ಗೂಗಲ್ ಮ್ಯಾಪ್ ಸಹಾಯದಿಂದ ಸೇಫ್ ಆಗಿ ಮನೆ ತಲುಪಿದ 12 ವರ್ಷದ ಬಾಲಕಿ

By Gizbot Bureau
|

ಬರೋಬ್ಬರಿ ನಾಲ್ಕು ತಿಂಗಳ ನಂತರ ಗೂಗಲ್ ಮ್ಯಾಪ್ ಬಳಸಿ ದೆಹಲಿ ಪೋಲೀಸರು 12 ವರ್ಷದ ಬಾಲಕಿಯನ್ನು ಆಕೆಯ ಕುಟುಂಬದೊಂದಿಗೆ ಸೇರಿಸಲು ಯಶಸ್ವಿಯಾಗಿದ್ದಾರೆ. ಹೌದು 12 ವರ್ಷದ ಬಾಲಕಿಯೊಬ್ಬಳು ದೆಹಲಿಯಲ್ಲಿ ಕಳೆದು ಹೋಗಿ ತನ್ನ ಕುಟುಂಬದವರಿಂದ ದೂರವಾಗಿದ್ದಳು. ಆದರೆ ಸರಿಯಾದ ವಿಳಾಸ ಹೇಳಲು ಆಕೆಗೆ ಸಾಧ್ಯವಾಗಿರಲಿಲ್ಲ.

ವಿಳಾಸ ಹೇಳದ ಬಾಲಕಿ:

ವಿಳಾಸ ಹೇಳದ ಬಾಲಕಿ:

ಕೀರ್ತಿ ನಗರದ ಪೋಲೀಸ್ ಸ್ಟೇಷನ್ ಗೆ ಮಾರ್ಚ್ 21 ರಂದು ಒಬ್ಬ ಆಟೋ ರಿಕ್ಷಾ ಡ್ರೈವರ್ ಕರೆತಂದು ಬಿಟ್ಟಿದ್ದರು. ಆಕೆಯನ್ನು ಕೇಳಿದಾಗ ಸರಿಯಾದ ವಿಳಾಸ ಹೇಳಲು ಅಥವಾ ಆಕೆ ಎಲ್ಲಿಂದ ಬಂದಲು ಎಂಬುದನ್ನು ಅಥವಾ ಆಕೆ ವಾಸಿಸುವ ಸ್ಥಳಧ ಬಗ್ಗೆ ಏನನ್ನೂ ಕೂಡ ಹೇಳುವುದಕ್ಕೆ ಅವಳಿಗೆ ಸಾಧ್ಯವಾಗುತ್ತಿರಲಿಲ್ಲ.ಪದೇ ಪದೇ ವಿಚಾರಿಸಿದ ನಂತರ ಕುರ್ಜಾ ಹಳ್ಳಿಯವಳು ಮತ್ತು ಆಕೆಯ ತಂದೆಯ ಹೆಸರು ಜೀತನ್ ಎಂಬುದಾಗಿ ತಿಳಿಸಿದಳು.

ಮಿಸ್ಸಿಂಗ್ ದೂರಿನೊಂದಿಗೆ ಹೊಂದಿಕೆಯಾಗಿಲ್ಲ:

ಮಿಸ್ಸಿಂಗ್ ದೂರಿನೊಂದಿಗೆ ಹೊಂದಿಕೆಯಾಗಿಲ್ಲ:

ನಂತರ ಪೋಲೀಸರು ಹುಡುಕಾಟ ನಡೆಸಿದರು. ಯಾವುದಾದರೂ ಮಿಸ್ಸಿಂಗ್ ದೂರಿನ ಜೊತೆಗೆ ಮ್ಯಾಚ್ ಆಗುತ್ತದೆಯೇ ಎಂಬುದಾಗಿ ಪರೀಕ್ಷಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ದೇಶಾದ್ಯಂತ ಎಲ್ಲಿಯೂ ಕೂಡ ಆಕೆಯ ಬಗ್ಗೆ ಕಳೆದು ಹೋಗಿರುವ ಬಗ್ಗೆ ಪೋಷಕರು ದೂರು ನೀಡಿರುವ ಮಾಹಿತಿ ಲಭ್ಯವಾಗಲಿಲ್ಲ.

ಮಾನಸಿಕ ಅಸ್ವಸ್ಥ ಬಾಲಕಿ:

ಮಾನಸಿಕ ಅಸ್ವಸ್ಥ ಬಾಲಕಿ:

ಪೋಲೀಸರು ತಿಳಿಸುವ ಪ್ರಕಾರ ಬಾಲಕಿ ಸ್ವಲ್ಪ ಮಾನಸಿಕ ಅಸ್ವಸ್ಥಳು. ಅದೇ ಕಾರಣಕ್ಕೆ ಆಕೆಗೆ ಹೆಚ್ಚು ಹೇಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನಂತರದ ಸ್ವಲ್ಪ ದಿನದಲ್ಲಿ ಆಕೆ ರೈಲ್ವೇಯಲ್ಲಿ ದೆಹಲಿಗೆ ಕಳೆದ ಕೆಲವು ದಿನಗಳ ಮುಂಚೆ ತನ್ನ ಅಂಕಲ್ ಪಿಂಟು ಜೊತೆಗೆ ಪ್ರಯಾಣಿಸಿರುವುದಾಗಿ ತಿಳಿಸಿದಳು.ಅಷ್ಟೇ ಅಲ್ಲ ರೈಲಿನಲ್ಲಿ ಅಂಕಲ್ ವಾಷ್ ರೂಮ್ ನಲ್ಲಿ ತನ್ನ ಬಟ್ಟೆ ತೆಗೆದಿರುವ ಬಗ್ಗೆ ಹೇಳಿದಳು ಮತ್ತು ಕೂಡಲೇ ಅಳುವುದಕ್ಕೆ ಪ್ರಾರಂಭಿಸಿದಳು.

ಮೆಡಿಕಲ್ ಚೆಕ್ ಅಪ್:

ಮೆಡಿಕಲ್ ಚೆಕ್ ಅಪ್:

ಈ ಹೇಳಿಕೆಯ ಕಾರಣದಿಂದ ಬಾಲಕಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರಬಹುದೇ ಎಂಬ ಬಗ್ಗೆ ಪೋಲೀಸರಿಗೆ ಅನುಮಾನ ಬಂದು ಮೆಡಿಕಲ್ ಚೆಕ್ ಅಪ್ ಕೂಡ ಮಾಡಿಸಲಾಯಿತು ಆದರೆ ಯಾವುದೇ ಲೈಂಗಿಕ ಕಿರುಕುಳ ನಡೆದಿರುವ ಬಗ್ಗೆ ವರದಿ ಬರಲಿಲ್ಲ.ಆಕೆಯ ಹೇಳಿಕೆಯ ಆಧಾರದ ಮೇಲೆ ಕೇಸ್ ನ್ನು ಕೂಡ ದಾಖಲಿಸಿಕೊಳ್ಳಲಾಯಿತು ಮತ್ತು ಎನ್ ಜಿಓ ಗೆ ಆಕೆಯನ್ನು ನೀಡಲಾಯಿತು.

ಗೂಗಲ್ ಮ್ಯಾಪ್ ಸಹಾಯ:

ಗೂಗಲ್ ಮ್ಯಾಪ್ ಸಹಾಯ:

ಆದರೆ ಆಕೆಯ ಕುಟುಂಬದವರ ಹುಡುಕಾಟ ಮುಂದುವರಿದೇ ಇತ್ತು. ಉತ್ತರ ಪ್ರದೇಶದಲ್ಲಿರುವ ಬುಲಂದರ್ಶಹರ್ ಜಿಲ್ಲೆಯ ಕುರ್ಜಾ ಹಳ್ಳಿಗೆ ಆಕೆಯನ್ನು ಕರೆದುಕೊಂಡು ಹೋಗಲಾಯಿತು. ಆದರೆ ಪೋಲೀಸರು ಏನನ್ನೂ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ನಂತರ ಆಕೆಯ ಬಳಿ ತನ್ನ ಹಳ್ಳಿಯ ಹತ್ತಿರದ ಹಳ್ಳಿಗಳ ಹೆಸರನ್ನು ವಿಚಾರಿಸುವುದಕ್ಕೆ ಪ್ರಾರಂಭಿಸಿದರು. ಆಕೆಯ ತಾಯಿ ಸೋನ್ಬರ್ಸಾ ಗೆ ಸೇರಿದವಳು ಎಂದು ತಿಳಿಸಿದಳು ಮತ್ತು ಶಾಖಾಪರ್ ಎಂಬ ಹಳ್ಳಿ ತನ್ನ ಹಳ್ಳಿಯ ಪಕ್ಕದಲ್ಲಿದೆ ಎಂಬುದಾಗಿ ಹೇಳಿದಳು.

ಅಗಸ್ಟ್ 1 ರಂದು ಕುಟುಂಬದವರನ್ನು ಸೇರಿದ ಬಾಲಕಿ:

ಅಗಸ್ಟ್ 1 ರಂದು ಕುಟುಂಬದವರನ್ನು ಸೇರಿದ ಬಾಲಕಿ:

ನಂತರ ಪೋಲೀಸರು ಗೂಗಲ್ ಮ್ಯಾಪ್ ನ ಸಹಾಯ ಪಡೆದು ಕೀವರ್ಡ್ಸ್ ಬಳಸಿದರು ಮತ್ತು ಯುಪಿಯ ಸಿದ್ಧಾರ್ಥ್ ನಗರ ಜಿಲ್ಲೆಯ ಬಳಿ ಶಾಖಾಪರ್, ಸೋನ್ಬರ್ಸಾ ಮತ್ತು ಕುರ್ಜಾ ಹಳ್ಳಿಗಳಿರುವ ಬಗ್ಗೆ ಅವರಿಗೆ ಮಾಹಿತಿ ಲಭ್ಯವಾಯಿತು. ಅಗಸ್ಟ್ 1 ರಂದು ಅಂತಿಮವಾಗಿ ಆಕೆಯನ್ನು ಸರಿಯಾದ ಸ್ಥಳಕ್ಕೆ ತಲುಪಿಸುವಲ್ಲಿ ಪೋಲೀಸರು ಯಶಸ್ವಿಯಾದರು.

ತಂದೆಯ ಹೇಳಿಕೆ:

ತಂದೆಯ ಹೇಳಿಕೆ:

ಹುಡುಗಿಯ ತಂದೆ ಜೀತನ್ ಪೋಲೀಸರಿಗೆ ತಾನು ಮಗಳ ಚಿಕಿತ್ಸೆಯ ಕಾರಣಕ್ಕಾಗಿ ದೆಹಲಿಗೆ ಬಂದಿದ್ದಾಗಿ ತಿಳಿಸಿದರು ಮತ್ತು ಆಕೆ ಹೋಳಿ ಹಬ್ಬದ ದಿನ ಕೀರ್ತಿ ನಗರದ ತನ್ನ ತಂಗಿಯ ಮನೆಯಿಂದ ತಪ್ಪಿಸಿಕೊಂಡಳು ಎಂಬುದಾಗಿ ತಿಳಿಸಿದರು. ಅಷ್ಟೇ ಅಲ್ಲ ಯಾವುದೇ ರೀತಿಯ ಮಿಸ್ಸಿಂಗ್ ಕಂಪ್ಲೈಂಟ್ ನ್ನು ನೀಡದೇ ಇರುವುದರ ಬಗ್ಗೆ ಕೂಡ ಪೋಲೀಸರಿಗೆ ವಿವರಣೆ ನೀಡಿದರು. ನಂತರ ನಡೆದ ಎಲ್ಲಾ ಘಟನೆಯ ವಿವರ ಪಡೆದ ಪೋಲೀಸರು ಲೈಂಗಿಕ ಕಿರುಕುಳದ ಕೇಸನ್ನು ಹಿಂಪಡೆದರು. ಬಾಲಕಿಯನ್ನು ತನ್ನ ಕುಟುಂಬದವರಿಗೆ ತಲುಪಿಸುವುದಕ್ಕೆ ಪೋಲೀಸರು ಯಶಸ್ವಿಯಾದರು.

(ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಬಾಲಕಿಯ ಗುರುತನ್ನು ನಾವಿಲ್ಲಿ ಪ್ರಕಟಿಸುವುದಿಲ್ಲ)

Best Mobiles in India

English summary
Google Maps Plays A Major Role In Uniting A 12 Year Old Girl With Her Family

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X