ಸುಧಾರಿತ ಮಾದರಿ ಗೂಗಲ್ 'ಹ್ಯಾಂಗ್‍ಔಟ್ಸ್' ಬಿಡುಗಡೆ!!

ಹ್ಯಾಂಗ್‍ಔಟ್‍ನ ಬಳಸಿಕೊಂಡು ಉದ್ಯೋಗಿಗಳು ಕಡಿಮೆ ಸಮಯದಲ್ಲಿ ಹೆಚ್ಚು ಸಾಮರ್ಥ್ಯ ತೋರಲು ಸಹಕಾರಿಯಾಗಲಿದೆ ಎಂದು ಗೂಗಲ್ ಕಂಪೆನಿಯ ಉತ್ಪನ್ನ ನಿರ್ವಹಣೆಯ ನಿರ್ದೇಶಕ ಸ್ಕಾಟ್ ಜಾನ್ಸಟನ್ ತಿಳಿಸಿದ್ದಾರೆ.

|

ಗೂಗಲ್ ಕಂಪೆನಿ ಏನೇ ಮಾಡಿದರೂ ಸಹ ಅದೇಕೋ ಅಂತರ್ಜಾಲ ಆಧಾರಿತ ಚಾಟ್ ಆಪ್ 'ಗೂಗಲ್ ಹ್ಯಾಂಗ್‍ಔಟ್ಸ್' ಬಳಕೆಗೆ ಗ್ರಾಹಕರು ಆಸಕ್ತಿತೋರುತ್ತಿಲ್ಲ.! ಆದರೂ ಚಲಬಿಡದ ವಿಕ್ರಮನಂತೆ ಗೂಗಲ್ ಕಂಪೆನಿ ಮಾತ್ರ ಹ್ಯಾಂಗ್‍ಔಟ್ಸ್ಗೆ ಹೊಸ ಹೊಸ ಫೀಚರ್‌ಗಳನ್ನು ಸೇರಿಸಿ ಬಳಕೆದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.!!

ಇದೀಗ ಸುಧಾರಿತ ಮಾದರಿಯನ್ನು ಚಾಟ್ ಆಪ್ 'ಗೂಗಲ್ ಹ್ಯಾಂಗ್‍ಔಟ್ಸ್' ಬಿಡುಗಡೆಯಾಗಿದ್ದು, ಇತರ ವಾಣಿಜ್ಯ ಉದ್ದೇಶದ ಸಾಫ್ಟ್‌ವೇರ್‌ ತಯಾರಕ ಸಂಸ್ಥೆಗಳಾದ ಮೈಕ್ರೊಸಾಫ್ಟ್ ಕಾರ್ಪ್ ಮತ್ತು ಸ್ಲ್ಯಾಕ್ ಟೆಕ್ನಾಲಜೀಸ್ ಇಂಕ್‌ಗಳ ಜತೆ ಸ್ಪರ್ಧಿಸುವಂತಾಗಿದೆ. ಈ ಆಪ್‌ ಗೂಗಲ್‌ನ 'ಜಿ' ಸೂಟ್‌ನಲ್ಲಿ ಹೊಂದಿಕೆಯಾಗುತ್ತಿದೆ ಎನ್ನಲಾಗಿದೆ.!!

ಸುಧಾರಿತ ಮಾದರಿ ಗೂಗಲ್ 'ಹ್ಯಾಂಗ್‍ಔಟ್ಸ್' ಬಿಡುಗಡೆ!!

ಇನ್ನು ಹ್ಯಾಂಗ್‍ಔಟ್‍ನ ಬಳಸಿಕೊಂಡು ಉದ್ಯೋಗಿಗಳು ಕಡಿಮೆ ಸಮಯದಲ್ಲಿ ಹೆಚ್ಚು ಸಾಮರ್ಥ್ಯ ತೋರಲು ಸಹಕಾರಿಯಾಗಲಿದೆ ಎಂದು ಗೂಗಲ್ ಕಂಪೆನಿಯ ಉತ್ಪನ್ನ ನಿರ್ವಹಣೆಯ ನಿರ್ದೇಶಕ ಸ್ಕಾಟ್ ಜಾನ್ಸಟನ್ ತಿಳಿಸಿದ್ದಾರೆ. ಹಾಗಾದರೆ, ಸುಧಾರಿತ ಮಾದರಿಯನ್ನು ಚಾಟ್ ಆಪ್ 'ಗೂಗಲ್ ಹ್ಯಾಂಗ್‍ಔಟ್ಸ್' ಏನೆಲ್ಲಾ ಅಪ್‌ಡೇಟ್ ಪಡೆದಿದೆ ಎಂದು ಮುಂದೆ ತಿಳಿಯಿರಿ.!!

ಗ್ರೂಪ್ ಚಾಟಿಂಗ್ ಆಯ್ಕೆ!!

ಗ್ರೂಪ್ ಚಾಟಿಂಗ್ ಆಯ್ಕೆ!!

ಒಂದು ಕಂಪನಿಯ ಅಥವಾ ಗುಂಪಿನ ಸದಸ್ಯರು ಪರಸ್ಪರ ಚಾಟ್ ಮಾಡಬಹುದುದಾದ ಆಯ್ಕೆಯನ್ನು ಸುಧಾರಿತ ಮಾದರಿಯನ್ನು ಚಾಟ್ ಆಪ್ ‘ಗೂಗಲ್ ಹ್ಯಾಂಗ್‍ಔಟ್ಸ್' ಒಳಗೊಂಡಿದೆ. ಆಪ್‌ ಗೂಗಲ್‌ನ ‘ಜಿ' ಸೂಟ್‌ಗೆ ಹೊಂದಾಣಿಕೆಯಾಗುತ್ತಿದ್ದು, ಕಾರ್ಪೋರೇಟ್ ಉದ್ಯೋಗಿಗಳಿಗೆ ಉಪಯೋಗವಾಗುವಂತೆ ಆಪ್ ರೂಪಿಸಲಾಗಿದೆ.!!

ಇ-ಮೇಲ್‌ಗೆ ಪರ್ಯಾಯ ‘ಸ್ಲ್ಯಾಕ್’!!

ಇ-ಮೇಲ್‌ಗೆ ಪರ್ಯಾಯ ‘ಸ್ಲ್ಯಾಕ್’!!

ಗೂಗಲ್ ಹ್ಯಾಂಗ್‍ಔಟ್ಸ್ ಮೂಲಕ ಕಾರ್ಪೋರೇಟ್ ಸಾಫ್ಟವೇರ್‌ಗಳಿಂದ ದತ್ತಾಂಶ ಪಡೆಯಬಹುದಾದಂತಹ ಆಯ್ಕೆಯಿರುವ ‘ಸ್ಲ್ಯಾಕ್' ಚಾಟ್ ಅಪ್ಲಿಕೇಷನ್‍ಗೆ 50 ಸಾವಿರ ಗುಂಪುಗಳು ಹಣ ಪಾವತಿಸಿ ನೋಂದಾಯಿಸಿಕೊಂಡಿವೆ. ಆ ಮೂಲಕ ಇ-ಮೇಲ್‌ಗೆ ಪರ್ಯಾಯವಾಗಿ ‘ಸ್ಲ್ಯಾಕ್' ಬಳಸುತ್ತವೆ.

ಜಿ’ ಸೂಟ್‌ಗಿಂತಲೂ ಸುಧಾರಿತ ಆಪ್!!

ಜಿ’ ಸೂಟ್‌ಗಿಂತಲೂ ಸುಧಾರಿತ ಆಪ್!!

ಸುಧಾರಿತ ಮಾದರಿಯ ಹ್ಯಾಂಗ್‍ಔಟ್ಸ್ ‘ಜಿ' ಸೂಟ್‌ಗಿಂತಲೂ ಸುಧಾರಿತ ಆಪ್ ಎಂದು ಗ್ರಾಹಕರು ತಿಳಿಸಿದ್ದಾರೆ. ಗೂಗಲ್ ಕಂಪೆನಿ ಈ ಹಿಂದೆ ಜಿ-ಮೇಲ್ ಮತ್ತು ಡಾಕ್ಸ್‌ಗಳನ್ನು ಉಚಿತ ಮಾದರಿ ಬಿಡುಗಡೆ ಮಾಡಿದಂತೆ, ನೂತನ ಹ್ಯಾಂಗ್‍ಔಟ್ಸ್ ಅನ್ನು ಕೂಡ ಉಚಿತವಾಗಿ ಒದಗಿಸಿದೆ.!!

ಪಾವತಿಸಿ ಬಳಕೆ ಮಾಡಿದರೆ ಉತ್ತಮ!!

ಪಾವತಿಸಿ ಬಳಕೆ ಮಾಡಿದರೆ ಉತ್ತಮ!!

ನೂತನ ಹ್ಯಾಂಗ್‍ಔಟ್ಸ್ ಅನ್ನು ಗೂಗಲ್ ಕಂಪೆನಿ ಉಚಿತವಾಗಿ ನೀಡಿದ್ದರೂ ಸಹ ಪಾವತಿಸಿ ಬಳಸುವ ‘ಹ್ಯಾಂಗ್‍ಔಟ್ಸ್'ನಿಂದ ಹೆಚ್ಚು ಉಪಯೋಗ ಸಿಗಲಿದೆ. 8 ಸಾವಿರ ಸದಸ್ಯರವರೆಗೂ ಏಕಕಾಲಕ್ಕೆ ಸಂವಹನ ನಡೆಸಬಹುದು. ಎಲ್ಲ ಸಂದೇಶಗಳೂ ತಾನೇ ತಾನಾಗಿ ಸೇವ್ ಆಗುವಂತಹ ಆಯ್ಕೆಗಳು ಪಾವತಿಸಿ ಬಳಸುವ ‘ಹ್ಯಾಂಗ್‍ಔಟ್ಸ್'ನಿಂದ ಸಿಗಲಿವೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಹ್ಯಾಂಗ್‍ಔಟ್ಸ್ ಮೀಟ್ ಜತೆ ಹೊಂದಿಕೆ!!

ಹ್ಯಾಂಗ್‍ಔಟ್ಸ್ ಮೀಟ್ ಜತೆ ಹೊಂದಿಕೆ!!

ಗೂಗಲ್ ಕಳೆದ ವರ್ಷ ಬಿಡುಗಡೆ ಮಾಡಿದ್ದ ಟೆಲಿಕಾನ್ಫರೆನ್ಸಿಂಗ್ ಆಪ್ ‘ಹ್ಯಾಂಗ್‍ಔಟ್ಸ್ ಮೀಟ್' ಜತೆಗೂ ಸುಧಾರಿತ ಮಾದರಿಯ ಹ್ಯಾಂಗ್‍ಔಟ್ಸ್ ಹೊಂದಿಕೆಯಾಗುತ್ತದೆ. ಕಡಿಮೆ ಸಮಯದಲ್ಲಿ ಉದ್ಯೋಗಿಗಳು ಹೆಚ್ಚು ಸಾಮರ್ಥ್ಯ ತೋರಲು ಸಹಕಾರಿಯಾಗುವ ಹ್ಯಾಂಗ್‍ಔಟ್ಸ್ ಅನ್ನು ಎರಡನೇ ಅದ್ಭುತ ಎಂದು ಸ್ಕಾಟ್ ಜಾನ್ಸಟನ್ ತಿಳಿಸಿದ್ದಾರೆ.

Best Mobiles in India

English summary
Technology giants are attempting to create a monopoly of services that will streamline all facets of communication and day-to-day tasks through a single corporation. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X