ಚೀನಾ ಡೆವಲಪರ್ಗೆ ಸೇರಿದ 100ಕ್ಕೂ ಹೆಚ್ಚು ಆಪ್‌ಗಳಿಗೆ ನಿಷೇಧ!..ಕಾರಣ ಗಂಭೀರ!!

|

ಶಂಕಿತ ಸೈಬರ್ ದಾಳಿ ಹಾಗೂ ಡೇಟಾ ಉಲ್ಲಂಘನೆ ಸಾಧ್ಯತೆ ಹಿನ್ನೆಲೆಯಲ್ಲಿ ಚೀನಿನಾದ ಪ್ರಖ್ಯಾತ ಡೆವಲಪರ್ಗೆ ಸೇರಿದ 100ಕ್ಕೂ ಹೆಚ್ಚು ಮೊಬೈಲ್ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಈಗಾಗಲೇ 40 ಆಪ್ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದ್ದು, ಉಳಿದ ಆಪ್‌ಗಳಿಗೂ ನಿಷೇಧವಾಗಲಿದೆ ಎಂದು ಹೇಳಲಾಗಿದೆ.

ಹೌದು, ಚೀನಾದ ಜನಪ್ರಿಯ ಡೆವಲಪರ್ ಡಿಒ ಗ್ಲೋಬಲ್ ಕಂಪೆನಿಯನ್ನು ಗೂಗಲ್ ಕಂಪೆನಿ ನಿಷೇಧಿಸುವ ಉದ್ದೇಶವನ್ನು ಹೊಂದಿದೆ ಬುಜ್ ಪೀಡ್ ನ್ಯೂಸ್ ಇಂದು ವರದಿ ಮಾಡಿದೆ. ಡಿಒ ಗ್ಲೋಬಲ್ ಕಂಪೆನಿಯ ಆಪ್‌ಗಳಿಂದ ಉಲ್ಲಂಘನೆ ಕಂಡುಬಂದಿರುವುದರಿಂದ 250 ದಶಲಕ್ಷಕ್ಕಿಂತ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಆಪ್‌ಗಳು ಡಿಲೀಟ್ ಆಗುತ್ತಿವೆ ಎನ್ನಲಾಗಿದೆ.

ಚೀನಾ ಡೆವಲಪರ್ಗೆ ಸೇರಿದ 100ಕ್ಕೂ ಹೆಚ್ಚು ಆಪ್‌ಗಳಿಗೆ ನಿಷೇಧ!..ಕಾರಣ ಗಂಭೀರ!!

ಫ್ರಖ್ಯಾತ ಮಾಧ್ಯಮ ವರದಿಗಳ ಪ್ರಕಾರ, ಡಿಒ ಗ್ಲೋಬಲ್ ಕಂಪೆನಿಯ ಆಪ್‌ಗಳು ಜಾಹಿರಾತು ರಹಿತ ಎಂದು ಹೇಳಿಕೊಂಡರೂ ಜಾಹಿರಾತುಗಳನ್ನು ಪ್ರಕಟಿಸುತ್ತಿವೆ. ಆದರೆ, ಇಲ್ಲಿ ಮುಖ್ಯವಾಗಿ ತಿಳಿಯಬೇಕಾದದ್ದು ಏನೆಂದರೆ, ಡಿಒ ಗ್ಲೋಬಲ್ ಕಂಪೆನಿಯ ಹೆಚ್ಚು ಆಪ್‌ಗಳು ಆಟೋಮ್ಯಾಟಿಕ್ ಆಗಿ ಜಾಹಿರಾತುಗಳನ್ನು ಕ್ಲಿಕ್ ಮಾಡಿಕೊಳ್ಳುತ್ತಿದ್ದವು ಎಂಬ ಗಂಭೀರ ಆರೋಪ ಎದುರಾಗಿದೆ.

ಹಾಗಾಗಿ, ದೈತ್ಯ ಸರ್ಚ್ ಇಂಜಿನ್ ಗೂಗಲ್, ಇಂಟರ್ನೆಟ್ ದೈತ್ಯ ಜಾಹೀರಾತು ಉತ್ಪನ್ನಗಳಿಗೆ ನಿಷೇಧ ವಿಸ್ತರಿಸಿದೆ. ಜಾಗತಿಕ ಅಪ್ಲಿಕೇಶನ್‌ಗಳು ಗೂಗಲ್‌ನ AdMob ನೆಟ್‌ವರ್ಕ್ ಮೂಲಕ ಖರೀದಿಸಲು ಜಾಹೀರಾತಿನ ಪಟ್ಟಿಯನ್ನು ಒದಗಿಸುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಪ್ಲೇ ಸ್ಟೋರ್ನಿಂದ ತೆಗೆದುಹಾಕುವಿಕೆಯು ಅತಿದೊಡ್ಡ ನಿಷೇಧದಲ್ಲೊಂದನ್ನು ಗುರುತಿಸುತ್ತದೆ.

ಚೀನಾ ಡೆವಲಪರ್ಗೆ ಸೇರಿದ 100ಕ್ಕೂ ಹೆಚ್ಚು ಆಪ್‌ಗಳಿಗೆ ನಿಷೇಧ!..ಕಾರಣ ಗಂಭೀರ!!

ಜಾಹೀರಾತು ವೇದಿಕೆ ಮೂಲಕ ಸುಮಾರು 800 ದಶಲಕ್ಷ ಬಳಕೆದಾರರನ್ನು ತಲುಪುತ್ತಿರುವ ಆಪ್‌ಗಳ ದುರುದ್ದೇಶಪೂರಿತ ವರ್ತನೆಗಳನ್ನು ಚುರುಕುನಿಂದ ತನಿಖೆ ಮಾಡುತ್ತೇವೆ. ಸೈಬರ್ ಉಲ್ಲಂಘನೆ ಕಂಡುಬಂದರೆ ಮತ್ತಷ್ಟು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪೆನಿ ವಕ್ತಾರರು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದನ್ನು ನಾವು ನೋಡಬಹುದು.

Best Mobiles in India

English summary
Google removing 100 apps from Chinese developer to ward off cyberattacks. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X