ಗೂಗಲ್‌ ಪ್ಲೇ ಮ್ಯೂಸಿಕ್‌ಗೆ ವಿಲನ್‌ ಆದ ಯೂಟ್ಯೂಬ್‌ ಮ್ಯೂಸಿಕ್‌..!

By Gizbot Bureau
|

ಗೂಗಲ್‌ನ ಹೊಸ ಸಂಗೀತ ಸ್ಟ್ರೀಮಿಂಗ್ ಸೇವೆ ಯೂಟ್ಯೂಬ್ ಮ್ಯೂಸಿಕ್ ಪ್ರಾರಂಭವಾಗಿ ಒಂದು ವರ್ಷ ಸಮಯ ಕಳೆದಿದೆ. ಮೇ 2018ರಲ್ಲಿ ಯೂಟ್ಯೂಬ್‌ ಮ್ಯೂಸಿಕ್‌ ಸೇವೆ ಆರಂಭವಾದ ನಂತರ ಗೂಗಲ್ ಪ್ಲೇ ಮ್ಯೂಸಿಕ್ ಅವನತಿಯತ್ತ ಸಾಗುತ್ತಿದೆ. ಮೊದಲಿನಿಂದಲೂ ಯೂಟ್ಯೂಬ್ ಮ್ಯೂಸಿಕ್ ಗೂಗಲ್ ಪ್ಲೇ ಮ್ಯೂಸಿಕ್‌ನ್ನು ಕೆಳಸ್ತರಕ್ಕೆ ಇಳಿಸುತ್ತಿರುವುದು ಸ್ಪಷ್ಟವಾಗಿದೆ. ಈಗ ಅಂತಹದ್ದೇ ಮತ್ತೊಂದು ಪರಿಣಾಮವನ್ನು ಗೂಗಲ್ ಪ್ಲೇ ಮ್ಯೂಸಿಕ್‌ ಅನುಭವಿಸಿದೆ.

ಪ್ಲೇ ಸ್ಟೋರ್‌ನಲ್ಲಿ ಕಾಣದ ಪ್ಲೇ ಮ್ಯೂಸಿಕ್‌

ಪ್ಲೇ ಸ್ಟೋರ್‌ನಲ್ಲಿ ಕಾಣದ ಪ್ಲೇ ಮ್ಯೂಸಿಕ್‌

ಗೂಗಲ್‌ ಪಿಕ್ಸೆಲ್ 2 ನ ಪ್ಲೇ ಸ್ಟೋರ್‌ನಲ್ಲಿ ಗೂಗಲ್ ಪ್ಲೇ ಮ್ಯೂಸಿಕ್‌ನ್ನು ಹುಡುಕಿದರೆ ಪ್ಲೇ ಮ್ಯೂಸಿಕ್ ಆಪ್‌ಗೆ ಸಂಬಂಧಿಸಿದ ಯಾವುದೇ ಫಲಿತಾಂಶಗಳು ಕಂಡುಬರುವುದಿಲ್ಲ ಎಂದು ನಿಕ್ಕಲ್‌71 ವರದಿ ಮಾಡಿದೆ. ನೇರ ಯುಆರ್‌ಎಲ್‌ ಮೂಲಕ ಆಪ್‌ ಇನ್ನು ಕೆಲಸ ಮಾಡುತ್ತದೆ. ಆದರೆ, ಪ್ಲೇ ಸ್ಟೋರ್‌ನಲ್ಲಿ ಹುಡುಕುವಾಗ ಮಾತ್ರ ಪ್ಲೇ ಮ್ಯೂಸಿಕ್ ರಿಸಲ್ಟ್‌ ಬರಲ್ಲ.

ಉತ್ತಮ ಕಾರ್ಯನಿರ್ವಹಣೆ

ಉತ್ತಮ ಕಾರ್ಯನಿರ್ವಹಣೆ

ಪ್ಲೇ ಮ್ಯೂಸಿಕ್ ಸದ್ಯ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಬಹಳಷ್ಟು ಜನ ಪ್ರತಿಕ್ರಿಯಿಸುತ್ತಿದ್ದಾರೆ, ಆದರೆ, ಅನೇಕ ಜನರು ತಮ್ಮ ಪಿಕ್ಸೆಲ್ 3 ನಲ್ಲಿ ಪ್ಲೇ ಮ್ಯೂಸಿಕ್‌ ಆಪ್‌ ಕಾಣುತ್ತಿಲ್ಲ ಎಂದು ದೂರಿದ್ದಾರೆ. ಇನ್ನು, ಸ್ಯಾಮ್‌ಸಂಗ್‌ ನೋಟ್‌ 10ರಲ್ಲಿರುವ ಪ್ಲೇ ಸ್ಟೋರ್‌ನಲ್ಲೂ ಆಪ್‌ ಕಾಣಿಸಿಕೊಂಡಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಗೂಗಲ್‌ನ ಸಣ್ಣ ಪ್ರಯತ್ನ

ಗೂಗಲ್‌ನ ಸಣ್ಣ ಪ್ರಯತ್ನ

ಅನೇಕ ಜನರಿಗೆ ಪ್ಲೇ ಸ್ಟೋರ್ ಸರ್ಚ್‌ಗಳಿಂದ ಪ್ಲೇ ಮ್ಯೂಸಿಕ್ ಏಕೆ ಕಣ್ಮರೆಯಾಗುತ್ತಿದೆ ಎಂಬುದಕ್ಕೆ ಯಾವುದೇ ಸ್ಪಷ್ಟತೆಯಿಲ್ಲ. ಇದರಲ್ಲಿ ತಾಂತ್ರಿಕ ದೋಷಕ್ಕಿಂತ ಹೆಚ್ಚೇನೂ ಕಂಡುಬಂದಿಲ್ಲ, ಆದರೆ, ಹೆಚ್ಚಿನ ಜನರಿಂದ ಪ್ಲೇ ಮ್ಯೂಸಿಕ್‌ ಆಪ್‌ನ್ನು ಮರೆಮಾಚಲು ಸಣ್ಣ ಗುಂಪಿನ ಜನರೊಂದಿಗೆ ಗೂಗಲ್‌ ಪ್ರಯೋಗ ಮಾಡುತ್ತಿರಬಹುದು.

ಬದಲಾವಣೆ ಖಚಿತ

ಬದಲಾವಣೆ ಖಚಿತ

ವಾಸ್ತವವಾಗಿ, ಈ ರೀತಿಯ ಬದಲಾವಣೆ ವೇಗವಾಗಿ ನಡೆಯುತ್ತಿದೆ. ಆಂಡ್ರಾಯ್ಡ್ 10 ಮತ್ತು ಆಂಡ್ರಾಯ್ಡ್ 9ಪೈ ಒಎಸ್‌ ಹೊಂದಿರುವ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಪ್ಲೇ ಮ್ಯೂಸಿಕ್ ಬದಲಾಗಿ ಯೂಟ್ಯೂಬ್ ಮ್ಯೂಸಿಕ್ ಅನ್ನು ಡೀಫಾಲ್ಟ್ ಸ್ಟ್ರೀಮಿಂಗ್ ಆಪ್‌ ಆಗಿ ಬದಲಾಯಿಸಲಾಗುತ್ತಿದೆ ಎಂಬುದು ವರದಿಗಳಿಂದ ಸ್ಪಷ್ಟವಾಗಿದೆ.

Best Mobiles in India

Read more about:
English summary
Google Play Music Missing From Play Store: User Complains

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X