ಪ್ಲೇ ಸ್ಟೋರ್‌ನಿಂದ 85 ಆಪ್‌ಗಳನ್ನು ಕಿತ್ತೊಗೆದ ಗೂಗಲ್!

|

ಭದ್ರತಾ ಸಂಶೋಧನೆ ಮತ್ತು ತಂತ್ರಜ್ಞಾನ ಸಂಸ್ಥೆ ಟ್ರೆಂಡ್ ಮೈಕ್ರೋ ನಕಲಿ ಮತ್ತು ತೊಂದರೆ ಉಂಟುಮಾಡುವ ಆಪ್‌ಗಳ ಕುರಿತು ಎಚ್ಚರಿಕೆ ನೀಡಿದ ನಂತರ ಗೂಗಲ್ ಪ್ಲೇ ಸ್ಟೋರ್‌ನಲ್ಲಿದ್ದ ಸುಮಾರು 85 ಕಿರಿಕಿರಿ ಆಪ್‌ಗಳನ್ನು ಕಿತ್ತೊಗೆಯಲಾಗಿದೆ. ಕೆಲವೊಂದು ಅಪ್ಲಿಕೇಶನ್‌ಗಳು ಸಾಮಾನ್ಯ ಆಂಡ್ರಾಯ್ಡ್ ಕಾರ್ಯಗಳನ್ನು ಬಳಸಿಕೊಂದು ಬಳಕೆದಾರರು ತಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಿದಾಗ ಅವರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತಿದ್ದವು ಎಂದು ತಿಳಿದುಬಂದಿದೆ.

ಪ್ಲೇ ಸ್ಟೋರ್‌ನಿಂದ 85 ಆಪ್‌ಗಳನ್ನು ಕಿತ್ತೊಗೆದ ಗೂಗಲ್!

ಕೆಲವೊಂದು ಫೋಟೋಗ್ರಫಿ, ಬ್ಯೂಟಿ ಮತ್ತು ಗೇಮಿಂಗ್ ಆಪ್‌ಗಳ ಒಳಗಡೆ ಆಡ್‌ವೇರ್‌ ಅಡಗಿಕೊಂಡಿದ್ದವು. ಆ ಆಪ್‌ಗಳು ಜಾಹೀರಾತು ಪೂರ್ಣಗೊಳ್ಳದೆ ಆಪ್‌ ಬಳಸಲು ಅವು ಅನುವು ಮಾಡಿಕೊಡುತ್ತಿರಲಿಲ್ಲ. ಇವು ಸಾಮಾನ್ಯವಾಗಿ ಐದು ನಿಮಿಷಗಳ ಉದ್ದದ ಜಾಹೀರಾತುಗಳನ್ನು ಪ್ರಚೋದಿಸುತ್ತಿದ್ದವು ಎಂದು ಟ್ರೆಂಡ್ ಮೈಕ್ರೋ ಹೇಳಿತ್ತು. ಇಷ್ಟೇ ಅಲ್ಲದೇ, ಕೆಲ ಆಪ್‌ಗಳು ಹೋಮ್ ಸ್ಕ್ರೀನ್‌ನಲ್ಲಿ ತಮ್ಮ ಐಕಾನ್‌ಗಳನ್ನು ಶಾರ್ಟ್‌ಕಟ್‌ನೊಂದಿಗೆ ಬದಲಾಯಿಸುತ್ತಿದ್ದವು ಎಂದು ತಿಳಿಸಿತ್ತು

ಇಂತಹ ಆಪ್‌ಗಳು ಸ್ವಯಂ ಆಗಿ ಹೋಮ್ ಸ್ಕ್ರೀನ್ ಶಾರ್ಟ್‌ಕಟ್ ರಚನೆ ಮಾಡುದ ಬಳಿಕ ಅಲ್ಲಿರುವ ಆಪ್‌ಗಳ ಐಕಾನ್ ಅನ್ನು ಕೂಡ ಬದಲಿಸುತ್ತಿತ್ತು. ಜತೆಗೆ ಇಂತಹ ಆಪ್‌ಗಳನ್ನು ಸುಲಭದಲ್ಲಿ ಅನ್‌ಇನ್‌ಸ್ಟಾಲ್ ಮಾಡಲು ಆಯ್ಕೆ ಇರಲಿಲ್ಲ. ಡಿಲೀಟ್ ಮಾಡಿದರೂ ಸಹ ಫೋನ್‌ನಲ್ಲಿ ಕಾರ್ಯವೆಸಗುತ್ತಿತ್ತು ಎಂದು ಭದ್ರತಾ ಸಂಸ್ಥೆ ವರದಿ ನೀಡಿತ್ತು. ಅದರಂತೆ ಗೂಗಲ್ 85 ಆಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಿದೆ. ಗ್ರಾಹಕರ ಭದ್ರತೆ ಮತ್ತು ಹಿತರಕ್ಷಣೆಗಾಗಿ ಗೂಗಲ್ ನಿಯತವಾಗಿ ಪ್ಲೇಸ್ಟೋರ್ ಆಪ್‌ಗಳ ಪರಿಶೀಲನೆ ನಡೆಸುತ್ತದೆ.

ಪ್ಲೇ ಸ್ಟೋರ್‌ನಿಂದ 85 ಆಪ್‌ಗಳನ್ನು ಕಿತ್ತೊಗೆದ ಗೂಗಲ್!

ಮತ್ತೊಂದು ಕುತೋಹಲ ವಿಷಯವೆಂದರೆ, ಈ ಆಡ್‌ವೇರ್ ಆಂಡ್ರಾಯ್ಡ್‌ನ ಹಳೆಯ ಆವೃತ್ತಿಗಳನ್ನು ಚಾಲನೆ ಮಾಡುವ ಫೋನ್‌ಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಟ್ರೆಂಡ್ ಮೈಕ್ರೋ ಗಮನಸೆಳೆದಿದೆ. ಆಂಡ್ರಾಯ್ಡ್ 8.0 ಮತ್ತು ನಂತರದ ಆವೃತ್ತಿಗಳು ಶಾರ್ಟ್‌ಕಟ್ ರಚಿಸಲು ಅಪ್ಲಿಕೇಶನ್‌ಗೆ ಅನುಮತಿಸುವ ಮೊದಲು ಬಳಕೆದಾರರ ದೃಢೀಕರಣವನ್ನು ಕೇಳುವ ಕಾರ್ಯವನ್ನು ಹೊಂದಿದೆ. ಇದು ಗುಪ್ತ ಚಟುವಟಿಕೆಗೆಗಳ ಬಗ್ಗೆ ಆಂಡ್ರಾಯ್ಡ್ 8.0 ಮತ್ತು ನಂತರದ ಆವೃತ್ತಿಗಳ ಬಳಕೆದಾರರನ್ನು ಎಚ್ಚರಿಸಿದೆ.

ಸಿಹಿಸುದ್ದಿ!..ಶಿಯೋಮಿ ರೆಡ್‌ಮಿ ನೋಟ್ 7 ಪ್ರೊ ಬೆಲೆ ಇಳಿಕೆ!ಸಿಹಿಸುದ್ದಿ!..ಶಿಯೋಮಿ ರೆಡ್‌ಮಿ ನೋಟ್ 7 ಪ್ರೊ ಬೆಲೆ ಇಳಿಕೆ!

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಡ್‌ವೇರ್‌ನ ಹರಡುವಿಕೆಯನ್ನು ಗಮನಿಸಿದರೆ, ಪರಿಚಯವಿಲ್ಲದ ಅಪ್ಲಿಕೇಶನ್‌ಗಳ ವಿಮರ್ಶೆಗಳನ್ನು ಪರಿಶೀಲಿಸುವುದು ಇದೀಗ ಮುಖ್ಯವಾಗಿದೆ. ಇಂತಹ ಅಪ್ಲಿಕೇಶನ್‌ಗಳು ನಿರ್ದಿಷ್ಟವಾಗಿ ಹಲವಾರು ಒನ್ ಸ್ಟಾರ್ ಸ್ಕೋರ್‌ಗಳಿಂದ ಕೂಡಿರುತ್ತವೆ. ಬಳಕೆದಾರರು ತಾವು ಎದುರಿಸಿದ ಸಮಸ್ಯೆಗಳನ್ನು ಪ್ಲೇ ಸ್ಟೋರ್‌ನಲ್ಲಿ ಬರೆದಿರುತ್ತಾರೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಆಡ್‌ವೇರ್ ಅನ್ನು ಮೊದಲೇ ಸ್ಥಾಪಿಸಲಾಗಿರುವ ಪ್ರಕರಣಗಳ ಬಗ್ಗೆ ಗೂಗಲ್ ಎಚ್ಚರಿಕೆ ವಹಿಸುತ್ತಿದ್ದರೂ ಸಹ ನಿಯಂತ್ರಣ ಕಷ್ಟವಿದೆ.

Best Mobiles in India

English summary
ಕೆಲವೊಂದು ಫೋಟೋಗ್ರಫಿ, ಬ್ಯೂಟಿ ಮತ್ತು ಗೇಮಿಂಗ್ ಆಪ್‌ಗಳ ಒಳಗಡೆ ಆಡ್‌ವೇರ್‌ ಅಡಗಿಕೊಂಡಿದ್ದವು. | Google has removed 85 apps from the Google Play store after security researchers at Trend Micro found a particularly annoying adware scheme hiding inside. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X