Subscribe to Gizbot

ಗೂಗಲ್ ಮ್ಯಾಪ್‌ ಬಿಡಿ: ಪ್ಲೇ ಸ್ಟೋರಿನಲ್ಲಿ ಬಂದಿದೆ ನೋಡಿ ಹೊಸ ಆಪ್..!

Written By:

ಗೂಗಲ್ ಮ್ಯಾಪ್ ಈಗಾಗಲೇ ಭಾರತೀಯರ ಮನ ಗೆದ್ದಿದೆ. ಈ ಹಿನ್ನಲೆಯಲ್ಲಿ ಗೂಗಲ್ ಮ್ಯಾಪ್ ದಿನಕ್ಕೊಂದು ಆಪ್‌ಡೇಟ್ ಪಡೆದುಕೊಂಡು ಉತ್ತಮ ಸೇವೆಯನ್ನು ನೀಡಲು ಮುಂದಾಗಿದೆ. ಹೊಸ ಆಪ್‌ಡೇಟ್ ದೊರೆಯುತ್ತಿದ್ದಂತೆ ಗೂಗಲ್ ಮ್ಯಾಪ್ ಕಡಿಮೆ ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸಲು ಅಡೆತಡೆಗಳನ್ನು ಹೊಂದಿತ್ತು. ಈ ಹಿನ್ನಲೆಯಲ್ಲಿ ಇದಕ್ಕೆ ಪರಿಹಾರವೊಂದನ್ನು ಗೂಗಲ್ ನೀಡಿದೆ.

ಗೂಗಲ್ ಮ್ಯಾಪ್‌ ಬಿಡಿ: ಪ್ಲೇ ಸ್ಟೋರಿನಲ್ಲಿ ಬಂದಿದೆ ನೋಡಿ ಹೊಸ ಆಪ್..!

ಓದಿರಿ: ಜಿಯೋ ಬಳಕೆದಾರರೇ ನಿಮಗೆ ಇದು ಗೊತ್ತಾ? ಮುಂದಿನ ರಿಚಾರ್ಜ್ ಮಾಡಿಸುವ ಮುನ್ನ ತಿಳಿಯಲೇ ಬೇಕು.!

ಮೊನ್ನೆ ತಾನೇ ಬೈಕ್ ರೈಡರ್‌ಗಳಿಗೆ ಹೊಸ ಆಯ್ಕೆಯೊಂದನ್ನು ನೀಡಿದ್ದ ಗೂಗಲ್, ಈ ಬಾರಿ ಗೂಗಲ್ ಮ್ಯಾಪ್ ಗೋ ಎನ್ನುವ ಆಪ್ ವೊಂದನ್ನು ಪ್ಲೇ ಸ್ಟೋರಿನಲ್ಲಿ ಲಾಂಚ್ ಮಾಡಿದೆ. ಇದು ಲೈಟ್ ಆಪ್ ಆಗಿದ್ದು, ಕಡಿಮೆ ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಡಿಮೆ RAM ಫೋನ್‌ಗಳಿಗೆ..!

ಕಡಿಮೆ RAM ಫೋನ್‌ಗಳಿಗೆ..!

ಗೂಗಲ್ ಮ್ಯಾಪ್ ಗೂ ಆಪ್ ಕಡಿಮೆ RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಿಕೊಳ್ಳಲು ವಿನ್ಯಾಸ ಮಾಡಲಾಗಿದೆ. 512 MB ಇಲ್ಲವೇ 1GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸಲು ಈ ಆಪ್ ದಕ್ಷವಾಗಿದೆ.

ಜಿ-ಮೇಲ್ ಗೋ ಮಾದರಿಯಲ್ಲಿ:

ಜಿ-ಮೇಲ್ ಗೋ ಮಾದರಿಯಲ್ಲಿ:

ಈಗಾಗಲೇ ಕಡಿಮೆ RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸ ಮಾಡಿರುವ ಜಿಮೇಲ್ ಗೋ ಮಾದರಿಯಲ್ಲಿ ಈ ಹೊಸ ಗೂಗಲ್ ಮ್ಯಾಪ್ ಗೂ ಆಪ್ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಯಾವುದೇ ವ್ಯತ್ಯಾಸವಿಲ್ಲ:

ಯಾವುದೇ ವ್ಯತ್ಯಾಸವಿಲ್ಲ:

ಸದ್ಯ ಬಳಕೆ ಮಾಡಿಕೊಳ್ಳುತ್ತಿರುವ ಗೂಗಲ್ ಮ್ಯಾಪ್ ಹಾಗೂ ಗೂಘಲ್ ಮ್ಯಾಪ್ ಗೋ ಆಪ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎನ್ನಲಾಗಿದೆ. ಎಲ್ಲಾ ಆಯ್ಕೆಗಳು ಒಂದೇ ಮಾದರಿಯಲ್ಲಿ ಇರಲಿದ್ದು, ಕಡಿಮೆ ಗಾತ್ರದಲ್ಲಿ ಇರಲಿದ್ದು, ವೇಗವಾಗಿ ಕಾರ್ಯನಿರ್ವಹಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Google Maps Go App Launched on Google Play Store. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot