Just In
Don't Miss
- News
ಗೋಡೆಗೆ ಮೆತ್ತಿದ ಒಂದು ಬಾಳೆಹಣ್ಣಿಗೆ 85 ಲಕ್ಷ ರೂಪಾಯಿ!
- Movies
ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್
- Automobiles
ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!
- Sports
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ನಡೆದ ಬೆಟ್ ಮೌಲ್ಯವೆಷ್ಟು ಗೊತ್ತ?!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ವಾಟ್ಸ್‌ಆಪ್ ನಂತರ ಇನ್ಸ್ಟಾಗ್ರಾಂನಲ್ಲೂ ಗ್ರೂಪ್ ವೀಡಿಯೋ ಕಾಲಿಂಗ್!!
ಈಗೆಲ್ಲ ಗುಂಪಿನ ಚರ್ಚೆಗಳಿಗೆ ಹೆಚ್ಚೆಚ್ಚು ಜನರು ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಅಂತರ್ಜಾಲ ತಾಣಗಳೂ ಸೇರಿದಂತೆ, ಮೊಬೈಲ್ ಆಪ್ ಗಳು ಅದಕ್ಕಾಗಿ ಹೆಚ್ಚು ಮಹತ್ವ ನೀಡುತ್ತಿವೆ. ಇತ್ತೀಚೆಗಷ್ಟೇ ವಾಟ್ಸ್ ಆಪ್ ಗ್ರೂಪ್ ಚಾಟಿಂಗ್ ಗೆ ಅವಕಾಶ ಕೊಟ್ಟಿದ್ದು ಎಲ್ಲರಿಗೂ ತಿಳಿದಿದೆ. ಇದೀಗ ಇನ್ಸ್ಟಾಗ್ರಾಂ ನ ಸರದಿ.
ಇನ್ಟ್ಸಾಗ್ರಾಂ ಸದ್ಯ ಎಲ್ಲರೂ ಇಷ್ಟಪಡುವ ಒಂದು ಸಾಮಾಜಿಕ ಜಾಲತಾಣ. ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಗ್ ಗೂ ಕೂಡ ಇನ್ಸ್ಟಾಗ್ರಾಂ ಅಂದರೆ ಅಷ್ಟೊಂದು ಅಚ್ಚುಮೆಚ್ಚು. ಹೀಗಿರುವ ಇನ್ಸ್ಟಾಗ್ರಾಂ ಸದ್ಯ ಹೊಸ ಅಪ್ ಡೇಟ್ ನೀಡುತ್ತಿದೆ ಮತ್ತು ಅದರಲ್ಲಿ ಕೆಲವು ಹೊಸ ವೈಶಿಷ್ಟ್ಯಗಳು ಸೇರಿಕೊಳ್ಳುತ್ತಿದೆ.
ಪ್ರಮುಖವಾಗಿ ಅದರಲ್ಲಿ ಗ್ರೂಪ್ ವೀಡಿಯೋ ಚಾಟ್ ಗೆ ಇನ್ಸ್ಟಾಗ್ರಾಂ ನೇರವಾಗಿ ಅವಕಾಶ ಕಲ್ಪಿಸಿಕೊಡುತ್ತದೆ ಮತ್ತು ಎಕ್ಸ್ ಫ್ಲೋರ್ ಫೀಡ್ಸ್ ಮತ್ತು ಕಸ್ಟಮ್ ಕ್ಯಾಮರಾ ಎಫೆಕ್ಟ್ ವೈಶಿಷ್ಟ್ಯಗಳು ಇದರಲ್ಲಿ ಪ್ರಮುಖವಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ನಡೆದ ಫೇಸ್ ಬುಕ್ f8 ಡೆವಲಪರ್ಸ್ ಕಾನ್ಫರೆನ್ಸ್ ನಲ್ಲಿ ಈ ವೈಶಿಷ್ಟ್ಯಗಳ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ.
IOS ಮತ್ತು ಆಂಡ್ರಾಯ್ಡ್ ವರ್ಷನ್ ನ ಇನ್ಸ್ಟಾಗ್ರಾಂ ಆಪ್ ನಲ್ಲಿ ಈ ವೈಶಿಷ್ಟ್ಯಗಳು ನೇರಪ್ರಸಾರದಲ್ಲಿ ಲಭ್ಯವಿದೆ.ಒಂದು ವೇಳೆ ನಿಮಗೆ ಈ ವೈಶಿಷ್ಟ್ಯಗಳು ಇನ್ನು ಲಭ್ಯವಿಲ್ಲದಿದ್ದರೆ, ಕೂಡಲೇ ನಿಮ್ಮ ಆಪ್ ನ್ನು ಅಡ್ ಡೇಟ್ ಮಾಡಿಕೊಂಡು ಹೊಸ ವೈಶಿಷ್ಟ್ಯಗಳನ್ನು ಪರಿಶೀಲಿಸಿಕೊಳ್ಳಿ. ಆ ವೈಶಿಷ್ಟ್ಯಗಳು ಹೇಗಿವೆ ಎಂಬ ಬಗ್ಗೆ ಈ ಕೆಳಗೆ ತಿಳಿದುಕೊಳ್ಳೋಣ.

ಗ್ರೂಪ್ ವೀಡಿಯೋ ಚಾಟ್
ಇನ್ಸ್ಟಾಗ್ರಾಂ ಕೂಡ ವಾಟ್ಸ್ ಆಪ್ ನಂತೆ ನಾಲ್ಕು ಮಂದಿ ನಡೆಸಬಹುದಾದ ಗ್ರೂಪ್ ವೀಡಿಯೋ ಕಾಲಿಂಗ್ ಗೆ ಅವಕಾಶ ನೀಡಲಿದೆ.ವೀಡಿಯೋ ಕಾಲ್ ಆರಂಭಿಸಲು ನೀವು ಡೈರೆಕ್ಟ್ ಇನ್ ಬಾಕ್ಸ್ ನಲ್ಲಿ ಕಾಂಟ್ಯಾಕ್ಟ್ ನ್ನು ತೆರೆಯಿರಿ ಮತ್ತು ಮೇಲ್ಬಾಗದ ಬಲ ಮೂಲೆಯಲ್ಲಿರುವ ವೀಡಿಯೋ ಐಕಾನ್ ನ್ನು ಟ್ಯಾಪ್ ಮಾಡಿ. ಇನ್ನೊಂದು ಕುತೂಹಲಕಾರಿ ವಿಚಾರವೇನೆಂದರೆ ಈ ವೀಡಿಯೋ ಕಾಲ್ ಪರದೆಯನ್ನು ಮಿನಿಮೈಜ್ ಮಾಡಬಹುದು ಮತ್ತು ನೀವು ಇನ್ನೆತರೆ ಟಾಸ್ಕ್ ಗಳನ್ನೂ ಪೂರೈಸಬಹುದು.

ವಿಡಿಯೋ ಕಾಲಿಂಗ್ ಜೊತೆ ಮಾಡಿ ಇತರ ಕೆಲಸ
ವೀಡಿಯೋ ಕಾಲಿಂಗ್ ಪರದೆಯನ್ನು ಮಿನಿಮೈಜ್ ಮಾಡಿ ಸ್ಟೋರಿಯನ್ನು ಪೋಸ್ಟ್ ಮಾಡಬಹುದು, ಶೇರ್ ಮಾಡಬಹುದು ಮತ್ತು ಫೀಡ್ ಗಳನ್ನು ಪರೀಕ್ಷಿಸಬಹುದು. ವೀಡಿಯೋ ಕಾಲ್ ನ ಸಂದರ್ಬದಲ್ಲಿ ಕ್ಯಾಮರಾ ಐಕಾನ್ ನೀಲಿ ಬಣ್ಣಕ್ಕೆ ತಿರುಗಿರುತ್ತೆ. ನೀವು ಇತರೆ ಬಳಕೆದಾರರನ್ನು ವೀಡಿಯೋ ಕಾಲಿಂಗ್ ಗೆ ಕರೆಯಬಹುದು ಮತ್ತು ಅಗತ್ಯವಿಲ್ಲದೇ ಇರುವವರನ್ನು ವೀಡಿಯೋ ಕಾಲ್ ಮಾಡದಂತೆ ತಡೆಯುವ ಆಯ್ಕೆಯೂ ಇದೆ. ಮ್ಯೂಟ್ ಬಟನ್ ಒಂದು ಲಭ್ಯವಿದ್ದು, ಇದು ನೋಟಿಫಿಕೇಷನ್ ಗಳನ್ನು ತಡೆಯಲು ನೆರವಾಗುತ್ತದೆ.

ಕಸ್ಟಮ್ AR ಫಿಲ್ಟರ್ಸ್
ಫೇಸ್ ಬುಕ್ ಇತ್ತೀಚೆಗಷ್ಟೇ AR ಕ್ಯಾಮರಾ ಎಫೆಕ್ಟ್ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಈಗ ಇದು ಇನ್ಸ್ಟಾಗ್ರಾಂನಲ್ಲೂ ಲಭ್ಯವಿದೆ. ನಿಮ್ಮ ಫಾಲೋ ಮಾಡುವ ಸೆಲೆಬ್ರಿಟಿ ಮತ್ತು ಬ್ರ್ಯಾಂಡ್ ಗಳಿಗೆ ಕಸ್ಟಮ್ ಫೇಸ್ ಫಿಲ್ಟರ್, ವರ್ಡ್ ಎಫೆಕ್ಟ್ ಮತ್ತು ಸ್ಟಿಕ್ಕರ್ ಗಳನ್ನು ತಮ್ಮ ಫಾಲೋವರ್ ಗಳಿಗಾಗಿ ಹಾಕುವ ಅವಕಾಶವಿರುತ್ತದೆ. ನೀವು ಫಾಲೋ ಮಾಡುವ ಸೆಲೆಬ್ರಿಟಿ ಇಲ್ಲವೇ ಬ್ರಾಂಡ್ ಗಳು ಕ್ರಿಯೇಟ್ ಮಾಡಿದ ಕಸ್ಟಮ್ ಕ್ಯಾಮರಾ ಎಫೆಕ್ಟ್ ನ್ನು ಮಾತ್ರ ನೀವು ನೋಡಬಹುದಾಗಿದೆ.
ಒಂದು ವೇಳೆ ನೀವು ಅಕೌಂಟ್ ನ್ನು ಫಾಲೋ ಮಾಡುವುದಿಲ್ಲ ಆದರೆ ಸೃಷ್ಟಿಸಿದ ಕ್ಯಾಮರಾ ಎಫೆಕ್ಟ್ ನ್ನು ಗಮನಿಸಿದರೆ, ನೀವು ಕೂಡ ಟ್ರೈ ಮಾಡಬಹುದು ಮತ್ತು ನಿಮ್ಮ ಇನ್ಸ್ಟಾಗ್ರಾಂ ಕ್ಯಾಮರಾ ಕ್ಕೆ ಅದನ್ನು ಸೇರಿಸಿಕೊಳ್ಳಬಹುದು.

ಪರ್ಸ್ನಲೈಸ್ಡ್ ಎಕ್ಸ್ಫೋರ್ ಫೀಡ್
ಎಕ್ಸ್ಫ್ಲೋರ್ ಫೀಡ್ ನ್ನು ಮರುವಿನ್ಯಾಸಗೊಳಿಸಲಾಗಿದ್ದು ಅಡ್ಡಲಾಗಿರುವ ಟ್ರೇ ಒಂದು ಪುಟದ ಮೇಲ್ಬಾಗದಲ್ಲಿ ಇದೆ ಮತ್ತು ಇದರಲ್ಲಿ ಫ್ಯಾಷನ್, ಕ್ರೀಡೆ, ಕಲೆ ಹಾಗೂ ಇತರೆ ಕೆಲವು ಚಾನಲ್ ಗಳನ್ನು ಹೋಸ್ಟ್ ಮಾಡಲು ಅವಕಾಶವಿದೆ. ನೀವು ಈ ಜಾಗದಿಂದ ನಿಮಗೆ ಇಷ್ಟವಾಗುವ ವಿಷಯವನ್ನು ಪಡೆಯಬಹುದು. ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಅಲ್ಲಿ 'For You' ಕಾರ್ಡ್ ಹೋಸ್ಟಿಂಗ್ ಕೂಡ ಇದ್ದು, ಕಸ್ಟಮೈಸ್ ಮಾಡಲಾದ ವಿಷಯದ ಶ್ರೇಣಿಯನ್ನು ಹೋಸ್ಟ್ ಮಾಡಲು ಅವಕಾಶವಿರುತ್ತದೆ.
ಇದು ತಮ್ಮದೇ ಆದ ವಯಕ್ತಿಕ ಟ್ರೆಂಡ್ ಮತ್ತು ಆಸಕ್ತಿಯನ್ನು ಅನ್ವೇಷಣೆ ಮಾಡಲು ಸಹಕಾರ ನೀಡುತ್ತದೆ. ಅನ್ವೇಷಣೆ ಮಾಡಲು ಮತ್ತು ವಿಷಯಗಳನ್ನು ಕಂಡುಕೊಳ್ಳಲು ಚಾನಲ್ ಗಳ ಟ್ರೇ ಕೆಳಗೆ ಸಾಮಾನ್ಯ ಹ್ಯಾಶ್ ಟ್ಯಾಗ್ ಗಳ ಸಾಲು ಇದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090