ಮುಂದಿನ ವರ್ಷ ಗೂಗಲ್‌ನಿಂದ ಮತ್ತೊಂದು ಆಪ್ ರಿಲೀಸ್!!

ಅಂತರ್ಜಾಲ ದಿಗ್ಗಜ ಗೂಗಲ್ ಸಂಗೀತ ಪ್ರಿಯರಿಗಾಗಿ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ.!

|

ಅಂತರ್ಜಾಲ ದಿಗ್ಗಜ ಗೂಗಲ್ ಸಂಗೀತ ಪ್ರಿಯರಿಗಾಗಿ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ.! ಹೆಚ್ಚಿನ ಜನ ಸಂಗೀತ ಆಲಿಸಲು ಯೂಟ್ಯೂಬ್‌ಗೆ ಭೇಟಿ ನೀಡಿತ್ತಿರುವದನ್ನು ಕಂಡ ಗೂಗಲ್ ಇದೀಗ ಸಂಗೀತ ಪ್ರಿಯರಿಗಾಗಿಯೇ ಹೊಸದೊಂದು ಆಪ್‌ ಒಂದನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.!!

ನೂತನ ಸಂಗೀತದ ಆಪ್‌ ಗುಣಮಟ್ಟಕ್ಕಾಗಿ ವಾರ್ನರ್‌, ಸೋನಿ, ಯೂನಿವರ್ಸಲ್‌ ಮ್ಯೂಸಿಕ್‌ ಕಂಪನಿಗಳ ಜತೆ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿರುವ ಗೂಗಲ್ ಜಗತ್ತಿನ ಎಲ್ಲಾ ಪ್ರಮುಖ ಮ್ಯೂಸಿಕ್‌ ಕಂಪನಿಗಳ ಜತೆ ಮಾತುಕತೆಯಲ್ಲಿ ನಿರತವಾದೆ.! ಹಾಗಾದರೆ, ಗೂಗಲ್‌ನ ಹೊಸ ಮ್ಯೂಸಿಕ್ ಆಪ್ ಯಾವುದು? ಯಾವಾಗ ಬಿಡುಗಡೆ ಎಂಬುದನ್ನು ಮುಂದೆ ತಿಳಿಯಿರಿ.!!

ಯೂಟ್ಯೂಬ್ ರಿಮಿಕ್ಸ್!!

ಯೂಟ್ಯೂಬ್ ರಿಮಿಕ್ಸ್!!

ಗೂಗಲ್‌ನ ಅಂಗಸಂಸ್ಥೆಯಾದ 'ಯೂಟ್ಯೂಬ್' ನೇರವಾಗಿ ಪೇಡ್ ಮ್ಯೂಸಿಕ್‌ ಚಾನಲ್‌ ಆಪ್‌ ಆರಂಭಿಸಲು ಸಿದ್ಧತೆ ನಡೆಸಿದೆ. ಈ ಆಪ್‌ಗೆ 'ಯೂಟ್ಯೂಬ್ ರಿಮಿಕ್ಸ್' ಆಪ್ ಎಂದು ಹೆಸರಿಡಲಾಗಿದೆ.!! ವಿಶೇಷವಾಗಿ ಮ್ಯೂಸಿಕ್‌ ಪ್ರಿಯರನ್ನು ಗಮನದಲ್ಲಿ ಇರಿಸಿಕೊಂಡು ಈ ಚಾನಲ್‌ ಬಿಡುಗಡೆ ಮಾಡುತ್ತಿದೆ.!!

ಮಾರ್ಚ್‌ ತಿಂಗಳಲ್ಲಿ ಆರಂಭ!!

ಮಾರ್ಚ್‌ ತಿಂಗಳಲ್ಲಿ ಆರಂಭ!!

ಸತತ ಎರಡು ಭಾರಿ ಪೇಡ್ ಮ್ಯೂಸಿಕ್‌ ಚಾನಲ್‌ನಲ್ಲಿ ಸೋತಿದ್ದ ಗೂಗಲ್‌ಗೆ ಇದು ಮೂರನೇ ಪ್ರಯತ್ನವಾಗಿದ್ದು 'ಯೂಟ್ಯೂಬ್ ರಿಮಿಕ್ಸ್' ಆಪ್ 2018ನೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿದೆ.! ಹಾಗಾಗಿ, 2018 ರಲ್ಲಿ ಗೂಗಲ್ ರಿಮಿಕ್ಸ್' ಆಪ್ ಯಶಸ್ಸನ್ನು ಪಡೆಯುವ ಯೋಚನೆಯಲ್ಲಿದೆ.!!

ರಿಮಿಕ್ಸ್ ಮಿಶ್ರಿತ ಆವೃತ್ತಿ!!

ರಿಮಿಕ್ಸ್ ಮಿಶ್ರಿತ ಆವೃತ್ತಿ!!

ಮಾರ್ಚ್‌ನಲ್ಲಿ ಲಾಂಚ್‌ ಆಗಲಿರುವ ಯೂಟ್ಯೂಬ್ ರಿಮಿಕ್ಸ್‌, ಪ್ರಸ್ತುತ ಬಳಕೆಯಲ್ಲಿರುವ ಗೂಗಲ್‌ ಪ್ಲೇ ಮ್ಯೂಸಿಕ್‌ ಮತ್ತು ಯೂಟ್ಯೂಬ್‌ ರೆಡ್‌ನ ಮಿಶ್ರಿತ ಆವೃತ್ತಿ ಆಗಿರಲಿದೆ. ಜೊತೆಗ ವಾರ್ನರ್‌, ಸೋನಿ, ಯೂನಿವರ್ಸಲ್‌ ಮ್ಯೂಸಿಕ್‌ ಕಂಪನಿಗಳಂತಹ ಜೊತೆ ಸೇರಿರುವುದರಿಂದ ಈ ಆವೃತ್ತಿಯ ಅನುಭವ ಹೆಚ್ಚಿರಲಿದೆ ಎಂದು ಹೇಳಲಾಗಿದೆ.

ಐ ಟ್ಯೂನ್ಸ್ ಮಾದರಿ!!

ಐ ಟ್ಯೂನ್ಸ್ ಮಾದರಿ!!

ಗೂಗಲ್ ತನ್ನ ಹೊಸ ಸೇವೆಯನ್ನು ಬೇಗ ಪ್ರಚಾರ ಮಾಡಿ ಗ್ರಾಹಕರ ಗಮನ ಸೆಳೆಯಲು ಖ್ಯಾತ ಕಲಾವಿದರ ಸಂಗೀತವನ್ನು ಆಪಲ್‌ ಸಂಸ್ಥೆಯ ಐ ಟ್ಯೂನ್ಸ್ ಮಾದರಿಯಲ್ಲಿ ರಿಮಿಕ್ಸ್ ಚಾನಲ್‌ನಲ್ಲಿ ಅಳವಡಿಸಲಿದೆ. ಪ್ರಸಿದ್ಧ ಪಡೆದಿರುವ ಮ್ಯೂಸಿಕ್‌ ವಿಡಿಯೊಗಳಿಗೆ ತನ್ನ ಹೊಸ ಆಪ್‌ನಲ್ಲಿ ಸ್ಥಾನ ನೀಡಲಿದೆ.!!

ಓದಿರಿ:ಜಗತ್ತು ನಿಬ್ಬೆರಗಾಗುವ ಮತ್ತೊಂದು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ!!.ಕೇವಲ 12 ಸಾವಿರಕ್ಕೆ!!

Best Mobiles in India

English summary
thanks to new long-term agreements the Google-owned company has reportedly signed with Universal Music Group. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X