ಚಿನ್ನದ ಮೇಲಿನ ಹೂಡಿಕೆ ಯೋಜನೆ ಪ್ರಾರಂಭಿಸಲಿದೆ ಗೂಗಲ್ ಪೇ

By Gizbot Bureau
|

ಗೂಗಲ್ ಪೇ ನಲ್ಲಿ ಇನ್ನು ಮುಂದೆ ಚಿನ್ನಕ್ಕೂ ಹೂಡಿಕೆ ಮಾಡುವ ಅವಕಾಶ ಲಭ್ಯವಾಗುತ್ತಿದೆ. ಹೌದು ಇದೇ ಮೊದಲ ಬಾರಿಗೆ ಗೂಗಲ್ ಹೂಡಿಕೆ ಕ್ಷೇತ್ರಕ್ಕೆ ಕಾಲಿಟ್ಟಿರುವಂತೆ ಕಾಣುತ್ತಿದೆ.

ಚಿನ್ನದ ಹೂಡಿಕೆಗೆ ಮತ್ತೊಂದು ಆನ್ ಲೈನ್ ಮಳಿಗೆ:

ಚಿನ್ನದ ಹೂಡಿಕೆಗೆ ಮತ್ತೊಂದು ಆನ್ ಲೈನ್ ಮಳಿಗೆ:

ಆದರೆ ಈ ಚಿನ್ನದ ಮೇಲೆ ಆನ್ ಲೈನ್ ನಲ್ಲೇ ಗೂಗಲ್ ಪೇ ಮೂಲಕ ಹೂಡಿಕೆ ಮಾಡುವ ಸೇವೆಯು ಅಧಿಕೃತವಾಗಿ ಇನ್ನೂ ಬಿಡುಗಡೆಗೊಂಡಿಲ್ಲ. ಗೂಗಲ್ ಪೇ ಅಪ್ಲಿಕೇಷನ್ ನಲ್ಲಿ ಹೊಸ ಸೇವೆಯ ಬಗ್ಗೆ ಗೂಗಲ್ ಪೇ ಅಪ್ಲಿಕೇಷನ್ ನಲ್ಲಿ ಅಪ್ ಡೇಟ್ ಮಾಡಲಾಗಿದೆ. ಆದರೆ ಕೆಲವು ಕ್ವೆರಿಗಳನ್ನು ಗೂಗಲ್ ಗೆ ಕಳುಹಿಸಲಾಗಿದ್ದು ಇದುವರೆಗೂ ಆ ಪ್ರಶ್ನೆಗಳಿಗೆ ಸಂಸ್ಥೆಯ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ.

ಡಿಜಿಟಲ್ ಗೋಲ್ಡ್ ಖರೀದಿ:

ಡಿಜಿಟಲ್ ಗೋಲ್ಡ್ ಖರೀದಿ:

ಪೇ ಫ್ಲ್ಯಾಟ್ ಫಾರ್ಮ್ ನಲ್ಲಿ ಖರೀದಿಸುವುದಕ್ಕೆ ಅವಕಾಶವಿದ್ದು ಡಿಜಿಟಲ್ ಫಾರ್ಮೆಟ್ ನಲ್ಲಿ ಇದು ನಿಮ್ಮ ಅಕೌಂಟಿಗೆ ಕ್ರೆಡಿಟ್ ಆಗುತ್ತದೆ. ಫಿಸಿಕಲ್ ಫಾರ್ಮೆಟ್ ನಲ್ಲಿ ಚಿನ್ನ ಖರೀದಿಸಿ ಅದನ್ನು ಸಂಗ್ರಹಿಸಿ ಇಡುವ ಬದಲು ಇದೊಂದು ಉತ್ತಮ ಹೂಡಿಕೆ ಮಾಡುವ ಯೋಜನೆಯಾಗಿರುತ್ತದೆ.

ಮೊದಲು ಪರಿಚಯಿಸಿದ್ದು ಪೇಟಿಎಂ

ಮೊದಲು ಪರಿಚಯಿಸಿದ್ದು ಪೇಟಿಎಂ

ಡಿಜಿಟಲ್ ಗೋಲ್ಡ್ ನ್ನು ಗ್ರಾಹಕರಿಗೆ ಮೊದಲ ಬಾರಿಗೆ ಪೇಟಿಎಂ ಪರಿಚಯಿಸಿತ್ತು ಮತ್ತು ನಂತರದ ದಿನಗಳಲ್ಲಿ ಫೋನ್ ಪೇ, ಇಟಿ ಮನಿ( ಟೈಮ್ ಇಂಟರ್ನೆಟ್ ಮಾಲೀಕತ್ವದ್ದು) ಇತ್ಯಾದಿಗಳು ಪರಿಚಿತಗೊಂಡವು.

ವ್ಯಾಪಾರ ಹೇಗಿದೆ ಗೊತ್ತಾ?

ವ್ಯಾಪಾರ ಹೇಗಿದೆ ಗೊತ್ತಾ?

ಕಳೆದ ವರ್ಷದ ಮೇ ತಿಂಗಳಲ್ಲೇ ವರದಿ ಮಾಡಿರುವಂತೆ ಫೋನ್ ಪೇ ನಲ್ಲಿ 400% ಟ್ರಾನ್ಸ್ಟ್ಯಾಕ್ಷನ್ ಗಳು ಡಿಜಿಟಲ್ ಗೋಲ್ಡ್ ನಲ್ಲಿ ನಡೆದಿದೆ. ಇದು ಡಿಜಿಟಲ್ ಗೋಲ್ಡ್ ಮಾರಾಟ ವ್ಯವಸ್ಥೆ ಪರಿಚಿತಗೊಂಡ ಐದೇ ತಿಂಗಳಲ್ಲಿ ನಡೆದ ಮಾರಾಟ ಪ್ರಕ್ರಿಯೆ ಆಗಿದೆ. ಅಂದರೆ ಸುಮಾರು 250 ಕೆಜಿಯಷ್ಟು ಚಿನ್ನವನ್ನು ಮಾರಾಟ ಮಾಡಲಾಗಿತ್ತು. ಪೇಟಿಎಂ ನಲ್ಲೂ ಕೂಡ ದೊಡ್ಡ ಮೊತ್ತದ ಚಿನ್ನವು ಮಾರಾಟವಾಗಿರುವುದು ತಿಳಿದುಬಂದಿದೆ..ಅಗಸ್ಟ್ ತಿಂಗಳಲ್ಲಿ ಕಂಪೆನಿಯು ತಿಳಿಸಿರುವಂತೆ ಪೇಟಿಎಂ ಡಿಜಿಟಲ್ ಚಿನ್ನ ಮಾರುಕಟ್ಟೆಯ ದೇಶಧ 70% ವನ್ನು ಪೇಟಎಂ ಆಕ್ರಮಿಸಿಕೊಂಡಿದೆ ಎಂಬುದು ತಿಳಿದುಬಂದಿತ್ತು.

ನಿಯಮಗಳ ಬಗ್ಗೆ ಖಾತ್ರಿಯಾಗಿಲ್ಲ:

ನಿಯಮಗಳ ಬಗ್ಗೆ ಖಾತ್ರಿಯಾಗಿಲ್ಲ:

ಈ ರೀತಿಯ ಸೇವೆಯನ್ನು ಗೂಗಲ್ ನಲ್ಲಿ ನೀಡುವುದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಖಡ್ಡಾಯವಾಗಿ ಕೆವೈಸಿ ಮಾಡಿಸಬೇಕಾಗುತ್ತದೆ ಮತ್ತು ಇತರೆ ಯಾವೆಲ್ಲ ನಿಮಯಗಳನ್ನು ಪಾಲಿಸಬೇಕಾಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಗೂಗಲ್ ತಿಳಿಸುತ್ತದೆ.

ಸಂಪೂರ್ಣ ವಿವರ ಇನ್ನೂ ಹೊರಬಿದ್ದಿಲ್ಲ:

ಸಂಪೂರ್ಣ ವಿವರ ಇನ್ನೂ ಹೊರಬಿದ್ದಿಲ್ಲ:

ಗೂಗಲ್ ಪೇ ನಲ್ಲಿ ಗೋಲ್ಡ್ ಅಕೌಂಟ್ ನ್ನು ತೆರೆಯುವ ಮೂಲಕ ಈ ಸೇವೆಗೆ ಅದಿಕೃತವಾಗಿ ಸೇರ್ಪಡೆಗೊಳ್ಳುವುದಕ್ಕೆ ಗ್ರಾಹಕರಿಗೆ ಅವಕಾಶವಿರುತ್ತದೆ. ಆದರೆ ಅದರ ಆಕ್ಸಿಸ್ ಮತ್ತು ಸ್ಟೋರೇಜ್, ಮಾರಾಟ ಇತ್ಯಾದಿ ಪ್ರಕ್ರಿಯೆಗಳ ಬಗ್ಗೆ ಗೂಗಲ್ ಮುಂದಿನ ದಿನಗಳಲ್ಲಿ ತಿಳಿಸಲಿದೆ ಎಂಬುದಾಗಿ ತಿಳಿದುಬಂದಿದೆ.

Best Mobiles in India

Read more about:
English summary
Google Pay set to launch Gold as investment plan: Here's what it means for you

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X