TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಬ್ಲೂವೇಲ್, ಮೋಮೋ ಚಾಲೆಂಜ್ ಮಟ್ಟಹಾಕಲು ಕೇಂದ್ರಸರ್ಕಾರದಿಂದ ಹೊಸ ಗೇಮ್!
ಇತ್ತೀಚಿಗೆ ಹುಟ್ಟಿಕೊಂಡಿದ್ದ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುವ ಅಪಾಯಕಾರಿ ಆನ್‌ಲೈನ್ ಆಟಗಳಿಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ಮಕ್ಕಳು ಬಲಿಯಾಗಿದ್ದಾರೆ. ಹಾಗಾಗಿ, ಮಾರಣಾಂತಿಕ ಬ್ಲೂವೇಲ್ ಹಾಗೂ ಮೋಮೋ ಚಾಲೆಂಜ್ ಆಟಗಳಿಮದ ಮಕ್ಕಳನ್ನು ಪಾರು ಮಾಡಲು ಕೇಂದ್ರ ಸರ್ಕಾರ ತನ್ನದೇ ಆದ ಹೊಸ ಗೇಮ್ ಆಪ್ ಅಭಿವೃದ್ಧಿಪಡಿಸಿದೆ.
ಹೌದು, ಮಕ್ಕಳು ಮಾರಣಾಂತಿಕ ಬ್ಲೂವೇಲ್ ಹಾಗೂ ಮೋಮೋ ಚಾಲೆಂಜ್ ಅಪ್ಲಿಕೇಶನ್‌ಗಳಿಗೆ ಮಕ್ಕಳು ಮರುಳಾಗುತ್ತಿರುವುದನ್ನು ತಡೆಯಲು ಕೇಂದ್ರ ಸರಕಾರ ಮಕ್ಕಳಿಗಾಗಿ ಗೇಮ್ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ. ಇದನ್ನು ಸೈಬರ್ ಟ್ರಿವಿಯಾ ಎಂದು ಕರೆಯಲಾಗಿದ್ದು, ಮಕ್ಕಳನ್ನು ಅಪಾಯಕಾರ ಆಟಗಳಿಂದ ದೂರವಿರಿಸಲು ಈ ಗೇಮ್ ಪ್ರಯತ್ನಿಸಲಿದೆ.
ಮಕ್ಕಳು ಈಗ ಪಾಲಕರಿಗಿಂತ ಚುರುಕಾಗಿರುತ್ತಾರೆ. ಪಾಲಕರಿಗೆ ಗೊತ್ತಿಲ್ಲದಂತೆಯೇ ಇಂತಹ ಗೇಮ್‌ಗಳಿಗೆ ದಾಸರಾಗುತ್ತಾರೆ. ಪಾಲಕರ ಕಿವಿಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಮಕ್ಕಳು ಇರುವುದಿಲ್ಲ. ಹೀಗಾಗಿ ಇಂಥದ್ದೊಂದು ಗೇಮ್ ಅಭಿವೃದ್ಧಿಪಡಿಸಲು ನಿರ್ಧರಿಸಿದೆವು ಎಂದು ಎನ್‌ಸಿಪಿಸಿಆರ್ ಸದಸ್ಯ ಯಶವಂತ ಜೈನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಆಪ್‌ನಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿದ್ದು, ಮಕ್ಕಳು ತಾವು ನೀಡುವ ಉತ್ತರ ಆಧರಿಸಿ ಬಹುಮಾನವಾಗಿ ಅಂಕಗಳನ್ನು ಗಿಟ್ಟಿಸಲಿದ್ದಾರೆ. ಪ್ರಾಣಹಂತಕ ಆನ್‌ಲೈನ್ ಆಟಗಳಿಗೆ ಪ್ರತಿತಂತ್ರವಾಗಿ ರೂಪಿಸಿರುವ ಈ ಹೊಸ ಆಪ್, ಮಕ್ಕಳು ಸೈಬರ್‌ಗೆ ಬಲಿಯಾಗುವುದನ್ನು ನಿಯಂತ್ರಿಸಲಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ ಹೇಳಿದೆ.
ಬ್ಲೂ ವೇಲ್ ಚಾಲೆಂಜ್ ಮತ್ತು ಮೊಮೊ ಚಾಲೆಂಜ್'ನಂತಹ ಮಾರಣಾಂತಿಕ ಆಟಗಳಿಗೆ ಪರಿಹಾರೋಪಾಯವಾದ 'ನಡವಳಿಕೆ ಪರಿವರ್ತನಾ ತಾಂತ್ರಿಕತೆ' ಹೊಂದಿರುವ 'ಸೈಬರ್ ಟ್ರಿವಿಯಾ' ಸದ್ಯದಲ್ಲೇ ಆಪ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ . ಸರಿ ಉತ್ತರ ನೀಡಿದರೆ ಪಾಯಿಂಟ್‌ಗಳನ್ನು ನೀಡುವ ಈ ಆಪ್ ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.
ಓದಿರಿ: ಚೀನಾ ಮೊಬೈಲ್ ಕಂಪೆನಿಗಳಿಗೆ ನಡುಕ ಹುಟ್ಟಿಸಿದ ಸ್ಯಾಮ್‌ಸಂಗ್!