ಅವಶ್ಯವಾಗಿ ಈ ಆಪ್ಸ್‌ಗಳು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರಲಿ!

|

ಪ್ರಸ್ತುತ ಜನರು ಏನು ಬೇಕಾದರೂ ಬಿಟ್ಟಿರಬಲ್ಲರೂ ಆದ್ರೆ ಜೊತೆಗಿರುವ ಸ್ಮಾರ್ಟ್‌ಫೋನ್‌ ಬಿಟ್ಟಿರಲು ಕಷ್ಟವೇ ಸರಿ. ಅಷ್ಟರಮಟ್ಟಿಗೆ ಸ್ಮಾರ್ಟ್‌ಫೋನ್ ಅಗತ್ಯತೆ ಮತ್ತು ಅನಿವಾರ್ಯ ಸ್ಥಾನ ಪಡೆದಿದೆ. ಸ್ಮಾರ್ಟ್‌ಫೋನ್‌ ಮೂಲಕವೇ ಬಹುತೇಕ ಕೆಲಸಗಳನ್ನು ಮಾಡಿ ಮುಗಿಸುವ ಅನುಕೂಲಗಳು ಇದೀಗ ಹೆಚ್ಚಾಗಿವೆ. ಅದಕ್ಕೆ ಅಗತ್ಯ ಮತ್ತು ಪೂರಕವಾಗದ ಅಪ್ಲಿಕೇಶನ್‌ಗಳು ಸಹ ಲಭ್ಯವಾಗುತ್ತವೆ. ಈ ನಿಟ್ಟಿನಲ್ಲಿ ಸದ್ಯ ಸ್ಮಾರ್ಟ್‌ಫೋನ್ ಜೊತೆಗೆ ಕೆಲವು ಆಪ್ಸ್‌ಗಳು ಅನಿವಾರ್ಯ ಆಗಿಬಿಟ್ಟಿವೆ.

ಸ್ಮಾರ್ಟ್‌ಫೋನ್‌

ಹೌದು, ಸದ್ಯ ಸ್ಮಾರ್ಟ್‌ಫೋನ್‌ ಬಳಸುವ ಪ್ರತಿಯೊಬ್ಬರು ಅಗತ್ಯ ಸಾಮಾಜಿಕ ಜಾಲತಾಣಗಳೊಂದಿಗೆ ಅವರಿಗೆ ಅಗತ್ಯ ಇರುವ ಆಪ್ಸ್‌ಗಳನ್ನು ಇನ್‌ಸ್ಟಾಲ್ ಮಾಡಿರುತ್ತಾರೆ. ಹಾಗೆಯೇ ಈಗಾಗಲೇ ಬಹುತೇಕರು ಸ್ಮಾರ್ಟ್‌ಫೋನ್‌ ಮೂಲಕವೇ ಆನ್‌ಲೈನ್‌ ಪೇಮೆಂಟ್‌ ಮಾಡುತ್ತಿದ್ದಾರೆ. ಹೀಗೆ ಕೆಲವು ಅಗತ್ಯ ಕೆಲಸಗಳಿಗೆ ಸ್ಮಾರ್ಟ್‌ಫೋನಿನಲ್ಲಿ ಕೆಲವು ಆಪ್ಸ್‌ಗಳನ್ನು ಬಳಸಬೇಕಿದೆ. ಆ ಆಪ್ಸ್‌ಗಳು ಕೆಲಸವನ್ನು ಮತ್ತಷ್ಟು ಸಲಿಸಾಗಿಸುತ್ತವೆ. ಅಂತಹ ಕೆಲವು ಅಗತ್ಯ ಆಪ್ಸ್‌ಗಳ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್

ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್

ಡಿಜಿಟಲ್ ತಂತ್ರಜ್ಞಾನದ ಬಳಕೆ ಕೆಲಸವನ್ನು ಹಗುರಾಗಿಸುವ ಜೊತೆಗೆ ಸಮಯದ ಉಳಿತಾಯ ಮಾಡುವುದು ಎನ್ನುವಂತಾಗಿದೆ. ಏಕೆಂದರೇ ಇದೀಗ ರೈಲು, ಬಸ್‌, ವಿಮಾನ, ಹೋಟೆಲ್, ಸಿನಿಮಾ ಹೀಗೆ ಯಾವುದೇ ಪ್ರವಾಸ, ಪ್ರಯಾಣ ಏನೇ ಆಗಿರಲಿ ಎಲ್ಲವನ್ನು ಸ್ಮಾರ್ಟ್‌ಫೋನ್‌ ಮೂಲಕ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಅದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿಯೂ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್ ಆಪ್‌ ಇರಲಿ. ಉದಾಹರಣೆಗೆ : ರೆಡ್‌ಬಸ್‌ ಆಪ್‌, ಮೇಕ್‌ ಮೈ ಟ್ರಿಪ್‌, ಅಬಿಬಸ್‌, ಐಆರ್‌ಸಿಟಿಸಿ.

ಕ್ಯಾಮ್‌ಸ್ಕ್ಯಾನರ್‌ ಆಪ್‌

ಕ್ಯಾಮ್‌ಸ್ಕ್ಯಾನರ್‌ ಆಪ್‌

ಕ್ಯಾಮ್‌ಸ್ಕ್ಯಾನರ್‌ ಆಪ್‌ನಲ್ಲಿ ಬಳಕೆದಾರರು ದಾಖಲಾತಿಗಳನ್ನು ಮತ್ತು ಫೋಟೊಗಳನ್ನು ಸ್ಕ್ಯಾನ್‌ ಮಾಡಿ ಶೇಖರಿಸಿಕೊಳ್ಳಲು ಕ್ಯಾಮ್‌ಸ್ಕ್ಯಾನರ್ ಆಪ್‌ ಉತ್ತಮ ಆಯ್ಕೆ. ಈ ಆಪ್‌ನಲ್ಲಿ ದಾಖಲೆಗಳ ಪ್ರತಿಗಳನ್ನು ಪಿಡಿಎಫ್‌ ಅಥವಾ ಜಿಪಿಜೆ ಮಾದರಿಯಲ್ಲಿ ಸ್ಟೋರ್ ಮಾಡಿಕೊಳ್ಳಬಹುದಾಗಿದೆ. ಅಗತ್ಯವಿದ್ದಾಗ ಸ್ಮಾರ್ಟ್‌ಫೋನಿನಲ್ಲಿಯೇ ತಕ್ಷಣಕ್ಕೆ ಸಿಕ್ಕಿಬಿಡುತ್ತವೆ. ಬೇಕಿದ್ದರೇ ಶೇರ್‌ ಸಹ ಮಾಡುವ ಆಯ್ಕೆ ಇದೆ.

ಪೇಮೆಂಟ್‌ ಆಪ್ಸ್‌

ಪೇಮೆಂಟ್‌ ಆಪ್ಸ್‌

ಪ್ರಸ್ತುತ ಎಲ್ಲ ಕಡೆ ಈಗ ಡಿಜಿಟಲ್ ಪೇಮೆಂಟ್ ಮಾದರಿ ಬಳಕೆ ಹೆಚ್ಚಾಗಿ ನಡೆಯುತ್ತಿದ್ದು, ಬಳಕೆದಾರರು ಸಹ ಅದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಸಾಕಷ್ಟು ಆಪ್ಸ್‌ಗಳು ಪೇಮೆಂಟ್‌ ಮಾಡಲು ಲಭ್ಯ ಇದ್ದು, ಅವುಗಳಲ್ಲಿ ಗೂಗಲ್ ಪೇ, ಫೋನ್‌ ಪೇ, ಪೇಟಿಎಮ್, ಅಮೆಜಾನ್ ಪೇ, ಭೀಮ್‌ ಆಪ್‌,ಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಪೇಮೆಂಟ್‌ ಆಪ್‌ ಇರಲಿ. ಕ್ಯೂಆರ್‌ ಕೋಡ್ ಸ್ಕ್ಯಾನ್‌ ಮಾಡಿ ಸುಲಭವಾಗಿ ಹಣ ಪಾವತಿಸಬಹುದಾಗಿದೆ.

WPS ಆಫೀಸ್‌ ಆಪ್‌

WPS ಆಫೀಸ್‌ ಆಪ್‌

ಪಿಡಿಎಫ್‌, ಎಕ್ಸ್‌ಎಲ್‌, ವರ್ಲ್ಡ್‌ ಶೀಟ್‌ ಫೈಲ್‌ ಮಾದರಿಯ ಸಣ್ಣಪುಟ್ಟ ಕೆಲಸಗಳನ್ನು ಬಳಕೆದಾರರು ಈ WPS ಆಫೀಸ್‌ ಆಪ್‌ ಮೂಲಕವೇ ಮಾಡಿಕೊಳ್ಳಬಹುದಾಗಿದೆ. ಸುಲಭವಾಗಿ ಎಡಿಟ್ ಮಾಡಬಹುದಾದ ಆಯ್ಕೆಗಳು ಇದರಲ್ಲಿದ್ದು, ಟೆಕ್ಟ್ಸ್‌ ಫಾರ್ಮೇಟ್‌ ಅನ್ನು ಪಿಡಿಎಫ್ ಮಾದರಿಗೆ ವರ್ಗಾಹಿಸಲು ಸಹ ಅವಕಾಶ ಇದೆ. ಹೀಗಾಗಿ ಈ ಆಪ್‌ ಸ್ಮಾರ್ಟ್‌ಫೋನಿನಲ್ಲಿ ಇದ್ದರೇ ಉತ್ತಮ.

ವಿಡಿಯೊ ಎಡಿಟಿಂಗ್‌

ವಿಡಿಯೊ ಎಡಿಟಿಂಗ್‌

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಬೆಸ್ಟ್‌ ಕ್ಯಾಮೆರಾ ಸೌಲಭ್ಯಗಳಿದ್ದು, ಫೋಟೊ ಮತ್ತು ವಿಡಿಯೊ ಸೆರೆಹಿಡಿಯುವುದು ಸಾಮಾನ್ಯ. ಹೀಗೆ ಸೆರೆಹಿಡಿದ ಫೋಟೊ ಮತ್ತುವಿಡಿಯೊಗಳನ್ನು ಎಡಿಟ್ ಮಾಡಿ ಇನ್ನಷ್ಟು ಸ್ಪೆಷಲ್ ಟಚ್ ನೀಡುವ ಆಸಕ್ತಿ ನಿಮ್ಮಲ್ಲಿದ್ದರೇ, ಖಂಡಿತಾ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಿಡಿಯೊ ಎಡಿಟಿಂಗ್ ಆಪ್‌ ಇರಲೇಬೇಕು. ಇನ್‌ಶಾಟ್‌, ಮೂವೀ ಮೇಕರ್, ಕೇನ್‌ ಮಾಸ್ಟರ್‌ ಹೀಗೆ ಅನೇಕ ಆಪ್ಸ್‌ಗಳು ಸಿಗುತ್ತವೆ.

Best Mobiles in India

English summary
We use smartphones for a lot of things. We listen to music, play games, watch video, and talk to one another on social media. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X