Subscribe to Gizbot

ಗೂಗಲ್ ಮ್ಯಾಪ್ನಲ್ಲಿ ಟ್ರಾಫಿಕ್ ಮುನ್ಸೂಚನೆ ನೋಡಬಹುದು

By: Prathap T

ಇನ್ನು ಮುಂದೆ ನೀವು ದೂರದ ಊರಿಗೆ ಪ್ರಯಾಣ ಮಾಡುವಾಗ ಟ್ರಾಫಿಕ್ ಕಿರಿಕಿರಿ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ಸಂಚಾರ ದಟ್ಟಣೆ ಇರುವ ಕಡೆ ಟ್ರಾಫಿಕ್ ಉಂಟಾದಲ್ಲಿ ಯಾವ ನಿರ್ದಿಷ್ಟ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗಿದೆ ಎಂಬುದನ್ನು ಥಟ್ಟನೆ ನಿಮ್ಮ ಅಂಗೈನಲ್ಲೇ ನೋಡಬಹುದು.

ಗೂಗಲ್ ಮ್ಯಾಪ್ನಲ್ಲಿ ಟ್ರಾಫಿಕ್ ಮುನ್ಸೂಚನೆ ನೋಡಬಹುದು

ಹೌದು, ಗೂಗಲ್ ಮ್ಯಾಪ್ ನಲ್ಲಿ ಅಂತಹದೊಂದು ಸೌಲಭ್ಯವನ್ನು ಕಲ್ಪಿಸಿದ್ದು, ನೀವು ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಉಂಟಾಗಿದ್ದಲ್ಲಿ ಗೂಗಲ್ ಮ್ಯಾಪ್ ನಲ್ಲಿ ಗೊತ್ತಾಗಲಿದೆ. ಇದು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ಗಳಲ್ಲಿ ಮಾತ್ರ ಕಾಣಬಹುದಾಗಿದೆ. ದೂರ ಪ್ರಯಾಣ ಅಥವಾ ತರಾತುರಿಯಲ್ಲಿ ನಾವು ತಲುಪಬೇಕಾದ ಸ್ಥಳವನ್ನು ಮುಟ್ಟಲು ಈ ಹೊಸ ಸೇವೆಯಿಂದ ಅನುಕೂಲವಾಗಲಿದೆ. ಈ ಸೇವೆಯಲ್ಲಿ ಪ್ರಚಲಿತ ಹಾಗೂ ಹಿಂದಿನ ಸಂಚಾರ ಪರಿಸ್ಥಿತಿಯನ್ನು ಗಮನಿಸಬಹುದಾಗಿದೆ.

ಮಾತ್ರವಲ್ಲದೇ, ನಾವು ತೆರಳಬೇಕಾದ ನಿರ್ದಿಷ್ಟ ಸ್ಥಳಕ್ಕೆ ಯಾವ ಸಮಯದಲ್ಲಿ ಹೊರಡಿದರೆ ಟ್ರಾಫಿಕ್ ತೊಂದರೆ ಇರುವುದಿಲ್ಲ. ಯಾವ ಸಮಯದಲ್ಲಿ ನಾವು ಹೊರಟಿದ್ದರೆ ಸರಿ ಇರುತ್ತಿತ್ತು ಎಂಬೆಲ್ಲಾ ಮಾಹಿತಿಯನ್ನು ಒದಗಿಸಲು ನೆರವಾಗುತ್ತದೆ.

ನಿರ್ದಿಷ್ಟ ಸ್ಥಳವನ್ನು ಗೂಗಲ್ ಮ್ಯಾಪ್ ನಲ್ಲಿ ಒತ್ತಿದಾಗ, ಪಾಪ್ ಅಪ್ ಶಬ್ಧದೊಂದಿಗೆ ಅದರ ದೂರ ಹಾಗೂ ತಲುಪಲು ತೆಗೆದುಕೊಳ್ಳು ಸಮಯವನ್ನು ಗ್ರಾಫ್ ಬಾರ್ ನಲ್ಲಿ ತೋರಿಸಲಿದೆ. ಗ್ರಾಫ್ ಬಾರ್ ನಲ್ಲಿ ಪ್ರಚಲಿತ ಟ್ರಾಫಿಕ್ ಸ್ಥಿತಿಗತಿಯನ್ನು ಹಳದಿ, ಹಸಿರು ಹಾಗೂ ಕೆಂಪು ಬಣ್ಣದ ಮೂಲಕ ಕ್ರಮವಾಗಿ ಶಾಂತಸ್ಥಿತಿ, ಸುಗಮ ಸಂಚಾರ ಹಾಗೂ ಭಾರಿ ಸಂಚಾರ ಸ್ಥಿತಿ ಇರುವುದಾಗಿ ಮ್ಯಾಪ್ ನಲ್ಲಿ ನೋಟಿಫಿಕೇಶನ್ ಕಾಣಬಹುದಾಗಿದ್ದು, ಪ್ರಯಾಣಿಕರಿಗೆ ನೆರವಾಗಲಿದೆ.

ಗೂಗಲ್ ಮ್ಯಾಪ್ನಲ್ಲಿ ಟ್ರಾಫಿಕ್ ಮುನ್ಸೂಚನೆ ನೋಡಬಹುದು

ಮತ್ತೊಂದು ವಿಶೇಷವೆಂದರೆ, ನಾವು ತೆರಳುವ ಮಾರ್ಗದ ಎರಡು ಗಂಟೆ ಮುಂಚಿನ ಸಂಚಾರ ಸ್ಥಿತಿಗತಿಯ ವಿವರವನ್ನು ಪಡೆಯಬಹುದಾಗಿದೆ. ಇದು ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸಲು ಸಹಕಾರಿಯಾಗಲಿದೆ. ಆದರೆ ಒಂದು ನಿರ್ದಿಷ್ಟ ವೇಳೆಯಲ್ಲಿ ಹೊರಡಲು ಸಮಯ ತಿಳಿಸುವುದಿಲ್ಲ.

ಈಗಾಗಲೇ ಆಂಡ್ರಾಯ್ಡ್ ಬಳಕೆದಾರರಿಗೆ ಈ ಸೇವೆಯನ್ನು ಪಡೆಯಬಹುದಾಗಿದ್ದು, ಐಇಎಸ್ ಬಳಕೆದಾರರು ಈ ಸೇವೆ ಪಡೆಯಲು ಕೆಲ ದಿನಗಳನ್ನು ಕಾಯಬೇಕಾಗಿದೆ. ಗೂಗಲ್ ಮ್ಯಾಪ್ ಹೊರತಂದಿರುವ ಈ ಸೇವೆಯು ಅತ್ಯಂತ ಉಪಯುಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವೈಶಿಷ್ಠ್ಯತೆಗಳನ್ನು ಗೂಗಲ್ ಹೊರತರುವ ನಿರೀಕ್ಷೆಯಿದೆ.

Read more about:
English summary
Google Maps' latest feature allows users to have an insight of the traffic to s set destination in coming few hours.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot