TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಗೂಗಲ್ ಮ್ಯಾಪ್ ನಲ್ಲಿ ಹೊಸ ಫೀಚರ್ – ಯಾವ ರೋಡಲ್ಲಿ ಎಷ್ಟು ವೇಗವಿರಬೇಕು?
ಗೂಗಲ್ ಮ್ಯಾಪ್ ಸದಸ್ಯದಲ್ಲಿ ಹೊಸ ಫೀಚರ್ ವೊಂದನ್ನು ಭಾರತದಲ್ಲಿ ಬಿಡುಗಡೆಗೊಳಿಸುತ್ತಿದೆ. ಈ ಫೀಚರ್ ಜನರಿಗೆ ಯಾವ ರಸ್ತೆಯಲ್ಲಿ ಎಷ್ಟು ಸ್ಪೀಡ್ ನಲ್ಲಿ ಸಂಚರಿಸಬೇಕು ಎಂಬುದನ್ನು ತಿಳಿಸುತ್ತದೆ. ಅಂದರೆ ನೀವು ಯಾವ ರಸ್ತೆಯಲ್ಲಿ ಸಂಚರಿಸುತ್ತಿರುತ್ತೀರೋ ಆ ರಸ್ತೆಯಲ್ಲಿ ಎಷ್ಟು ವೇಗದಲ್ಲಿ ಸಂಚರಿಸುವುದು ಒಳ್ಳೆಯದು ಎಂಬುದನ್ನು ಈ ಫೀಚರ್ ತಿಳಿಸುತ್ತದೆ.
ಗೂಗಲ್ ಮ್ಯಾಪ್ ನಲ್ಲಿ ಹೊಸ ಫೀಚರ್:
ಮಶಾಬ್ಲೇ ವರದಿಯು ತಿಳಿಸುವಂತೆ ಯುಎಸ್ ಮೂಲದ ಅಂತರ್ಜಾಲ ಹುಡುಕಾಟ ಸಂಸ್ಥೆ ಗೂಗಲ್ ಮ್ಯಾಪ್ ಅಥವಾ ದಾರಿತೋರುಗ ಮೊಬೈಲ್ ಆಪ್ ನಲ್ಲಿ ಸ್ಪೀಡ್ ಕ್ಯಾಮರಾವನ್ನು ಅಳವಡಿಸಲಿದೆ. ಈ ಸ್ಪೀಡ್ ಕ್ಯಾಮರಾವು ಯುಎಸ್,ಯುಕೆ, ಆಸ್ಟ್ರೇಲಿಯಾ, ರಷ್ಯಾ, ಬ್ರೆಝಿಲ್, ಮೆಕ್ಸಿಕೋ, ಕೆನಡಾ, ಇಂಡಿಯಾ ಮತ್ತು ಇಂಡೋನೇಷಿಯಾ ಗಳಲ್ಲಿ ಈ ಸ್ಪೀಡ್ ಕ್ಯಾಮರಾ ವೈಶಿಷ್ಟ್ಯತೆಯು ಲಭ್ಯವಾಗಲಿದೆ.ನಂತರ ಯುಎಸ್,ಯುಕೆ ಮತ್ತು ಡೆನ್ಮಾರ್ಕ್ ಗಳಲ್ಲಿ ಬಳಕೆದಾರರು ತೆಗೆದುಕೊಳ್ಳುವ ರಸ್ತೆಯ ಸ್ಪೀಡ್ ಲಿಮಿಟ್ ಬಗ್ಗೆ ಕೂಡ ಮಾಹಿತಿ ನೀಡಲಾಗುತ್ತದೆ.
ಹೇಗಿದೆ ಈ ಫೀಚರ್:
ಸ್ಪೀಡ್ ಸಂಬಂಧಿತ ಫೀಚರ್ ನ್ನು ಮೊದಲು ಗುರುತಿಸಿದ್ದು ಆಂಡ್ರಾಯ್ಡ್ ಪೋಲೀಸರು.ಅವರೇ ಹಂಚಿಕೊಂಡಿರುವ ಸ್ಕ್ರೀನ್ ಶಾಟ್ ಗಳ ಆಧಾರದಲ್ಲಿ ಹೇಳುವುದಾದರೆ, ಸ್ಪೀಡ್ ಕ್ಯಾಮರಾವು ನೀಲಿ ಬಣ್ಣದಲ್ಲಿ ಇರುತ್ತದೆ ಮತ್ತು ರೂಟ್ ಕೇಸರಿ ಬಣ್ಣದಲ್ಲಿರುತ್ತದೆ. ಕೆಲವು ಸಂದರ್ಬದಲ್ಲಿ ಬಳಕೆದಾರರು ಸ್ಪೀಡ್ ಕ್ಯಾಮರಾವನ್ನು ಬಳಸಿದಾಗ ಇದು ಆಡಿಯೋ ಮಾಹಿತಿ ಆಗಿರುತ್ತದೆ.ಸ್ಪೀಡ್ ಲಿಮಿಟ್ ಕೆಳಭಾಗದ ಎಡ ಕಾರ್ನರ್ ನಲ್ಲಿ ಕಾಣಿಸುತ್ತದೆ.
ಕೆಲವೇ ದಿನಗಳಲ್ಲಿ ಲಭ್ಯ:
ಸದ್ಯದ ನೂತನ ವರ್ಷನ್ ನ ಆಂಡ್ರಾಯ್ಡ್ ಮತ್ತು ಐಓಎಸ್ ಫ್ಲಾಟ್ ಫಾರ್ಮ್ ನಲ್ಲಿ ಸ್ಪೀಡ್ ಕ್ಯಾಮರಾವನ್ನು ತೋರಿಸುತ್ತಿಲ್ಲ. ಆದರೆ ಖಂಡಿತ ಕೆಲವೇ ದಿನಗಳಲ್ಲಿ ಇದು ಬಿಡುಗಡೆಗೊಳ್ಳಲಿದೆ ಎಂಬುದು ಖಾತ್ರಿ.
ಆಟೋ ರಿಕ್ಷಾ ಟ್ರಾನ್ಸ್ ಪೋರ್ಟ್ ಮೋಡ್:
ಇತ್ತೀಚೆಗೆ ಗೂಗಲ್ ಆಂಡ್ರಾಯ್ಡ್ ಡಿವೈಸ್ ಗಳಲ್ಲಿನ ಗೂಗಲ್ ಮ್ಯಾಪ್ ಆಪ್ ನಲ್ಲಿ ಹೊಸದಾಗಿ ಆಟೋ ರಿಕ್ಷಾವನ್ನು ಹೊಸ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಮೋಡ್ ಆಗಿ ಪರಿಚಯಿಸಿದೆ. ಈ ಫೀಚರ್ ಮೂಲಕ ಬಳಕೆದಾರರು ತಾವು ತೆಗೆದುಕೊಳ್ಳಲು ಬಯಸುವ ದೂರವನ್ನು ಕ್ರಮಿಸಲು ಆಟೋ ರಿಕ್ಷಾದಲ್ಲಿ ಎಷ್ಟು ಸಮಯ ಬೇಕಾಗುತ್ತದೆ ಮತ್ತು ಅದಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಗೂಗಲ್ ಮ್ಯಾಪ್ ನಲ್ಲಿ ಹೊಸ ಫೀಚರ್ ಪಬ್ಲಿಕ್ ಟ್ರಾನ್ಸ್ ಪೋರ್ಟ್ ನ ಅಡಿಯಲ್ಲಿ ಮತ್ತು ಕ್ಯಾಬ್ ಮೋಡ್ಸ್ ನಲ್ಲಿ ಸಿಗುತ್ತದೆ.ಆಟೋ ರಿಕ್ಷಾ ಫೀಚರ್ ನ ಫಲಿತಾಂಶವನ್ನು ‘Also Consider' ಸೆಕ್ಷನ್ ನಲ್ಲೂ ಪಡೆಯಬಹುದು.
ಆಟೋ ರಿಕ್ಷಾ ಮೋಡ್ ಕಾರ್ಯ:
ಒಮ್ಮೆ ಆಟೋ ರಿಕ್ಷಾ ಮೋಡ್ ನ್ನು ಟ್ರಾನ್ಸ್ ಪೋರ್ಟ್ ಗೆ ಆಯ್ಕೆ ಮಾಡಿಕೊಂಡ ನಂತರ ನೀವು ಆಯ್ಕೆ ಮಾಡಿಕೊಂಡ ಪ್ರದೇಶಕ್ಕೆ ಚಲಿಸಲು ಆಗುವ ವೆಚ್ಚ ಮತ್ತು ಅಲ್ಲಿನ ಟ್ರಾಫಿಕ್ ಪರಿಸ್ಥಿತಿಯ ಬಗ್ಗೆ ನಿಮಗೆ ಮಾಹಿತಿ ಲಭ್ಯವಾಗುತ್ತದೆ. ಟ್ರಿಪ್ ಆರಂಭಿಸಲು ನೀವು ‘Navigate' ನ್ನು ಟ್ಯಾಪ್ ಮಾಡಬೇಕು. ಗೂಗಲ್ ಮ್ಯಾಪ್ ನ ಕ್ಯಾಬ್ ಮೋಡ್ ನಲ್ಲೂ ಕೂಡ ಇದನ್ನು ಆಕ್ಸಿಸ್ ಮಾಡಬಹುದು.
ಪ್ರಯಾಣ ಸುಲಭಗೊಳಿಸಿದ ಗೂಗಲ್:
ಊಹಿಸಿದ ಟ್ರಿಪ್ ರೂಟ್ ಆಧಾರದಲ್ಲಿ ತಗುಲುವ ವೆಚ್ಚವು ನಿಗದಿಯಾಗುತ್ತದೆ. ಈ ವೆಚ್ಚವು ದೆಹಲಿ ಟ್ರಾಫಿಕ್ ಪೋಲೀಸರು ತಿಳಿಸಿದ ಅಧಿಕೃತ ಮಾಹಿತಿಯ ಆಧಾರದಲ್ಲಿ ಇರುತ್ತದೆ ಎಂಬುದಾಗಿ ಮಾಧ್ಯಮಗೋಷ್ಟಿಯಲ್ಲಿ ತಿಳಿಸಲಾಗಿದೆ. ಒಟ್ಟಿನಲ್ಲಿ ಗೂಗಲ್ ಮ್ಯಾಪ್ ದಿನದಿಂದ ದಿನಕ್ಕೆ ಸಂಚಾರ ವ್ಯವಸ್ಥೆಗೆ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದು ಜನಸಾಮಾನ್ಯರಿಗೆ ತಾವು ತಲುಪಬೇಕಾಗಿರುವ ಸ್ಥಳವನ್ನು ಆದಷ್ಟು ಸುಲಭದಲ್ಲಿ ತಲುಪುವುದಕ್ಕೆ ನೆರವು ಮಾಡಿಕೊಡುತ್ತಿದೆ ಎಂಬುದು ಮಾತ್ರ ಸುಳ್ಳಲ್ಲ.