ಸ್ಮಾರ್ಟ್‌ಫೋನ್‌ನಲ್ಲಿ ಮಕ್ಕಳ ಏನೇನು ಮಾಡುತ್ತಾರೆ ತಿಳಿಯುವುದು ಹೇಗೆ?

Written By:

ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಕೊಡದೆ ಇರಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಪ್ರತಿಮನೆಯಲ್ಲೂ ಉಂಟಾಗಿದೆ.!! ಹಾಗಾಗಿ, ಪೋಷಕರು ಒಲ್ಲದ ಮನಸ್ಸಿನಿಂದಲೇ ಸ್ಮಾರ್ಟ್‌ಫೋನ್‌ ಅನ್ನು ತಮ್ಮ ಮುದ್ದು ಮಕ್ಕಳಿಗೆ ಕೊಡುತ್ತಾರೆ.!!

ಆದರೆ, ಮಕ್ಕಳ ಕೈಗೆ ಸ್ಮಾರ್ಟ್‌ಫೋನ್‌ ಕೊಡುವಾಗ ಏನೋ ಭಯ.! ಭಯಾನಕ, ಹಾರರ್ ವಿಡಿಯೊಗಳು ಮತ್ತು ಕೆಟ್ಟ ಚಿತ್ರಗಳನ್ನು ಮಕ್ಕಳು ಎಲ್ಲಿ ನೋಡುತ್ತಾರೊ ಎನ್ನುವ ಅಂತಂಕ ಎಲ್ಲಾ ಪೋಷಕರಿಗೂ ಸಹಜವಾಗಿ ಇದ್ದೇ ಇರುತ್ತದೆ. ಆದರೆ, ಇನ್ನು ಹಾಗೆ ಚಿಂತೆಪಡುವ ಅವಶ್ಯಕತೆಯೇ ಇಲ್ಲ!!

ಸ್ಮಾರ್ಟ್‌ಫೋನ್‌ನಲ್ಲಿ ಮಕ್ಕಳ ಏನೇನು ಮಾಡುತ್ತಾರೆ ತಿಳಿಯುವುದು ಹೇಗೆ?

ಪ್ರಪಂಚದಲ್ಲಿ ನಿಮ್ಮಂತೆಯೇ ಇರುವ 7 ಜನರನ್ನು ಹುಡುಕಬೇಕೆ? ಈ ಆಪ್ ಡೌನ್‌ಲೋಡ್ ಮಾಡಿ!!

ಹೌದು, ಗೂಗಲ್ ಕಂಪೆನಿಯವರು ಮಕ್ಕಳಿಗಾಗಿ 'ಫ್ಯಾಮಿಲಿ ಲಿಂಕ್' ಎಂಬ ಆಂಡ್ರಾಯ್ಡ್ ಆಪ್ ಅನ್ನು ಬಿಡುಗಡೆಮಾಡಿದ್ದು, ಮಕ್ಕಳು ಮೊಬೈಲ್‌ನಲ್ಲಿ ಯಾವ ಗೇಮ್ ಆಡುತ್ತಿದ್ದಾರೆ, ಅದರಲ್ಲಿ ಏನು ಮಾಡುತ್ತಿದ್ದಾರೆ, ಎಷ್ಟು ಸಮಯ ಸ್ಮಾರ್ಟ್‌ಫೋನ್‌ನಲ್ಲಿ ಕಳೆದಿದ್ದಾರೆ ಎಂಬುದು ಈ ಆಪ್‌ನಲ್ಲಿ ದಾಖಲಾಗಿರುತ್ತದೆ. ಇನ್ನು ಭಯಾನಕ, ಹಾರರ್ ವಿಡಿಯೊಗಳು, ಕೆಟ್ಟ ಚಿತ್ರಗಳನ್ನು ಮಕ್ಕಳಿಗೆ ಕಾಣದಂತೆ ಲಾಕ್ ಮಾಡುವ ಸೌಲಭ್ಯವನ್ನು ಆಪ್ ಸೆಟ್ಟಿಂಗ್ಸ್‌ನಲ್ಲಿ ನೀಡಲಾಗಿದೆ.!!

ಸ್ಮಾರ್ಟ್‌ಫೋನ್‌ನಲ್ಲಿ ಮಕ್ಕಳ ಏನೇನು ಮಾಡುತ್ತಾರೆ ತಿಳಿಯುವುದು ಹೇಗೆ?

ಈ ಆಪ್ 13 ವರ್ಷದೊಳಗಿನ ಮಕ್ಕಳಿಗಾಗಿ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದ್ದು, ಪೋಷಕರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಆಪ್ ಡೌನ್‌ಲೋಡ್‌ ಮಾಡಿಕೊಳ್ಳಬೇಕು.ಆಪ್ ಜೊತೆ ನೋಂದಣಿ ಮಾಡಿದ ನಂತರ ಸಾಧನವನ್ನು ತಮ್ಮ ಮಕ್ಕಳಿಗೆ ನೀಡಬಹುದು.!!

English summary
he company built an Android app that will give control to your children's smartphone.to know more visit to kannada.gizbot.co
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot