ಗೂಗಲ್ ನಿಮ್ಮ ಸಾಧನವನ್ನು ಹೇಗೆ ಅಪ್ಡೇಟ್ ಮಾಡುತ್ತದೆ?

By Tejaswini P G
|

ನಿಮ್ಮ ಸ್ನೇಹಿತರು ಅಥವಾ ಇನ್ನಿತರರಿಗೆ ಈಗಾಗಲೇ ಲಭಿಸಿರುವ ನೂತನ ಓಎಸ್ ನಿಮ್ಮ ಫೋನ್ ಉತ್ಪಾದಕರಿಂದ ನಿಮಗೆ ಲಭಿಸದ ಕಾರಣ ನೀವು ನಿಮ್ಮ ಮೊಬೈಲ್ ನಲ್ಲಿ ಹೊಸ ಫೀಚರ್ಗಳು ಅಥವಾ ಹೊಸ ಆಪ್ಗಳನ್ನು ಬಳಸಲಾಗದೇ ನಿರಾಶರಾಗಿದ್ದೀರೇ? ನೂತನ ಓಎಸ್ ಅಪೇಟ್ ನೀಡಲು OEM(ಒರಿಜಿನಲ್ ಡಿವೈಸ್ ಮ್ಯಾನುಫ್ಯಾಕ್ಚರರ್) ಗಳು ಆಂಡ್ರಾಯ್ಡ್ ತಂಡದ ಸಹಯೋಗದೊಂದಿಗೆ ಕಾರ್ಯನಿರ್ವಹಿಸಬೇಕು ಮತ್ತು ಸೋರ್ಸ್ ಕೋಡ್ ಅನ್ನು ತಮ್ಮ ಸಾಧನದೊಂದಿಗೆ ಹೊಂದಿಕೆಯಾಗುವಂತೆ ಬದಲಾಯಿಸಬೇಕು.

ಗೂಗಲ್ ನಿಮ್ಮ ಸಾಧನವನ್ನು ಹೇಗೆ ಅಪ್ಡೇಟ್ ಮಾಡುತ್ತದೆ?

ಆಂಡ್ರಾಯ್ಡ್ 7.x ಮತ್ತು ಅದರ ಹಿಂದಿನ ಆವೃತ್ತಿಗಳಲ್ಲಿ ಪ್ರತೀ ಬರಿ ಅಪ್ಡೇಟ್ ಬಂದಾಗಲೂ OEM ಗಳು ಆಂಡ್ರಾಯ್ಡ್ ಕೋಡ್ ನ ದೊಡ್ಡ ದೊಡ್ಡ ಭಾಗಗಳನ್ನು ಅಪ್ಡೇಟ್ ಮಾಡಬೇಕಾಗುತ್ತಿತ್ತು. ಮೂಲ ಹಾರ್ಡ್ವೇರ್ ಮಟ್ಟದಲ್ಲಿ ಪ್ಲಗ್-ಆಂಡ್-ಪ್ಲೇ ಕಂಪ್ಯಾಟಿಬಿಲಿಟಿ ಆಯ್ಕೆ ಇಲ್ಲದ ಕಾರಣ ಸಾಧನಕ್ಕೆ ಸರಿಹೊಂದುವಂತೆ ಕೋಡ್ ನಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ಅಪ್ಡೇಟ್ ಅನ್ನು ನೀಡಲು OEM ಗಳು ಸಾಕಷ್ಟು ಸಮಯ ಮತ್ತು ಹಣವನ್ನು ಕೋಡ್ ನ ಬದಲಾವಣೆ ಮತ್ತು ಟೆಸ್ಟಿಂಗ್ ನಲ್ಲಿ ವ್ಯಯಿಸಬೇಕಾಗುತ್ತಿತ್ತು.

ಈ ಎಲ್ಲಾ ತೊಂದರೆಗಳಿಗೆ ಉತ್ತರವಾಗಿ ಈಗ ಆಂಡ್ರಾಯ್ಡ್ 8.0 ಓರಿಯೋ ಜೊತೆಗೆ ಪ್ರಾಜೆಕ್ಟ್ ಟ್ರೆಬಲ್ ಬಂದಿದ್ದು, ಇದರಲ್ಲಿ ಓಎಸ್ ಫ್ರೇಮ್ವರ್ಕ್ ಗೆ ದೊಡ್ಡ ಮಟ್ಟಿನಲ್ಲಿ ಬದಲಾವಣೆಗಳನ್ನು ತರಲಾಗಿದ್ದು ಅದನ್ನು ವೆಂಡರ್ ಹಾರ್ಡ್ವೇರ್ ಕೋಡ್ ಇಂಪ್ಲೆಮೆಂಟೇಶನ್ ನಿಂದ ಬೇರ್ಪಡಿಸಲಾಗಿದೆ. ಈ ಮೂಲಕ ಗೂಗಲ್ ಮತ್ತು OEM ಗಳು ಮೂಲ ಹಾರ್ಡ್ವೇರ್ ಭಾಗಗಳನ್ನು ರೀಕಾನ್ಫಿಗರ್ ಮಾಡದೆಯೇ ಓಎಸ್ ಅನ್ನು ಅಪ್ಡೇಟ್ ಮಾಡಬಹುದಾಗಿದೆ.

ಇವೆಲ್ಲದರ ಮಧ್ಯೆ ಹಳೆಯ ಆಪರೇಟಿಂಗ್ ಸಿಸ್ಟಮ್ ಗಳನ್ನು ಹೊಂದಿರುವ ಫೋನ್ ಗಳನ್ನು ಬಳಸುತ್ತಿರುವ ಬಳಕೆದಾರರನ್ನು ಗೂಗಲ್ ಮರೆತಿಲ್ಲ. ಓಎಸ್ ನೊಂದಿಗೆ ಬರುತ್ತಿದ್ದ ಹಲವು ಆಪ್ಗಳು ಈಗ ಪ್ಲೇಸ್ಟೋರ್ ನಲ್ಲಿ ಲಭ್ಯವಿದ್ದು ಅದರ ಅಪ್ಡೇಟ್ ಮತ್ತು ನಿರ್ವಹಣೆಯನ್ನು ಈ ಮೂಲಕ ನೋಡಿಕೊಳ್ಳಲಾಗುವುದು. ಈ ರೀತಿಯಾಗಿ ನೀವು ಇತ್ತೀಚಿನ ಓಎಸ್ ಹೊಂದಿಲ್ಲವಾದರೂ ಹೊಸ ಹೊಸ ಫೀಚರ್ಗಳನ್ನು ಪಡೆಯಬಹುದಾಗಿದೆ.

ಗೂಗಲ್ ಪ್ಲೇ ಸರ್ವೀಸಸ್ ಅಪ್ಡೇಟ್ಗಳು

ತಮ್ಮ ಪೋನ್ಗಳಲ್ಲಿ ಇತ್ತೀಚಿನ ಓಎಸ್ ಹೊಂದಿರದ ಬಳಕೆದಾರರೂ ಕೂಡ ಗೂಗಲ್ ನೀಡಿರುವ ಇತ್ತೀಚಿನ ಫೀಚರ್ಗಳನ್ನು ಅನುಭವಿಸುವಂಥಾಗಬೇಕು ಎಂದು ಗೂಗಲ್ ಸಾಕಷ್ಟು ಪ್ರಯತ್ನಗಳನ್ನು ನಡೆಸಿದೆ. OEM ಗಳು ಆಂಡ್ರಾಯ್ಡ್ ಹೊಂದಿರುವ ತಮ್ಮ ನೂತನ ಸಾಧನವೊಂದನ್ನು ಬಿಡುಗಡೆ ಮಾಡುವ ಮೊದಲು ತಮ್ಮ ಸಾಧನದಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಗೂಗಲ್ ಆಪ್ಗಳನ್ನು ಪಡೆಯಲು ಕೆಲವು ಶರತ್ತು ಮತ್ತು ನಿಯಮಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಈ ಒಪ್ಪಂದದ ಅನುಸಾರ ಗೂಗಲ್ ಪ್ಲೇ ಸರ್ವೀಸಸ್ ಗೆ ಬದಲಾವಣೆಗಳನ್ನು ಮಾಡುವ ಅಧಿಕಾರ ಕೇವಲ ಆಂಡ್ರಾಯ್ಡ್ ಗೆ ಮಾತ್ರ ಇರುತ್ತದೆ. ಗೂಗಲ್ ಪ್ಲೇ ಸರ್ವೀಸಸ್ ಗೆ ಬದಲಾವಣೆಗಳನ್ನು ಮಾಡಿದಾಗ ಸಿಸ್ಟಮ್ ಗೆ ಹಿನ್ನಲೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗುತ್ತದೆ.

ಗೂಗಲ್ ಪ್ಲೇ ಸರ್ವೀಸಸ್ ಅಪ್ಡೇಟ್ ನ ಮೂಲಕ "ಫೈಂಡ್ ಮೈ ಡಿವೈಸ್" ಟ್ರ್ಯಾಕಿಂಗ್ ಫೀಚರ್ ಅನ್ನು ಬಹುತೇಕ ಎಲ್ಲಾ ಸಾಧನಗಳಿಗೆ ನೀಡಲಾಗಿತ್ತು. ಇದೇ ರೀತಿಯಾಗಿ ಗೂಗಲ್ ಬಹುತೇಕ ಎಲ್ಲಾ ಫೋನ್ಗಳಿಗೆ ಮಾಲ್ವೇರ್ಗಳನ್ನು ತಡೆಗಟ್ಟಲು ಸಹಕಾರಿಯಾದ ಆಪ್-ಸ್ಕ್ಯಾನಿಂಗ್ ಫೀಚರ್ ಅನ್ನು ನೀಡಿತ್ತು. ಹಳೆಯ ಸಾಧನಗಳ ಸುರಕ್ಷತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು.

ಗೂಗಲ್ ನಿಮ್ಮ ಸಾಧನವನ್ನು ಹೇಗೆ ಅಪ್ಡೇಟ್ ಮಾಡುತ್ತದೆ?

ಬೇರೆ ಪ್ಲ್ಯಾಟ್ಫಾರ್ಮ್ಗಳಲ್ಲಿ ಈ ರೀತಿಯ ಬದಲಾವಣೆಗಳನ್ನು ಮಾಡಲು ಆಪರೇಟಿಂಗ್ ಸಿಸ್ಟಮ್ ನಲ್ಲಿ ತುಂಬಾ ಬದಲಾವಣೆಗಳನ್ನು ಮಾಡಬೇಕಾಗುತ್ತಿತ್ತು. ಆದರೆ ಗೂಗಲ್ ಈ ಬದಲಾವಣೆಗಳನ್ನು ನೀಡುವಲ್ಲಿ OEM ಗಳಿಂದ ಉಂಟಾಗುವ ಅಡೆತಡೆಗಳನ್ನು ನಿವಾರಿಸಿ ಎಲ್ಲಾ ಆಂಡ್ರಾಯ್ಡ್ ಸಾಧನಗಳಿಗೆ ಜೊತೆಯಾಗಿ ಅಪ್ಡೇಟ್ಗಳನ್ನು ನೀಡುವಲ್ಲಿ ಸಫಲವಾಗಿದೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಧಿಕೃತ ಗೂಗಲ್ ಆಪ್ಗಳು

ಗೂಗಲ್ ತಮ್ಮ ಮೂಲ ಸಿಸ್ಟಮ್ ನಿಂದ ಸಾಕಷ್ಟು ಅಧಿಕೃತ ಆಪ್ ಗಳನ್ನು ಬೇರ್ಪಡಿಸಿದ್ದು, ಜಿಮೇಲ್, ಗೂಗಲ್ ಕ್ಯಾಲೆಂಡರ್, ಹ್ಯಾಂಗೌಟ್ಸ್, ಕ್ರೋಮ್, ಗೂಗಲ್ ಮ್ಯಾಪ್ಸ್, ಡ್ರೈವ್ ಮೊದಲಾದ ಅಧಿಕೃತ ಆಪ್ಗಳನ್ನು ಪ್ಲೇ ಸ್ಟೋರ್ ಗೆ ವರ್ಗಾಯಿಸಿದ್ದಾರೆ. ಈ ಮೂಲಕ ಆಂಡ್ರಾಯ್ಡ್ ಓಎಸ್ ಅನ್ನು ಅಪ್ಡೇಟ್ ಮಾಡದೆಯೇ ಈ ಆಪ್ಗಳನ್ನು ಅಪ್ಡೇಟ್ ಮಾಡಬಹುದಾಗಿದೆ.

ಓಎಸ್ ಅಪ್ಡೇಟ್ ಮೇಲೆ ಅವಲಂಬಿಸಿರುವ ಫೀಚರ್ಗಳು

ಆಪರೇಟಿಂಗ್ ಮಟ್ಟದ ಫೀಚರ್ಗಳು ಮತ್ತು ಹಿನ್ನಲೆಯಲ್ಲಿ ನೀಡಲಾಗದ ಹೊಸ ಹಾರ್ಡ್ವೇರ್ ಸ್ಟ್ಯಾಂಡರ್ಡ್ ಸಪೋರ್ಟ್, ಇಂತಹ ಬದಲಾವಣೆಗಳಿಗೆ ಕೋರ್ ಓಎಸ್ ನ ಹೊಸ ಆವೃತ್ತಿಯ ಅಗತ್ಯವಿರುತ್ತದೆ.

ಗೂಗಲ್ ಹೊಸ ಫೀಚರ್ಗಳನ್ನು ಪ್ಲೇಸ್ಟೋರ್ ಅಪ್ಡೇಟ್ಗಳು ಮತ್ತು ಆಪ್ ಅಪ್ಡೇಟ್ಗಳ ಮೂಲಕ ನೀಡುತ್ತಿರುವುದರಿಂದ ಬಳಕೆದಾರರು ಆಂಡ್ರಾಯ್ಡ್ ಮಾರ್ಶ್ಮೆಲ್ಲೊ(ಆಂಡ್ರಾಯ್ಡ್ 6.0) ಅಥವಾ ಮೇಲ್ಪಟ್ಟ ಆಂಡ್ರಾಯ್ಡ್ ಆವೃತ್ತಿಗಳ ಮೂಲಕ ಉತ್ತಮ ಆಂಡ್ರಾಯ್ಡ್ ಅನುಭವವನ್ನು ಪಡೆಯಬಹುದಾಗಿದೆ.

Best Mobiles in India

English summary
How does Google update your device. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X