Subscribe to Gizbot

ಮ್ಯೂಸಿಕ್ ಪ್ರಿಯರಿಗೆ ಗೂಗಲ್ ನಿಂದ ಉಚಿತ ಕೊಡುಗೆಯ ಸುರಿಮಳೆ...!!!!!!

Posted By: Precilla Dias

ಗೂಗಲ್ ಅನ್ನು ಇಷ್ಟ ಪಡೆದೆ ಇರುವವರ ಸಂಖ್ಯೆ ತೀರಾ ಕಡಿಮೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ. ಕೋಟಿ ಕೋಟಿ ಬಳಕೆದಾರರನ್ನು ಹೊಂದಿರುವ ಗೂಗಲ್ ಈ ಬಾರಿ ಮ್ಯೂಸಿಕ್ ಪ್ರಿಯರಿಗೆ ಹೊಸದೊಂದು ಆಫರ್ ನೀಡಿದೆ. ಹೊಸದಾಗಿ ಗೂಗಲ್ ಚಂದದಾರರಾಗುವವರಿಗೆ ನಾಲ್ಕು ತಿಂಗಳು ಉಚಿತವಾಗಿ ಗೂಗಲ್ ಪ್ಲೇ ಮ್ಯೂಸಿಕ್ ಆಯ್ಕೆಯನ್ನು ಬಳಸಿಕೊಳ್ಳಬಹುದಾಗಿದೆ.

ಮ್ಯೂಸಿಕ್ ಪ್ರಿಯರಿಗೆ ಗೂಗಲ್ ನಿಂದ ಉಚಿತ ಕೊಡುಗೆಯ ಸುರಿಮಳೆ...!!!!!!

ಗೂಗಲ್ ಪ್ಲೇ ಸ್ಟೋರ್ ತನ್ನ ಬಳಕೆದಾರರಿಗೆ ಸುಮಾರು 50,000 ಹಾಡುಗಳನ್ನು ಕೇಳಲು ನೀಡಲಿದೆ. ತನ್ನ ಮ್ಯೂಸಿಕ್ ಲೈಬ್ರೆರಿಯಲ್ಲಿ ಎಲ್ಲಾ ಮಾದರಿಯ ಹಾಡುಗಳು ಕೇಳಲು ಸಿಗಲಿದೆ. ಇಷ್ಟು ದಿನ 90 ದಿನಗಳ ಕಾಲ ಉಚಿತ ಸೇವೆಯನ್ನು ನೀಡುತ್ತಿತು. ಈ ಬಾರಿ ಉಚಿತ ಸೇವೆಯ ಅವಧಿಯನ್ನು ನಾಲ್ಕು ತಿಂಗಳಿಗೆ ವಿಸ್ತರಿಸಲಾಗಿದ್ದು, ಇದು ಲಿಮಿಟೆಡ್ ಪಿರಿಯಡ್ ಆಫರ್ ಆಗಿದೆ.

ಒಟ್ಟು ನಾಲ್ಕು ತಿಂಗಳ ಉಚಿತ ಸೇವೆಯ ಅವಧಿಯಲ್ಲಿ ಬಳಕೆದಾರರು ಪ್ಲೇ ಮ್ಯೂಸಿಕ್ ನಲ್ಲಿ ಲಭ್ಯವಿರುವ ಸೇವೆಗಳನ್ನು ಪಡೆಯಬಹುದು. ಅಲ್ಲದೇ ಕಷ್ಟಮ್ ರೇಡಿಯೋ ಸ್ಟೆಷನ್ ಗಳನ್ನು ಬಳಕೆಮಾಡಿಕೊಳ್ಳಬಹುದು. ಇದನ್ನು ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲಿಯೂ ಬಳಕೆ ಮಾಡಬಹುದಾಗಿದೆ. ಈ ಉಚಿತ ಸೇವೆಯ ಆರಂಭದಲ್ಲಿ ಯಾವುದೇ ಆಡ್ ಗಳು ನಿಮ್ಮನ್ನು ಡಿಸ್ಟರ್ಬ್ ಮಾಡುವುದಿಲ್ಲ.

ಉಚಿತ ಸೇವೆಯ ಮುಂದುವರೆದ ನಂತರದಲ್ಲಿ ಗೂಗಲ್ $ 10 ದರವನ್ನು ವಿಧಿಸಲಿದ್ದು, ಅದುವೇ ಯಾವುದೇ ಅಡ್ ಇಲ್ಲದೇ ಸೇವೆಯನ್ನು ನೀಡಲು ಮತ್ತು ಇದರೊಂದಿಗೆ ಯೂಟೂಬ್ ರೆಡ್ ಬಳಕೆಯೂ ದೊರೆಯಲಿದ್ದು, 35 ಮಿಲಿಯನ್ ಹಾಡುಗಳನ್ನು ಬಳಕೆದಾರರು ಡೌನ್ ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ.

English summary
Google is offering an increased tenure of free subscription to new subscribers of Google Play Music.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot