ಹೊಸ ಸ್ವರೂಪದ ಜಿಮೇಲ್‍ಗೆ ಸ್ವಿಚ್ ಆಗುವುದು ಹೇಗೆ?..ಆದರೆ ನಮಗೇನು ಲಾಭ?

|

ಪ್ರಖ್ಯಾತ ಮೇಲ್ ತಾಣ ಜಿಮೇಲ್ ಡಿಸೈನ್ ಸೇರಿದಂತೆ ಫೀಚರ್ಸ್‌ನಲ್ಲಿಯೂ ಭಾರೀ ಬದಲಾವಣೆ ಕಂಡಿರುವುದು ಈಗಾಗಲೇ ನಿಮ್ಮ ಗಮನಕ್ಕೆ ಬಂದಿರಬಹುದು. ಒಂದು ವೇಳೆ ಜಿಮೇಲ್ ಬಳಕೆದಾರರು ಇನ್ನೂ ಹೊಸ ಡಿಸೈನ್‍ ಆಯ್ಕೆ ಮಾಡಿಕೊಂಡಿಲ್ಲ ಎಂದಾದರೆ ನಾವೆ ಮ್ಯಾನ್ಯುವಲ್ ಆಗಿ ಹೊಸ ಸ್ವರೂಪದ ಜಿಮೇಲ್‍ಗೆ ಸ್ವಿಚ್ ಆಗಬಹುದು.

ಹೊಸ ಸ್ವರೂಪದ ಜಿಮೇಲ್‍ಗೆ ಸ್ವಿಚ್ ಆಗುವುದು ಹೇಗೆ?..ಆದರೆ ನಮಗೇನು ಲಾಭ?

ಜಿಮೇಲ್ ಸೆಟ್ಟಿಂಗ್ ಬಟನ್ ಕ್ಲಿಕ್ ಮಾಡಿದರೆ ತೆರೆಯುವ Try new Gmail ಎಂಬ ಆಪ್ಶನ್ ಕ್ಲಿಕ್ ಮಾಡಿದರೆ ಹೊಸ ಸ್ವರೂಪದ ಜಿಮೇಲ್‍ಗೆ ಸ್ವಿಚ್ ಆಗುತ್ತೀರಾ. ಆದರೆ, ಅದಕ್ಕೂ ಮುನ್ನ ಹೊಸ ಸ್ವರೂಪದ ಜಿಮೇಲ್‍ಗೆ ಸ್ವಿಚ್ ಆದರೆ ನಮಗೇನು ಲಾಭ? ಹೊಸ ಸ್ವರೂಪದ ಜಿಮೇಲ್‌ನಲ್ಲಿ ಹೊಸತೇನಿದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಸುರಕ್ಷತೆ ಎಚ್ಚರಿಕೆ.

ಸುರಕ್ಷತೆ ಎಚ್ಚರಿಕೆ.

ಯಾವುದಾದರೂ ಇಮೇಲ್ ಅಪಾಯಕಾರಿ ಎಂದು ಅನಿಸಿದರೆ This message seems dangerous ಎಂಬ ಸಂದೇಶವನ್ನು ತೋರಿಸುವುದರ ಜತೆಗೆ ಡಿಲೀಟ್ ನೌ ಎಂಬ ಬಟನ್ ಅನ್ನು ಹೊಸ ಸ್ವರೂಪದ ಜಿಮೇಲ್ ತೋರಿಸುತ್ತದೆ. ಈ ಮೂಲಕ ನಿಮ್ಮ ಜಿಮೇಲ್ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ.

ಸಂದೇಶ ಗಮನಿಸುವಂತೆ ನಿರ್ದೇಶನ.

ಸಂದೇಶ ಗಮನಿಸುವಂತೆ ನಿರ್ದೇಶನ.

ಇನ್‌ಬಾಕ್ಸ್ನಲ್ಲಿರುವ ಸಂದೇಶಗಳನ್ನು ಗಮನಿಸುವಂತೆ ನಿರ್ದೇಶನ ನೀಡುವ ವ್ಯವಸ್ಥೆಯು ಹೊಸ ಸ್ವರೂಪದ ಜಿಮೇಲ್‌ನಲ್ಲಿದೆ. ಉದಾಹರಣೆ, ಹಲವು ದಿನಗಳ ಹಿಂದೆ ಬಂದಿರುವ ಇಮೇಲ್‍ ಅನ್ನು ನಾವು ಗಮನಿಸದೇ ಇದ್ದರೆ, ಆ ಸಂದೇಶ ಕಳುಹಿಸಿದ ದಿನ ಮತ್ತು ರಿಪ್ಲೈ ಮಾಡುವ ಫೀಚರ್ ಅನ್ನು ನಿಮಗೆ ತೋರಿಸುತ್ತದೆ.

Oneplus 6 First Impressions - Gizbot Kannada
ಕೃತಕ ಬುದ್ದಿಮತ್ತೆ ಉತ್ತರ.

ಕೃತಕ ಬುದ್ದಿಮತ್ತೆ ಉತ್ತರ.

ನಿಮಗೆ ಬಂದಿರುವ ಯಾವುದೇ ಮೇಲ್‌ಗೆ ನೀವು ಉತ್ತರಿಸುವಾಗ ಆ ಇಮೇಲ್‌ನಲ್ಲಿದ್ದ ವಿಷಯವನ್ನು ಗ್ರಹಿಸಿ ಕೃತಕ ಬುದ್ದಿಮತ್ತೆ ಉತ್ತರವನ್ನು ಹೊಸ ಸ್ವರೂಪದ ಜಿಮೇಲ್ ತೋರಿಸುತ್ತದೆ. Thank you, Yes, No, Congratulations ಮೊದಲಾದ ಸ್ಮಾರ್ಟ್ ಉತ್ತರವನ್ನು ಜಿಮೇಲ್ ಇಲ್ಲಿ ಸೂಚಿಸುತ್ತದೆ.

ನೇಟಿವ್ ಆಫ್‌ಲೈನ್ ಮೋಡ್.

ನೇಟಿವ್ ಆಫ್‌ಲೈನ್ ಮೋಡ್.

ಇಂಟರ್ನೆಟ್ ಸಂಪರ್ಕ ಸಾಧ್ಯವಾಗದೇ ಇರುವಾಗ ಗೂಗಲ್ ಡಾಕ್ಸ್‌ನಲ್ಲಿರುವಂತೆ ಜಿಮೇಲ್‍ನಲ್ಲಿಯೂ ನೇಟಿವ್‌ ಆಫ್‍ಲೈನ್ ಮೋಡ್ ವ್ಯವಸ್ಥೆ ಕಲ್ಪಿಸಲಾಗಿದೆ.ಇಂಟರ್ನೆಟ್ ಸಂಪರ್ಕವು ಲಭ್ಯವಾದ ತಕ್ಷಣ ನಿಮ್ಮ ಖಾತೆಯನ್ನು ಸಿಂಕ್ ಮಾಡುವ ಮೂಲಕ Gmail ನ ಸ್ಥಳೀಯ ಆಫ್ಲೈನ್ ಮೋಡ್ ಕಾರ್ಯನಿರ್ವಹಿಸುತ್ತದೆ.

ಆಪ್‌ನಲ್ಲಿಯೂ ಹೊಸ ವೈಶಿಷ್ಟ್ಯ

ಆಪ್‌ನಲ್ಲಿಯೂ ಹೊಸ ವೈಶಿಷ್ಟ್ಯ

ನಿಮ್ಮ ಇಮೇಲ್‌ಗಳಿಗೆ ಬಂದಿರುವಂತಹ ಪ್ರಧಾನ ಸಂದೇಶಗಳು ಯಾವುದು ಎಂದು ಪ್ರತ್ಯೇಕಿಸುವ ಪ್ರಯಾರಿಟಿ ನೋಟಿಫಿಕೇಶನ್ ಮತ್ತು ನ್ಯೂಸ್ ಲೆಟರ್‌ಗಳನ್ನು ಅನ್‍ಸಬ್‍ಸ್ಕ್ರೈಬ್ ಮಾಡುವ ಶಾರ್ಟ್ ಕಟ್‌ಗಳು ಜಿಮೇಲ್ ಮೊಬೈಲ್ ಆಪ್‌ಲ್ಲಿಯೂ ಲಭ್ಯವಿವೆ. ಆದರೆ, ಡೆಸ್ಕ್‌ಟಾಪ್‌ಗೆ ಸಿಗುವಷ್ಟು ಹೆಚ್ಚು ಅಪ್‌ಡೇಟ್‌ಗಳು ಆಪ್‌ಗೆ ಈಗಲೇ ಲಭ್ಯವಿಲ್ಲ.

Best Mobiles in India

English summary
Google just updated Gmail with one of its biggest redesigns in a long time. The update brings several security features like confidential mode. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X