'ಗೂಗಲ್‌ ಫೈಲ್ಸ್' ಹೆಸರಿನಲ್ಲಿ ಎರಡು ಆಪ್‌ಗಳು!..ಗೊಂದಲಕ್ಕೆ ಉತ್ತರ ಇಲ್ಲಿದೆ!!

  ಎರಡು ಆಪ್ ಗಳು. ಒಂದೇ ಕಂಪೆನಿಯಿಂದ ತಯಾರಿಸಿದ್ದು ಮತ್ತು ಒಂದೇ ಹೆಸರಿನಲ್ಲಿವೆ. ಅದುವೇ ಗೂಗಲ್ ಮತ್ತು ಫೈಲ್ಸ್ ಆಪ್ ಫಾರ್ ಯು. ಇದು ಹೇಗೆ ಸಾಧ್ಯವಾಯಿತು ತಿಳಿದಿಲ್ಲ. ಆದರೆ ಖಂಡಿತವಾಗಲು ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಮತ್ತು ಗೂಗಲ್ ಆಪ್ಸ್ ಗಳನ್ನು ಇಷ್ಟಪಡುವವರಿಗೆ ಇದು ಗೊಂದಲ ಸೃಷ್ಟಿ ಮಾಡುವುದಂತೂ ಸುಳ್ಳಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಪ್ರಮುಖ ಉದ್ದೇಶ:

  ಗೂಗಲ್ ಈಗಾಗಲೇ ತನ್ನ ಕೆಲವು ಆಪ್ ಗಳನ್ನು ಮರುನಾಮಕರಣ ಮಾಡುತ್ತಿದೆ. ಕಳೆದ ತಿಂಗಳು "ಫೈಲ್ಸ್ ಗೋ" ಆಪ್ ನ್ನು " ಫೈಲ್ಸ್" ಎಂದು ಬದಲಾಯಿಸಲಾಗಿತ್ತು. ಈ ರೀತಿ ಮಾಡುವುದರ ಪ್ರಮುಖ ಉದ್ದೇಶ ಆಪ್ ನ್ನು ಹೆಚ್ಚು ಪ್ರಚಲಿತಗೊಳಿಸುವುದು ಮತ್ತು ಇದು ಕೇವಲ ಆಂಡ್ರಾಯ್ಡ್ ಗೋ ಡಿವೈಸ್ ಗಳಿಗೆ ಮಾತ್ರವೇ ಸೀಮಿತವಾಗಿರುವ ಆಪ್ ಅಲ್ಲ ಎಂಬುದನ್ನು ಬಳಕೆದಾರರಿಗೆ ತಿಳಿಸುವುದಾಗಿದೆ. ಫೈಲ್ಸ್ ಬೈ ಗೂಗಲ್ ನ್ನು ಆಂಡ್ರಾಯ್ಡ್ ಡಿವೈಸ್ ನಲ್ಲಿ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಬಳಕೆ ಮಾಡಬಹುದು.

  ಸಮಸ್ಯೆ ಇಲ್ಲಿದೆ:

  ಈಗಾಗಲೇ ಡೀಫಾಲ್ಟ್ ಆಂಡ್ರಾಯ್ಡ್ ಆಪ್ ಫೈಲ್ಸ್ ಹೆಸರಿನಲ್ಲಿದ್ದು, ಇದು ಡೌನ್ ಲೋಡ್ ಆಗಿರುವ ಫೈಲ್ಸ್ ಗಳನ್ನು ಆಂಡ್ರಾಯ್ಡ್ ನಲ್ಲಿ ಸೇವ್ ಮಾಡುತ್ತದೆ. ಇದನ್ನು ಆಂಡ್ರಾಯ್ಡ್ ಫೋನ್ ಗಳಲ್ಲಿ ಪ್ರೀಲೋಡ್ ಮಾಡಲಾಗಿರುತ್ತದೆ ಮತ್ತು ಇದರ ಬಳಕೆಯು ಹೆಚ್ಚುಕಡಿಮೆ ಈಗ ರೀಬ್ರ್ಯಾಂಡ್ ಆಗಿರುವ ಫೈಲ್ಸ್ ಗೋ ಆಪ್ ನಂತೆಯೇ ಇದೆ. ಒಂದು ವೇಳೆ ನೀವು ಹೊಸ ಫೈಲ್ ಒಂದನ್ನು ಗೂಗಲ್ ಆಪ್ ಮೂಲಕ ಡೌನ್ ಲೋಡ್ ಮಾಡಲು ತೊಡಗಿದರೆ ನೀವು ನಿಮ್ಮ ಹೋಮ್ ಸ್ಕ್ರೀನ್ ನಲ್ಲಿ ಎರಡು ಅಪ್ಲಿಕೇಷನ್ ಗಳನ್ನು ಫೈಲ್ಸ್ ಎಂಬ ಹೆಸರಿನಲ್ಲಿ ಗಮನಿಸುತ್ತೀರಿ ಮತ್ತು ಬಹಳ ಗೊಂದಲಕ್ಕೆ ಈಡಾಗುವಂತೆ ಮಾಡುತ್ತದೆ. ಗೂಗಲ್ ಇದನ್ನು ಸರಳಗೊಳಿಸಲು ತೆರಳು ಮತ್ತಷ್ಟು ಕ್ಲಿಷ್ಟಗೊಳಿಸಿ ಬಿಟ್ಟಿದೆ.

  30 ಮಿಲಿಯನ್ ಆಕ್ಟೀವ್ ಬಳಕೆದಾರರು:

  ಫೈಲ್ಸ್ ಗೋ ಅನ್ನು ಪ್ರಮುಖವಾಗಿ ಆಂಡ್ರಾಯ್ಡ್ ಗೋ ಫೋನ್ ಗಳಿಗಾಗಿ ಡಿಸೈನ್ ಮಾಡಿತ್ತು ಮತ್ತು ಇದು ಕಡಿಮೆ ಮೆಮೊರಿ ಮತ್ತು ಸ್ಟೋರೇಜ್ ವ್ಯವಸ್ಥೆಯನ್ನು ಬೇಡುತ್ತದೆ.ಈ ಆಪ್ ನಲ್ಲಿ ಜಾಗವನ್ನು ಫ್ರೀ ಮಾಡಲು ಯಾವ ಫೈಲ್ಸ್ ಗಳನ್ನು ಡಿಲೀಟ್ ಮಾಡಬಹುದು ಎಂದು ಸಲಹೆ ನೀಡುತ್ತದೆ.ಡೀಫಾಲ್ಟ್ ಫೈಲ್ಸ್ ಆಪ್ ಗಿಂತ ಇದು ಉತ್ತಮ ಫೈಲ್ ಬ್ರೌಸರ್ ಇಂಟರ್ ಫೇಸ್ ಆಗಿದೆ ಮತ್ತು ಹೆಚ್ಚು ಪ್ರಸಿದ್ಧಿಯನ್ನೂ ಗಳಿಸಿದೆ.ಒಂದು ವರ್ಷದ ಅವಧಿಯಲ್ಲಿ ಸುಮಾರು 30 ಮಿಲಿಯನ್ ಆಕ್ಟಿವ್ ಬಳಕೆದಾರರನ್ನು ಇದು ಸಂಪಾದಿಸಿದೆ.

  ಬಳಕೆದಾರರಿಗೆ ಕ್ಲಿಷ್ಟಕರ:

  ಆಂಡ್ರಾಯ್ಡ್ ನಲ್ಲಿ ಡೀಫಾಲ್ಟ್ ಫೈಲ್ಸ್ ಆಪ್ ಗಿಂತ ಫೈಲ್ಸ್ ಗೋ ಹೆಚ್ಚು ಪ್ರಸಿದ್ಧಿಯಾಗಿದೆ ಎಂಬುದು ಗೂಗಲ್ ಗೆ ಚೆನ್ನಾಗಿ ತಿಳಿದಿದೆ. ಅದೇ ಕಾರಣಕ್ಕೆ ಫೈಲ್ಸ್ ಎಂದು ಮರುನಾಮಕರಣ ಮಾಡುವ ಮೂಲಕ ಮತ್ತಷ್ಟು ಪ್ರಸಿದ್ಧಿಯನ್ನು ಪಡೆಯುವ ಗುರಿಯನ್ನು ಗೂಗಲ್ ಹೊಂದಿದೆ.ಆದರೆ ಹೀಗೆ ಮಾಡಲು ತೆರಳಿ ಮತ್ತಷ್ಟು ಕ್ಲಿಷ್ಟಗೊಳಿಸಿದ್ದು ಗ್ರಾಹಕರಿಗೆ ಈ ಎರಡೂ ಆಪ್ ಗಳು ಹೇಗೆ ವಿಭಿನ್ನವಾಗಿದೆ ಎಂಬ ಬಗ್ಗೆ ಯಾವುದೇ ಕಲ್ಪನೆಗಳಿಲ್ಲ. ಹಾಗಾಗಿ ಒಂದೇ ಹೆಸರಿನ ಎರಡು ಫೈಲ್ ಗಳನ್ನು ನೋಡಿ ಗ್ರಾಹಕರಿಗೆ ಗೊಂದಲವಾಗುತ್ತಿದೆ.

  ಆಂಡ್ರಾಯ್ಡ್ ಮೆಸೇಜಸ್ ಆಪ್ ನ ಹೆಸರು ಬದಲಾವಣೆ:

  ಈ ವರ್ಷ ಗೂಗಲ್ ಆಂಡ್ರಾಯ್ಡ್ ಮೆಸೇಜಸ್ ನ್ನು ಕೇವಲ ಮೆಸೇಜಸ್ ಎಂದು ಮರುನಾಮಾಂಕಿತಗೊಳಿಸಿದೆ.ಇದು ಎಸ್ಎಂಎಸ್ ಆಪ್ ನ ಸೆಕೆಂಡ್ ರಿವಿಷನ್ ಆಗಿತ್ತು ಮತ್ತು ಇದನ್ನು ಪ್ರಾರಂಭಿಕವಾಗಿ ಮೆಸೇಂಜರ್ ಎಂದು ಕರೆಯಲಾಗಿತ್ತು. ಆದರೆ ಗೂಗಲ್ ಫೇಸ್ ಬುಕ್ ಮೆಸೇಂಜರ್ ಆಪ್ ಜೊತೆಗೆ ಗೊಂದಲವಾಗಬಾರದು ಎಂಬ ದೃಷ್ಟಿಯಲ್ಲಿ ಹೀಗೆ ಮಾಡಿತು.

  ಗೂಗಲ್ ಕೀಪ್ ಗೂ ಮರುನಾಮಕರಣ:

  ಕೆಲವು ತಿಂಗಳ ಮುಂಚೆ ಗೂಗಲ್ "ಗೂಗಲ್ ಕೀಪ್" ಆಪ್ ನ ಹೆಸರನ್ನು ಬದಲಾಯಿಸಿತು. ಇದು ಪ್ರಸಿದ್ಧ ನೋಟ್ ಮೇಕಿಂಗ್ ಆಪ್ ಆಗಿತ್ತು.ಇದನ್ನು ಮೌನವಾಗಿಯೇ ನೆರವೇರಿಸಿದ್ದ ಸಂಸ್ಥೆ ಇದು ನೋಟ್ ಮೇಕಿಂಗ್ ಆಪ್ ಎಂಬುದನ್ನು ಜನರಿಗೆ ಒತ್ತಿ ಹೇಳುವ ನಿಟ್ಟಿನಲ್ಲಿ ಈ ಕೆಲಸ ಕೈಗೊಂಡಿತ್ತು.

  ತೇಝ್ ಆಯ್ತು ಗೂಗಲ್ ಪೇ:

  ಮತ್ತೊಂದು ಪ್ರಮುಖ ಬದಲಾವಣೆ ಇತ್ತೀಚೆಗೆ ನಡೆದು ಹೆಸರು ಬದಲಾಯಿಸಿಕೊಂಡ ಆಪ್ ಎಂದರೆ ಅದು ಗೂಗಲ್ ತೇಝ್ ಹೌದು ಅದನ್ನು ಗೂಗಲ್ ಪೇ ಎಂದು ಮರುನಾಮಾಂಕಿತಗೊಳಿಸಲಾಗಿರುವುದು ನಿಮಗೆಲ್ಲ ತಿಳಿದಿರುವ ಸಂಗತಿಯೇ ಆಗಿದೆ.ವಿಶ್ವದಾದ್ಯಂತ ಪಾವತಿ ಆಯ್ಕೆಯನ್ನು ನೀಡುವ ಈ ಆಪ್ ಭಾರತದಲ್ಲೂ ಬಿಡುಗಡೆಗೊಂಡಿದ್ದು ಇತರೆ ದೇಶಗಳಲ್ಲೂ ಬಿಡುಗಡೆಯನ್ನು ಕಂಡಿದೆ. ಗೂಗಲ್ ಪೇಯನ್ನು ಆಂಡ್ರಾಯ್ಡ್ ಪೇ ಮತ್ತು ಗೂಗಲ್ ವ್ಯಾಲೆಟ್ ಎಂದು ಎರಡು ಭಾಗಗಳಾಗಿ ಮಾಡಲಾಗಿದ್ದು ಜನವರಿ 2018 ರ ವರೆಗೆ ಈ ರೀತಿ ಇತ್ತು.

  ಈ ರೀತಿ ಹೆಸರು ಬದಲಾಯಿಸುವುದಕ್ಕೆ ಗೂಗಲ್ ಹೊಂದಿರುವ ಪ್ರಮುಖ ಉದ್ದೇಶವೆಂದರೆ ಆಪ್ ಗಳನ್ನು ಸರಳಗೊಳಿಸುವುದು ಮತ್ತು ಎಲ್ಲರಿಗೂ ಪರಿಚಿತಗೊಳ್ಳುವಂತೆ ಮಾಡುವುದು. ಆದರೆ ಇದು ಎಲ್ಲಾ ಸಂದರ್ಬದಲ್ಲೂ ಎಲ್ಲಾ ಆಪ್ ಗಳಿಗೂ ಮಾಡಿದರೆ ಸಮಂಜಸ ಅನ್ನಿಸಲಾರದು.

  ಒಂದು ಕಡೆ ಗೂಗಲ್ ತೇಝ್ ನ್ನು ಗೂಗಲ್ ಪೇ ಎಂದು ಬದಲಾಯಿಸಿದ್ದು ಖಂಡಿತ ಪಾವತಿ ಆಯ್ಕೆಗಳಿಗೆ ಹೆಚ್ಚು ಸೂಕ್ತವಾಗಿದೆ. ಆದರೆ ಫೈಲ್ಸ್ ನ್ನು ಮರುನಾಮಾಂಕಿತಗೊಳಿಸಿ ಎರಡು ಆಪ್ ಗಳಿಗೆ ಒಂದೇ ಹೆಸರು ಮಾಡಿ ಗೊಂದಲ ಸೃಷ್ಟಿ ಮಾಡುವಂತೆ ಮಾಡಿದ್ದು ತಪ್ಪು ಸಂದೇಶವನ್ನು ಸಾರುತ್ತಿದೆ.

  ಗೂಗಲ್ ನಲ್ಲಿ ಈ ಎರಡೂ ಆಪ್ ಗಳಿಗೆ ವಿಭಿನ್ನ ಟೀಮ್ ಗಳಿಗೆ ಅವರಿಬ್ಬರೂ ಒಬ್ಬರನ್ನೊಬ್ಬರು ಸಂಪರ್ಕಿಸದೇ ಈ ಕಾರ್ಯ ಕೈಗೊಂಡಿದ್ದಲ್ಲಿ ಗೂಗಲ್ ಗೆ ಇದು ಸರಿ ಅನ್ನಿಸಬಹುದು ಆದರೆ ಬಳಕೆದಾರನಿಗೆ ಅಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Google now has 2 apps called Files and they live on an Android phone side-by-side because why not
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more