Subscribe to Gizbot

ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ನ 'ಡೇಟಾಲಿ' ಆಪ್ ಇರಲೇಬೇಕು ಎನ್ನಲು 5 ಕಾರಣಗಳು!!

Written By:

ಕಳೆದ ವರ್ಷ ಟ್ರಯಾಂಗಲ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಗೂಗಲ್ ಆಪ್ ಈಗ ಡೇಟಾಲಿ ಎಂಬ ಹೆಸರಿನಲ್ಲಿ ಹೊಸ ರೂಪ ಪಡೆದು ಬಂದಿದರುವುದು ನಿಮಗೆಲ್ಲಾ ಗೊತ್ತೇ ಇದೆ.! ಎಷ್ಟು ಗಂಟೆಗಳಲ್ಲಿ ಎಷ್ಟು ಡೇಟಾ ಬಳಕೆಯಾಗಿದೆ? ಬಳಸುತ್ತಿರುವ ಯಾವ ಆಪ್‌ಗೆ ಎಷ್ಟು ಡೇಟಾ ಬಳಕೆಯಾಗಿದೆ ಎಂಬೆಲ್ಲಾ ಮಾಹಿತಿಗಳನ್ನು ನೀಡುವ ಈ ಆಪ್‌ ಜನಪ್ರಿಯ ಕೂಡ ಆಗಿದೆ.!!

ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ನ 'ಡೇಟಾಲಿ' ಆಪ್ ಇರಲೇಬೇಕು ಎನ್ನಲು 5 ಕಾರಣಗಳು!!

ಮೊಬೈಲ್ ಡೇಟಾ ಬಳಕೆಯನ್ನು ನಿಯಂತ್ರಣದಲ್ಲಿಡಬಹುದಾದ ಸೌಲಭ್ಯವಿರುವ ಡೇಟಾಲಿ ಆಪ್ ಮೊಬೈಲ್ ಫೋನ್‌ಗಳಲ್ಲಿ ಡೇಟಾ ಬಳಕೆ ನಿಯಂತ್ರಿಸುವ ಕಾರ್ಯವನ್ನು ಮಾತ್ರ ಮಾಡುವುದಲ್ಲದೇ ಹಲವು ಕೆಲಸಗಳನ್ನು ಮಾಡುತ್ತಿದೆ.! ಹಾಗಾಗಿಯೇ, ಗೂಗಲ್ ಟ್ರಯಾಂಗಲ್ ಎಂಬ ಹೆಸರು ತೆಗೆದು ಡೇಟಾಲಿ ಎಂದು ಹೆಸರಿಟ್ಟಿದೆ.! ಹಾಗಾದರೆ, ಪ್ರಸ್ತುತ ಡೇಟಾಲಿ ಆಪ್ ಕಾರ್ಯಗಳು ಯಾವುವು? ಆಪ್‌ನ ವಿಶೇಷತೆಗಳೇನು? ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈಫೈ ಕನೆಕ್ಷನ್ ಹುಡುಕಲು!!

ವೈಫೈ ಕನೆಕ್ಷನ್ ಹುಡುಕಲು!!

ಮೊಬೈಲ್ ಫೋನ್‌ಗಳಲ್ಲಿ ಡೇಟಾ ಬಳಕೆ ನಿಯಂತ್ರಿಸುವುದು ಮಾತ್ರ ಈ ಮೊದಲಿದ್ದ ಟ್ರಯಾಂಗಲ್ ಆಪ್‌ನಲ್ಲಿ ಸಾಧ್ಯವಾಗಿತ್ತು. ಆದರೆ ಡೇಟಾಲಿ ಹತ್ತಿರದ ವೈಫೈ ಕನೆಕ್ಷನ್ ಎಲ್ಲಿದೆ ಎಂಬುದನ್ನು ಹುಡುಕಲು ಗೂಗಲ್ ಮ್ಯಾಪ್ ಸಹ ತೋರಿಸುತ್ತದೆ.! ಇದು ಇತ್ತೀಚಿಗೆ ಸೇರಿಸಿರುವ ಫೀಚರ್ ಆಗಿದೆ.!!

TEZ App : ಗೂಗಲ್ ಭಾರತೀಯರಿಗಾಗಿ ಗೂಗಲ್‌ನಿಂದ Tez ಪೇಮೆಂಟ್ ಆಪ್
ಆಪ್ ಬ್ಲಾಕ್ ಮಾಡಬಹುದು!!

ಆಪ್ ಬ್ಲಾಕ್ ಮಾಡಬಹುದು!!

ಯಾವುದಾದರೂ ಒಂದು ಆಪ್‌ ನಿಮಗೆ ತಿಳಿಯದಂತೆ ಹೆಚ್ಚು ಡೇಟಾವನ್ನು ಖಾಲಿ ಮಾಡುತ್ತಿದೆ ಎಂದರೆ ಅ ಆಪ್ ಯಾವುದು ಎಂಬುದನ್ನು ಗೂಗಲ್ ಡೇಟಾಲೀ ಆಪ್ ಮೂಲಕ ತಿಳಿಯಬಹುದು. ನಂತರ ಆ ಆಪ್ ಹೆಚ್ಚು ಡೇಟಾ ಬಳಕೆ ಮಾಡದಂತೆ ಆ ಆಪ್‌ ಅನ್ನು ಬ್ಲಾಕ್ ಸಹ ಮಾಡಬಹುದು.!!

ಆಪ್‌ ಕಾರ್ಯನಿರ್ವಹಣೆ ಹೇಗೆ?

ಆಪ್‌ ಕಾರ್ಯನಿರ್ವಹಣೆ ಹೇಗೆ?

ಗೂಗಲ್ ಡೇಟಾಲೀ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಿದರೆ ಈ ಆಪ್ ನಿಮ್ಮ ವಿಪಿಎನ್ ನೆಟ್‌ವರ್ಕ್ ಮಾನಿಟರ್ ಮಾಡಲು ಕೇಳಿಕೊಳ್ಳುತ್ತದೆ. ಇದಕ್ಕೆ ನೀವು ಸಮ್ಮತಿಸಿದೆರೆ ಮೊಬೈಲ್ ಡೇಟಾ ಹೆಚ್ಚು ಖಾಲಿಯಾಗದಂತೆ ಈ ಆಪ್ ನೋಡಿಕೊಳ್ಳುತ್ತದೆ.!!

ಯಾವುದಕ್ಕೆ ಎಷ್ಟು ಡೇಟಾ ಬಳಕೆ!!

ಯಾವುದಕ್ಕೆ ಎಷ್ಟು ಡೇಟಾ ಬಳಕೆ!!

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿರುವ ಯಾವ ಯಾವ ಆಪ್‌ಗಳು, ಯಾವ ಯಾವ ಸಮಯದಲ್ಲಿ ಎಷ್ಟೆಷ್ಟು ಡೇಟಾ ಬಳಸಿಕೊಳ್ಳುತ್ತವೆ ಎಂಬೆಲ್ಲಾ ಮಾಹಿತಿಯನ್ನು ಗೂಗಲ್ ಡೇಟಾಲೀ ಆಪ್ ನೀಡುತ್ತದೆ. ಇದರಿಂದ ನೀವು ಮೊಬೈಲ್ ಡೇಟಾ ಹೇಗೆಲ್ಲಾ ಖರ್ಚಾಗಿದೆ ಎಂದು ತಿಳಿಯಬಹುದು.!!

ಕೇವಲ 5MB ಇದೆ.!!

ಕೇವಲ 5MB ಇದೆ.!!

ಇಷ್ಟೆಲ್ಲಾ ಉಪಯೋಗವಿರುವ ಈ ಗೂಗಲ್ ಡೇಟಾಲೀ ಆಪ್ ಕೇವಲ 5MB ಗ್ರಾತ್ರದಲ್ಲಿದ್ದು, ಗೂಗಲ್ ಪ್ಲೇ ಸ್ಟೋರ್‌ ಮೂಲಕ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುವ ಈ ಆಪ್‌ ಅನ್ನು ಡೌನ್‌ಲೋಡ್ ಮಾಡಿ ದಿನಕ್ಕೆ 1GB ಡೇಟಾ ಸಾಲೊಲ್ಲಾ ಅನ್ನೋರು ಮೊಬೈಲ್ ಡೇಟಾ ಉಳಿಸಿಕೊಳ್ಳಿ.!!

ಓದಿರಿ:'ಪೇಟಿಎಂ ಕ್ಯೂಆರ್' ಆಯ್ಕೆಯನ್ನು ನೀಡಿದೆ ಪೇಟಿಎಂ!!..ಏನೆಲ್ಲಾ ಲಾಭ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Google has released a new Android app that can help you monitor and control the amount of data you use. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot