Subscribe to Gizbot

ಪ್ರವಾಸಿಗರಿಗೆ ಗೂಗಲ್ ಮ್ಯಾಪಿನಷ್ಟೆ ಮುಖ್ಯ ಗೂಗಲ್‌ನ ಈ ಮತ್ತೊಂದು ಆಪ್!!

Written By:

ಸ್ಮಾರ್ಟ್‌ಫೋನ್ ಜೊತೆ ಚಾರ್ಜರ್ ಮತ್ತು ಒಂದು ಪವರ್‌ಬ್ಯಾಂಕ್‌ ಇದ್ದರೆ ಸಾಕು ಹೆಚ್ಚೇನು ತಲೆಕೆಡಿಸಿಕೊಳ್ಳುದೆ ಗೂಗಲ್ ಮ್ಯಾಪ್ ಹಾಕಿಕೊಂಡು ಪ್ರವಾಸ ಹೊರಡುವವರ ಸಂಖ್ಯೆ ಏನು ಕಮ್ಮಿ ಇಲ್ಲ.! ಆದರೆ, ಗೂಗಲ್ ಮ್ಯಾಪಿನ ಜೊತೆಗೆ ಇನ್ನೊಂದು ಗೂಗಲ್ ಪ್ರಮುಖ ಆಪ್‌ ನಿಮ್ಮ ಫೋನಿನಲ್ಲಿದ್ದರೆ ನಿಮ್ಮ ಪ್ರವಾಸ ಇನ್ನಷ್ಟು ಸುಗಮಗೊಳಿಸಲಿದೆ.!!

ಹೌದು, ನೀವು ಯಾವೆಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು, ಎಲ್ಲೆಲ್ಲಿ ಉತ್ತಮ ರೆಸ್ಟೊರೆಂಟ್ ಇದೆ ಎಂಬುದನ್ನು ಮ್ಯಾಪ್‌ಗಿಂತ ನಿಖರವಾಗಿ ಹೇಳುವ ಮತ್ತು ಹೊಟೆಲ್‌ಗ ಬುಕ್ಕಿಂಗ್‌ಗೆ ಭಾರಿ ಡಿಸ್ಕೌಂಟ್ ನೀಡುವ ಗೂಗಲ್‌ನ ಮತ್ತೊಂದು ಒಂದು ಲಭ್ಯವಿದೆ.! ಹಾಗಾದರೆ, ಆಪ್‌ ಯಾವುದು? ಆಪ್‌ನ ಉಪಯೋಗಗಳು ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಟ್ರಿಪ್ಸ್ ಆಪ್!!

ಗೂಗಲ್‌ ಟ್ರಿಪ್ಸ್ ಆಪ್!!

ನಿಮ್ಮ ಮೊಬೈಲ್‌ನಲ್ಲಿ ಗೂಗಲ್‌ ಟ್ರಿಪ್ಸ್ ಆಪ್ ಇದ್ದರೆ ನಿಮ್ಮ ಪ್ರವಾಸ ಸುಖಕರವಾಗಿರಲಿದೆ ಎಂದರೆ ತಪ್ಪಾಗಲಾರದು. ಪ್ರವಾಸಿಗರಿಗೆ ಹಲವು ಸೇವೆಗಳನ್ನು ನೀಡುವ ಈ ಆಪ್ ಯಾವ ಯಾವ ಪ್ರೇಕ್ಷಣೀಯ ಸ್ಥಳಗಳು, ಹೋಟೆಲ್‌, ರೆಸ್ಟೊರಂಟ್ ವ್ಯವಸ್ಥೆ ಎಲ್ಲೆಲ್ಲಿದೆ ಎಂಬುದನ್ನು ಹೆಚ್ಚು ಸುಲಭವಾಗಿ ತಿಳಿಸಿಕೊಡುತ್ತದೆ.!!

ಮಾಹಿತಿಯನ್ನೆಲ್ಲಾ ಕಲೆಹಾಕುತ್ತದೆ.!!

ಮಾಹಿತಿಯನ್ನೆಲ್ಲಾ ಕಲೆಹಾಕುತ್ತದೆ.!!

ಪ್ರೇಕ್ಷಣೀಯ ಸ್ಥಳಗಳ ಸಚಿತ್ರ ಮಾಹಿತಿ ಜೊತೆಗೆ ಜಿ-ಮೇಲ್‌ಗೆ ಸಿಂಕ್‌ ಆಗಿರುವ ವಿಮಾನ, ರೈಲು, ಬಸ್ ಪ್ರಯಾಣದ ಮಾಹಿತಿ, ಕಾರ್‌, ಹೋಟೆಲ್‌ ರೂಮ್‌ಗಳನ್ನು ಕಾಯ್ದಿರಿಸಿರುವ ಮಾಹಿತಿಯನ್ನೆಲ್ಲಾ ಗೂಗಲ್‌ ಟ್ರಿಪ್ಸ್ ಆಪ್ ಕಲೆಹಾಕುತ್ತದೆ.! ಇದರಿಂದ ಪ್ರವಾಸದಲ್ಲಿ ನಿಮಗೆ ಮಾಹಿತಿಯ ಕೊರತೆ ಎಂದೂ ಎದುರಾಗದು.!!

ಹೊಟೆಲ್‌ಗಳಲ್ಲಿ ಭಾರಿ ಡಿಸ್ಕೌಂಟ್!!

ಹೊಟೆಲ್‌ಗಳಲ್ಲಿ ಭಾರಿ ಡಿಸ್ಕೌಂಟ್!!

ಗೂಗಲ್ ಟ್ರಿಪ್ಸ್ ಆಪ್ ಮೂಲಕವೇ ಬಳಕೆದಾರರು ರೆಸ್ಟೊರೆಂಟ್‌ಗಳನ್ನು ಹುಡುಕುಬಹುದಲ್ಲದೆ, ರೆಸ್ಟೋರೆಂಟ್‌ಗಳನ್ನು ಮುಂಗಡ ಬುಕ್ ಮಾಡಬಹುದು! ಗೂಗಲ್ ಟ್ರಿಪ್ಸ್ ಮೂಲಕ ರೆಸ್ಟೋರೆಂಟ್‌ಗಳನ್ನು ಬುಕ್ ಮಾಡಿದರೆ ಶೇ.50 ವರೆಗೂ ಡಿಸ್ಕೌಂಟ್ಸ್ ಕೂಡ ಪಡೆಯಬಹುದು.!!

ಮಾರ್ಗದರ್ಶಿಗಳನ್ನು ಸಂಪರ್ಕಿಸಬಹುದು!!

ಮಾರ್ಗದರ್ಶಿಗಳನ್ನು ಸಂಪರ್ಕಿಸಬಹುದು!!

ನೀವು ಯಾವುದೇ ಪ್ರೇಕ್ಷಣೀಯ ಸ್ಥಳವನ್ನು ತಲುಪಿದರೂ ಆ ಸ್ಥಳದ ಬಗ್ಗೆ ಗೂಗಲ್ ಟ್ರಿಪ್ಸ್ ಆಪ್ ಬಹುತೇಕ ಎಲ್ಲಾ ಮಾಹಿತಿಗಳನ್ನು ಹೊಂದಿರುತ್ತದೆ. ಅದಕ್ಕೂ ಹೆಚ್ಚಾಗಿ ನೀವು ಅಲ್ಲಿ ಮಾರ್ಗದರ್ಶಿಗಳನ್ನು ಸಂಪರ್ಕಿಸಬಹುದಾದ ಆಯ್ಕೆ ಈ ಆಪ್‌ನಲ್ಲಿದೆ.!!

ನಿಮ್ಮ ಪ್ಲಾನ್ ತಯಾರಿಸಬಹುದು!!

ನಿಮ್ಮ ಪ್ಲಾನ್ ತಯಾರಿಸಬಹುದು!!

ಪ್ರವಾಸಕ್ಕೆ ನೀವು ನಿಗದಿಪಡಿಸಿಕೊಂಡಿರುವ ದಿನಗಳ ಆಧಾರದ ಮೇಲೆ ಯಾವ ದಿನ ಎಲ್ಲೆಲ್ಲಿ ಸುತ್ತಾಡಬಹುದು ಎಂಬುನ್ನು ಈ ಆಪ್‌ನ " ಡೇ ಪ್ಲಾನ್" ಆಯ್ಕೆಯಲ್ಲಿ ಸೇರಿಸಬಹುದು. ಇದರಿಮದ ಒಮ್ಮೆ ನೀವು ನಿಗದಿ ಮಾಡಿಕೊಂಡಿರುವ ಯಾವುದೇ ಸ್ಥಳವನ್ನು ನಿಮ್ಮ ಕಾಲಾವಕಾಶದಲ್ಲಿಯೇ ತಲುಪಲು ಸಾಧ್ಯವಾಗಲಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google's app does a lot more than just search, especially if you're a going to trip. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot