ಗೂಗಲ್ ನಿಮ್ಮ ಧ್ವನಿಯನ್ನು ಕೇಳದಂತೆ ಮಾಡಬೇಕೆ ? ಇಲ್ಲಿದೆ ಉಪಾಯ!

ನಮ್ಮೆಲ್ಲಾ ಚಟುವಟಿಕೆಗಳನ್ನು ವಿವರವಾಗಿ ಗೂಗಲ್ ಗಮನಿಸುತ್ತದೆ ಎನ್ನುವುದು ಗೊತ್ತಿರುವ ಸಂಗತಿ. ಬಳಕೆದಾರರ ಬಳಕೆಯ ಅನುಭವವನ್ನು ಸುಧಾರಿಸಲು ಮಾಹಿತಿಯನ್ನು ಸಂಗ್ರಹಿಸುತ್ತದೆ.

By Prateeksha Hosapattankar
|

ನಮ್ಮೆಲ್ಲಾ ಚಟುವಟಿಕೆಗಳನ್ನು ವಿವರವಾಗಿ ಗೂಗಲ್ ಗಮನಿಸುತ್ತದೆ ಎನ್ನುವುದು ಗೊತ್ತಿರುವ ಸಂಗತಿ. ಬಳಕೆದಾರರ ಬಳಕೆಯ ಅನುಭವವನ್ನು ಸುಧಾರಿಸಲು ಮಾಹಿತಿಯನ್ನು ಸಂಗ್ರಹಿಸುತ್ತದೆ. ಒಂದು ವೇಳೆ ನೀವು ಗೂಗಲ್ ನ ಧ್ವನಿ ಸಹಾಯಕವನ್ನು (ವಾಯ್ಸ್ ಅಸಿಸ್ಟೆಂಟ್) ಉಪಯೋಗಿಸುತ್ತಿದ್ದರೆ ಅಂತರ್ಜಾಲ ಜಾಲಾಡುವ ಜೊತೆಗೆ ಅಲಾರಾಮ್ ಇಡುವುದು, ಕಾಲ್ ಮಾಡುವುದು ಹೀಗೆ ಇತ್ಯಾದಿ ಗಳನ್ನು ಮಾಡಬಹುದು.

ಅದೇನಿದ್ದರೂ, ನೀವು ನೀಡಿದ ಪ್ರತಿ ಆದೇಶ ಗೂಗಲ್ ಡಾಟಾಬೇಸ್ ನಲ್ಲಿ ಧ್ವನಿ ಕಡತವಾಗಿ ಸಂಗ್ರಹವಾಗುತ್ತದೆ. ತಲೆ ಕೆಡ್ತಿದ್ಯಾ ? ಚಿಂತಿಸಬೇಡಿ. ಕೇಳುವುದನ್ನು ನಿಲ್ಲಿಸಲು ಮತ್ತು ಸಂಗ್ರಹವಾಗಿರುವುದನ್ನು ಅಳಿಸಲು ಆಯ್ಕೆಗಳಿವೆ. ಅದರ ಬಗ್ಗೆ ಇಂದು ತಿಳಿಯೋಣ.

ಗೂಗಲ್ ನಿಮ್ಮ ಧ್ವನಿಯನ್ನು ಕೇಳದಂತೆ ಮಾಡಬೇಕೆ ? ಇಲ್ಲಿದೆ ಉಪಾಯ!

ಗೂಗಲ್ ಧ್ವನಿ ಸಹಾಯಕವನ್ನು ನಿಲ್ಲಿಸುವುದು ಹೇಗೆ ?

ಹೆಜ್ಜೆ 1: ಮೊದಲು, ಸೆಟ್ಟಿಂಗ್ಸ್ ಗೆ ಹೋಗಿ -> ಗೂಗಲ್ ಅನ್ನು ಆಯ್ಕೆ ಮಾಡಿ.

ಹೆಜ್ಜೆ 2: ಸರ್ವಿಸ್ ಹೆಡರ್ ಒಳಗೆ ಸರ್ಚ್ ಅನ್ನು ಒತ್ತಿ.

ಹೆಜ್ಜೆ 3: ವಾಯ್ಸ್ ಎಂಟ್ರಿ ಆಯ್ಕೆ ಮಾಡಿ, ಅಲ್ಲಿ ನಿಮಗೆ ವಾಯ್ಸ್ ಮ್ಯಾಚ್ ಆಯ್ಕೆ ಕಾಣುವುದು.

ಹೆಜ್ಜೆ 4: ಈಗ 'ಸೇ ಓಕೆ ಗೂಗಲ್ ಎನಿಟೈಮ್’ ನ ಆಫ್ ಮಾಡಿ.

ಗೂಗಲ್ ನಿಮ್ಮ ಧ್ವನಿಯನ್ನು ಕೇಳದಂತೆ ಮಾಡಬೇಕೆ ? ಇಲ್ಲಿದೆ ಉಪಾಯ!

ಅಥವಾ

ಹೆಜ್ಜೆ 1: ಗೂಗಲ್ ಆಪ್ ಒತ್ತಿ ಮತ್ತು ಮೇಲೆ ಎಡಗಡೆ ಮೂಲೆಯಲ್ಲಿ ಇರುವ ಮೂರು ಅಡ್ಡ ಗೆರೆಗಳನ್ನು ಒತ್ತಿ.

ಹೆಜ್ಜೆ 2: 'ಸೆಟ್ಟಿಂಗ್ಸ್ ' ಒತ್ತಿ

ಹೆಜ್ಜೆ 3: ವಾಯ್ಸ್ ಆಯ್ಕೆ ಮಾಡಿ -> ಓಕೆ ಗೂಗಲ್ ಡಿಟೆಕ್ಷನ್

ಹೆಜ್ಜೆ 4: 'ಸೇ ಓಕೆ ಗೂಗಲ್ ಎನಿಟೈಮ್’ ಫೀಚರ್ ಡಿಸೇಬಲ್ ಮಾಡಲು ಸ್ಲೈಡರ್ ಅನ್ನು ಸರಿಸಿ.

ಗೂಗಲ್ ನಿಮ್ಮ ಧ್ವನಿಯನ್ನು ಕೇಳದಂತೆ ಮಾಡಬೇಕೆ ? ಇಲ್ಲಿದೆ ಉಪಾಯ!
How To Link Aadhaar With EPF Account Without Login (KANNADA)

ಗೂಗಲ್ ಅಕೌಂಟ್ ಗೆ ನಿಮ್ಮ ಧ್ವನಿ ರೆಕಾರ್ಡಿಂಗ್ ಲಿಂಕ್ ಆಗುವುದನ್ನು ನಿಲ್ಲಿಸಲು :

ಹೆಜ್ಜೆ 1: ಈಗ ಗೂಗಲ್ ಆಕ್ಟಿವಿಟಿ ಕಂಟ್ರೋಲ್ಸ್ ಪುಟಕ್ಕೆ ಹೋಗಿ ಮತ್ತು ನಿಮ್ಮ ಅಕೌಂಟ್ ಗೆ ಲಾಗಿನ್ ಆಗಿ.

ಹೆಜ್ಜೆ 2: ವಾಯ್ಸ್ ಆಂಡ್ ಆಡಿಯೊ ಆಕ್ಟಿವಿಟಿ ಕಾಣುವ ತನಕ ಸ್ಕ್ರಾಲ್ ಮಾಡುತ್ತಾ ಹೋಗಿ.

ಹೆಜ್ಜೆ 3: ಈಗ ಸ್ಲೈಡರ್ ಅನ್ನು ಆಫ್ ಮಾಡಿ ಮತ್ತು ನಿಮ್ಮ ಧ್ವನಿ ರೆಕಾರ್ಡಿಂಗ್ ಗೂಗಲ್ ಅಕೌಂಟ್ ನೊಂದಿಗೆ ಜೋಡಣೆಗೊಳ್ಳುವುದನ್ನು ನಿಲ್ಲಿಸಿ.


ನಿಮ್ಮ ಫೋನಿನ ಮೈಕ್ರೊಫೋನನ್ನು ಗೂಗಲ್ ಉಪಯೋಗಿಸದಂತೆ ಬ್ಲಾಕ್ ಮಾಡುವುದು ಹೇಗೆ:


ಹೆಜ್ಜೆ 1: ಸೆಟ್ಟಿಂಗ್ಸ್ -> ಆಪ್ಸ್ ಆಂಡ್ ನೋಟಿಫಿಕೇಷನ್ಸ್

ಹೆಜ್ಜೆ 2: ಡಿವೈಜ್ ನಲ್ಲಿ ಇನ್ಸಟಾಲ್ ಮಾಡಿರುವ ಆಪ್ಸ್ ಗಳನ್ನು ನೋಡಲು 'ಸೀ ಆಲ್ ಆಪ್ಸ್’ ಆಯ್ಕೆ ಮಾಡಿ.

ಹೆಜ್ಜೆ 3: ಗೂಗಲ್ ಆಪ್ ಸಿಗುವ ತನಕ ಕೆಳಗೆ ಸ್ಕ್ರಾಲ್ ಮಾಡಿ ನಂತರ ಆಯ್ಕೆ ಮಾಡಿ.

ಹೆಜ್ಜೆ 4: ಪರ್ಮಿಷನ್ಸ್ ಮೇಲೆ ಒತ್ತಿ ಮತ್ತು ಮೈಕ್ರೋಫೋನಿನ ಸ್ಲೈಡರ್ ನ ಟೊಗಲ್ ಆಫ್ ಮಾಡಿ.

Best Mobiles in India

English summary
Here are few ways you can delete the stored data from Google's database. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X