Subscribe to Gizbot

ಗೂಗಲ್ ಜಿಬೋರ್ಡ್ ಕೀಬೋರ್ಡ್ ಬದಲಾಗಿದೆ: ಹೊಸದೇನಿದೆ ಗೊತ್ತಾ..?

Written By:

ಗೂಗಲ್ ದಿನೇ ದಿನೇ ತನ್ನ ಆಪ್‌ಗಳನ್ನು ಆಪ್‌ಡೇಟ್ ಮಾಡುತ್ತಿದ್ದು, ಬಳಕೆದಾರಿಗೆ ಹೊಸದಾಗಿ ಮತ್ತು ಹೊಸ ಅನುಭವನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದೆ. ಯೂಟ್ಯೂಬ್‌ನಲ್ಲಿ ಬದಲಾವಣೆಯನ್ನು ತಂದ ಮಾದರಿಯಲ್ಲೇ ಗೂಗಲ್ ಜಿಬೋರ್ಡ್ ಕೀಬೋರ್ಡ್‌ನಲ್ಲಿಯೂ ಮಹತ್ವದ ಬದಲಾವಣೆಯನ್ನು ತಂದಿದ್ದು, ಬಳಕೆದಾರರ ಸ್ನೇಹಿಯಾಗಿಸಲು ಮುಂದಾಗಿದೆ.

ಗೂಗಲ್ ಜಿಬೋರ್ಡ್ ಕೀಬೋರ್ಡ್ ಬದಲಾಗಿದೆ: ಹೊಸದೇನಿದೆ ಗೊತ್ತಾ..?

ಓದಿರಿ: ದಿನದಿಂದ ದಿನಕ್ಕೆ ಕುಸಿಯುತ್ತಿದೆ ಜಿಯೋ ಜನಪ್ರಿಯತೆ: ಇಲ್ಲಿದೇ ಸಾಕ್ಷಿ..!!!

ಗೂಗಲ್ ತನ್ನ ಜಿಬೋರ್ಡ್ ಕೀಬೋರ್ಡ್ ನಲ್ಲಿ ಮುಂದಿನ ತಲೆಮಾರಿನ ಟೂಲ್ ಗಳನ್ನು ಹೊಸದಾಗಿ ಬಳಕೆ ಮಾಡಿದ್ದು, ಗೂಗಲ್ ವೆಬ್ ಸಹಾಯವನ್ನು ಕೀಬೋರ್ಡಿನಲ್ಲೇ ಪಡೆಯವಂತಹ ಆಯ್ಕೆಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ ಟೈಪಿಂಗ್:

ಸ್ಮಾರ್ಟ್‌ ಟೈಪಿಂಗ್:

ಗೂಗಲ್ ಸದ್ಯ ಟೈಪಿಂಗ್ ಅನುಭವನ್ನೇ ಬದಲಾಯಿಸಲು ಮುಂದಾಗಿದ್ದು, ಇದಕ್ಕಾಗಿ ಹೊಸ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಸ್ವೈಪ್ ಮಾಡುವ ಮೂಲಕ ಟೈಪ್ ಮಾಡುವುದರೊಂದಿಗೆ ಒಂದೇ ಒಂದು ಕೀ ಒತ್ತಿ ಹಿಡಿದರೆ ನಿಮ್ಮ ಡಿಕ್ಷನರಿ ಅನ್ವಯ ಹೊಸ ಪದಗಳು ಅಲ್ಲಿಯೇ ಸೃಷ್ಟಿಯಾಗಲಿದೆ.

ಎಮೋಜಿ ಬರೆಯಬಹುದು:

ಎಮೋಜಿ ಬರೆಯಬಹುದು:

ನಿಮ್ಮ ನೆಚ್ಚಿನ ಎಮೋಜಿಗಳನ್ನು ಡ್ರಾ ಮಾಡುವ ಮೂಲಕ ಎಮೋಜಿಗಳನ್ನು ಸೆಲೆಕ್ಟ್ ಮಾಡಿಕೊಳ್ಳಬಹುದಾಗಿದ್ದು, ಇದಕ್ಕಾಗಿ ಹೊಸದಾಗಿ ಹಾಂಡ್ ರೈಟಿಂಗ್ ಟೂಲ್ ಬಿಡುಗಡೆ ಮಾಡಿದೆ. ಎಮೋಜಿ ಡ್ರಾ ಮಾಡಿದರೆ ಅದೇ ಮಾದರಿಯ ಎಮೋಜಿಗಳು ಅಲ್ಲಿ ಕಾಣಿಸಿಕೊಳ್ಳಲಿದೆ.

ವಾಕ್ಯ ರಚನೆಗೆ ಸಹಾಯಕಾರಿ:

ವಾಕ್ಯ ರಚನೆಗೆ ಸಹಾಯಕಾರಿ:

ನೀವು ಯಾವುದಾರು ಮೇಸೆಜ್ ಟೈಪ್ ಮಾಡುತ್ತಿರುವ ಸಂದರ್ಭದಲ್ಲಿ ನೀವು ಒಂದು ಪದ ಟೈಪ್ ಮಾಡಿದರೆ ಅದರ ಮುಂದಿನ ಪದವನ್ನು ಅದೇ ತೋರಿಸಲಿದೆ. ಇದು ನಿಮ್ಮ ವಾಕ್ಸ್ ರಚನೆಗೆ ಹೆಚ್ಚಿನ ಸಹಾಯವನ್ನು ಮಾಡಲಿದೆ. ಸದ್ಯ ಇದು ಇಂಗ್ಲೀಷ್ ಭಾಷೆಗೆ ಮಾತ್ರವೇ ಸಿಮೀತವಾಗಿದೆ.

ವೇಗವಾಗಿ ಟೈಪ್ ಮಾಡಲು ಸಹಾಯಕಾರಿ:

ವೇಗವಾಗಿ ಟೈಪ್ ಮಾಡಲು ಸಹಾಯಕಾರಿ:

ನೀವು ಜಿಬೋರ್ಡ್ ಕೀಬೋರ್ಡ ನಲ್ಲಿ ವೇಗವಾಗಿ ಟೈಪ್ ಮಾಡಬಹುದಾಗಿದೆ. ಹ್ಯಾಂಗ್ ಆಗುವುದಿಲ್ಲ ನೀವು ಎಷ್ಟೆ ವೇಗವಾಗಿ ಟೈಪ್ ಮಾಡಿದರೂ ಅಷ್ಟೆವೇಗವಾಗಿ ಅದು ರೆಸ್ಪಾನ್ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Google is using machine learning to improve typing speed and accuracy in the Gboard app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot