Subscribe to Gizbot

ಇನ್ ಸ್ಟಾಗ್ರಾಮ್ ಕೂಡ ಸೇಫ್ ಅಲ್ಲ: ಲೀಕ್ ಆಗಿದೆ ನಿಮ್ಮ ಮಾಹಿತಿ.!

Written By: Lekhaka

ಆನ್ ಲೈನಿನಲ್ಲಿ ಯಾವುದೇ ಸೇಫ್ ಅಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಇದು ತಂತ್ರಜ್ಞಾನದ ನ್ಯೂನತೆ ಯಿಂದ ಇರಬಹುದು ಇಲ್ಲವೇ ಹ್ಯಾಕರ್ ಗಳ ಕುತಂತ್ರದಿಂದ ಇರಬಹುದು ಸಾಕಷ್ಟು ಬಳಕೆದಾರರ ಮಾಹಿತಿಗಳು ಲೀಕ್ ಆಗುತ್ತವೆ. ಇದೇ ಮಾದರಿಯಲ್ಲಿ ಇನ್ ಸ್ಟಾಗ್ರಾಮ್ ನ ಬಳಕೆದಾರರ ಮೊಬೈಲ್ ನಂಬರ್ ಮತ್ತು ಮೇಲ್ ಐಡಿ ಲೀಕ್ ಆಗಿದೆ.

ಇನ್ ಸ್ಟಾಗ್ರಾಮ್ ಕೂಡ ಸೇಫ್ ಅಲ್ಲ: ಲೀಕ್ ಆಗಿದೆ ನಿಮ್ಮ ಮಾಹಿತಿ.!

ಭಾರತ ಸೇರಿದಂತೆ ಹಲವಾರು ದೇಶಲ್ಲಿ ಫೋಟೋ ಶೇರಿಂಗ್ ಆಪ್ ನಲ್ಲಿ ಮೊದಲನೆ ಸ್ಥಾನದಲ್ಲಿರುವ ಇನ್ ಸ್ಟಾಗ್ರಾಮ್ ನ ಬಗ್ ವೊಂದು ಬಳಕೆದಾರರ ಮಾಹಿತಿಯನ್ನು ಲೀಕ್ ಮಾಡಿದೆ ಎನ್ನಲಾಗಿದೆ. ಈ ಬಗ್ ಯಾವುದೇ ಪಾಸ್ ವರ್ಡ್ ಇಲ್ಲದೇ ಇನ್ ಸ್ಟಾಗ್ರಾಮ್ ಸರ್ವರ್ ನಿಂದಲೇ ಮಾಹಿತಿ ಬಿಟ್ಟುಕೊಟ್ಟಿದೆ.

ಆದರೆ ಈ ಬಗ್ಗೆ ಇನ್ ಸ್ಟಾಗ್ರಾಮ್ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ ಮತ್ತು ಗ್ರಾಹಕರ ಮಾಹಿತಿಗಳು ನಮ್ಮ ಬಳಿ ಸೇಫ್ ಆಗಿದೆ ಎನ್ನುತ್ತಿದೆ. ಆದರೆ ಹಲವು ಟೆಕ್ ಬ್ಲಾಗರ್ ಗಳು ಮಾಹಿತಿ ಲೀಕ್ ಆಗಿರುವುದಕ್ಕೆ ಸಾಕ್ಷಿಯನ್ನು ಸಹ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನವು ಸೆಕ್ಯೂರಿಟಿ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಅವುಗಳ ಬಳಕೆ ಮಾಡಿಕೊಳ್ಳುವ ಸಂದರ್ಭಗಳಲ್ಲಿ ಎಚ್ಚರವಹಿಸುವುದು ತೀರಾ ಅಗತ್ಯ. ಅವುಗಳ ಅವಶ್ಯಕತೆ ಇಲ್ಲವಾದಲ್ಲಿ ಬಳಕೆ ಮಾಡಿಕೊಳ್ಳದೇ ಇರುವುದೇ ಸೂಕ್ತ.

ಈ ಸ್ಮಾರ್ಟ್‌ಫೋನ್ ಲಾಂಚ್ ಆದರೆ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಕಥೆ ಮುಗಿದ ಹಾಗೆ..!

ಈ ಬಗ್ ಅನ್ನು ಸರಿ ಮಾಡಲಾಗಿದೆ ಎನ್ನುವ ಮಾತು ಸಹ ಕೇಳಿ ಬಂದಿದೆ. ಆದರೆ ಇದು ಎಷ್ಟು ಸತ್ಯ ಎನ್ನುವುದು ತಿಳಿದಿಲ್ಲ. ಮತ್ತು ಎಷ್ಟು ಮಾಹಿತಿ ಲೀಕ್ ಆಗಿದೆ ಎನ್ನುವುದಕ್ಕೂ ಅಂದಾಜು ಇಲ್ಲ.

Read more about:
English summary
Popular photo sharing app, Instagram has now revealed that they come across a bug within the platform that could be used to access personal details.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot