ಸ್ಮಾರ್ಟ್‌ಫೋನ್‌ ಬಳಕೆದಾರರಿಗಾಗಿ ಗೂಗಲ್‌ ಮ್ಯಾಪ್‌ ರಹಸ್ಯ ಫೀಚರ್‌ಗಳು

By Suneel
|

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿಯೇ ಅಭಿವೃದ್ದಿಪಡಿಸಿರುವ ಗೂಗಲ್ ಮ್ಯಾಪ್‌ ಆಪ್‌ ವರ್ಷದಿಂದ ವರ್ಷಕ್ಕೆ ಹೆಚ್ಚು ಅಭಿವೃದ್ದಿಗೊಳ್ಳುತ್ತಿದೆ. ಹೆಚ್ಚು ಹಣ ವೆಚ್ಚಮಾಡಿ ನಾವಿಗೇಷನ್‌ ಡಿವೈಸ್‌ಗಳನ್ನು ಖರೀದಿಸುವ ಬದಲು ಕೇವಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿನ ಗೂಗಲ್‌ ಮ್ಯಾಪ್‌ ಆಪ್‌ ಬಳಸಿದರೆ ಅದ್ಭುತ ಫೀಚರ್‌ಗಳು ದೊರೆಯುತ್ತವೆ.

ಆಂಡ್ರಾಯ್ಡ್ ಗೂಗಲ್‌ ಮ್ಯಾಪ್‌ಗೆ ಕ್ರೆಡಿಟ್ ಕೊಡಲೇಬೇಕು, ಯಾಕಂದ್ರೆ ಒಂದು ನಾವಿಗೇಷನ್‌ ಡಿವೈಸ್‌ನಲ್ಲಿರುವ ಫೀಚರ್‌ ಮತ್ತು ಉಪಯೋಗಕ್ಕಿಂತ ಆಂಡ್ರಾಯ್ಡ್ ಗೂಗಲ್‌ ಮ್ಯಾಪ್‌ ಆಪ್‌ ಹೆಚ್ಚು ಫೀಚರ್‌ಗಳನ್ನು ಹೊಂದಿದೆ. ನೀವು ತಿಳಿಯಲೇಬೇಕಾದ ಗೂಗಲ್‌ ಮ್ಯಾಪ್‌ ಟ್ರಿಕ್ಸ್‌ಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ವೇಗವನ್ನು ಗಮನಿಸಿ ಮತ್ತು ವೇಗದ ಮಿತಿ ತಿಳಿಯಿರಿ

ವೇಗವನ್ನು ಗಮನಿಸಿ ಮತ್ತು ವೇಗದ ಮಿತಿ ತಿಳಿಯಿರಿ

ಆಂಡ್ರಾಯ್ಡ್ ಗೂಗಲ್‌ ಮ್ಯಾಪ್‌ನಲ್ಲಿ ವೇಗ ಮತ್ತು ವೇಗದ ಮಿತಿ ತಿಳಿಯುವ ಫೀಚರ್‌ ಇಲ್ಲ. ಈ ಫೀಚರ್‌ಗಾಗಿ ಗೂಗಲ್‌ ಪ್ಲೇ ಸ್ಟೋರ್‌ನಿಂದ Velociraptor - Map Speed Limit ಆಪ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ. ನಂತರ ಗೂಗಲ್‌ ಮ್ಯಾಪ್‌ಗೆ ಈ ಆಪ್‌ ಅನ್ನು ಟ್ವೀಕ್‌ ಮಾಡಿ. ನಿರ್ಧಿಷ್ಟ ಮಾರ್ಗದಲ್ಲಿ ವೇಗವಾಗಿ ಚಲಿಸುವಾಗ ನೋಟಿಫಿಕೇಶನ್‌ ಪಡೆಯಬಹುದಾಗಿದೆ.

ಸ್ಟಾಪ್‌ ಆಡ್‌ ಮಾಡಿ ಮತ್ತು ಅನಿಲ ಬೆಲೆಗಳನ್ನು ತಿಳಿಯಿರಿ.

ಸ್ಟಾಪ್‌ ಆಡ್‌ ಮಾಡಿ ಮತ್ತು ಅನಿಲ ಬೆಲೆಗಳನ್ನು ತಿಳಿಯಿರಿ.

ನಾವಿಗೇಟ್‌ ಆರಂಭಿಸಿದ ನಂತರ ಸರ್ಚ್‌ ಬಟನ್‌ನಲ್ಲಿ ಮುಂದಿನ ಸ್ಟಾಪ್ ಆಡ್‌ ಮಾಡಬಹುದು. ಸಂಚರಿಸುವ ಮಾರ್ಗದಲ್ಲಿ ಯಾವುದಾದರೂ ಗ್ಯಾಸ್‌ ಸ್ಟೇಷನ್‌ಗಳಿರುವ ಬಗ್ಗೆ ಮಾಹಿತಿ ತಿಳಿದು ಗ್ಯಾಸ್‌ ಬೆಲೆ ಎಷ್ಟು ಎಂಬುದನ್ನು ತಿಳಿಯಬಹುದು.

ಸಮಯದ ಆಧಾರದಲ್ಲಿ ಪ್ರವಾಸ ಯೋಜನೆ

ಸಮಯದ ಆಧಾರದಲ್ಲಿ ಪ್ರವಾಸ ಯೋಜನೆ

ಗೂಗಲ್ ಮ್ಯಾಪ್‌ ಆಪ್‌ ಸಹಾಯದಿಂದ ಸಮಯದ ಆಧಾರದಲ್ಲಿ ಪ್ರವಾಸದ ಯೋಜನೆ ಸಿದ್ಧಪಡಿಸಬಹುದಾಗಿದೆ. ಗೂಗಲ್‌ ಮ್ಯಾಪ್‌ನಲ್ಲಿ 'Public Transportation' ಟ್ಯಾಬ್‌ ಟ್ಯಾಪ್‌ ಮಾಡುವ ಮುಖಾಂತರ ನೀವು ಹೋಗುವ ಸ್ಥಳಕ್ಕೆ ಕಡಿಮೆ ದೂರದ ಮಾರ್ಗವನ್ನು ಆಯ್ಕೆ ಮಾಡಬಹುದಾಗಿದೆ.

ನಿಮ್ಮ ವೀವ್‌ ಚೇಂಜ್ ಮಾಡಿ

ನಿಮ್ಮ ವೀವ್‌ ಚೇಂಜ್ ಮಾಡಿ

ಪ್ರವಾಸ ಹೋಗುವ ದಾರಿಯಲ್ಲಿ ಸಂಬಂಧಿಗಳ ಮನೆಗೆ ಹೋದಲಿ ಅಲ್ಲೂ ಸಹ ಸಮಯ ಕಳೆದುಹೋಗುತ್ತದೆ. ಅಲ್ಲಿಂದ ಹಿಂದಿರುಗಿ ಮರಳಲು ಹೇಗೆ ಹೋಗಬೇಕು, ನೀವು ಎಲ್ಲಿದ್ದೀರಿ ಎಂಬ ಮಾಹಿತಿ ತಿಳಿಯಲು ಗೂಗಲ್‌ ಮ್ಯಾಪ್‌ನಲ್ಲಿ 'Compass' ಎಂಬ ಫೀಚರ್‌ ಅನುಸರಿಸಿ.

ಶೀಘ್ರ ನಾವಿಗೇಟ್‌ಗಾಗಿ ಲಾಂಗ್‌ ಪ್ರೆಸ್

ಶೀಘ್ರ ನಾವಿಗೇಟ್‌ಗಾಗಿ ಲಾಂಗ್‌ ಪ್ರೆಸ್

ನಿರ್ಧಿಷ್ಟ ಪ್ರದೇಶದಲ್ಲಿದ್ದು ಇತರೆ ಯಾವುದೋ ಪ್ರದೇಶಕ್ಕೆ ಶೀಘ್ರವಾಗಿ ಹೋಗಲು ನೀಲಿ ಬಟನ್‌ ಅನ್ನು ಲಾಂಗ್‌ ಪ್ರೆಸ್‌ ಮಾಡಿ. ನೀವು ಹೋಗಬೇಕಿರುವ ಪ್ರದೇಶಕ್ಕೆ ಶೀಘ್ರವಾಗಿ ಹೋಗಬಹುದಾದ ಮಾರ್ಗಗಳೆಲ್ಲವು ಪ್ರದರ್ಶನವಾಗುತ್ತದೆ.

Best Mobiles in India

Read more about:
English summary
Google Maps for Android is more amazing than we tend to give it credit for. Our phones have replaced those chunky, expensive dedicated navigation devices thanks to Google Maps. We can find our way pretty much anywhere with ease.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X