Subscribe to Gizbot

ದಿನದಿಂದ ದಿನಕ್ಕೆ ಕುಸಿಯುತ್ತಿದೆ ಜಿಯೋ ಜನಪ್ರಿಯತೆ: ಇಲ್ಲಿದೇ ಸಾಕ್ಷಿ..!!!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಆರಂಭದಿಂದ ಉಚಿತ ಕೊಡುಗೆಗಳ ಅಫರ್ ನೀಡುತ್ತಲೇ ಬಂದಿದೆ. ಆದರೆ ಇತ್ತೀಚಿನ ದಿನದಲ್ಲಿ ಹೆಚ್ಚು ಸದ್ದು ಮಾಡುತ್ತಿಲ್ಲ. ಪ್ರೈಮ್ ಸದಸ್ಯರಿಗೆ ಈಗಾಗಲೇ ಮೂರು ತಿಂಗಳ ಕೊಡುಗೆಯನ್ನು ನೀಡಿ ಸುಮ್ಮನಾಗಿದೆ. ಇದೇ ಕಾರಣ ಜಿಯೋ ಕುಟುಂಬಕ್ಕೆ ಹೊಸದಾಗಿ ಸೇರುತ್ತಿರುವವ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುತ್ತಿದೆ ಎನ್ನಲಾಗಿದೆ.

ದಿನದಿಂದ ದಿನಕ್ಕೆ ಕುಸಿಯುತ್ತಿದೆ ಜಿಯೋ ಜನಪ್ರಿಯತೆ: ಇಲ್ಲಿದೇ ಸಾಕ್ಷಿ..!!!!

ಓದಿರಿ: ಆಧಾರ್ ಕಾರ್ಡ್ ಕಳೆದ ಹೋದರೆ ಮಾಡಬೇಕಾದ್ದೇನು..?

ಫೆನಾಷಿಯಲ್ ಏಕ್ಸ್ ಪ್ರೆಸ್ ವರದಿಯ ಪ್ರಕಾರ ರಿಲಯನ್ಸ್ ಜಿಯೋಗೆ ಮಾರ್ಚ್ ನಲ್ಲಿ ಹೊಸದಾಗಿ 6ಮಿಲಿಯನ್ ಮಂದಿ ಸೇರ್ಪಡೆಯಾಗಿದ್ದರೂ, ಆದರೆ ಏಪ್ರಿಲ್ ತಿಂಗಳಿನಲ್ಲಿ ಈ ಸಂಖ್ಯೆ ಕುಸಿದಿದ್ದು, ಕೇವಲ 3.9 ಮಿಲಿಯನ್ ಮಂದಿ ಜಿಯೋ ಗ್ರಾಹಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಇನ್ನೊಂದು ಮಾದರಿಯಲ್ಲಿ ಟ್ರಾಯ್ ವರದಿಯನ್ನು ನೋಡಿದರೆ ಏಪ್ರಿಲ್ ತಿಂಗಳಿನಲ್ಲಿ ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಲಿಕೆಯನ್ನು ಮಾಡಿಕೊಂಡರೆ ಜಿಯೋಗೆ ಅತೀ ಹೆಚ್ಚು ಮಂದಿ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಆದರೆ ಇದು ಜಿಯೋ ಲೆಕ್ಕಚಾರಕ್ಕೆ ಹೊಲಿಸಿಕೊಂಡರೆ ಅತೀ ಕಡಿಮೆ ಎನ್ನಲಾಗಿದೆ.

ದಿನದಿಂದ ದಿನಕ್ಕೆ ಕುಸಿಯುತ್ತಿದೆ ಜಿಯೋ ಜನಪ್ರಿಯತೆ: ಇಲ್ಲಿದೇ ಸಾಕ್ಷಿ..!!!!

ಓದಿರಿ: ನೋಕಿಯಾ 6 ಖರೀದಿಸುವ ಮುನ್ನ ಈ ಸ್ಟೋರಿ ನೋಡಿ..! ಇಲ್ಲಿದೇ ಅಮೆಜಾನ್ ಫ್ಲಾಷ್ ಕುರಿತ ವಿವರ...!!!

ಜಿಯೋ ಜನವರಿಯಲ್ಲಿ 18.5 ಮಿಲಿಯನ್ ಗ್ರಾಹಕರನ್ನು ತನ್ನ ನೆಟ್‌ವರ್ಕ್‌ನಲ್ಲಿ ಸೇರಿಸಿಕೊಂಡಿತ್ತು. ಅದೇ ಮಾದರಿಯಲ್ಲಿ ಫೆಬ್ರವರಿಯಲ್ಲಿ 12.21 ಮಿಲಿಯನ್ ಗ್ರಾಹಕರು ಜಿಯೋ ಸೇರಿಕೊಂಡಿದ್ದರು, ಆದರೆ ತಿಂಗಳಿಂದ ತಿಂಗಳಿಗೆ ಜಿಯೋ ಬಗ್ಗೆ ಒಲವು ಕಡಿಮೆಯಾಗುತ್ತಿರುವುದು ಈ ವರದಿಯಿಂದ ತಿಳಿದು ಬರುತ್ತಿದೆ.

ಆದರೆ ಇದೇ ನಿಶ್ವಿತ ಎನ್ನುವ ಹಾಗಾಗಿಲ್ಲ ಒಮ್ಮಗೆ ಜಿಯೋ ಮತ್ತೊಂದು ಭರ್ಜರಿ ಆಫರ್ ವೊಂದನ್ನು ನೀಡಿದರೆ ಸಾಕು, ಹೆಚ್ಚಿನ ಸಂಖ್ಯೆಯ ಗ್ರಾಹಕರು ಆಫರ್ ಗಳಿಗೆ ಮನಸೋತು ಜಿಯೋ ಕಡೆಗೆ ಮುಖ ಮಾಡಿದರು ಆಚ್ಚರಿ ಪಡಬೇಕಾಗಿಲ್ಲ.

Read more about:
English summary
3.9 million customers on its network in the month of April. The number has significantly dropped and is said to be the lowest ever since the Reliance Jio services launched in September. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot