ಗೂಗಲ್ ನ ಹೊಸ ಅಪ್ಲಿಕೇಶನ್ ಟ್ರಯಾಂಗಲ್ ಬಳಕೆದಾರರಿಗೊಂದು ಖುಷಿ ಸುದ್ದಿ..!

By: Akshatha J

ಗೂಗಲ್, ಟ್ರಯಾಂಗಲ್ ಎಂಬ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು ನಿಮ್ಮ ಮೊಬೈಲ್ ಡೇಟಾ ಬಳಕೆಯನ್ನು ಉತ್ತಮವಾಗಿ ನಿರ್ವಹಿಸುವ ಮತ್ತು ಅನವಶ್ಯಕ ಡೇಟಾವನ್ನು ತಡೆಯುತ್ತದೆ. ನಿಮಗೆ ಈ ಅಪ್ಲಿಕೇಶನ್ ಈಗ ಫಿಲಿಪ್ಪೈನಿನಲ್ಲಿ ಮಾತ್ರ ಲಭ್ಯವಿದೆ.

ಗೂಗಲ್ ನ ಹೊಸ ಅಪ್ಲಿಕೇಶನ್ ಟ್ರಯಾಂಗಲ್ ಬಳಕೆದಾರರಿಗೊಂದು ಖುಷಿ ಸುದ್ದಿ..!

ಮುಖ್ಯವಾಗಿ ಇದು ಪ್ರಿಪೇಡ್ ಡೇಟಾವನ್ನು ಮಾತ್ರ ಖರೀದಿಸಬಹುದಾಗಿದೆ. ದೇಶದಲ್ಲಿನ ಪ್ರಿಪೇಯ್ಡ್ ಗ್ರಾಹಕರಿಗೆ ಮಾತ್ರ ಈ ಗುರಿಯನ್ನು ಮುಖ್ಯವಾಗಿರಿಸಿಕೊಂಡಿದೆ. ಸಾಮಾನ್ಯವಾಗಿ ಪ್ರಿಪೇಯ್ಡ್ ಡಾಟಾ ಪ್ಯಾಕ್ಗಳಲ್ಲಿ ಬಳಕೆದಾರರು ಒಂದು ನಿರ್ದಿಷ್ಟ ದೈನಂದಿನ ಮಿತಿಯನ್ನು ದಾಟಿದಾಗ, ಇಂಟರ್ನೆಟ್ ವೇಗ ನಿಧಾನವಾಗುತ್ತದೆ.

ಆದ್ದರಿಂದ, ಈ ಟ್ರಯಾಂಗಲ್ ಅಪ್ಲಿಕೇಶನ್ ಮೊಬೈಲ್ ಡೇಟಾ ಬಳಕೆಯನ್ನು ನಿಯಂತ್ರಿಸುವ ಮೂಲಕ ಬಳಕೆದಾರರಿಗೆ ಕೇವಲ ಲಾಭದಾಯಕವಲ್ಲದೆ ಹಾಗು ಗ್ರಾಹಕರ ಪ್ರಿಪೇಯ್ಡ್ ಡೇಟಾ ಯೋಜನೆಯನ್ನು ಹೆಚ್ಚಿಸಲು ಸಹಕರಿಸುತ್ತದೆ.

ಅಷ್ಟಕ್ಕೂ ಟ್ರಯಾಂಗಲ್ ಅಪ್ಲಿಕೇಶನ್ ಬಳಸುವುದು ಹೇಗೆ..?

ಮೊದಲಿಗೆ, ಟ್ರಯಾಂಗಲ್ ಅಪ್ಲಿಕೇಶನ್ ತಮ್ಮ ಮೊಬೈಲ್ ಸಂಖ್ಯೆಯನ್ನು ಸಲ್ಲಿಸಲು ಬಳಕೆದಾರರಿಗೆ ಕೇಳುತ್ತದೆ. ಆ ಬಳಿಕ ಗೂಗಲ್ ನಿಮ್ಮ ಸಂಖ್ಯೆಯನ್ನು ಪರಿಶೀಲಿಸುತ್ತದೆ ಮತ್ತು ಬಳಕೆದಾರರಿಗೆ ಉಚಿತ ಮೊಬೈಲ್ ಡೇಟಾದ ಉಪಯೋಗವನ್ನು ನೀಡುತ್ತದೆ. ಬಳಕೆದಾರರು ಚಂದದಾರರಿಂದ 100MB ಉಚಿತ ಮೊಬೈಲ್ ಡೇಟಾವನ್ನು ಪಡೆಯಬಹುದು.

ಆರಂಭಿಕ ಸೆಟಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಬಳಕೆದಾರರಿಗೆ ಎಷ್ಟು ಡೇಟಾವನ್ನು ಬಳಸಲು ಮತ್ತು ಅದರ ಪ್ರತಿಫಲಗಳು ಏನು ಎಂಬುದನ್ನು ನೋಡಲು ಸಾಧ್ಯವಾಗುತ್ತದೆ. ಕೇವಲ ಇಷ್ಟೇ ಅಲ್ಲದೆ, ಹೆಚ್ಚಿನ ಡೇಟಾವನ್ನು ಬಳಸಿದ ಅಪ್ಲಿಕೇಶನ್ಗಳು ಮತ್ತು ಯಾವ ಅಪ್ಲಿಕೇಶನ್ಗಳು ಹಾಗು ನೀವು ಬಳಸದೆ ಇರುವ ಡೇಟಾವನ್ನು ಟ್ರಿಯಾಂಗಲ್ ಅಪ್ಲಿಕೇಶನ್ ನಿಮಗೆ ತೋರಿಸುತ್ತದೆ.

Read more about:
English summary
Google has introduced a new app called The Triangle, which aims to better manage mobile data usage and block unwanted background data.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot