ಈ ರೀತಿಯ ಫೇಕ್ 'ಗೂಗಲ್ ಮ್ಯಾಪ್' ನಿಮ್ಮ ಮೊಬೈಲ್‌ನಲ್ಲಿದ್ದರೆ ಎಚ್ಚರ!!

|

ಅದ್ಭುತ ಸೌಲಭ್ಯದ ಮೂಲಕ ವಿಶ್ವದೆಲ್ಲೆಡೆ ಜನಪ್ರಿಯ ಸೇವೆಯ ಸ್ಥಾನ ಪಡೆದಿರುವ 'ಗೂಗಲ್ ಮ್ಯಾಪ್' ಅಪ್ಲಿಕೇಶನ್​ಗೂ ಈಗ ಫೇಕ್​ ಸಮಸ್ಯೆ ತಲೆದೂರಿದೆ. ಗೂಗಲ್ ಸಂಸ್ಥೆ ರೂಪಿಸಿರುವ​ ತನ್ನ ಕಟ್ಟು ನಿಟ್ಟಾದ ನಿಯಮ, ಭದ್ರತೆಯನ್ನು ಸಹ ಬೇಧಿಸಿ ಪ್ಲೇ ಸ್ಟೋರ್​ನಲ್ಲಿ ಹಲವಾರು ನಕಲಿ ಮ್ಯಾಪ್ ಅಪ್ಲಿಕೇಶನ್​ಗಳು ತಲೆ ಎತ್ತಿವೆ ಎಂದು ತಿಳಿದುಬಂದಿದೆ. ಇದನ್ನರಿಯದೇ ಸಾವಿರಾರು ಮಂದಿ ಈ ನಕಲಿ ​ಮ್ಯಾಪ್​ ಆಪ್​ಗಳನ್ನು ಡೌನ್​ಲೋಡ್​ ಮಾಡಿಕೊಂಡಿದ್ದಾರೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.

ಹೌದು, ಸ್ಮಾರ್ಟ್‌ಫೋನ್ ಬಳಕೆದಾರರು ತಮಗೆ ತಿಳಿದಿರದ ಸ್ಥಳದ ಮಾಹಿತಿ ಪಡೆಯಲು ಮತ್ತು ಗುರಿ ಮುಟ್ಟಲು 'ಗೂಗಲ್ ಮ್ಯಾಪ್' ಮೊರೆ ಹೋಗುವುದು ಸಾಮಾನ್ಯ. ಆದರೆ, ದುರುದ್ದೇಶಪೂರಿತ ಅಪಾಯಕಾರಿ ಗ್ಲೋಬಲ್ ಪೊಸಿಶೆನಿಂಗ್ ಸಿಸ್ಟಂ(GPS)ಗಳನ್ನು ಮತ್ತು ನೇವಿಗೇಷನ್ ಗೈಡ್​​ಗಳನ್ನು ಒಳಗೊಂಡಿರುವ ಕೆಲವೊಂದು ಫೇಕ್ ಜಿಪಿಎಸ್ ಆಪ್​ಗಳು ಹುಟ್ಟಿವೆ ಎಂದು ಹೇಳಲಾಗಿದೆ. ಮಾಲ್ವೇರ್ ವೈರಸ್​ ಎಕ್ಸ್​ಪರ್ಟ್​ ಲ್ಯೂಕಾಸ್ ಸ್ಟೆಫಾಂಕೊ ಇಂತಹ 15 ಅಪ್ಲಿಕೇಶನ್​ಗಳನ್ನು ಪತ್ತೆ ಹಚ್ಚಿದ್ದಾರೆ.

ಈ ರೀತಿಯ ಫೇಕ್ 'ಗೂಗಲ್ ಮ್ಯಾಪ್' ನಿಮ್ಮ ಮೊಬೈಲ್‌ನಲ್ಲಿದ್ದರೆ ಎಚ್ಚರ!!

ಈ ಫೇಕ್ ಆಪ್‌ಗಳು ಜಿಪಿಎಸ್​​ ಕ್ರಮಾವಳಿಗಳನ್ನು ಬಳಸುವ ಬದಲು ಇವುಗಳೂ ಸಹ ಗೂಗಲ್​ ಮ್ಯಾಪ್​ ಅನ್ನು ಅವಲಂಭಿಸಿವೆ ಎಂದು ತಿಳಿದುಬಂದಿದೆ. ಇಂತಹ ಆಪ್‌ಗಳು ಜನರನ್ನು ಸೆಳೆಯುವ ಸಲುವಾಗಿ ಬೇರೆ ಬೇರೆ ರೀತಿಯಲ್ಲಿ ಆಪ್‌ನಲ್ಲಿ ಮನರಂಜನೆಯನ್ನು ಒದಗಿಸಲು ಪ್ರಯತ್ನಿಸುತ್ತವೆ.ಇನ್ನು ಕೆಲವೊಂದು ಆಪ್‌ಗಳು ಹೆಚ್ಚು ಮಾಹಿತಿ ನೀಡುವುದಾಗಿ ತಿಳಿಸುತ್ತವೆ. ಹೀಗೆ ಮ್ಯಾಪ್ ಸೇವೆಯಲ್ಲೂ ಮನರಂಜನೆಯನ್ನು ನೀಡುವ ಮೂಲ ಗ್ರಾಹಕರನ್ನು ಸೆಳೆಯುತ್ತಿವೆ.

ಇಂತಹ ಹಲವು ಫೇಕ್ ಆಪ್‌ಗಳನ್ನು ಹಲವು ದೇಶಗಳ ಮೊಬೈಲ್​ ಬಳಕೆದಾರರು ಡೌನ್​ಲೋಡ್​ ಮಾಡಿಕೊಂಡಿದ್ದು, 5 ಕೋಟಿಗಿಂತ ಹೆಚ್ಚಿನ ಜನರು ಈ ಆಪ್​ಗಳನ್ನು ಡೌನ್​ಲೋಡ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇವುಗಳು ಇನ್ನು ಕೂಡ ಸಕ್ರೀಯವಾಗಿದೆ ಎಂದು ತಿಳಿಸಲಾಗಿದೆ. ಈ ಆ್ಪ್​ಗಳಿಂದ ನಿಮ್ಮ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಯಿದ್ದು, ತಕ್ಷಣವೇ ಇವುಗಳನ್ನು ಡಿಲೀಟ್​ ಮಾಡಿಕೊಳ್ಳಿ ಎಂದು ಲ್ಯೂಕಾಸ್ ಸ್ಟೆಫಾಂಕೊ ಅವರು ಸಲಹೆ ನೀಡಿದ್ದಾರೆ.

ಈ ರೀತಿಯ ಫೇಕ್ 'ಗೂಗಲ್ ಮ್ಯಾಪ್' ನಿಮ್ಮ ಮೊಬೈಲ್‌ನಲ್ಲಿದ್ದರೆ ಎಚ್ಚರ!!

ಗೂಗಲ್​ ಮ್ಯಾಪ್​ನಲ್ಲಿ ಯಾವುದೇ ರೀತಿಯ ಹೊಸ ವಿನ್ಯಾಸವನ್ನು ನೀಡಿರುವುದಿಲ್ಲ. ತನ್ನ ಬ್ರಾಂಡ್​ನಲ್ಲಿ ಬೇರೆ ಆಪ್​ಗಳನ್ನು ವಿನ್ಯಾಸಗೊಳಿಸಲು ಕೂಡ ಅನುಮತಿಸುವುದಿಲ್ಲ. ಸಂಸ್ಥೆಯ ಈ ನಿಯಮವನ್ನು ಉಲ್ಲಂಘಿಸಿದರೆ ಅಂತಹ ಆಪ್​ಗಳನ್ನು ಪ್ಲೇಸ್ಟೋರ್​ನಿಂದ ತೆಗೆದುಹಾಕಲಾಗುತ್ತದೆ ಎಂದು ಗೂಗಲ್ ಸಂಸ್ಥೆ ಸ್ಫಷ್ಟಪಡಿಸಿದೆ. ಈ ಬಗ್ಗೆ ಸ್ಟೆಫಾಂಕೊ ಗೂಗಲ್​ ಸಂಸ್ಥೆಗೆ ಮಾಹಿತಿ ನೀಡಿದ್ದು, ಇದರ ನಂತರ ಪ್ಲೇಸ್ಟೋರ್​ನಿಂದ ಜಿಪಿಎಸ್​​ ಮ್ಯಾಪ್​ ಹೆಸರಿನಲ್ಲಿರುವ ನಕಲಿ ಆಪ್​ಗಳನ್ನು ತೆಗೆದು ಹಾಕಿದೆ ಎಂದು ತಿಳಿದುಬಂದಿದೆ.

Best Mobiles in India

English summary
Search giant Google is doing everything possible in order to detect fake apps on the Google Play Store. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X