ಬೈಕ್ ಶೇರಿಂಗ್ ಸ್ಟೇಷನ್ ಗಳ ಮಾಹಿತಿ ನೀಡಲಿರುವ ಗೂಗಲ್ ಮ್ಯಾಪ್

By Gizbot Bureau
|

ಗೂಗಲ್ ಮ್ಯಾಪ್ ತನ್ನ ಬಳಕೆದಾರರಿಗೆ ಇನ್ನಷ್ಟು ಉಪಯೋಗವಾಗಲಿ ಎಂದು ಬೈಕು ಹಂಚಿಕೆ ಕೇಂದ್ರಗಳಿಗೆ ಬೆಂಬಲವನ್ನು ನೀಡುತ್ತಿದೆ. ಹೌದು ನಿಮ್ಮ ಹತ್ತಿರದ ಬೈಕ್ ಶೇರಿಂಗ್ ಸೇವೆಗಳ ಬಗ್ಗೆ ಇನ್ನು ಮುಂದೆ ಗೂಗಲ್ ಮ್ಯಾಪ್ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಯಾವ ನಗರಗಳಲ್ಲಿ ಲಭ್ಯ:

ಯಾವ ನಗರಗಳಲ್ಲಿ ಲಭ್ಯ:

ಸದ್ಯ ನ್ಯೂಯಾರ್ಕ್ ಸಿಟಿಯಲ್ಲಿ ಕಳೆದ ವರ್ಷದಿಂದ ಈ ಫೀಚರ್ ನ್ನು ಟೆಸ್ಟಿಂಗ್ ಗೆ ಒಳಪಡಿಸಲಾಗುತ್ತಿದೆ ಮತ್ತು ಇದೀಗ ಸುಮಾರು 23 ಸಿಟಿಗಳಲ್ಲಿ ವಿಸ್ತರಿಸುವ ಚಿಂತನೆ ಇದೆ. ಅದರಲ್ಲಿ ಬಾರ್ಸಿಲೋನಾ, ಬರ್ಲಿನ್, ಬ್ರುಸೆಲ್, ಬುಡಾಪೆಸ್ಟ್, ಚಿಕಾಗೋ, ಲಂಡನ್ ಮತ್ತು ಲಾಸ್ ಏಂಜಲೀಸ್ ನಗರಗಳು ಸೇರಿವೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ.

ಇಟೋ ವರ್ಲ್ಡ್ ನೀಡಿರುವ ಮಾಹಿತಿ:

ಇಟೋ ವರ್ಲ್ಡ್ ನೀಡಿರುವ ಮಾಹಿತಿ:

ಇಟೋ ವರ್ಲ್ಡ್ ನೀಡಿರುವ ಡಾಟಾಗಳ ಆಧಾರದಲ್ಲಿ ಹೊಸ ಫೀಚರ್ ನ ಇಂಟಿಗ್ರೇಷನ್ ಸಾಧ್ಯವಾಗಿದೆ. ಇಟೋ ಎಲ್ಲಿ ಬೈಕ್ ಶೇರಿಂಗ್ ಸ್ಟೇಷನ್ ಗಳು ಲಭ್ಯವಿದೆ ಎಂಬ ಬಗ್ಗೆ ಮಾಹಿತಿಯನ್ನು ಗೂಗಲ್ ಗೆ ನೀಡಿದೆ.ಎಷ್ಟು ಬೈಕ್ ಗಳು ಆ ನಿರ್ಧಿಷ್ಟ ಸ್ಟೇಷನ್ ನಲ್ಲಿ ಲಭ್ಯವಿದೆ ಮತ್ತು ಅಲ್ಲಿ ಕಾಯುವಿಕೆಯ ಅಗತ್ಯತೆ ಬೀಳುತ್ತದೆ ಇತ್ಯಾದಿ ವಿಚಾರಗಳು ನೀವು ನಿಮ್ಮ ನಿರ್ಧಿಷ್ಟ ಸ್ಥಳಕ್ಕೆ ತಲುಪಿದ ಕೂಡಲೇ ಮಾಹಿತಿ ನೀಡುವಂತ ಫೀಚರ್ ಇದಾಗಿದೆ.

ಎಲ್ಲಾ ದೇಶಗಳಿಗೂ ವಿಸ್ತರಿಸುವ ಗುರಿ:

ಎಲ್ಲಾ ದೇಶಗಳಿಗೂ ವಿಸ್ತರಿಸುವ ಗುರಿ:

ಆಂಡ್ರಾಯ್ಡ್ ನಲ್ಲಿ ಮತ್ತು ಐಓಎಸ್ ನಲ್ಲಿ ಸದ್ಯ ಈ ಫೀಚರ್ ನ್ನು ಬಿಡುಗಡೆಗೊಳಿಸಲಾಗಿದೆ. ಭಾರತಕ್ಕೆ ಸದ್ಯ ಈ ವೈಶಿಷ್ಟ್ಯತೆ ತಲುಪಿಲ್ಲ. ಇತರೆ ಎಲ್ಲಾ ದೇಶಗಳಿಗೂ ಈ ವೈಶಿಷ್ಟ್ಯತೆಯನ್ನು ವಿಸ್ತರಿಸುವ ಗುರಿಯನ್ನು ಗೂಗಲ್ ಹೊಂದಿದೆ.

ಟೆಸ್ಟಿಂಗ್ ಮತ್ತು ಬಿಡುಗಡೆ:

ಟೆಸ್ಟಿಂಗ್ ಮತ್ತು ಬಿಡುಗಡೆ:

ಡಿಸೆಂಬರ್ 2018 ರಲ್ಲಿ ಗೂಗಲ್ ಮ್ಯಾಪ್ ಇದೇ ರೀತಿಯ ಫೀಚರ್ ನಲ್ಲಿ ಲೈಮ್ ಸ್ಕೂಟರ್ಸ್ ಮತ್ತು ಬೈಕ್ ಗಳ ಶೇರಿಂಗ್ ಬಗ್ಗೆ ಬಳಕೆದಾರರಿಗೆ ತಿಳಿಸುವ ವಿಚಾರದಲ್ಲಿ ವೈಶಿಷ್ಟ್ಯತೆಯನ್ನು ಅಭಿವೃದ್ಧಿ ಪಡಿಸಿದೆ ಎಂಬ ವರದಿಯೊಂದು ಇದೆ. 2019 ರ ಆರಂಭದಿಂದಲೂ ಗೂಗಲ್ ತನ್ನ ಮ್ಯಾಪ್ ಫೀಚರ್ ನಲ್ಲಿ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಟೆಸ್ಟಿಂಗ್ ಮಾಡುತ್ತಲೇ ಇದೆ ಮತ್ತು ಅದನ್ನು ಬಿಡುಗಡೆಗೊಳಿಸುತ್ತಲೂ ಇದೆ.

ಹೊಸ ಫೀಚರ್ ಗಳ ಸೇರ್ಪಡೆ:

ಹೊಸ ಫೀಚರ್ ಗಳ ಸೇರ್ಪಡೆ:

ಯುಎಸ್ ನಲ್ಲಿ ಟೆಸ್ಟಿಂಗ್ ಸಂಪೂರ್ಣಗೊಂಡ ನಂತರ ಮೇ ತಿಂಗಳಲ್ಲಿ ಸ್ಪೀಡ್ ಲಿಮಿಟ್ ಮತ್ತು ಮೊಬೈಲ್ ರಡಾರ್ ಲೊಕೇಷನ್ ನ್ನು 40 ದೇಶಗಳಲ್ಲಿ ಬಿಡುಗಡೆಗೊಳಿಸಿತ್ತು ಮತ್ತು ಅದರಲ್ಲಿ ಭಾರತವೂ ಸೇರಿದೆ. 2019 ಜುಲೈ ತಿಂಗಳಲ್ಲಿ ಮ್ಯಾಪ್ ಸುಮಾರು 45,000 ಕಮ್ಯುನಿಟಿಯನ್ನು ಸೇರಿಸಿದೆ ಮತ್ತು ಪಬ್ಲಿಕ್ ಟಾಯ್ಲೆಟ್ ಗಳ ಮಾಹಿತಿ ಸೇರಿಸಿದೆ. ಇದು ಕೇಂದ್ರ ಸರ್ಕಾರದ ಲೋ ರಿವ್ಯೂ ಕ್ಯಾಂಪೇನ್ ನ ಒಂದು ಭಾಗವಾಗಿದ್ದು ಇದರಲ್ಲಿ ಭಾರತದ 1,700 ಸಿಟಿಗಳು ಸೇರಿವೆ.

ಎಆರ್ ನೇವಿಗೇಷನ್ ಫೀಚರ್ ಮತ್ತು ಆಫ್ ರೂಟ್ ಅಲರ್ಟ್ ಫೀಚರ್ ಗಳು ಕೂಡ ಗೂಗಲ್ ಮ್ಯಾಪ್ ನಲ್ಲಿ ಸೇರಿಸ್ಪಟ್ಟ ಹೊಸ ಫೀಚರ್ ಗಳಾಗಿವೆ.

Best Mobiles in India

Read more about:
English summary
Google Maps Might Soon Showcase Bike Sharing Stations

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X