಿಸೆಲೆಕ್ಟ್ ಮಾಡಿ.

ವಿಧಾನ 3:

ವಿಧಾನ 3:

ವೈಫೈ ನೆಟ್ ವರ್ಕ್ ಗೆ ಕನೆಕ್ಟ ಆಗುವುದು ಅಥವಾ ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮೂಲಕ ಲೊಕೇಷನ್ ಅಕ್ಯುರೆಸಿನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

Best Mobiles in India

Read more about:
English summary
Google Maps: Common Issues And Fixes

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X