ಬೆಂಗಳೂರಿಗರಿಗೆ ಗೂಗಲ್‌ನಿಂದ ಗುಡ್‌ನ್ಯೂಸ್!..ಶೀಘ್ರವೇ ಸಿಗಲಿದೆ ಈ ಸೇವೆ!!

|

'ಗೂಗಲ್‌ ನೈಬರ್‌ಲೀ' ಸೇವೆಗೆ ಮುಂಬೈ, ಜೈಪುರ ಮತ್ತು ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ದೊರೆತ ಜನಪ್ರಿಯತೆ ಈಗ ಗೂಗಲ್‌ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಹಾಗಾಗಿ, ಶೀಘ್ರವೇ ಬೆಂಗಳೂರು ಸೇರಿದಂತೆ ದೇಶದಾಶಧ್ಯಂತ ನೇಬರ್ಲೀ ಆಪ್ ಸೇವೆಯನ್ನು ತರುವುದಾಗಿ ಗೂಗಲ್ ತಿಳಿಸಿದೆ. ಇದರಿಂದ ನಗರಕ್ಕೆ ಮತ್ತೊಂದು ಅತ್ಯುತ್ತಮ ಸೇವೆ ಪ್ರವೇಶವಾಗುತ್ತಿದೆ.

ಹೌದು, ಸುಮಾರು ಏಳು ನಗರಗಳಲ್ಲಿ 1.5 ದಶಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿರುವ ' ನೇಬರ್ಲೀ' ಆಪ್ ಸೇವೆಯನ್ನು ಈಗ ದೇಶದಾಧ್ಯಂತ ತರಲು ಗೂಗಲ್ ಸಜ್ಜಾಗಿದೆ. 'ನೈಬರ್‌ಲೀ' ಸೇವೆ ಪಡೆಯಲು ಬೆಂಗಳೂರು ಮತ್ತು ದೆಹಲಿಯಲ್ಲಿ ಜನರು ಹೆಚ್ಚು ಕಾಯುತ್ತಿದ್ದು, ಅಲ್ಲಿಯೇ ಮೊದಲು ಆಪ್‌ ಕಾರ್ಯ ಆರಂಭವಾಗಲಿದೆ ಎಂದು ಗೂಗಲ್ ಕಂಪೆನಿ ತಿಳಿಸಿದೆ.

ಬೆಂಗಳೂರಿಗರಿಗೆ ಗೂಗಲ್‌ನಿಂದ ಗುಡ್‌ನ್ಯೂಸ್!..ಶೀಘ್ರವೇ ಸಿಗಲಿದೆ ಈ ಸೇವೆ!!

ನಿಮ್ಮ ಏರಿಯಾದಲ್ಲಿ ಒಳ್ಳೆಯ ಹೋಟೆಲ್ ಎಲ್ಲಿದೆ? ಪ್ರಶಾಂತವಾದ ದೇವಸ್ಥಾನ ಯಾವುದು? ಎಂಬ ಯಾವುದೇ ಪ್ರಶ್ನೆಗಳಿಗೆ ನಿಖರವಾಗಿ ಉತ್ತರ ತಿಳಿಯಲು ಕೇವಲ 5 ಎಂಬಿಯ ' ನೇಬರ್ಲೀ' ಆಪ್‌ ನಿಮಗೆ ನೆರವಾಗಬಲ್ಲದು. ಹಾಗಾದರೆ, ಏನಿದು ಗೂಗಲ್ ನೇಬರ್ಲೀ? 'ಗೂಗಲ್‌ ನೇಬರ್ಲೀ' ನಿಂದ ಏನೆಲ್ಲಾ ಉಪಯೋಗಗಳಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏನಿದು ನೇಬರ್ಲೀ ಆಪ್?

ಏನಿದು ನೇಬರ್ಲೀ ಆಪ್?

ಬೃಹತ್‌ಗರಗಳಲ್ಲಿ ಸ್ಥಳೀಯ ಸಂದೇಹಗಳಿಗೆ ಸೂಕ್ತ ಉತ್ತರ ಹುಡುಕುವುದು ಕಷ್ಟವಾಗುತ್ತಿದೆ ಎಂಬುದನ್ನು ಗೂಗಲ್ ಮನಗಂಡಿದೆ. ಹಾಗಾಗಿ, ಗೂಗಲ್ ನೈಬರ್‌ಲೀ ಆಪ್ ಮೂಲಕ ಅದೇ ಪ್ರದೇಶದ ಜನರಿಗೆ ಸ್ಥಳೀಯ ಪ್ರಶ್ನೆಗಳನ್ನು ಕೇಳಲು ಹಾಗೂ ಸಂಬಂಧಿತ ಉತ್ತರಗಳನ್ನು ಹುಡುಕಲು ಸುಲಭವಾಗಲಿರುವ ಆಪ್ ಅನ್ನು ಅಭಿವೃದ್ದಿಪಡಿಸಿದೆ.

ಹೇಗೆ ಕೆಲಸ ಮಾಡುತ್ತದೆ ಆಪ್?

ಹೇಗೆ ಕೆಲಸ ಮಾಡುತ್ತದೆ ಆಪ್?

ನೇಬರ್ಲೀ ಆಪ್ ಬಳಕೆದಾರರು ಯಾವುದೆ ಪ್ರಶ್ನೆಯನ್ನು ಕೇಳಿದಾಗ ಉತ್ತರ ಮಾಡುವಂತಹ ಪರಿಣಿತರಿಗೆ ಕಳುಹಿಸಲಾಗುತ್ತದೆ. ಗೂಗಲ್ ವಾಯ್ಸ್ ಗುರುತಿಸುವಿಕೆ ಮೂಲಕ ನಿಮ್ಮ ಪ್ರಶ್ನೆ ಕೇಳಬಹುದು ಅಥವಾ ಉತ್ತರವನ್ನು ನೀಡಬಹುದಾಗಿದೆ. ಈ ಆಪ್ ಕನ್ನಡ ಸೇರಿದಂತೆ ಭಾರತದ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಗೂಗಲ್ ನೇಬರ್ಲೀ ಆಪ್ ಬೆಂಬಲಿಸುತ್ತದೆ.

ಖಾಸಗಿ ಮಾಹಿತಿ ನೀಡಬೇಕಿಲ್ಲ.

ಖಾಸಗಿ ಮಾಹಿತಿ ನೀಡಬೇಕಿಲ್ಲ.

ಗೂಗಲ್ ನೇಬರ್ಲೀ ಆಪ್‌ನಲ್ಲಿ ಗರಿಷ್ಠ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗಿದ್ದು, ಖಾಸಗಿ ಮಾಹಿತಿಯನ್ನು ನೀಡದೆಯೇ ನೀವು ಪ್ರಶ್ನೆ ಕೇಳಬಹುದುವುದು, ಬ್ರೌಸ್ ಮಾಡಬಹುದು ಹಾಗೂ ಇದರಲ್ಲಿ ಉತ್ತರವನ್ನು ನೀಡಬಹುದು. ಇಲ್ಲಿ ಇತರೆ ಸಂಪರ್ಕ ಮಾಹಿತಿಯನ್ನು ಗೌಪ್ಯವಾಗಿ ಇಡಬಹುದಾದ ಆಯ್ಕೆಯನ್ನು ಗೂಗಲ್ ಒದಗಿಸಿದೆ.

15 ಲಕ್ಷ ಬಳಕೆದಾರರು

15 ಲಕ್ಷ ಬಳಕೆದಾರರು

ಕಳೆದ ವರ್ಷ ಮುಂಬಯಿ ಹಾಗೂ ಜೈಪುರದಲ್ಲಿ ಬಿಡುಗಡೆಯಾಗಿದ್ದ ಈ ಆಪ್ ಅನ್ನು 15 ಲಕ್ಷಕ್ಕೂ ಹೆಚ್ಚು ಜನರು ಬಳಸುತ್ತಿದ್ದಾರೆ. ಕನ್ನಡ ಸೇರಿದಂತೆ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಸೇವೆಯನ್ನು ನೀಡಲಾಗಿರುವುದು ಈ ಆಪ್‌ನ ವಿಶೇಷತೆಯಾಗಿದೆ. ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆ ಕೂಡ ಇದೆ.

ಮೊಬೈಲ್‌ ಸಂಖ್ಯೆ ಬೇಕಿಲ್ಲ

ಮೊಬೈಲ್‌ ಸಂಖ್ಯೆ ಬೇಕಿಲ್ಲ

ಈ ಆಪ್‌ ಅನ್ನು ಬಳಸುವವರು ಮೊಬೈಲ್‌ ಸಂಖ್ಯೆಯನ್ನೂ ಸಹ ದಾಖಲಿಸುವ ಅವಶ್ಯಕತೆ ಇಲ್ಲ. ಸದ್ಯ ಈ ಆಪ್‌ನಲ್ಲಿ ಪಠ್ಯವನ್ನು ದಾಖಲಿಸಲು ಮಾತ್ರ ಅವಕಾಶ ನೀಡಲಾಗಿದ್ದು, ನಿಮ್ಮ ಹೆಸರು ಮಾತ್ರ ಬೇರೆ ಬಳಕೆದಾರರಿಗೆ ತಿಳಿಯುತ್ತದೆ. ವೈರಸ್‌ ಲಿಂಕ್‌, ಸ್ಪ್ಯಾಮ್‌ ಪೋಸ್ಟ್‌ಗಳು ಶೇರ್‌ ಆಗುವ ಸಾಧ್ಯತೆ ಇದ್ದು, ಲಿಂಕ್‌ಗಳನ್ನು ಗೂಗಲ್‌ ಒಮ್ಮೆ ಪರಿಶೀಲಿಸಲಿದೆ

Most Read Articles
Best Mobiles in India

English summary
Google started rolling out its Neighbourly app, which lets people share information about a neighbourhood, across India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X