ಪ್ಲೇ ಸ್ಟೋರಿನಿಂದ 7 ಲಕ್ಷ ಆಪ್‌ಗಳನ್ನು ಕಿತ್ತು ಹಾಕಿದ ಗೂಗಲ್ : ಕಾರಣ ಗೊತ್ತಾ..?

Written By:

ಗೂಗಲ್ ಪ್ಲೇ ಸ್ಟೋರಿನಲ್ಲಿ ಹಲವು ಲಕ್ಷ ಆಪ್‌ಗಳನ್ನು ಕಾಣಬಹುದಾಗಿದೆ. ಬಳಕೆದಾರರಿಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಆಪ್‌ಗಳು ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಆದರೆ ಇವುಗಳಲ್ಲಿ ಕೆಲವು ಮಾತ್ರವೇ ಗುಣಮಟ್ಟದಾಗಿದ್ದು, ಇನ್ನು ಕೆಲವು ಗ್ರಾಹಕರನ್ನು ವಂಚನೆ ಮಾಡಲು ಮುಂದಾಗಿವೆ, ಈ ಹಿನ್ನಲೆಯಲ್ಲಿ ಫೇಕ್‌ ಆಪ್‌ಗಳನ್ನು ಗುರುತಿಸಲು ಗೂಗಲ್ ಮುಂದಾಗಿದೆ.

ಪ್ಲೇ ಸ್ಟೋರಿನಿಂದ 7 ಲಕ್ಷ ಆಪ್‌ಗಳನ್ನು ಕಿತ್ತು ಹಾಕಿದ ಗೂಗಲ್ : ಕಾರಣ ಗೊತ್ತಾ..?

ಈಗಾಗಲೇ ಮೂಲಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ ಸುಮಾರು 7 ಲಕ್ಷ ಆಪ್‌ಗಳನ್ನು ಪ್ಲೇ ಸ್ಟೋರಿನಿಂದ ಕಿತ್ತು ಹಾಕಿದೆ ಎನ್ನಲಾಗಿದೆ. ಇವುಗಳು ಗ್ರಾಹಕರಿಗೆ ನಷ್ಟವನ್ನು ಉಂಟು ಮಾಡುವುದಲ್ಲದೇ, ಗ್ರಾಹಕರ ಮಾಹಿತಿಯನ್ನು ಕದಿಯುತ್ತಿವೆ. ಕೆಲವು ಆಪ್‌ಗಳು ಗೂಗಲ್ ಪಾಲಿಸಿಗಳನ್ನು ಉಲ್ಲಂಘನೆ ಮಾಡಿರುವುದರಿಂದ ಇವುಗಳನ್ನು ಬ್ಯಾಡ್ ಆಪ್‌ಗಳೆಂದು ಗುರುತಿಸಿ ಪ್ಲೇ ಸ್ಟೋರಿನಿಂದ ತೆಗೆದುಹಾಕಿದೆ ಎನ್ನಲಾಗಿದೆ.

ಓದಿರಿ: ತಿಂಗಳ ಸಂಬಳ ಪಡೆಯುತ್ತಿದ್ದ ಪೇಟಿಎಂ ನೌಕರರು ಈಗ ಕೋಟ್ಯಾಧಿಪತಿಗಳು..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದು ಲಕ್ಷ ಡೆವಲಪರ್‌ಗಳು:

ಒಂದು ಲಕ್ಷ ಡೆವಲಪರ್‌ಗಳು:

ಗೂಗಲ್ ತನ್ನ ಪ್ಲೇ ಸ್ಟೋರಿನಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಆಪ್‌ ಡೆವಲಪರ್ ಗಳನ್ನು ನಿಷೇಧ ಮಾಡಿದ್ದು, ಕಳೆದ ವರ್ಷದಿಂದಲೇ ಈ ಕಾರ್ಯವನ್ನು ಆರಂಭಿಸಿದೆ ಎನ್ನಲಾಗಿದೆ. ಇದಕ್ಕಾಗಿಯೇ ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಬುದ್ದಿಮತ್ತೆಯ ಸಹಾಯವನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಸುಮಾರು ಒಂದು ಲಕ್ಷ ಡೆವಲಪರ್ ಗಳನ್ನು ನಿಷೇಧ ಮಾಡಿದೆ.

7 ಲಕ್ಷ ಆಪ್‌ಗಳು:

7 ಲಕ್ಷ ಆಪ್‌ಗಳು:

ಗೂಗಲ್ ಪಾಲಿಸಿ ಉಲ್ಲಂಘಿಸುವುದಲ್ಲದೇ, ಬೇರೆ ಆಪ್‌ಗಳನ್ನು ಕಾಪಿ ಮಾಡಿಕೊಂಡು ಕಾರ್ಯನಿರ್ವಹಿಸುವುದರೊಂದಿಗೆ ಗ್ರಾಹಕರನ್ನು ಜಾಹಿರಾತಿನ ಮೂಲಕ ವಂಚನೆ ಮಾಡುತ್ತಿದ್ದ ಸುಮಾರು 7 ಲಕ್ಷ ಆಪ್‌ಗಳನ್ನು ಪ್ಲೇ ಸ್ಟೋರಿನಿಂದ ಗೂಗಲ್ ತೆಗೆದು ಹಾಕಿದೆ ಎನ್ನಲಾಗಿದೆ. ಇದರಿಂದಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಸಹಾಯವಾಗಿದೆ.

ಮಾಲ್ವೇರ್ ತಡೆಗೆ:

ಮಾಲ್ವೇರ್ ತಡೆಗೆ:

ಈಗಾಗಲೇ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಮಾಲ್ವರ್ ದಾಳಿಯನ್ನು ನಡೆಸುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಬ್ಯಾಡ್ ಆಪ್‌ಗಳನ್ನು ನಿರ್ಮೂಲನೆಗೊಳಿಸಲು ಗೂಗಲ್ ಮುಂದಾಗಿದೆ. ಇದರಿಂದಾಗಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮಾಲ್ವೇರ್ ದಾಳಿಯಿಂದ ಸುರಕ್ಷಿತವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google removed over 7 lakh malicious Android apps from Play Store in 2017. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot