Subscribe to Gizbot

"ಬ್ಯಾಕ್ಅಪ್ & ಸಿಂಕ್" ಆಪ್ - ಡೇಟಾ ಬ್ಯಾಕ್ಅಪ್ ಈಗ ಸರಳ

Posted By: Tejaswini P G

ನಮ್ಮ ಕಂಪ್ಯೂಟರ್ನಲ್ಲಿರುವ ಫೈಲ್ ಹಾಗೂ ಫೋಟೋಗಳನ್ನು ಜಾಗ್ರತೆಯಿಂದ ತೆಗೆದಿರಿಸುವುದು ಈಗ ಸುಲಭವಾಗಲಿದೆ.ಹೌದು..ಇದಕ್ಕೆಂದೇ ಗೂಗಲ್ ತಂದಿದೆ ಹೊಸ 'ಬ್ಯಾಕ್ಅಪ್ & ಸಿಂಕ್' ಆಪ್ ಮ್ಯಾಕ್ ಮತ್ತು ವಿಂಡೋಸ್ ಕಂಪ್ಯೂಟರ್ಗಳಿಗಾಗಿ. ಗೂಗಲ್ ಕಂಪೆನಿಯು 'ಗೂಗಲ್ ಫೋಟೋಸ್ & ಡ್ರೈವ್ ಆಪ್ನ' ಬದಲಾಗಿ 'ಬ್ಯಾಕ್ಅಪ್ & ಸಿಂಕ್' ಆಪ್ಅನ್ನು ಹೊರತಂದಿದೆ.

'ಬ್ಯಾಕ್ಅಪ್ & ಸಿಂಕ್' ಆಪ್ನ ಮೂಲಕ ಬಳಕೆದಾರರು ತುಂಬಾ ಸುಲಭವಾಗಿ ತಮ್ಮ ಡೆಸ್ಕ್ಟಾಪ್ ಕಂಪ್ಯೂಟರ್ನಲ್ಲಿರುವ ಆವಶ್ಯಕ ಫೈಲ್ ಹಾಗೂ ಫೋಟೋಗಳ ಬ್ಯಾಕ್ಅಪ್ ತೆಗೆಯಬಹುದು.ಹೀಗೆ ಬ್ಯಾಕ್ಅಪ್ ಮಾಡಿದ ಫೈಲ್ಗಳು ಅವರ ಗೂಗಲ್ ಡ್ರೈವ್ನಲ್ಲಿರುತ್ತದೆ.

ಇದನ್ನು ಬಳಕೆದಾರರು ಯಾವುದೇ ಡಿವೈಸ್ನಿಂದ ಗೂಗಲ್ ಡ್ರೈವ್ ಆಪ್ ಮೂಲಕ ಆಕ್ಸೆಸ್ ಮಾಡಬಹುದಾಗಿದೆ.ಹೀಗೆಯೇ ಬಳಕೆದಾರರು ಆಪ್ ಮುಖೇನ ತಮ್ಮ ಸ್ಮಾರ್ಟ್ಫೋನ್ಗಳು, SD ಕಾರ್ಡ್ಗಳು,ಡಿಜಿಟಲ್ ಕ್ಯಾಮೆರಾಗಳು ಮೊದಲಾದ ಬೇರೆ ಬೇರೆ ಡಿವೈಸ್ಗಲಿಂದಲೂ ಡೇಟಾ ಬ್ಯಾಕ್ಅಪ್ ಮಾಡಬಹುದು. ಹೀಗೆ ಬ್ಯಾಕ್ಅಪ್ ಮಾಡುವಾಗ ತಮ್ಮ ಫೋಟೋಗಳ ರೆಸೊಲ್ಯೂಷನ್ ಹೆಚ್ಚಿಸುವ ಅವಕಾಶವನ್ನೂ ಗೂಗಲ್ ಬಳಕೆದಾರರಿಗೆ ನೀಡುತ್ತಿದೆ.

"ನೀವು ನಿಮ್ಮ ಅಮೂಲ್ಯ ಹಾಗೂ ಆವಶ್ಯಕ ಫೈಲ್ ಮತ್ತು ಫೋಟೋಗಳನ್ನು ಬೇರೆ ಬೇರೆ ಡಿವೈಸ್ಗಳಲ್ಲಿ ಇಟ್ಟಿರುತ್ತೀರಿ. ಅದು ನಿಮ್ಮ ಕಂಪ್ಯೂಟರ್ ಆಗಿರಬಹುದು.ಅಥವಾ SDಕಾರ್ಡ್, ಸ್ಮಾರ್ಟ್ಫೋನ್, ಡಿಜಿಟಲ್ ಕ್ಯಾಮೆರಾಗಳೂ ಆಗಿರಬಹುದು. ಈ ಎಲ್ಲಾ ಸಾಧನಗಳಲ್ಲಿರುವ ಡೇಟಾವನ್ನು ಸುರಕ್ಷಿತ ಹಾಗೂ ವ್ಯವಸ್ಥಿತವಾಗಿ ಬ್ಯಾಕ್ಅಪ್ ಮಾಡುವುದು ಕಷ್ಟಕರ. ಇದಕ್ಕೆಂದೇ ಸರಳ ಮತ್ತು ಫಾಸ್ಟ್ ಆದ ಗೂಗಲ್ 'ಬ್ಯಾಕ್ಅಪ್ & ಸಿಂಕ್' ಆಪ್ ಅನ್ನು ತರಲಾಗಿದೆ.

ಇದು ನಿಮ್ಮ ಡೇಟಾವನ್ನು ಸುರಕ್ಷಿತವಾಗಿ ಬ್ಯಾಕ್ಅಪ್ ಮಾಡಲು ವಿಶ್ವಾಸಾರ್ಹ ಆಪ್ ಆಗಿದೆ.ಈ ಹೊಸ ಆಪ್ ಮ್ಯಾಕ್ ಮತ್ತು ವಿಂಡೋಸ್ ಕಂಪ್ಯೂಟರ್ಗಳ 'ಗೂಗಲ್ ಫೋಟೋಸ್ ಅಪ್ಲೋಡರ್ & ಡ್ರೈವ್ ಆಪ್ ಅನ್ನು ರೀಪ್ಲೇಸ್ ಮಾಡಲಿದೆ " ಎನ್ನುತ್ತಿದೆ ಗೂಗಲ್ನ ಬ್ಲಾಗ್ಪೋಸ್ಟ್.

'ಬ್ಯಾಕ್ಅಪ್ & ಸಿಂಕ್' ಆಪ್ ಮೂಲಕ ಡೇಟಾ ಬ್ಯಾಕ್ಅಪ್ ಮಾಡಲು ನೀವು ಮಾಡಬೇಕಾಗಿರುವುದು ಇಷ್ಟೇ.ಮೊದಲು 'ಬ್ಯಾಕ್ಅಪ್ & ಸಿಂಕ್' ಆಪ್ಗೆ ನಿಮ್ಮ ಗೂಗಲ್ ಖಾತೆ ಉಪಯೋಗಿಸಿ ಲಾಗಿನ್ ಮಾಡಿ.ನಂತರ ನೀವು ಅಪ್ಲೋಡ್ ಮಾಡಲಿಚ್ಚಿಸುವ ಫೈಲ್ಗಳಿರುವ ಫೋಲ್ಡರ್ಗಳನ್ನು ಆಯ್ಕೆ ಮಾಡಿ.ಇದರೊಂದಿಗೆ ಕೆಲವೊಂದು ಪ್ರಿಫರೆನ್ಸ್ ಸೆಟ್ಟಿಂಗ್ಗಳನ್ನೂ ಸೆಟ್ ಮಾಡಬಹುದು.ಡ್ರೈವ್ ಸ್ಟೋರೇಜ್ನ ಸಾಮರ್ಥ್ಯವನ್ನು ಹೆಚ್ಚಿಸುವ ಆಯ್ಕೆಯೂ ಇದೆ.

ಈ ಆಪ್ನಲ್ಲಿ ಗೂಗಲ್ ಫೋಟೋಸ್ ಮತ್ತು ಡ್ರೈವ್ ಎರಡನ್ನೂ ಅಕ್ಸೆಸ್ ಮಾಡಬಹುದು. ಇದರೊಂದಿಗೆ ಗೂಗಲ್ನ ಹೊಸ 'ಬ್ಯಾಕ್ಅಪ್ & ಸಿಂಕ್' ಆಪ್ ಮಾಡಿದೆ ಡೇಟಾ ಬ್ಯಾಕ್ಅಪ್ಅನ್ನು ಸರಳ ಮತ್ತು ಸುರಕ್ಷಿತ.

Read more about:
English summary
Google has rolled out Backup and Sync app for Mac and Windows.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot