ಗೂಗಲ್ ಪೇ ನಲ್ಲಿ ಟ್ರಾನ್ಸ್ಯಾಕ್ಷನ್ ಇದೀಗ ಇನ್ನಷ್ಟು ಸೆಕ್ಯೂರ್!

By Gizbot Bureau
|

ಗೂಗಲ್ ಪೇ ಇದೀಗ ಆಪ್ ನೋಟಿಫಿಕೇಷನ್ ನ್ನು ಕಳುಹಿಸಲಿದೆ. ಯುಪಿಐ ಆಧಾರಿತ ಫ್ಲ್ಯಾಟ್ ಫಾರ್ಮ್ ನಲ್ಲಿ ಪ್ರತಿ ಬಾರಿ ಕಲೆಕ್ಷನ್ ರಿಕ್ವೆಸ್ಟ್ ಬಂದಾಗಲೂ ಕೂಡ ಗೂಗಲ್ ಪೇ ನಿಮಗೆ ಎಸ್ಎಂಎಸ್ ನ್ನು ಕಳುಹಿಸಲಿದೆ.

ಇನ್ನಷ್ಟು ಸುಭದ್ರ:

ಇನ್ನಷ್ಟು ಸುಭದ್ರ:

ಟ್ರಾನ್ಸ್ಯಾಕ್ಷನ್ ನ್ನು ತನ್ನ ಫ್ಲ್ಯಾಟ್ ಫಾರ್ಮ್ ನಲ್ಲಿ ಇನ್ನಷ್ಟು ಭದ್ರವಾಗಿಸುವ ನಿಟ್ಟಿನಲ್ಲಿ ಈ ಕೆಲಸವನ್ನು ಮಾಡಲಾಗುತ್ತಿದೆ ಮತ್ತು ಅನುಮಾನಾಸ್ಪದ ಟ್ರಾನ್ಸ್ಯಾಕ್ಷನ್ ನ್ನು ಗುರುತಿಸುವ ನಿಟ್ಟಿನಲ್ಲಿ ಈ ಕೆಲಸವನ್ನು ಮಾಡಲಾಗುತ್ತಿದೆ. ಲಿಂಕ್ ಆಗಿರುವ ಬ್ಯಾಂಕ್ ಖಾತೆಯಲ್ಲಿ ಹಣದ ಹರಿವಿನ ಬಗ್ಗೆ ಸಂಪೂರ್ಣ ವಿವರಣೆ ನೀಡುವ ನಿಟ್ಟಿನಲ್ಲಿ ಬಳಕೆದಾರರಿಗೆ ಆಪ್ ನೋಟಿಫಿಕೇಷನ್ ಜೊತೆಗೆ ಎಸ್ಎಂಎಸ್ ನ್ನು ಗೂಗಲ್ ಪೇ ಇನ್ನು ಮುಂದೆ ಕಳುಹಿಸಲಿದೆ.

ಎಸ್ಎಂಎಸ್ ,ನೋಟಿಫಿಕೇಷನ್ ನಲ್ಲಿ ವಿವರ:

ಎಸ್ಎಂಎಸ್ ,ನೋಟಿಫಿಕೇಷನ್ ನಲ್ಲಿ ವಿವರ:

ಗೂಗಲ್ ಪೇ ಆಪ್ ನಲ್ಲಿ ಪ್ರತಿ ಬಾರಿ ಕಲೆಕ್ಷನ್ ರಿಕ್ವೆಸ್ಟ್ ಬಂದಾಗಲೂ ಕೂಡ ಬಳಕೆದಾರರು ನೋಟಿಫಿಕೇಷನ್ ನ್ನು ಪಡೆಯುತ್ತಾರೆ ಮತ್ತು ಅದನ್ನು ಅಪ್ರೂ ಮಾಡುವುದರಿಂದಾಗಿ ಅವರ ಖಾತೆಯಿಂದ ಹಣವು ಹರಿದು ಮತ್ತೊಂದು ಖಾತೆಗೆ ಸೇರಲಿದೆ ಎಂಬುದನ್ನು ಮೆಸೇಜ್ ಮೂಲಕ ತಿಳಿಸಲಾಗುತ್ತದೆ.

ಅನುಕೂಲಕಾರಿ ಫೀಚರ್:

ಅನುಕೂಲಕಾರಿ ಫೀಚರ್:

ಹೊಸ ಫೀಚರ್ ನಿಂದಾಗಿ ಬಳಕೆದಾರರಿಗೆ ಯಾವುದೇ ಅನುಮಾನಾಸ್ಪದ ಟ್ರಾನ್ಸ್ಯಾಕ್ಷನ್ ನಡೆಯುವ ಬಗ್ಗೆ ಕೂಡಲೇ ಸೂಚನೆ ಸಿಗುತ್ತದೆ ಮತ್ತು ಅವರ ಹಣವು ಸುಭದ್ರವಾಗಿಟ್ಟುಕೊಳ್ಳುವುದಕ್ಕೆ ನೆರವಾಗುತ್ತದೆ ಎಂದು ಗೂಗಲ್ ತಿಳಿಸಿದೆ. ಕಳೆದೆರಡು ವರ್ಷಗಳಲ್ಲ ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ಯುಪಿಐ ಫ್ಲ್ಯಾಟ್ ಫಾರ್ಮ್ ನಲ್ಲಿ ಹಣವನ್ನು ಕಳುಹಿಸುವ ವ್ಯವಸ್ಥೆಯು ಅಧಿಕವಾಗಿ ಪ್ರಸಿದ್ಧಿಯಾಗುತ್ತಿದೆ ಮತ್ತು ಭಾರತೀಯ ಬಳಕೆದಾರರು ಇದನ್ನು ಹೆಚ್ಚು ನೆಚ್ಚಿಕೊಳ್ಳುತ್ತಿದ್ದಾರೆ. ಈ ಸಂದರ್ಬದಲ್ಲಿ ಹೆಚ್ಚಿನ ಬಳಕೆದಾರರು ಡಿಜಿಟಲ್ ಪಾವತಿ ಆಯ್ಕೆಯನ್ನು ನೆಚ್ಚಿ ಅದನ್ನೇ ಮುಂದುವರಿಸಿದ್ದಾರೆ.

ಬ್ಲಾಗ್ ಪೋಸ್ಟ್:

ಬ್ಲಾಗ್ ಪೋಸ್ಟ್:

ಆಪ್ ನಲ್ಲಿ ಪ್ರತಿ ಹೆಜ್ಜೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವು ನೀಡುವಂತ ಫೀಚರ್ ಗಳನ್ನು ನಾವು ಪದೇ ಪದೇ ಸೇರಿಸುತ್ತಿದ್ದೇವೆ. ಇದೀಗ ನಾವು ನೋಟಿಫಿಕೇಷನ್ ಮತ್ತು ಎಸ್ಎಂಎಸ್ ಅಲರ್ಟ್ ನ್ನು ಬಿಡುಗಡೆಗೊಳಿಸಿದ್ದು ಇದು ಹಣದ ಹರಿವಿನ ಬಗ್ಗೆ ನಿಖರವಾದ ಮಾಹಿತಿಯನ್ನು ಬಳಕೆದಾರರಿಗೆ ನೀಡುತ್ತದೆ ಮತ್ತು ಅವರ ಹಣವು ಸೆಕ್ಯೂರ್ ಆಗಿರುವಂತೆ ನೋಡಿಕೊಳ್ಳುವುದಕ್ಕೆ ನೆರವಾಗುತ್ತದೆ ಎಂದು ಗೂಗಲ್ ಪೇ ನ ಪ್ರೊಡಕ್ಟ್ ಮ್ಯಾನೇಜ್ ಮೆಂಟ್ ನ ಡೈರೆಕ್ಟರ್ ಆಗಿರುವ ಅಂಬರೀಷ್ ಕೆಂಘೆ ಅವರು ಬ್ಲಾಗ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಸ್ಕ್ಯಾಮ್ ಪ್ರಿವೆನ್ಶನ್ ಮಾಡೆಲ್:

ಸ್ಕ್ಯಾಮ್ ಪ್ರಿವೆನ್ಶನ್ ಮಾಡೆಲ್:

ಗೂಗಲ್ ಮಷೀನ್ ಲರ್ನಿಂಗ್ ಆಧಾರಿತ ಸ್ಕ್ಯಾಮ್ ಪ್ರಿವೆನ್ಶನ್ ಮಾಡೆಲ್ ನ್ನು ಬಳಸುತ್ತದೆ ಮತ್ತು ಅನುಮಾನಾಸ್ಪದ ಅಥವಾ ಅವರ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಇಲ್ಲದ ವ್ಯಕ್ತಿಗಳಿಂದ ಯಾವುದೇ ರೀತಿಯ ಟ್ರಾನ್ಸ್ಯಾಕ್ಷನ್ ನಡೆಯುತ್ತಿದ್ದರೆ ಅಂತಹ ಸ್ಕ್ಯಾಮ್ ಗಳ ಬಗ್ಗೆ ಅಥವಾ ಸ್ಟ್ರೇಂಜರ್ ಗಳ ಬಗ್ಗೆ ಬಳಕೆದಾರರಿಗೆ ಕೂಡಲೇ ಮಾಹಿತಿ ರವಾನಿಸಲಾಗುತ್ತದೆ.

 ಅಕೌಂಟ್ ರಿಕ್ರಿಯೇಟಿಂಗ್ ಗೆ ಅವಕಾಶವಿಲ್ಲ:

ಅಕೌಂಟ್ ರಿಕ್ರಿಯೇಟಿಂಗ್ ಗೆ ಅವಕಾಶವಿಲ್ಲ:

ಗೂಗಲ್ ತಿಳಿಸುವ ಪ್ರಕಾರ ಆಪ್ ನಲ್ಲಿ ರಿಸ್ಕ್ ರಿಲೇಷನ್ಸ್ ಚೆಕ್ ವ್ಯವಸ್ಥೆ ಆನ್ ಬೋರ್ಡ್ ಸ್ಟೇಜ್ ನಲ್ಲಿಯೇ ಇದ್ದು ಯಾವುದೇ ರೀತಿಯ ಕೆಟ್ಟ ಚಟುವಟಿಕೆಗಳು ಅಂದರೆ ಫ್ಲ್ಯಾಟ್ ಫಾರ್ಮ್ ನಲ್ಲಿ ಅಕೌಂಟಿನ ರಿಕ್ರಿಯೇಟಿಂಗ್ ಕೆಲಸಗಳು ಯಾರಿಂದಲೇ ನಡೆದರೂ ಕೂಡ ಅದನ್ನು ಆಪ್ ಗುರುತಿಸುತ್ತದೆ.

ಹಂತಹಂತವಾದ ಮಾಹಿತಿ:

ಹಂತಹಂತವಾದ ಮಾಹಿತಿ:

ಯುಪಿಐ ಪ್ಲ್ಯಾಟ್ ಫಾರ್ಮ್ ನಲ್ಲಿ ಕಲೆಕ್ಷನ್ ರಿಕ್ವೆಸ್ಟ್ ವಿಭಿನ್ನ ಫೀಚರ್ ಆಗಿದ್ದು ಮೊದಲ ಬಾರಿಗೆ ಬಳಕೆದಾರರಿಗೆ ಸ್ವಲ್ಪ ಗೊಂದಲಕ್ಕೆ ಕಾರಣವಾಗಬಹುದು. ಆದರೆ ಗೂಗಲ್ ಪೇ ಅದನ್ನು ಡಿಸ್ಪ್ಲೇ ಮಾಡಿ ಬಳಕೆದಾರರಿಗೆ ಪ್ರತಿ ಹಂತದಲ್ಲೂ ಕೂಡ ಹಂತಹಂತವಾದ ಮಾಹಿತಿಯನ್ನು ನೀಡಲಾಗುತ್ತದೆ.

Best Mobiles in India

Read more about:
English summary
Google Pay Gets More Secure In India With SMS Notification For Every Transaction

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X