ಟ್ರಾಫಿಕ್ ನಲ್ಲಿ ಸಿಕ್ಕಿಕೊಳ್ಳಬೇಡಿ- ಗೂಗಲ್ ಮ್ಯಾಪ್ ಬಳಸಿ ಬಿಂದಾಸ್ ಆಗಿ ಚಲಿಸಿ

By Gizbot Bureau
|

ಗೂಗಲ್ ಮ್ಯಾಪ್ ಇತ್ತೀಚೆಗೆ ಎರಡು ವಿಭಿನ್ನ ಆಯ್ಕೆಗಳನ್ನು ನೀಡಿತ್ತು. ಒಂದು ಎಲ್ಲಾದರು ನೀವು ಹೋಗುತ್ತಿರುವ ದಾರಿಯಲ್ಲಿ ಅಪಘಾತವಾಗಿದ್ದರೆ ಅದನ್ನು ವರದಿ ಮಾಡುವುದು ಮತ್ತು ವೇಗ ನಿಯಂತ್ರಣದ ಬಗ್ಗೆ ತಿಳಿಸುವುದು. ನೀವು ಈ ಮೂಲಕ ಆಪ್ ನಲ್ಲಿ ಅಪಘಾತವಾಗಿರುವ ಹಾದಿಯನ್ನು ಬಿಟ್ಟು ಬೇರೆ ಯಾವ ಹಾದಿಯಲ್ಲಿ ತೆರಳುವುದಕ್ಕೆ ಅವಕಾಶವಿದೆ ಎಂಬುವುದನ್ನು ಆ ದಾರಿಯಲ್ಲಿ ಸಂಚರಿಸುವ ಎಲ್ಲರಿಗೂ ತಿಳಿದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಎರಡನೆಯ ಆಯ್ಕೆಯು ವೇಗದ ಟ್ರ್ಯಾಪ್ ಬಗ್ಗೆ ಮಾಹಿತಿ ನೀಡುವುದಾಗಿತ್ತು. ಇದೀಗ ಮೂರನೇಯದಾಗಿ ಮತ್ತೊಂದು “ಆಡ್ ಎ ರಿಪೋರ್ಟ್” ಆಯ್ಕೆಯನ್ನು ಗೂಗಲ್ ಮ್ಯಾಪ್ ಬಳಕೆದಾರರಿಗೆ ನೀಡುತ್ತಿದೆ. ಅದುವೇ ಸ್ಲೋ ಡೌನ್.

ಏನಿದು ಸ್ಲೋ ಡೌನ್?

ಏನಿದು ಸ್ಲೋ ಡೌನ್?

ಸ್ಲೋ ಡೌನ್ ವರದಿಯು ಪ್ರಮುಖ ಉದ್ದೇಶವೇನೆಂದರೆ ನೀವು ತೆರಳುತ್ತಿರುವ ದಾರಿಯಲ್ಲಿ ಯಾವುದೇ ಕಾರಣಕ್ಕೆ ಟ್ರಾಫಿಕ್ ಜಾಮ್ ಆಗಿದೆ ಅಥವಾ ನಿಧಾನಗತಿಯಲ್ಲಿ ಪ್ರಯಾಣಿಸಬೇಕಾಗುತ್ತದೆ ಎಂಬುದನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ. ಅಂದರೆ ಇತರರು ಆ ಕೂಡಲೇ ದಾರಿಯನ್ನು ಬದಲಿಸಿಕೊಳ್ಳುವುದಕ್ಕೆ ಇದು ಅನುವು ಮಾಡಿಕೊಡುತ್ತದೆ. ಟ್ರಾಫಿಕ್ ಜಾಯ್ ನಲ್ಲಿ ನೀವೇನೋ ಸಿಲುಕಿಕೊಂಡಿದ್ದೀರಿ ಆದರೆ ಮತ್ತೊಬ್ಬರು ಕೂಡ ಸಿಲುಕುವುದನ್ನು ಇದರಲ್ಲಿ ತಪ್ಪಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಇದು ರಿಫ್ಲೆಕ್ಟ್ ಆಗುವುದಕ್ಕೆ ಅಗತ್ಯವಾದಷ್ಟು ಮಂದಿ ವರದಿ ಮಾಡಬೇಕಾಗುತ್ತದೆ.

ಟ್ರಾಫಿಕ್ ಸಮಸ್ಯೆಯ ವಿವರ:

ಟ್ರಾಫಿಕ್ ಸಮಸ್ಯೆಯ ವಿವರ:

ಸಾಮಾನ್ಯವಾಗಿ ರಸ್ತೆಗಳು ಟ್ರಾಫಿಕ್ ನಿಂದ ಬ್ಲಾಕ್ ಆಗುತ್ತದೆ ಮತ್ತು ವಾಹನಗಳ ದಟ್ಟಣೆಯಿಂದ ನಿಧಾನವಾಗಿ ಚಲಿಸುವ ಅಗತ್ಯ ಬೀಳುತ್ತದೆ. ಗೂಗಲ್ ಮ್ಯಾಪ್ ಈ ಡಾಟಾವನ್ನು ಕಲೆಹಾಕಿ ಆಪ್ ನಲ್ಲಿ ರಿಫ್ಲೆಕ್ಟ್ ಆಗುವಂತೆ ಮಾಡುತ್ತದೆ. ಆ ಸಮಯಕ್ಕೆ ಐಕಾನಿನ ಬಣ್ಣವು ಹಸಿರಿನಿಂದ ಕೇಸರಿ ಮತ್ತು ಕೆಂಬಣ್ಣಕ್ಕೆ ತಿರುಗುತ್ತದೆ ಅಂದರೆ ಇದು ಟ್ರಾಫಿಕ್ ಸ್ಲೋ ಡೌನ್ ಆಗಿರುವುದರ ಸಂಕೇತ. ಒಂದು ವೇಳೆ ನೀವು ತಿಳಿಯದೆಯೇ ಇಂತಹ ಟ್ರಾಫಿಕ್ ಇರುವ ಪ್ರದೇಶಕ್ಕೆ ಬಂದರೆ ಈ ಹೊಸ ರಿಪೋರ್ಟ್ ನಿಮಗೆ ಸಮಸ್ಯೆಯನ್ನು ಟ್ಯಾಕಲ್ ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಸದ್ಯದಲ್ಲೇ ಬಿಡುಗಡೆ:

ಸದ್ಯದಲ್ಲೇ ಬಿಡುಗಡೆ:

ಕೆಲವು ಬಳಕೆದಾರರಿಗೆ ಸದ್ಯ ಈ ಸ್ಲೋ ಡೌನ್ ಆಯ್ಕೆಯು ‘Congestion' ಎಂದು ಕಾಣಿಸುತ್ತಿದೆ ಮತ್ತು ಎಲ್ಲಾ ಬಳಕೆದಾರರಿಗೆ ಕೆಲವೇ ದಿನಗಳಲ್ಲಿ ಲಭ್ಯವಾಗುತ್ತದೆ.

ಭವಿಷ್ಯದ ಫೀಚರ್ ಗಳ ಟೆಸ್ಟಿಂಗ್:

ಭವಿಷ್ಯದಲ್ಲಿ ಇಂತಹ ಹಲವು ಫೀಚರ್ ಗಳನ್ನು ಗೂಗಲ್ ಮ್ಯಾಪ್ ನಲ್ಲಿ ನೋಡುವುದಕ್ಕೆ ಸಾಧ್ಯವಾಗುತ್ತದೆ. ಮ್ಯಾಪ್ ಜಗತ್ತಿನಲ್ಲಿ ಇನ್ನು ಯಾವೆಲ್ಲ ದೊಡ್ಡ ದೊಡ್ಡ ಫೀಚರ್ ಗಳ ಅಗತ್ಯವಿದೆ ಎಂಬುದರ ಬಗ್ಗೆ ಈಗಾಗಲೇ ಸಂಸ್ಥೆ ಟೆಸ್ಟಿಂಗ್ ಕೆಲಸಗಳನ್ನು ಆರಂಭಿಸಿಯಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ನ ವರದಿಯ ಅನುಸಾರ ಈಗಾಗಲೇ ಫೆಬ್ರವರಿಯಿಂದಲೇ ಇಂತಹ ಕೆಲವು ಫೀಚರ್ ಗಳ ಬಗ್ಗೆ ಸಂಸ್ಥೆ ಟೆಸ್ಟಿಂಗ್ ಕೆಲಸವನ್ನು ಆರಂಭಿಸಿದೆ ಎನ್ನಲಾಗಿದೆ.

ಸ್ಟ್ರೀಟ್ ವ್ಯೂ:

ಸ್ಟ್ರೀಟ್ ವ್ಯೂ:

ಎಆರ್ ಆಧಾರಿತ ನೇವಿಗೇಷನ್ ಸಿಸ್ಟಮ್ ಸ್ಮಾರ್ಟ್ ಫೋನ್ ಕ್ಯಾಮರಾವನ್ನು ಬಳಸುತ್ತದೆ ಮತ್ತು ಗೂಗಲ್ ಲೆನ್ಸ್ ಮೂಲಕ ಡೈರೆಕ್ಷನ್ ನ ಮಾಹಿತಿಯನ್ನು ಒದಗಿಸುತ್ತದೆ. ಅಂದರೆ ಸ್ಟ್ರೀಟ್ ವ್ಯೂ ವನ್ನು ಗೂಗಲ್ ಮ್ಯಾಪ್ ಒದಗಿಸುತ್ತದೆ ಮತ್ತು ಸ್ಮಾರ್ಟ್ ಫೋನ್ ಕ್ಯಾಮರಾ ಸಹಾಯದಿಂದ ಉತ್ತಮ ನೇವಿಗೇಷನ್ ನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಮೇ ನಲ್ಲಿ ಘೋಷಣೆ:

ಮೇ ನಲ್ಲಿ ಘೋಷಣೆ:

ನಾವು ಗೂಗಲ್ ಮ್ಯಾಪ್ ನ ಮುಂಬರುವ ಫೀಚರ್ ಬಗ್ಗೆ ಮುಂಬರುವ ಮೇ ಆರಂಭದಲ್ಲಿ ಅಥವಾ ಮೇ9 ರ ಒಳಗೆ ನಡೆಯುವ ಗೂಗಲ್ ಐಓ ಡೆವಲಪರ್ ಕಾನ್ಫರೆನ್ಸ್ ನಲ್ಲಿ ಕೇಳುವ ನಿರೀಕ್ಷೆ ಇದೆ.

Best Mobiles in India

Read more about:
English summary
Google Maps will now let you report traffic 'Slowdowns'

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X