ಡೆಬಿಟ್‌/ ಕ್ರೆಡಿಟ್‌ ಪಾವತಿಗೂ ಗೂಗಲ್‌ ಪೇನಲ್ಲಿ ಅವಕಾಶ..! ಶೀಘ್ರದಲ್ಲಿಯೇ ಫೀಚರ್‌..!

By Gizbot Bureau
|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಭಾರತೀಯ ಗ್ರಾಹಕರಿಗಾಗಿ ತನ್ನ ಸೇವೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡುತ್ತಿದೆ. ಹೌದು, ಇಷ್ಟು ದಿನ ಕೇವಲ ಬ್ಯಾಂಕ್‌ ಖಾತೆಗಳಿಂದ ಯುಪಿಐ ಆಧಾರಿ ಪಾವತಿಗಳಿಗೆ ಮಾತ್ರ ಬೆಂಬಲಿಸುತ್ತಿದ್ದ ಗೂಗಲ್‌ ಪೇ, ಇನ್ಮುಂದೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೂ ಬೆಂಬಲಿಸುತ್ತದೆ ಎಂಬ ಸುದ್ದಿ ಹೊರಬಿದ್ದಿದೆ. ಗುರುವಾರ ದೆಹಲಿಯಲ್ಲಿ ನಡೆದ ಗೂಗಲ್‌ ಫಾರ್‌ ಇಂಡಿಯಾದಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆಯಾಗಿದೆ.

ಟೋಕನೈಸೇಶನ್‌

ಟೋಕನೈಸೇಶನ್‌

ಗೂಗಲ್ ಕಂಪನಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಬಳಕೆಗಾಗಿ ಟೋಕನೈಸೇಶನ್ ಎಂಬ ತಂತ್ರಜ್ಞಾನವನ್ನು ಪೇ ಆಪ್‌ನಲ್ಲಿ ಬಳಸುತ್ತದೆ. ಇದರಲ್ಲಿ ಮಾರಾಟಗಾರರಿಗೆ ನಿಜವಾದ ಕಾರ್ಡ್ ಸಂಖ್ಯೆಯನ್ನು ನೀಡುವ ಬದಲು ಕಾರ್ಡ್‌ಗಳ ದೃಢೀಕರಣಕ್ಕಾಗಿ ಡಿಜಿಟಲ್ ಟೋಕನ್ ಅನ್ನು ಬಳಸಲಾಗುತ್ತದೆ.

ಶೀಘ್ರದಲ್ಲಿಯೇ ಫೀಚರ್‌

ಶೀಘ್ರದಲ್ಲಿಯೇ ಫೀಚರ್‌

ಟೋಕನೈಸ್ ಮಾಡಿದ ಕಾರ್ಡ್ ಆಯ್ಕೆ ಕೆಲವು ವಾರಗಳಲ್ಲಿಯೇ ಗೂಗಲ್‌ ಪೇ ಆಪ್‌ಗೆ ಬಂದು ಸೇರಲಿದೆ. ಪ್ರಸ್ತುತ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು ಎಸ್‌ಬಿಐನ ವೀಸಾ ಕಾರ್ಡ್‌ಗಳನ್ನು ಮಾತ್ರ ಗೂಗಲ್‌ ಪೇ ಬೆಂಬಲಿಸುತ್ತದೆ. ಈಗ ಮಾಸ್ಟರ್‌ಕಾರ್ಡ್ ಮತ್ತು ರುಪೇ ಕಾರ್ಡ್‌ಗಳಿಗೆ ಬೆಂಬಲ ನೀಡುವ ಕೆಲಸ ನಡೆಯುತ್ತಿದೆ.

ಆಫ್‌ಲೈನ್ ಸ್ಪಾಟ್‌ ಪ್ಲಾಟ್‌ಫಾರ್ಮ್

ಆಫ್‌ಲೈನ್ ಸ್ಪಾಟ್‌ ಪ್ಲಾಟ್‌ಫಾರ್ಮ್

ಕಂಪನಿಯು ಗೂಗಲ್ ಪೇಗಾಗಿ ಹೊಸ ಸ್ಪಾಟ್ಸ್ ಪ್ಲಾಟ್‌ಫಾರ್ಮ್ ಅನ್ನು ಘೋಷಿಸಿದೆ. ಈ ಫೀಚರ್‌ ವ್ಯಾಪಾರಿಗಳು ಮತ್ತು ಕಂಪನಿಗಳಿಗೆ ಆಫ್‌ಲೈನ್ ಪಾವತಿಗಳಿಗಾಗಿ ಭೌತಿಕ ಕ್ಯೂಆರ್-ಕೋಡ್ ಮತ್ತು ಎನ್‌ಎಫ್‌ಸಿ ಆಧಾರಿತ ಪಾವತಿ ಕಾರ್ಡ್‌ಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಈ ಪ್ಲಾಟ್‌ಫಾರ್ಮ್ ಬಳಸಿ, ವ್ಯಾಪಾರಿಗಳು ಗೂಗಲ್ ಪೇ ಮೂಲಕ ಗ್ರಾಹಕೀಯ ಅನುಭವಗಳನ್ನು ರಚಿಸಬಹುದು. ಅಲ್ಲದೇ ಇಲ್ಲಿ ರಿಟೇಲ್‌ ಸ್ಟೋರ್‌ನ ಸಂಪೂರ್ಣ ಕ್ಯಾಟಲಾಗ್ ಅನ್ನು ಸೇರಿಸಬಹುದಾಗಿದೆ.

ಥರ್ಡ್‌ ಪಾರ್ಟಿ ಸ್ಪಾಟ್‌

ಥರ್ಡ್‌ ಪಾರ್ಟಿ ಸ್ಪಾಟ್‌

ಸ್ಪಾಟ್ ಕಾರ್ಡ್‌ಗಳೊಂದಿಗೆ ಗ್ರಾಹಕರು ವ್ಯಾಪಾರಿಗಳು ರಚಿಸಿರುವ ಅನುಭವಕ್ಕೆ ನೇರ ಪ್ರವೇಶ ಪಡೆಯಲು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವನ್ನು ಮೇಕ್ ‌ ಮೈ ಟ್ರಿಪ್‌ನಂತಹ ದೊಡ್ಡ ಉದ್ಯಮಗಳು ಬಳಸುತ್ತವೆ. ಸಣ್ಣ ವ್ಯಾಪಾರಿಗಳಿಗೆ ಕೆಲವು ಸಾಲುಗಳ ಕೋಡ್‌ನೊಂದಿಗೆ ಸ್ಪಾಟ್ ನಿರ್ಮಿಸಲು ಥರ್ಡ್‌ ಪಾರ್ಟಿಗೆ ಹೋಗಲು ಗೂಗಲ್‌ ಪೇ ಅವಕಾಶನೀಡುತ್ತದೆ. ಸ್ಪಾಟ್ ಪ್ಲಾಟ್‌ಫಾರ್ಮ್‌ಗಾಗಿ ಗೂಗಲ್ ಈಟ್.ಫಿಟ್, ಮೇಕ್‌ ಮೈ ಟ್ರಿಪ್, ರೆಡ್‌ಬಸ್, ಅರ್ಬನ್ ಕ್ಲ್ಯಾಪ್ ಮತ್ತಿತರ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ವ್ಯವಹಾರಕ್ಕಾಗಿ ಗೂಗಲ್‌ ಪೇ

ವ್ಯವಹಾರಕ್ಕಾಗಿ ಗೂಗಲ್‌ ಪೇ

ವ್ಯಾಪಾರಿಗಳಿಗಾಗಿ ಕಂಪನಿ ವ್ಯವಹಾರಕ್ಕಾಗಿ ಗೂಗಲ್ ಪೇ ಅನ್ನು ಘೋಷಿಸಿದೆ. ಇದು ಪ್ರತ್ಯೇಕ ಆಪ್‌ ಆಗಿದ್ದು, ವ್ಯಾಪಾರಿಗಳು ತಮ್ಮನ್ನು ಪರಿಶೀಲಿಸಿಕೊಂಡು ಪಾವತಿಗಳಿಗಾಗಿ ಗೂಗಲ್‌ ಪೇ ಬಳಸಬಹುದಾಗಿದೆ. ಸದ್ಯ ಭಾರತದಲ್ಲಿ 67 ಮಿಲಿಯನ್ ಗೂಗಲ್ ಪೇಯ ಸಕ್ರಿಯ ಬಳಕೆದಾರರಿದ್ದಾರೆ ಎಂದು ಗೂಗಲ್ ಹೇಳಿದೆ.

Best Mobiles in India

English summary
Google Pay To Support Debit And Credit Card Payments

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X