ಜಿಮೇಲ್ ನಲ್ಲಿ ಸ್ಪೈ ಮಾದರಿಯಲ್ಲಿ ನಿಗೂಢವಾಗಿ ಮೇಲ್ ಮಾಡುವುದು ಹೇಗೆ..?

By Precilla Dias
|

ಗೂಗಲ್ ಹೊಸದಾಗಿ ಜಿಮೇಲ್ ಅನ್ನು ವಿನ್ಯಾಸಗೊಳಿಸಿದ್ದು, ಇದರೊಂದಿಗೆ ಹಲವು ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದರಿಂದಾಗಿ ಇನ್ನಷ್ಟು ಹೊಸ ಬಳಕೆದಾರರನ್ನು ಸಳೆಯುವುದಲ್ಲದೇ, ಇರುವವರಿಗೆ ಹೊಸ ಮಾದರಿಯ ಆಯ್ಕೆಯನ್ನು ನೀಡುವ ಮೂಲಕ ಅವರಿಗೆ ಜಿಮೇಲ್ ಬಳಕೆಯನ್ನು ಇನ್ನಷ್ಟು ಸುಲಭಗೊಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಜಿಮೇಲ್ ನಲ್ಲಿ ಸ್ಪೈ ಮಾದರಿಯಲ್ಲಿ ನಿಗೂಢವಾಗಿ ಮೇಲ್ ಮಾಡುವುದು ಹೇಗೆ..?

ಜಿಮೇಲ್ ಹೊಸದಾಗಿ ತನ್ನ ಬಳಕೆದಾರರಿಗೆ ಸ್ನೋಜ್ಡ್ ಇಮೇಲ್, ಸ್ಮಾರ್ಟ್ ರಿಪ್ಲೇ ಸೇರಿದಂತೆ ಹಲವು ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಮತ್ತೊಂದು ಆಯ್ಕೆಯನ್ನು ನೀಡಿದ್ದು, ಅದೇ ಕಾನ್ಪಿಡೇನ್ಷಿಯಲ್ ಮೊಡ್, ಇದು ಇನ್ ಸ್ಟಾಗ್ರಾಮ್ ಸ್ಟೋರಿಸ್ ಮಾದರಿಯಲ್ಲಿ 24 ಗಂಟೆಗಳಲ್ಲಿ ನೀವು ಕಳುಹಿಸಿದ ಇಮೇಲ್ ಮಾಯವಾಗುವ ಸೇವೆಯಾಗಿದೆ. ನೀವು ನಿಗಧಿ ಮಾಡಿದ ಸಮಯಕ್ಕೆ ನಿಮ್ಮ ಮೇಲ್ ಆಟೋಮೆಟಿಕ್ ಡಿಲೀಟ್ ಆಗಲಿದೆ.

ಜಿಮೇಲ್ ಕಾನ್ಪಿಡೇನ್ಷಿಯಲ್ ಮೊಡ್ ಬಳಕೆ:

ಹಂತ 01:

ಮೊದಲಿಗೆ ನೀವು ಕಂಪೋಸ್ಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿದೆ. ನಂತರದಲ್ಲಿ ಕಳುಹಿಸಬೇಕಾದರವ ಮೇಲ್ ಐಡಿಯನ್ನು ದಾಖಲಿಸಬೇಕಾಗಿದೆ. ಇದಾದ ನಂತರದಲ್ಲಿ ಬಾಡಿ ಬರೆಯಬೇಕಾಗಿದ್ದು, ನಂತರದಲ್ಲಿ ಆಟ್ಯಾಚ್ ಮಾಡಬೇಕಾದ ಫೈಲ್ ಗಳನ್ನು ಸೇರಿಸಬಹುದಾಗಿದೆ.

ಹಂತ 02:

ಇದಾದ ನಂತರದಲ್ಲಿ ನೀವು ಚಿಕ್ಕದಾದ ಲಾಕ್ ಮತ್ತು ಟೈಮಿಂಗ್ ಬಟನ್ ಅನ್ನು ಕಾಣಬಹುದಾಗಿದೆ. ಅದರ ಮೇಲೆ ಕ್ಲಿಕ್ ಮಾಡಬೇಕಾಗಿದೆ.

ಹಂತ 03:

ಇದನ್ನು ಸೆಲೆಕ್ಟ್ ಮಾಡಿಕೊಂಡ ನಂತರದಲ್ಲಿ ಪಾಪ್ ಅಪ್ ವಿಂಡೋವೊಂದು ತೆರೆದುಕೊಳ್ಳಲಿದೆ. ಅಲ್ಲಿ ನೀವು ಎಕ್ಸ್ ಪೇರಟಿಟೆಷನ್ ಡೇಟ್ ಮತ್ತು ಟೈಮ್ ಅನ್ನು ಕಾಣಬಹುದಾಗಿದೆ. ಅಲ್ಲಿ ಒಂದು ದಿನ, ಒಂದು ವಾರ. ಮತ್ತು ಒಂದು ತಿಂಗಳ ಅವಧಿಯನ್ನು ಸೆಲೆಕ್ಡ್ ಮಾಡಿಕೊಳ್ಳಬಹುದಾಗಿದೆ. ನೀವು ಸೆಲೆಕ್ಟ್ ಮಾಡಿದ ಸಮಯಕ್ಕೆ ಮೇಲ್ ಡಿಲೀಟ್ ಆಗಲಿದೆ. ನೀವು ಡೇಟ್ ಮತ್ತು ಟೈಮ್ ಸೆಲೆಕ್ಟ್ ಮಾಡಿದ ನಂತರದಲ್ಲಿ ನೀವು ಸೇವ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 04:

ಇದಲ್ಲದೇ ನಿಮ್ಮ ಮೇಲ್ ಗೆ ಪಾಸ್ ಕೋಡ್ ವೊಂದನ್ನು ಸಹ ಇಡಬಹುದಾಗಿದೆ. ನೀವು ಪಾಸ್ ಕೋಡ್ ಅನ್ನು ಹಾಕಿ ಮೇಲ್ ಮಾಡಬಹುದಾಗಿದೆ. ನಂತರದಲ್ಲಿ ಅವರಿಗೆ ಪಾಸ್ ಕೋಡ್ ಅನ್ನು ಮೊಬೈಲ್ OTP ಮೂಲಕ ಕಳುಹಿಸಬಹುದಾಗಿದೆ. ಪಾಸ್ ಕೋಡ್ ಸೆಲೆಕ್ಡ್ ಮಾಡಿದ ಮೇಲೆ ಸೆಂಟ್ ಬಟನ್ ಕ್ಲಿಕ್ ಮಾಡಿ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಹಂತ 05;

ಹೀಗೇ ಮೇಲ್ ಸ್ವೀಕರಿಸಿದವರು ನೀವು ಮೊಬೈಲ್ ನಂಬರ್ ಆಡ್ ಮಾಡಿದ ಸಂದರ್ಭದಲ್ಲಿ OTP ಯೊಂದನ್ನು ಪಡೆದುಕೊಳ್ಳುತ್ತಾರೆ. ಅದನ್ನು ಆಡ್ ಮಾಡಿದ ನಂತರದಲ್ಲಿ ಮಾತ್ರವೇ ಅವರು ಮೇಲ್ ಅನ್ನು ಓಪನ್ ಮಾಡಲು ಸಾಧ್ಯವಾಗುವತ್ತದೆ.

Best Mobiles in India

English summary
Google rolls out Gmail Confidential Mode with disappearing e-mails; here’s how to use it. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X