ತೇಜ್ ಆಪ್‌ ಬಳಕೆದಾರರಿಗೆ ಶಾಕ್ ಕೊಟ್ಟ ಗೂಗಲ್..! ಬದಲಾಯಿಸಿದೆ ಪೂರಾ...?

|

ಭಾರತೀಯ ಮಾರುಕಟ್ಟೆಯಲ್ಲಿ ಮೊಬೈಲ್ ಪೇಮೆಂಟ್ ಆಪ್‌ಗಳು ಹೆಚ್ಚಿನ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ಗೂಗಲ್ ಕಳೆದ ಸೆಪ್ಟೆಂಬರ್‌ ನಲ್ಲಿ ತೇಜ್ ಆಪ್‌ ಅನ್ನು ಲಾಂಚ್ ಮಾಡಿತ್ತು. ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ಭರ್ಜರಿ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಿತ್ತು. ಅನೇಕ ಮಂದಿ ಬಳಕೆದಾರರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಆದರೆ ಗೂಗಲ್ ತನ್ನ ತೇಜ್ ಆಪ್‌ ಅನ್ನು ಬದಲಾಯಿಸುವ ಕ್ರಮಕ್ಕೆ ಮುಂದಾಗಿದೆ.

ತೇಜ್ ಆಪ್‌ ಬಳಕೆದಾರರಿಗೆ ಶಾಕ್ ಕೊಟ್ಟ ಗೂಗಲ್..! ಬದಲಾಯಿಸಿದೆ ಪೂರಾ...?

ಗೂಗಲ್ ತನ್ನ ತೇಜ್ ಆಪ್‌ನ ಹೆಸರನ್ನು ಬದಲಾಯಿಸಲು ಮುಂದಾಗಿದ್ದು, ಹೊಸ ಮಾದರಿಯಲ್ಲಿ ಬ್ರಾಂಡಿಂಗ್ ಮಾಡಲು ಮುಂದಾಗಿದೆ. BHIM UPI ಆಧಾರಿತವಾಗಿ ಕಾರ್ಯನಿರ್ವಹಿಸುತ್ತಿರುವ ತೇಜ್ ಆಪ್ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬಳಕೆದಾರರನ್ನು ಹೊಂದಿದೆ. ಇದರಿಂದಾಗಿ ಗೂಗಲ್ ತೇಜ್‌ಗೆ ಹೊಸ ಹೆಸರು ಇಡಲು ಮುಂದಾಗಿದೆ.

ಗೂಗಲ್ ಪೇ:

ಗೂಗಲ್ ಪೇ:

ಗೂಗಲ್ ತನ್ನ ತೇಜ್ ಆಪ್‌ಗೆ ಮರು ನಾಮಕರಣವನ್ನು ಮಾಡಿದ್ದು, ಇನ್ನು ಮುಂದೇ 'ಗೂಗಲ್ ಪೇ' ಎಂದು ಈ ಆಪ್ ಗುರುತಿಸಿಕೊಳ್ಳಲಿದೆ. ಇದಲ್ಲದೇ ಹೊಸದಾಗಿ ಬದಲಾವಣೆಯನ್ನು ಹೊಂದಿದ ಮಾದರಿಯಲ್ಲಿಯೇ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ಹೊತ್ತು ತರಲಿದೆ ಎನ್ನಲಾಗಿದೆ.

ಎಲ್ಲೆಡೆ ಬಳಕೆ:

ಎಲ್ಲೆಡೆ ಬಳಕೆ:

ಪೇಟಿಎಂ ಮಾದರಿಯಲ್ಲಿ ಬಿಗ್ ಬಜಾರ್ ಸೇರಿಂದತೆ ಸುಮಾರು 18000 ರೀಟೆಲ್ ಶಾಪ್‌ಗಳಲ್ಲಿ ಗೂಗಲ್ ಪೇ ಸೇವೆಯನ್ನು ಪಡೆದುಕೊಳ್ಳುವಂತೆ ಮಾಡಲು ಗೂಗಲ್ ಯೋಜನೆ ರೂಪಿಸಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ಆಪ್‌ನಲ್ಲೇ ಲೋನ್:

ಆಪ್‌ನಲ್ಲೇ ಲೋನ್:

ಇದಲ್ಲದೇ ಗೂಗಲ್ ಪೇ ಆಪ್‌ ನಿಮಗೆ ತಕ್ಷಣದಲ್ಲಿ ಪ್ರೀಲೋಡ್ ಲೋನ್ ಅನ್ನು ನೀಡಲಿದೆ. ಇದಕ್ಕಾಗಿ ಗೂಗಲ್ ಫೆಡರಲ್, HDFC, ICICI ಮತ್ತು ಕೋಟಕ್ ಮಹಿಂದ್ರಾ ಬ್ಯಾಂಕ್ ನೋಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಶೀಘ್ರವೇ ಇನ್ನಷ್ಟು ಬ್ಯಾಂಕ್‌ಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಿದೆ.

ಆನ್‌ಲೈನ್ ಪೇಮೆಂಟ್:

ಆನ್‌ಲೈನ್ ಪೇಮೆಂಟ್:

ಇದಲ್ಲದೇ ಆನ್‌ಲೈನ್ ಮೂಲಕವೂ ಸುಲಭವಾಗಿ ಪೇಮೆಂಟ್ ಮಾಡುವ ಅವಕಾಶವನ್ನು ಗೂಗಲ್ ಪೇ ಆಪ್‌ನಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ಒಂದೇ ಆಪ್‌ನಲ್ಲಿ ಬಳಕೆದಾರರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭವನ್ನು ತನ್ನದಾಗಿಸಿಕೊಳ್ಳಬಹುದಾಗಿದೆ.

ಆನ್‌ಲೈನ್-ಆಫ್‌ಲೈನ್:

ಆನ್‌ಲೈನ್-ಆಫ್‌ಲೈನ್:

ಗೂಗಲ್ ಪೇ ಆಪ್‌ನಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಬಹುದು. ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆ ತಕ್ಷಣ ಸಾಧ್ಯವಾಗುತ್ತದೆ. ಅಲ್ಲದೇ ಆಫ್‌ಲೈನಿನಲ್ಲಿಯೂ ಹಣವನ್ನು ಕಳುಹಿಸಬಹುದಾಗಿದ್ದು, ವ್ಯಾಲೆಟ್ ಮಾದರಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಹಲವು ಸೇವೆ:

ಹಲವು ಸೇವೆ:

ಗೋಐಬಿಬೋ, ಫ್ರೆಶ್ ಮೆನು, ಬುಕ್ ಮೈ ಶೋ, ರೆಡ್ ಬಸ್ ಸೇರಿದಂತೆ ಹಲವು ಕಡೆಗಳಲ್ಲಿ ಗೂಗಲ್ ಪೇ ಬಳಸಬಹುದಾಗಿದೆ. ಅಲ್ಲದೇ ಮೊಬೈಲ್ ರಿಚಾರ್ಜ್, ಡಿಶ್ ರಿಚಾರ್ಜ್ ಸೇರದಂತೆ ನಿಮ್ಮ ಆನ್‌ಲೈನ್ ಶಾಪಿಂಗ್‌ಗೂ ಸಹ ಪೇಮೆಂಟ್ ಮಾಡಬಹುದು.

 ಹಲವು ಭಾಷೆಗಳಲ್ಲಿ ಲಭ್ಯ:

ಹಲವು ಭಾಷೆಗಳಲ್ಲಿ ಲಭ್ಯ:

ಕನ್ನಡ ಸೇರಿದಂತೆ ಇಂಗ್ಲೀಷ್, ಹಿಂದಿ, ಬಂಗಾಳಿ, ಗುಜರಾತಿ, ತಮಿಳು, ಮರಾಠಿ ಮತ್ತು ತೆಲುಗು ಭಾಷೆಗಳಲ್ಲಿ ಗೂಗಲ್ ಪೇ ಕಾರ್ಯನಿರ್ವಹಿಸಲಿದೆ.

Best Mobiles in India

English summary
Google rebrands its Tez payments app to Google Pay in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X